ಪುರುಷರು ಮತ್ತು ಮಹಿಳೆಯರ ಸೆಕ್ಸ್‌ನ ಬಗ್ಗೆ ಕೆಲವೊಂದು ಅಚ್ಚರಿಯ ಸಂಗತಿಗಳು

Subscribe to Boldsky

ಸೆಕ್ಸ್ ಎನ್ನುವುದು ಜೀವನದ ಒಂದು ಅಂಗವಾಗಿರುವುದು. ಇದು ಮಹಿಳೆಯರು ಹಾಗೂ ಪುರುಷರಿಗೂ ಸಮಾನವಾಗಿರುವುದು. ಆದರೆ ಕೆಲವು ಜನರಲ್ಲಿ ಕಾಮಾಸಕ್ತಿ ಹೆಚ್ಚಾಗಿರುವುದು. ಇನ್ನು ಕೆಲವು ಜನರಲ್ಲಿ ಕಡಿಮೆ ಇರುವುದು.

ಸೆಕ್ಸ್ ಎನ್ನುವುದು ತುಂಬಾ ಅಚ್ಚರಿ ಹಾಗೂ ಗೊಂದಲ ಉಂಟು ಮಾಡುವಂತಹ ವಿಚಾರವಾಗಿದೆ. ಯಾಕೆಂದರೆ ಮಹಿಳೆಯರಿಗೆ ಕೂಡ ಸ್ಖಲನವಾಗುವುದು ಎನ್ನುವುದರಿಂದ ಹಿಡಿದು, ಒಂದು ತುಂಡು ಬಟ್ಟೆಯಿಂದ ನೀವು ಬೇಗನೆ ಲೈಂಗಿಕ ಪರಾಕಾಷ್ಠೆ ತಲುಪಬಹುದು ಎಂದು ಹೇಳಲಾಗುತ್ತದೆ. ಪುರುಷರು ಹಾಗೂ ಮಹಿಳೆಯರ ಸೆಕ್ಸ್ ನ ಕೆಲವು ಅಚ್ಚರಿಯ ವಿಚಾರಗಳನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಡಲಿದ್ದೇವೆ.

ಬಂಜೆತನವು ನೀವು ಭಾವಿಸಿರುವುದಕ್ಕಿಂತಲೂ ಹೆಚ್ಚು ಸಾಮಾನ್ಯ

ಬಂಜೆತನವು ನೀವು ಭಾವಿಸಿರುವುದಕ್ಕಿಂತಲೂ ಹೆಚ್ಚು ಸಾಮಾನ್ಯ

ಬಂಜೆತನದಲ್ಲಿ ವೈವಿಧ್ಯತೆಯಿರಬಹುದು. ಆದರೆ ಅಧ್ಯಯನಗಳು ಹೇಳುವ ಪ್ರಕಾರ ನೀವು ಆಲೋಚಿಸಿರುವುದಕ್ಕಿಂತಲೂ ಇದು ಸಾಮಾನ್ಯವಾಗಿದೆ. ಬಂಜೆತನವು ಎಂಟರಲ್ಲಿ ಒಬ್ಬ ಮಹಿಳೆಯನ್ನು ಕಾಡುವುದು ಎಂದು ಇತ್ತೀಚೆಗೆ ಪ್ರಕಟಗೊಂಡಿರುವಂತಹ ವರದಿಯೊಂದು ಹೇಳಿದೆ. ವಿವಾಹಿತ 18-44ರ ಹರೆಯದ ಮಹಿಳೆಯರಲ್ಲಿ ಶೇ. 6ರಷ್ಟು ಜನರು ಒಂದು ವರ್ಷ ಕಾಲ ಅಸುರಕ್ಷಿತ ಲೈಂಗಿಕಕ್ರಿಯೆ ನಡೆಸಿದರೂ ಗರ್ಭಧರಿಸಲು ವಿಫಲವಾಗುವರು. ಶೇ.12ರಷ್ಟು ಜನರಿಗೆ ಗರ್ಭಪಾತವಾಗುವುದು.

