For Quick Alerts
ALLOW NOTIFICATIONS  
For Daily Alerts

ಜೀವಮಾನದಲ್ಲಿ ಒಮ್ಮೆಯೂ ಹೆಣ್ಣನ್ನೇ ನೋಡದೇ, ಮರಣಹೊಂದಿದ ಪುರುಷ!

By Deepu
|

ಈ ಕಥೆಯನ್ನು ಕೇಳಿದರೆ ಸಾಧ್ಯವಿಲ್ಲ ಎಂಬುದೇ ಹೆಚ್ಚಿನವರ ಮೊದಲ ಪ್ರತಿಕ್ರಿಯೆಯಾಗಿರುತ್ತದೆ. ಆದರೆ ನಿಜವಾಗಿಯೂ ಈ ಪುರುಷ ತನ್ನ ಎಂಭತ್ತೆರಡು ವರ್ಷಗಳ ಪೂರ್ಣಜೀವನದಲ್ಲಿ ಎಂದಿಗೂ ಹೆಣ್ಣನ್ನು ನೋಡಲೇ ಇಲ್ಲ. ವಾಸ್ತವವಾಗಿ ಈತನಿಗೆ ಈ ಜಗತ್ತಿನಲ್ಲಿ ನಿಸರ್ಗ ಗಂಡು ಮತ್ತು ಹೆಣ್ಣು ಜಾತಿಗಳನ್ನು ಸೃಷ್ಟಿಸಿದೆ ಎಂದೇ ಗೊತ್ತಿರಲಿಲ್ಲ, ಯಾರೂ ಇವನಿಗೆ ಹೇಳೂ ಇರಲಿಲ್ಲ. ಹಾಗಾಗಿ ಈತ ಜಗತ್ತಿನಲ್ಲಿ ಕೇವಲ ಪುರುಷರೇ ಇದ್ದಾರೆ ಎಂದೇ ತಿಳಿದುಕೊಂಡಿದ್ದ.

ಮೇಲ್ನೋಟಕ್ಕೆ ಇದು ಸಾಧ್ಯವೇ ಇಲ್ಲವೆಂದು ತೋರಬಹುದು. ಆದರೆ ಈ ವಾಸ್ತವವನ್ನು ಖಚಿತಪಡಿಸುವ ಮಾಹಿತಿಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿ ಇವು ಸರಿ ಎಂದು ಖಚಿತಪಡಿಸಿಕೊಂಡ ಬಳಿಕ ಈ ಮಾಹಿತಿ ಸುಳ್ಳು ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈ ಕಥೆ ಮಿಹಾಯ್ಲೋ ಟೋಲೋಟಾಸ್ ಎಂಬ ಗ್ರೀಸ್ ದೇಶದ ಬೌದ್ಧ ಭಿಕ್ಷುವಿನ ಕಥೆಯಾಗಿದೆ. ಇದುವರೆಗೆ ಈತನ ಬಗ್ಗೆ ಕಡಿಮೆಯೇ ಮಾಹಿತಿ ಲಭಿಸಿದೆ, ಬನ್ನಿ, ಈ ಮಾಹಿತಿಗಳು ಏನೆನ್ನುತ್ತವೆ ನೋಡೋಣ...

