For Quick Alerts
ALLOW NOTIFICATIONS  
For Daily Alerts

  ವೃಷಭ ರಾಶಿಯ ಜೂನ್ ತಿಂಗಳ ಭವಿಷ್ಯ

  |

  ಮುಂಗಾರು ಮಳೆಯನ್ನು ತರುವ ಜೂನ್ ತಿಂಗಳು ವೃಷಭ ರಾಶಿಯವರ ಭವಿಷ್ಯದಲ್ಲಿ ವಿವಿಧ ಆಕಾಂಕ್ಷೆಗಳ ಭರವಸೆಯನ್ನು ಮೂಡಿಸುತ್ತದೆ. ಜೀವನದ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಬದಲಾವಣೆಯನ್ನು ಕಾಣುವಿರಿ. ನಿಮ್ಮ ವೃತ್ತಿ ಜೀವನದ ಗುರಿಗಳು ಮತ್ತು ಆಕಾಂಕ್ಷೆಗಳು ಸಹ ತಿಂಗಳ ಪೂರ್ತಿ ಮುಂಚೂಣಿಯಲ್ಲಿ ಇರುತ್ತವೆ. ನಿಮ್ಮ ಕೆಲಸದಲ್ಲಿ ಗುರಿಯನ್ನು ಸಾಧಿಸಲು ಗ್ರಹಗತಿಗಳು ನಿಮಗೆ ಸಾಥ್ ನೀಡುತ್ತವೆ ಎಂದು ಹೇಳಲಾಗುವುದು. ಗುರಿ ತಲುಪಲು ಕೆಲವೊಂದು ಅಡೆತಡೆಗಳು ಉಂಟಾಗಬಹುದು. ಅದರ ಕುರಿತು ನೀವು ಚಿಂತಿಸುವ ಅಗತ್ಯವಿಲ್ಲ.

  ನಿಮ್ಮ ರಾಶಿಚಕ್ರದ ಅಡಿಯಲ್ಲಿ ಗ್ರಹಗಳ ಉತ್ತಮ ಸಹಕಾರದಿಂದ ವೃತ್ತಿ ಜೀವನದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತದೆ. ನಿಮ್ಮನ್ನು ನೀವು ಟೀಕೆಗೆ ಒಳಗಾಗದಂತೆ ನೋಡಿಕೊಳ್ಳಿ. ನಿಮ್ಮ ಯೋಜನೆಯಲ್ಲಿ ಉಂಟಾಗುವ ವಿಳಂಬವು ನಿರಾಶೆಯನ್ನು ಉಂಟು ಮಾಡಬಹುದು. ಆದರೆ ಅದನ್ನು ನೀವು ಸವಾಲನ್ನಾಗಿ ಸ್ವೀಕರಿಸಿ. ಜೊತೆಗೆ ಅದರ ಸುತ್ತಲು ಸಾಕಷ್ಟು ಏಕಾಗೃತೆಯೊಂದಿಗೆ ಶ್ರಮಿಸಿ ಆಗ ಉತ್ತಮ ಫಲ ದೊರೆಯುವುದು. ನೈಸರ್ಗಿಕವಾಗಿ ಸುಂದರ ವಾತಾವರಣದಿಂದ ಕೂಡಿರುವ ಈ ತಿಂಗಳಲ್ಲಿ ನಿಮ್ಮ ಪ್ರೀತಿಯ ಜೀವನ, ವೃತ್ತಿ ಜೀವನ, ಹಣಕಾಸಿನ ಸ್ಥಿತಿಯ ಬಗ್ಗೆಯು ತಿಳಿದುಕೊಳ್ಳಬೇಕು ಎಂದಾದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

  Taurus Monthly Horoscope

  ಆರೋಗ್ಯ ಸ್ಥಿತಿ

  ನೀವು ನಿಮ್ಮ ಕೆಲಸದಲ್ಲಿಯೇ ಹೆಚ್ಚಿನ ಸಮಯ ಹಾಗೂ ಶ್ರದ್ಧೆಯನ್ನು ಹೊಂದಿರುವುದರಿಂದ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಧನಾತ್ಮಕ ಶಕ್ತಿ ಮತ್ತು ವರ್ತನೆ ನಿಮಗೆ ಅಗತ್ಯವಿರುವ ಎಲ್ಲಾ ಬಗೆಯ ಮಾನಸಿಕ ಶಕ್ತಿಯನ್ನು ನೀಡುತ್ತದೆ. ಸೂಕ್ತ ಆಹಾರಗಳನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಜೀರ್ಣಕ್ರಿಯೆಗೆ ಕಷ್ಟವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು, ಎಣ್ಣೆ ಹಾಗೂ ಮಸಾಲ ಭರಿತ ಆಹಾರದಿಂದ ಆದಷ್ಟು ದೂರವಿರಿ.