ಪುರುಷರಲ್ಲೂ ಜಿ ಸ್ಪಾಟ್

ಪುರುಷರಲ್ಲೂ ಜಿ ಸ್ಪಾಟ್

ಮಹಿಳೆಯರಲ್ಲಿ ಇರುವಂತಹ ಜಿ ಸ್ಪಾಟ್ ನ್ನು ಕಂಡುಕೊಂಡು ಅದನ್ನು ಉತ್ತೇಜಿಸಿದರೆ ಆಗ ಪರಾಕಾಷ್ಠೆ ಅಧಿಕವಾಗಿರುವುದು. ಅದೇ ರೀತಿ ಪುರುಷರಲ್ಲೂ ಇದೇ ರೀತಿಯ ಜಿ ಸ್ಪಾಟ್ ಇದೆ. ಇದನ್ನು ಜನನೇಂದ್ರೀಯವೆಂದು ಕರೆಯುವರು ಮತ್ತು ಇದು ಮೂತ್ರಕೋಶದ ಕೆಳಭಾಗದಲ್ಲಿ ಇರುವುದು ಎಂದು ಕೊಸ್ಮೊಪೊಲಿಟನ್ ವರದಿ ಮಾಡಿದೆ. ಗುದದ ಒಳಭಾಗಕ್ಕೆ ಬೆರಳು ಹಾಕಿ ಅದನ್ನು ವೃತ್ತಾಕಾರದಲ್ಲಿ ತಿರುಗಿಸಬೇಕು.

Most Read: ರಾತ್ರಿಗಿಂತ ಬೆಳಗಿನ ಜಾವದ ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದಂತೆ!

ಮಹಿಳೆಯರು ಸೆಕ್ಸ್ ಬಗ್ಗೆ ಅತಿಯಾಗಿ ಯೋಚಿಸುವರು

ಮಹಿಳೆಯರು ಸೆಕ್ಸ್ ಬಗ್ಗೆ ಅತಿಯಾಗಿ ಯೋಚಿಸುವರು

ಸೆಕ್ಸ್ ಬಗ್ಗೆ ಅತಿಯಾಗಿ ಮಾತನಾಡುವ ಮಹಿಳೆಯರ ಬಗ್ಗೆ ಸಮಾಜವು ತುಂಬಾ ಭಿನ್ನವಾಗಿ ಚಿಂತಿಸಬಹುದು. ಆದರೆ ಮಹಿಳೆಯರು ಕೂಡ ಸೆಕ್ಸ್ ಬಗ್ಗೆ ತುಂಬಾ ಯೋಚಿಸುವರು ಮತ್ತು ಇದನ್ನು ಹೆಚ್ಚು ಇಷ್ಟಪಡುವರು ಎಂದು ಹೇಳಲಾಗುತ್ತದೆ. ವರದಿಯೊಂದರ ಪ್ರಕಾರ ಶೇ.53ರಷ್ಟು ಮಹಿಳೆಯರು ತಮಗೆ ಬೇಕಿರುವಂತಹ ಸೆಕ್ಸ್ ನ್ನು ಪಡೆಯುತ್ತಿಲ್ಲ. ಈ ಸಮೀಕ್ಷೆಯಲ್ಲಿ ಭಾಗಿಯಾಗಿರುವಂತಹ ಶೇ.75ರಷ್ಟು ಮಹಿಳೆಯರು ವಾರದಲ್ಲಿ ಮೂರು ಸಲ ಸೆಕ್ಸ್ ನಲ್ಲಿ ಭಾಗಿಯಾಗಬೇಕೆಂದು ಬಯಸುವರು.

ಏಕಕಾಲದಲ್ಲಿ ಪರಾಕಾಷ್ಠೆ ತಲುಪುದು ಅಪರೂಪ

ಏಕಕಾಲದಲ್ಲಿ ಪರಾಕಾಷ್ಠೆ ತಲುಪುದು ಅಪರೂಪ

ನಿಮ್ಮ ಸಂಗಾತಿಯ ಜತೆಗೆ ಪರಾಕಾಷ್ಠೆಗೆ ತಲುಪುವಂತಹ ಸಾಧ್ಯತೆಯು ತುಂಬಾ ಅಪರೂಪ. ಇದನ್ನು ಕೆಲವು ಜನರಿಗೆ ಜೀವಮಾನದಲ್ಲಿ ಅನುಭವಿಸಲು ಆಗಲ್ಲ. ಪರಾಕಾಷ್ಠೆಯು ಮಹಿಳೆಯರಿಗೆ ಒಂದು ಸಾಧನೆ ಎಂದು ಪರಿಗಣಿಸಲಾಗುತ್ತದೆ. ವಿವಾಹಿತ ಪುರುಷರಲ್ಲಿ ಶೇ.75ರಷ್ಟು ಪುರುಷರು ಪರಾಕಾಷ್ಠೆ ತಲುಪುವರು. ಆದರೆ ಮಹಿಳೆಯರು ಶೇ. 30ರಷ್ಟು ಮಾತ್ರ.