 ಈತನೊಬ್ಬ ಗ್ರೀಕ್ ಕಡುಸಂಪ್ರದಾಯವಾಗಿ ಬೌದ್ಧ ಭಿಕ್ಷುವಾಗಿದ್ದ

ಈತನೊಬ್ಬ ಗ್ರೀಕ್ ಕಡುಸಂಪ್ರದಾಯವಾಗಿ ಬೌದ್ಧ ಭಿಕ್ಷುವಾಗಿದ್ದ

ಮಿಹಾಯ್ಲೋ ಟೋಲೋಟಾಸ್ ಎಂಬ ಈ ಬೌದ್ಧ ಭಿಕ್ಷುಕ ಕಡು ಸಂಪ್ರದಾಯವನ್ನು ಕಟ್ಟು ನಿಟ್ಟಾಗಿ ಪಾಲಿಸುವವನಾಗಿದ್ದ. ಎಂಭತ್ತೆರಡು ವರ್ಷಗಳ ಪೂರ್ಣ ಜೀವನವನ್ನು ಕಳೆದು 1938 ರಲ್ಲಿ ಈತ ಇಹಲೋಕ ತ್ಯಜಿಸಿದ. ಇಷ್ಟೂ ವರ್ಷಗಳಲ್ಲಿ ಆತನ ಜೀವನದಲ್ಲಿ ಕೇವಲ ದೇವರು, ಧರ್ಮ, ಭಕ್ತರು ಹಾಗೂ ತನ್ನ ಊಟ ಉಪಚಾರ ಆರೋಗ್ಯ ಇಷ್ಟಕ್ಕೇ ತನ್ನ ಸಮಯವನ್ನೆಲ್ಲಾ ಮೀಸಲಾಗಿಸಿದ್ದ. ಈತನಿಗೆ ಈ ಜಗತ್ತಿನಲ್ಲಿ ಹೆಣ್ಣು ಎಂಬ ಮನುಷ್ಯಜಾತಿಯೂ ಇದೆ ಎಂದೇ ತಿಳಿದಿರಲಿಲ್ಲ, ತಿಳಿದುಕೊಳ್ಳಲು ಅವಕಾಶವೂ ಇರಲಿಲ್ಲ.

ಈ ಬಗ್ಗೆ ಇತಿಹಾಸ ಹೀಗೆ ವಿವರಿಸುತ್ತದೆ

ಈ ಬಗ್ಗೆ ಇತಿಹಾಸ ಹೀಗೆ ವಿವರಿಸುತ್ತದೆ

1856ರಲ್ಲಿ, ಈತ ಹುಟ್ಟಿದ ಕೇವಲ ನಾಲ್ಕು ತಿಂಗಳ ಬಳಿಕ ಈತನ ತಾಯಿ ಅಕಾಲಮೃತ್ಯುವಿಗೆ ತುತ್ತಾದಳು. ಈ ಅನಾಥ ಮಗುವನ್ನು ಕಾಪಾಡಲು ಯಾರೂ ಮುಂದೆ ಬರದೇ ಇದ್ದ ಕಾರಣ ಈತನನ್ನು ತಾಯಿ ತ್ಯಜಿಸಿದ್ದ ಬೌದ್ಧ ಮಠವೇ ಈ ಮಗುವಿನ ಪಾಲನೆಯ ಹೊಣೆಯನ್ನು ಹೊತ್ತಿತ್ತು. ಗ್ರೀಸ್ ನ ಮೌಂಟ್ ಆಥೋಸ್ ಎಂಬ ಬೆಟ್ಟದ ಮೇಲೆ ಇರುವ ಈ ಮಠಕ್ಕೆ ಕೇವಲ ಪುರುಷರು ಮಾತ್ರವೇ ಪ್ರವೇಶಿಸಬಹುದು. ಮಹಿಳೆಯರಿಗಿಲ್ಲ ಪ್ರವೇಶಾವಕಾಶವಿಲ್ಲ.

ಮಠದ ದತ್ತುಪುತ್ರ

ಮಠದ ದತ್ತುಪುತ್ರ

ಈ ಮಗುವಿಗೆ ಮಿಹಾಯ್ಲೋ ಟೋಲೋಟಾಸ್ ಎಂದು ನಾಮಕರಣ ಮಾಡಿ ಮಠದ ದತ್ತುಪುತ್ರನಾಗಿ ಅಂಗೀಕರಿಸಲಾಯ್ತು. ಇಲ್ಲಿನ ಬೌದ್ಧ ಭಿಕ್ಷುಗಳೇ ಮಗುವಿನ ಲಾಲನೆ ಪಾಲನೆಯನ್ನು ನೋಡಿಕೊಂಡರು. ಅಂದಿನಿಂದ ಈ ಮಠವೇ ಆತನ ಸರ್ವಸ್ವವಾಯ್ತು. ಈ ಮಠದಿಂದ ಆತ ಜೀವಮಾನವಿಡೀ ಹೊರಬರಲೇ ಇಲ್ಲ!