  ಇಲ್ಲವಾದರೆ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗಬಹುದು. ಪೋಷಕಾಂಶಗಳಿಂದ ಭರಿತವಾದ ಆಹಾರವು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎನ್ನುವುದನ್ನು ಮರೆಯದಿರಿ. ತಿಂಗಳ ಮಧ್ಯ ಭಾಗದಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳು ಉಂಟಾದಾಗ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಸೂಕ್ತ. ಆರೋಗ್ಯದ ಸಮಸ್ಯೆಯು ನಿಮಗೆ ಆತಂಕವನ್ನು ಉಂಟುಮಾಡಬಹುದು. ಕೋಪಗಳನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮ ಕೋಪವು ಭುಗಿಲೇಳುವ ಸಾಧ್ಯತೆಗಳಿವೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುವುದು.

  ವೃತ್ತಿ ಜೀವನ

  ವೃತ್ತಿ ಜೀವನದ ಮುಂಭಾಗದಲ್ಲಿ ವೃಷಭ ರಾಶಿಯವರು ಸಂತೋಷವನ್ನು ಅನುಭವಿಸಲಿದ್ದಾರೆ. ಸಾಕಷ್ಟು ಒಳ್ಳೆಯ ಕೊಡುಗೆಯನ್ನು ಅನುಭವಿಸುವುದರಿಂದ ಉತ್ತಮ ಬೆಳವಣಿಗೆಯ ಭರವಸೆಯನ್ನು ನೀವು ಹೊಂದಬಹುದು. ನೀವು ತೆಗೆದುಕೊಳ್ಳುವ ನಿರ್ಧಾರ ಅಥವಾ ಆಯ್ಕೆಯು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಲಸ ನಿರ್ವಹಿಸುವುದರಲ್ಲಿ ನೀವು ನಿಮ್ಮ ಮೇಲಾಧಿಕಾರಿಗಳನ್ನು ಆಕರ್ಷಿಸಲು ಯಶಸ್ವಿಯಾಗುವ ಅಗತ್ಯವಿದೆ.

  ನೀವು ನಿಮ್ಮಲ್ಲಿರುವ ವಿಶೇಷ ಗುಣಗಳು ಕಾಣುವಂತಹ ಸಭ್ಯ ಹಾಗೂ ತಂತ್ರಜ್ಞರಾಗಿರುವಂತಹ ವರ್ತನೆಯನ್ನು ತೋರ್ಪಡಿಸಬೇಕಿದೆ. ತಿಂಗಳ ಅಂತ್ಯದಲ್ಲಿ ಏನಾಗುತ್ತದೆ ಎನ್ನುವುದು ಬಹಳ ಮುಖ್ಯವಾದ ಸಂಗತಿ. ನಕ್ಷತ್ರಗಳು ಹೆಚ್ಚಿನ ಅವಕಾಶ ಹಾಗೂ ಸಂತೋಷವನ್ನು ನೀಡುತ್ತವೆ. ಆದರೆ ಅದು ನಿಮ್ಮ ನಿರೀಕ್ಷೆಯನ್ನು ತಲುಪದಿದ್ದರೆ ನಿರಾಶೆಗೊಳಗಾಗದಿರಿ. ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಉತ್ತಮವಾಗಿಟ್ಟುಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