ಸರಾಸರಿ ಶಿಶ್ನದ ಉದ್ದವು 5.57 ಇಂಚು

ಸರಾಸರಿ ಶಿಶ್ನದ ಉದ್ದವು 5.57 ಇಂಚು

ಪುರುಷರಲ್ಲಿ ಶಿಶ್ನದ ಗಾತ್ರವನ್ನು ಕೇಳುವುದು ತುಂಬಾ ವೈಯಕ್ತಿಕ ಪ್ರಶ್ನೆಯಾಗಿದೆ. ಆದರೆ ನಿಮಿರಿದ ವೇಳೆ ಇದು 5.57 ಇಂಚಿನಷ್ಟಿರಬೇಕು. ಜರ್ನಲ್ ಆಫ್ ಸೆಕ್ಸುವಲ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಇದನ್ನು ಸರಾಸರಿ ಶಿಶ್ನವೆಂದು ಕರೆಯಲಾಗುವುದು. ಆದರೆ ಇದು ನಿರ್ದಿಷ್ಟವಲ್ಲ.

ಮಹಿಳೆಯರಲ್ಲಿ ಸೆಕ್ಸ್ ನಿಂದಾಗಿ ನೆನಪಿನ ಶಕ್ತಿ ವೃದ್ಧಿ

ಮಹಿಳೆಯರಲ್ಲಿ ಸೆಕ್ಸ್ ನಿಂದಾಗಿ ನೆನಪಿನ ಶಕ್ತಿ ವೃದ್ಧಿ

ಮಹಿಳೆಯರು ಹೆಚ್ಚಾಗಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದರಿಂದ ಅವರು ಶಬ್ಧ ಹಾಗೂ ವಾಕ್ಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿಯು ಹೆಚ್ಚಾಗುವುದು. ಮೆದುಳಿನ ಹಿಪ್ಪಿಕ್ಯಾಂಪಲ್ ಎನ್ನುವ ಭಾಗಕ್ಕೆ ಸರಿಯಾಗಿ ರಕ್ತಪರಿಚಲನೆ ಹೆಚ್ಚಾಗುವುದು ಇದಕ್ಕೆ ಕಾರಣವಾಗಿದೆ.

ಪುರುಷರ ಶಿಶ್ನದ ಗಾತ್ರ ಬೆಳೆಯುವುದು

ಪುರುಷರ ಶಿಶ್ನದ ಗಾತ್ರ ಬೆಳೆಯುವುದು

ಪುರುಷರ ಆರೋಗ್ಯದ ಬಗ್ಗೆ ನಡೆಸಿರುವಂತಹ ಸಮೀಕ್ಷೆಯೊಂದರ ಪ್ರಕಾರ ಶೇ.79ರಷ್ಟು ಪುರುಷರಲ್ಲಿ ನಿಮಿರುವಿಕೆ ವೇಳೆ ಶಿಶ್ನವು ಸರಿಯಾಗಿ ಬೆಳೆದು ದೊಡ್ಡದಾಗಿದೆ. ಆದರೆ ಶೇ. 21ರಷ್ಟು ಪುರುಷರಲ್ಲಿ ನಿಮಿರುವಿಕೆ ಬಳಿಕ ಶಿಶ್ನವು ಹೆಚ್ಚು ಬೆಳೆಯುವುದಿಲ್ಲ.

ಬಾಯಿಯ ಸೆಕ್ಸ್ ನಿಂದ ಶಿಶ್ನ ದೊಡ್ಡದಾಗುವುದು

ಬಾಯಿಯ ಸೆಕ್ಸ್ ನಿಂದ ಶಿಶ್ನ ದೊಡ್ಡದಾಗುವುದು

ಬಾಯಿಯ ಸೆಕ್ಸ್ ನಡೆಸಿದ ಬಳಿಕ ತಮ್ಮ ಶಿಶ್ನದ ಗಾತ್ರವು ದೊಡ್ಡದಾಗಿದೆ ಎಂದು ಕೆಲವೊಂದು ಅಧ್ಯಯನ ವರದಿಗಳು ಹೇಳಿವೆ. ಆದರೆ ಇದು ಸರಿಯಾಗಿ ದೃಢಪಟ್ಟಿಲ್ಲ.

Most Read : ನಿಷ್ಠಾವಂತರಾದ 'ಮಿಥುನ ರಾಶಿ'ಯವರಿಗೆ ಸಂಬಂಧಗಳ ವಿಷಯದಲ್ಲಿ ಕಷ್ಟ ಬರಬಹುದು!