ಮಹಿಳೆಯರಿಗಿಲ್ಲ ಪ್ರವೇಶವಿಲ್ಲ

ಮಹಿಳೆಯರಿಗಿಲ್ಲ ಪ್ರವೇಶವಿಲ್ಲ

ಕ್ರಿ. ಶ 1046ರಲ್ಲಿ ಅಂದಿನ ಬೈಜಂಟೈನ್ ಚಕ್ರವರ್ತಿ ಕಾನ್ಸ್ಟಾಂಟೈನ್ ಮೋನೋಮಾಖೋ ರವರು ಜಾರಿಗೊಳಿಸಿದ ಅವಟಾನ್ ( Άβατον (avaton)) ಎಂಬ ಕಾನೂನಿನನ್ವಯ ಈ ಮಠಕ್ಕೆ ಮಹಿಳೆಯರಿಗೆ ಮತ್ತು ಪ್ರಾಣಿಗಳಿಗೆ ಪ್ರವೇಶವಿಲ್ಲ! ಇಂದಿಗೂ ಈ ಕಾನೂನು ಕಟ್ಟುನಿಟ್ಟಾಗಿದ್ದು ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಫಲಕವನ್ನು ಮುಖ್ಯದ್ವಾರದ ಹೊರಗೆ ಅಳವಡಿಸಲಾಗಿದೆ.

ಪುರುಷರಿಗೆ ಮಾತ್ರವೇ ಪ್ರವೇಶ

ಪುರುಷರಿಗೆ ಮಾತ್ರವೇ ಪ್ರವೇಶ

ಈ ಮಠಕ್ಕೆ ಕೇವಲ ಪುರುಷರು ಪ್ರವೇಶಿಸಬಹುದು. ಆದರೆ ಇದರಲ್ಲಿ ವಾಸವಾಗಿರುವ ಬೌದ್ಧ ಭಿಕ್ಷುಗಳು ಅತಿ ಕಠಿಣವಾದ ಸಂಪ್ರದಾಯವನ್ನು ಪಾಲಿಸುವುದು ಕಡ್ಡಾಯವಾಗಿದ್ದು ಈ ಮೂಲಕ ಅವರು ತಮ್ಮ ಕೂದಲನ್ನು ಕತ್ತರಿಸುವಂತಿಲ್ಲ, ಜಗಳ ಮಾಡುವಂತಿಲ್ಲ ಹಾಗೂ ಈ ಮಠದ ಆವರಣದ ಹೊರಗಿರುವ ಯಾವುದೇ ವಸ್ತುವಿನ ಅಥವಾ ವಿಷಯವನ್ನು ಅರಿಯಲು ಯತ್ನಿಸುವಂತಿಲ್ಲ. ಅಲ್ಲದೇ ಇಲ್ಲಿ ಬರುವ ಪುರುಷ ಭಕ್ತರೂ ಧಾರ್ಮಿಕ ವಿಧಿಗೆ ಹೊರತಾಗಿ ಬೇರೇನನ್ನೂ ಮಾತನಾಡುವಂತಿಲ್ಲ.

Image courtesy - Flickr

ಪುರುಷರಿಗೆ ಮಾತ್ರವೇ ಪ್ರವೇಶ

ಪುರುಷರಿಗೆ ಮಾತ್ರವೇ ಪ್ರವೇಶ

ಹಾಗೆ, ಇಡಿಯ ಪರಿಸರವೇ ಮೌನವಾಗಿದ್ದು ಕೇವಲ ದೇವರ ಮತ್ತು ಧರ್ಮದ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿರುವಾಗ ಮಹಿಳೆಯ ಇರುವಿಕೆಯ ಬಗ್ಗೆ ತಿಳಿಸಲು ಯಾರಿಗಾದರೂ ಸಮಯ ಅಥವಾ ವ್ಯವಧಾನವಿರುತ್ತದೆ? ಅಂತೆಯೇ ಮಿಹಾಯ್ಲೋ ಸಹಾ ಸಾಯುವವರೆಗೂ ಮಹಿಳೆಯರ ಇರುವಿಕೆಯ ಬಗ್ಗೆ ಅಜ್ಞನಾಗಿದ್ದ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

Image courtesy-flickr

English summary

The Man Who Lived And Died Without Ever Seeing A Woman

This story will leave you baffled, but it is a true story of a man who never saw any woman inhis life! The man nam ed Mihailo Tolotos is said to have spent 82 years of his entire life, where he did not even know the existence of women on this planet! Though this seems to be totally impossible, but the facts that played a vital role in his life make us realise that he was for REAL!
X
Desktop Bottom Promotion