  Taurus Monthly Horoscope

  ಆರ್ಥಿಕ ಸ್ಥಿತಿ

  ನಿಮ್ಮ ವೈಯಕ್ತಿಕ ಖರ್ಚಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚುಮಾಡಬೇಕಾದ್ದರಿಂದ ಮನಸ್ಸಿಗೆ ಸ್ವಲ್ಪ ಒತ್ತಡ ಉಂಟಾಗಬಹುದು. ಸ್ನೇಹಿತರಿಂದ ಹಣಕಾಸಿನ ಬೆಂಬಲವನ್ನು ನೀವು ಪಡೆಯಬಹುದು. ಆದರೆ ನಿಮ್ಮ ಸ್ನೇಹಿತರ ನಡುವೆ ಹಣಕಾಸಿನ ವಿಚಾರ ತಂದರೆ ತೊಂದರೆ ಉಂಟಾಗುವುದು ಎನ್ನುವುದನ್ನು ಮರೆಯಬೇಡಿ.

  ಹೊಸ ವ್ಯವಹಾರ ಹಾಗೂ ಹೂಡಿಕೆಗೆ ಉತ್ತಮವಾದ ತಿಂಗಳು

  ಆದರೆ ಸೂಕ್ತ ಚಿಂತನೆ ನಡೆಸಬೇಕಾಗುವುದು. ದೀರ್ಘಕಾಲದ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯವನ್ನು ನೀವು ಪಡೆಯಬಹುದು. ವ್ಯಾಪಾರ ವಹಿವಾಟಿನಲ್ಲಿ ಹಣಕಾಸಿನ ಹರಿವು ಸ್ಥಿರವಾಗಿರುತ್ತದೆ. ಅನಿರೀಕ್ಷಿತ ವೆಚ್ಚಗಳ ಮೇಲೆ ಗಮನ ಇರಬೇಕು. ಆರ್ಥಿಕ ನಿರ್ಣಯವನ್ನು ತೆಗೆದುಕೊಳ್ಳುವಾಗ ಕಾಳಜಿ ಇರಬೇಕು. ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಕೆಲವೊಂದು ಯೋಜನೆಗಳು ಸಮಯವನ್ನು ತೆಗೆದುಕೊಳ್ಳುವುದು.

  ಪ್ರೀತಿಯ ಜೀವನ

  ನಿಮ್ಮ ವೈಯಕ್ತಿಕ ಆಕರ್ಷಣೆಯು ಪಾಲುದಾರರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ನೀವು ಇನ್ನೂ ವಿವಾಹವಾಗದವರಾಗಿದ್ದರೆ ನಿಮ್ಮ ಜೀವನದಲ್ಲಿ ವರ್ಧಕವನ್ನು ಕಾಣುವಿರಿ. ಶುಕ್ರನು ನಿಮ್ಮ ರಾಶಿಚಕ್ರದ ಮನೆಯಲ್ಲಿಯೇ ಸಕ್ರಿಯನಾಗಿರುತ್ತಾನೆ. ಇದರಿಂದ ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ವಿವಾಹಿತರಲ್ಲಿ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ ನೀವು ವಿಷಯವನ್ನು ದೀರ್ಘ ಸಮಯದವರೆಗೆ ಎಳೆಯದೆ ಅಲ್ಲಿಯೇ ಬಿಟ್ಟುಬಿಡಿ. ಸಣ್ಣ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಸಂತೋಷವನ್ನು ಅನುಭವಿಸಬಹುದಾಗಿದೆ. ವಿವಾಹಿತರಲ್ಲಿ ಸಂಗಾತಿಯನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು.

  ಅದೃಷ್ಟದ ಬಣ್ಣಗಳು ಮತ್ತು ಸಂಖ್ಯೆಗಳು

  ಜೂನ್ ತಿಂಗಳ ಅದೃಷ್ಟದ ಬಣ್ಣಗಳು ಕೇಸರಿ ಮತ್ತು ಹಳದಿ ಛಾಯೆಗಳು

  ಅದೃಷ್ಟದ ಸಂಖ್ಯೆಗಳು: 5, 6, 31 ಮತ್ತು 32

  English summary

  Taurus Monthly Horoscope for June 2018

  This Mid-year, June will bring in loads of changes for you in terms of all the important aspects of your life. Your career goals and aspirations will be the forefront all throughout the month, while domestic issues take a comfortable back seat. Your grace and charm will help you sail through work and achieve targets. There will also be a lot of expectations from you. But don’t worry in case you cannot live up to them sometimes because it will all end well.Read on to know your career, finances and love life this June.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more