ವೇಗದ ವೀರ್ಯ

ವೇಗದ ವೀರ್ಯ

ದೇಹದ ಹೊರಗಡೆ ವೀರ್ಯವು ತುಂಬಾ ನಿಧಾನವಾಗಿ ಕಂಡುಬರಬಹುದು. ಆದರೆ ಮಹಿಳೆಯ ಜನನಾಂಗದಲ್ಲಿ ಇದು ತುಂಬಾ ವೇಗವಾಗಿರುವುದು. ಕೆಲವು ವಿಜ್ಞಾನಿಗಳ ಪ್ರಕಾರ ವೀರ್ಯವು ನಿಮಿಷಕ್ಕೆ 5 ಮಿ.ಮೀ. ದೂರ ಹೋಗಬಹುದು. ಆದರೆ ಹೊರಗಡೆ ಇದ್ದಾಗ ಇದು ಗಂಟೆಗೆ 500 ಮೈಲಿ ಕೂಡ ತಲುಪದು. ಆದರೆ ಒಳಗಡೆ ಇದು ಗಂಟೆಗೆ 15,000 ಮೈಲು ದೂರ ಹೋಗುವುದು. ವೀರ್ಯಸ್ಖಲನವು ಗಂಟೆಗೆ 28 ಮೈಲಿ ವೇಗದಲ್ಲಿ ಆಗುವುದು.

ಋತುಚಕ್ರದ ವೇಳೆ ಸೆಕ್ಸ್ ತುಂಬಾ ಮನರಂಜನೀಯ

ಋತುಚಕ್ರದ ವೇಳೆ ಸೆಕ್ಸ್ ತುಂಬಾ ಮನರಂಜನೀಯ

ಋತುಚಕ್ರದ ವೇಳೆ ಸೆಕ್ಸ್ ನಡೆಸಬಾರದು ಎನ್ನುವ ಕೆಲವೊಂದು ಕಟ್ಟುಪಾಡುಗಳು ಇವೆ. ಆದರೆ ಇದು ಸಾಮಾನ್ಯ ಮತ್ತು ಇದು ತುಂಬಾ ಮನರಂಜನೀಯ ಎನ್ನಲಾಗುತ್ತದೆ. ಹೆಚ್ಚಿನ ಲ್ಯೂಬ್ರಿಕೆಂಟ್ಸ್ ನಿಂದಾಗಿ ಒಳ್ಳೆಯ ಭಾವನೆಯಾಗುವುದು ಎಂದು ಹೆಚ್ಚಿನವರು ಹೇಳಿದ್ದಾರೆ. ಋತುಚಕ್ರದ ವೇಳೆ ಸೆಕ್ಸ್ ನಡೆಸುತ್ತಿದ್ದ ಸುರಕ್ಷಿತ ಸೆಕ್ಸ್ ನಡೆಸಿ. ಯಾಕೆಂದರೆ ಈ ವೇಳೆ ಗರ್ಭಧರಿಸುವಂತಹ ಸಾಧ್ಯತೆಯು ಇದೆ.

Most Read: ಅಡುಗೆಮನೆಯ ಪುಟ್ಟ 'ಬೆಳ್ಳುಳ್ಳಿ'ಯ ಪವರ್‌ಗೆ ಬೆರಗಾಗಲೇಬೇಕು!

ಮಹಿಳೆಯರಲ್ಲಿ ಎರಡು ರೀತಿಯ ಪರಾಕಾಷ್ಠೆ

ಮಹಿಳೆಯರಲ್ಲಿ ಎರಡು ರೀತಿಯ ಪರಾಕಾಷ್ಠೆ

ಪರಾಕಾಷ್ಠೆ ವಿಚಾರವು ಪುರುಷರಿಗೆ ತುಂಬಾ ಸರಳವಾಗಿರುವುದು. ಆದರೆ ಮಹಿಳೆಯರ ವಿಚಾರಕ್ಕೆ ಬಂದರೆ ಇದು ಗೊಂದಲ ಮೂಡಿಸುವುದು. ಮಹಿಳೆಯರಿಗೆ ಎರಡು ರೀತಿಯ ಪರಾಕಾಷ್ಠೆಯಾಗಬಹುದು. ಒಂದು ಯೋನಿ ಮತ್ತೊಂದು ಕ್ಲಿಟೊರಲ್. ಇದನ್ನು ತಮ್ಮದೇ ಆದ ರೀತಿಯಲ್ಲಿ ಆನಂದಿಸಬಹುದು. ಅನುಭವವು ತುಂಬಾ ಖುಷಿ ನೀಡುವುದು.

ಸಾಕ್ಸ್ ಧರಿಸಿ ಸೆಕ್ಸ್

ಸಾಕ್ಸ್ ಧರಿಸಿ ಸೆಕ್ಸ್

ನಿಮಗೆ ಸೆಕ್ಸ್ ವೇಳೆ ಪರಾಕಾಷ್ಠೆ ತಲುಪಲು ತುಂಬಾ ಕಷ್ಟವಾಗುತ್ತಲಿದ್ದರೆ ಆಗ ನೀವು ಸಾಕ್ಸ್ ನ್ನು ಧರಿಸಿಕೊಂಡು ಮಲಗಿ. ಇದರಿಂದ ಕಾಲುಗಳು ಬಿಸಿಯಾಗಿ ಪರಾಕಾಷ್ಠೆ ತಲುಪಲು ಸುಲಭವಾಗುವುದು ಎಂದು ಅಧ್ಯಯನಗಳು ಹೇಳಿವೆ.

ಸೆಕ್ಸ್ ಬಗ್ಗೆ ಇರುವ ಈ ವಿಷಯಗಳನ್ನು ನಿಮ್ಮಲ್ಲಿ ಯಾರೂ ಹೇಳುವುದಿಲ್ಲ!

ಸೆಕ್ಸ್ ಬಗ್ಗೆ ಇರುವ ಈ ವಿಷಯಗಳನ್ನು ನಿಮ್ಮಲ್ಲಿ ಯಾರೂ ಹೇಳುವುದಿಲ್ಲ!

ಜನಸಾಮಾನ್ಯರು ಲೈಂಗಿಕ ವಿಷಯದ ಬಗ್ಗೆ ಎಂದಿಗೂ ಚರ್ಚಿಸದ, ಆದರೆ ಲೈಂಗಿಕ ಜೀವನಕ್ಕೆ ಅತಿ ಅಗತ್ಯವಾದ ಕೆಲವು ಸಂಗತಿಗಳನ್ನು ವಿವರಿಸಲಾಗಿದೆ. ಪ್ರತಿಯೊಬ್ಬರೂ ಈ ವಿಷಯಗಳನ್ನು ತಿಳಿದುಕೊಂಡಿರಬೇಕಾಗಿರುವುದು ಅಗತ್ಯವಾಗಿದೆ. ಯಾರೋ ಹೇಳಿದ, ಎಲ್ಲೋ ಓದಿದ ಮಾಹಿತಿಗಳು ಅರ್ಧಂಬರ್ಧ ಅರ್ಥವಾಗಿ ಇದೇ ಸ್ಥಿತಿಯಲ್ಲಿ ಲೈಂಗಿಕ ಕ್ರಿಯೆಗೆ ಮುಂದಾದರೆ ಎಡವಟ್ಟು ಖಂಡಿತಾ! ಬನ್ನಿ, ಯಾರೂ ಇದುವರೆಗೆ ಹೇಳದ ಈ ಕಡ್ಡಾಯ ಮಾಹಿತಿಗಳನ್ನು ಅರಿಯೋಣ

ಮೊದಲ ಬಾರಿ ಸೆಕ್ಸ್ ನಲ್ಲಿ ರಕ್ತದ ಕಲೆಗಳಿರಬೇಕೆಂದಿಲ್ಲ!

ಮೊದಲ ಬಾರಿ ಸೆಕ್ಸ್ ನಲ್ಲಿ ರಕ್ತದ ಕಲೆಗಳಿರಬೇಕೆಂದಿಲ್ಲ!

ಈ ವಿಷಯದ ಬಗ್ಗೆ ಈಗಾಗಲೇ ಹಲವಾರು ಮಾಹಿತಿಗಳು ಸ್ಪಷ್ಟಪಡಿಸಿದ್ದರೂ ಜನಸಾಮಾನ್ಯರಲ್ಲಿ ಹಾಗೂ ಹಲವಾರು ಸಂಪ್ರದಾಯಗಳಲ್ಲಿ ಇಂದಿಗೂ ಪ್ರಥಮ ಮಿಲನದಲ್ಲಿ ಹಾಸಿಗೆಯಲ್ಲಿ ರಕ್ತದ ಕಲೆಗಳು ಇದ್ದೇ ಇರಬೇಕೆಂಬ ಮಿಥ್ಯಯನ್ನು ಅನುಸರಿಸುತ್ತಿದ್ದಾರೆ. ಆದರೆ ಪ್ರಥಮ ಸೆಕ್ಸ್ ನಲ್ಲಿ ರಕ್ತಸ್ರಾವ ಆಗಲೇಬೇಕೆಂಬ ನಿಯಮವಿಲ್ಲ ಹಾಗೂ ರಕ್ತಸ್ರಾವವಾಗದೇ ಇದ್ದಲ್ಲಿ ಇದು ಪ್ರಥಮ ಸಮಾಗಮವಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಇಂದಿಗೂ ಎಷ್ಟೋ ಸಂಪ್ರದಾಯಗಳಲ್ಲಿ ಇಂದಿಗೂ ಪ್ರಥಮ ಮಿಲನದಲ್ಲಿ ಪರಿಣಾಮ ರಕ್ತಸ್ರಾವದ ಮೂಲಕವೇ ಪ್ರಕಟಗೊಳ್ಳಬೇಕು ಎಂದು ತಿಳಿದುಕೊಂಡು ವಧೂವರರು ಮಲಗಿದ ಹಾಸಿಗೆಯಲ್ಲಿ ರಕ್ತದ ಕಲೆಗಳನ್ನು ಹುಡುಕಲಾಗುತ್ತದೆ! ಆದರೆ ವೈಜ್ಞಾನಿಕವಾಗಿ ಪ್ರತಿ ಸಂದರ್ಭದಲ್ಲಿಯೂ ಹೀಗೇ ಆಗಬೇಕೆಂದು ಇಲ್ಲ ಹಾಗೂ ಪ್ರಥಮ ಸೆಕ್ಸ್ ನಲ್ಲಿ ರಕ್ತಸ್ರಾವ ಆಗಲೇಬೇಕೆಂದೂ ಇಲ್ಲ. ರಕ್ತಸ್ರಾವ ಆಗದೇ ಇದ್ದುದು ಇದು ಪ್ರಥಮ ಸಮಾಗಮವಲ್ಲ ಎಂಬುದಕ್ಕೆ ಸಾಕ್ಷಿಯೂ ಅಲ್ಲ!

ಲೈಂಗಿಕೆ ಕ್ರಿಯೆಯ ಬಳಿಕ ಅಸ್ತವ್ಯಸ್ತವಾಗುವುದು ಸಾಮಾನ್ಯ

ಲೈಂಗಿಕೆ ಕ್ರಿಯೆಯ ಬಳಿಕ ಅಸ್ತವ್ಯಸ್ತವಾಗುವುದು ಸಾಮಾನ್ಯ

ಲೈಂಗಿಕ ಕ್ರಿಯೆ ಕೇವಲ ಮೋಜಿಗಾಗಿ ಅಲ್ಲ, ಬದಲಿಗೆ ಪರಸ್ಪರ ಒಳಗೊಳ್ಳುವ ಕ್ರಿಯೆಯಾಗಿದೆ. ಈ ಕಾರ್ಯದಲ್ಲಿ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದ್ದು ಬಳಿಕ ಸ್ವಚ್ಛತೆ ಹಾಗೂ ಒಪ್ಪ ಓರಣವಾಗಿಸಿಯೇ ನಿರ್ಗಮಿಸುವುದು ಅಗತ್ಯ. ಸಾಮಾನ್ಯವಾಗಿ ದಂಪತಿಗಳಿಬ್ಬರೂ ಪರಸ್ಪರರ ಪ್ರೀತಿಯಿಂದ ನಿರೀಕ್ಷಿಸುವ ಯಾವುದೇ ಚಟುವಟಿಕೆಗೆ ತಡೆಯಿಲ್ಲದೇ ನೀಡುವ ಸಹಕಾರಕ್ಕಾಗಿ ಓರಣದ ಬಗ್ಗೆ ಗಮನ ನೀಡಲು ಸಾಧ್ಯವಿಲ್ಲ. ಆದರೆ ಆಪ್ತಸಮಯ ಕಳೆದ ಬಳಿಕ ಮಾತ್ರ ಮೊದಲಿನ ಓರಣದಲ್ಲಿ ಇರಿಸಲು ಮಾತ್ರ ಮರೆಯಬಾರದು.

ಪ್ರತಿ ಬಾರಿಯೂ ಸಂಭೋಗವೇ ಆಗಬೇಕೆಂದಿಲ್ಲ!

ಪ್ರತಿ ಬಾರಿಯೂ ಸಂಭೋಗವೇ ಆಗಬೇಕೆಂದಿಲ್ಲ!

ದಂಪತಿಗಳ ನಡುವೆ ಅನ್ಯೋನ್ಯತೆಗೆ ಲೈಂಗಿಕ ಸಂಪರ್ಕವೇ ಎಲ್ಲವೂ ಅಲ್ಲ! ಅಲ್ಲದೇ ದೈಹಿಕ ಸಂಪರ್ಕದಲ್ಲಿ ಪರಸ್ಪರ ಅಪ್ಪುಗೆ, ತೀಡನೆ ಹಾಗೂ ದೇಹದ ಇತರ ಭಾಗಗಳ ಮರ್ದನ ಹಾಗೂ ಚಂದ್ರನಾಡಿತೀಡನೆಯಿಂದಲೂ ಲೈಂಗಿಕ ಪರಾಕಾಷ್ಠೆಯನ್ನು ಪಡೆಯಬಹುದು.

ಇಬ್ಬರಲ್ಲಿ ಒಬ್ಬರೇ ಮುಲುಗಬೇಕೆಂದಿಲ್ಲ

ಇಬ್ಬರಲ್ಲಿ ಒಬ್ಬರೇ ಮುಲುಗಬೇಕೆಂದಿಲ್ಲ

ಸಾಮಾನ್ಯವಾಗಿ ಮುಲುಕಾಟದ ಸದ್ದು ಬಂದರೆ ಮಾತ್ರವೇ ಲೈಂಗಿಕ ತೃಪ್ತಿ ಸಿಕ್ಕ ರಸೀದಿ ಎಂದು ಹಲವರು ಭಾವಿಸಿದ್ದಾರೆ. ಆದರೆ ಸಮಾಗಮದ ಸಮಯದಲ್ಲಿ ಮುಲುಕಾಟದ ಸದ್ದಿಗಿಂತಲೂ ಸವರುವ, ಬೆರಳಾಟ ಮೊದಲಾದ ಸದ್ದುಗಳು ಮನಸ್ಸಿಗೆ ಮುದವನ್ನೂ ನೀಡುತ್ತವೆ ಹಾಗೂ ಸಂಗಾತಿಯ ಗಮನವನ್ನು ಸೆಳೆಯಲೂ ನೆರವಾಗುತ್ತದೆ.

ಒಂದೇ ಭಂಗಿಯೇ ಆಗಬೇಕೆಂದಿಲ್ಲ!

ಒಂದೇ ಭಂಗಿಯೇ ಆಗಬೇಕೆಂದಿಲ್ಲ!

ಇಬ್ಬರಿಗೂ ಹಿತವೆನಿಸುವ ಯಾವುದೇ ಭಂಗಿಗಳನ್ನು ಅನುಸರಿಸುವುದು ಸೂಕ್ತವಾಗಿದೆ. ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನೋಡಿರುವುದಕ್ಕಿಂತಲೂ ಇದು ಹೆಚ್ಚು ಕ್ಲಿಷ್ಟವಾಗಿದ್ದು ಸಾಮಾನ್ಯ ಚಲನಗಳಲ್ಲಿ ಮೊಣಕೈ ಸಂಗಾತಿಯ ಮುಖಕ್ಕೆ ಬಡಿಯುವುದೋ, ತಲೆ ಹಿಂದಿನ ಗೋಡೆಗೆ ಹೊಡೆಯುವುದೋ, ಜಾರಿ ಬಿದ್ದು ಪೆಟ್ಟಾಗುವುದೋ ಮೊದಲಾದ ಅಪಾಯಗಳು ಎದುರಾಗಬಹುದು ಹಾಗೂ ಇದು ಲೈಂಗಿಕ ಕ್ರಿಯೆಯ ಸರಸವನ್ನೇ ಕುಂದಿಸಬಹುದು. ಸಾಮಾನ್ಯವಾಗಿ ಇಂತಹ ಅಪಘಾತಗಳಿಗೆ ಎದುರಾದವರು ಗೋಪ್ಯತೆಯನ್ನು ಕಾಪಾಡಿಕೊಳ್ಳುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರ ಹೊರತಾಗಿ ಇತರರಿಗೆ ಹೀಗಾಗಿರುವುದೇ ಗೊತ್ತಿರುವುದಿಲ್ಲ.

ಲೈಂಗಿಕ ಕ್ರಿಯೆಯಲ್ಲಿ ವಾಸನೆಯೂ ಅನಿವಾರ್ಯ!!

ಲೈಂಗಿಕ ಕ್ರಿಯೆಯಲ್ಲಿ ವಾಸನೆಯೂ ಅನಿವಾರ್ಯ!!

ಲೈಂಗಿಕ ಕ್ರಿಯೆಯಲ್ಲಿ ದೇಹದಿಂದ ಸ್ರವಿಸುವ ಕೆಲವಾರು ಸ್ರಾವಗಳು ತಮ್ಮದೇ ಆದ ಕಮಟು ವಾಸನೆಯನ್ನು ಹೊಂದಿರುತ್ತವೆ ಹಾಗೂ ಇವು ಗಾಳಿಯಲ್ಲಿ ಪಸರಿಸುತ್ತವೆ. ಇದು ಕೆಟ್ಟ ವಾಸನೆಯೇನೂ ಅಲ್ಲದಿದ್ದರೂ ಈ ವಾಸನೆಯನ್ನು ಗ್ರಹಿಸಿದವರು ಕೊಂಚ ಹೊತ್ತಿನ ಹಿಂದೆ ಈ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆದಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾಗಿ ಲೈಂಗಿಕ ಕ್ರಿಯೆಯ ಬಳಿಕ ನಿಮ್ಮ ಮನೆಗೆ ಅತಿಥಿಗಳು ಅಥವಾ ಕೋಣೆಯನ್ನು ಹಂಚಿಕೊಳ್ಳುವ ಸಹವರ್ತಿಗಳು ಆಗಮಿಸುವವರಿದ್ದರೆ ಈ ಬಗ್ಗೆ ಎಚ್ಚರವಿರಲಿ.

Most Read: ಮುಟ್ಟಿನ ದಿನಗಳಲ್ಲಿ ಸೆಕ್ಸ್- ಇವೆಲ್ಲಾ ಸಂಗತಿಗಳು ನೆನಪಿರಲಿ!

ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ

ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ

ಹೌದು! ಇದು ತುಂಬಾ ಅಗತ್ಯವಾಗಿದೆ. ಈ ಮೂಲಕ ಅನಗತ್ಯ ಹಾಗೂ ಸೋಂಕುಕಾರಕ ಬ್ಯಾಕ್ಟೀರಿಯಾಗಳು ಮಹಿಳೆಯ ಗರ್ಭಕೋಶದತ್ತ ತೆರಳದಂತೆ ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜಿಸುವುದು ಅನಿವಾರ್ಯ. ವಿಶೇಷವಾಗಿ ಪ್ರತಿ ಮಹಿಳೆಯೂ ಲೈಂಗಿಕ ಕ್ರಿಯೆಯ ಬಳಿಕ ಕಡ್ಡಾಯವಾಗಿ ಮೂತ್ರ ವಿಸರ್ಜಿಸಲೇಬೇಕು. ಸಾಮಾನ್ಯವಾಗಿಮಿಲನದ ಸಮಯದಲ್ಲಿ ಎಷ್ಟು ಬೇಡವೆಂದರೂ, ಯಾವುದೇ ಕ್ರಮ ಕೈಗೊಂಡರೂ ಕೆಲವಾರು ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸಿಯೇ ಇರುತ್ತವೆ. ಈ ಭಾಗ ತೇವಭರಿತವಾಗಿರುವ ಕಾರಣ ಬ್ಯಾಕ್ಟೀರಿಯಾಗಳಿಗೆ ಸೂಕ್ತ ಮನೆ ದೊರತಂಗಾಗುತ್ತದೆ ಹಾಗೂ ಇವು ಶೀಘ್ರವಾಗಿ ಅಭಿವೃದ್ದಿಗೊಂಡು ಜನನಾಂಗದ ಮೂಲಕ ದೇಹದ ಇನ್ನಷ್ಟು ಒಳಭಾಗವನ್ನು ಪ್ರವೇಶಿಸಿ ಭಾರೀ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ಈ ಬ್ಯಾಕ್ಟೀರಿಯಾಗಳನ್ನು ಬಾಗಿಲ ಹೊಸ್ತಿಲಿನಿಂದಲೇ ಒದ್ದು ಓಡಿಸಲು ಸುಲಭವಾದ ಮಾರ್ಗವೆಂದರೆ ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜಿಸುವುದು. ಈ ಕೆಲಸ ಇನ್ನಷ್ಟು ಸುಲಭವಾಗಿಸಲು ಮಿಲನಕ್ಕೂ ಅರ್ಥ ಅಥವಾ ಒಂದು ಘಂಟೆ ಮುನ್ನ ಚೆನ್ನಾಗಿ ನೀರು ಕುಡಿಯಬೇಕು.

ಲೈಂಗಿಕ ಕ್ರಿಯೆಯಲ್ಲಿ ಮುಖದಲ್ಲಿ ವ್ಯಂಗ್ಯ ಸೂಚಿಸುವುದು

ಲೈಂಗಿಕ ಕ್ರಿಯೆಯಲ್ಲಿ ಮುಖದಲ್ಲಿ ವ್ಯಂಗ್ಯ ಸೂಚಿಸುವುದು

ಕೆಲವೊಮ್ಮೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಸಂಗಾತಿಯ ಮುಖದಲ್ಲಿ ಬಗೆಬಗೆಯ ಭಾವನೆಗಳು ವ್ಯಕ್ತವಾಗುತ್ತಿದ್ದು ಇವುಗಳಲ್ಲಿ ವ್ಯಂಗ್ಯದ ಭಾವನೆಯೂ ಇದ್ದರೆ ಇದು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದ್ದರಿಂದ ಈ ಸಮಯದಲ್ಲಿ ಕತ್ತಲಿರುವಂತೆ ನೋಡಿಕೊಳ್ಳುವುದು ಅವಶ್ಯ.ಈ ಲೇಖನದ ವಿವರಗಳು ಇಷ್ಟವಾಯಿತೇ? ಇಂತಹ ಇನ್ನಷ್ಟು ರೋಚನ ಮಾಹಿತಿಗಳಿಗಾಗಿ ಈ ಪುಟವನ್ನು ಆಗಾಗ ಗಮನಿಸುತ್ತಿರಿ.

For Quick Alerts
ALLOW NOTIFICATIONS
For Daily Alerts

    English summary

    Surprising Sex Facts About Men And Women

    Sex can be surprising and confusing, even for the most experienced among us. From the mysterious female ejaculation to the one piece of clothing that can make you orgasm faster, here are Medical Daily’s top most surprising sex facts for both men and women.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more