For Quick Alerts
ALLOW NOTIFICATIONS  
For Daily Alerts

ಮಾಜಿ ಪ್ರೇಮಿಯ ಹಿಂದಕ್ಕೆ ಪಡೆಯಲು ಪ್ರತೀ ರಾಶಿಯ ಮಹಿಳೆಯರು ಏನು ಮಾಡುವರು?

|

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಅಭದ್ರವಾಗುತ್ತಿದೆ ಎಂದು ಹೇಳಬಹುದು. ಒಂದು ಕ್ಷಣ ಮನಸ್ಸು ಒಬ್ಬರನ್ನು ಬಯಸಿದರೆ ಇನ್ನೊಂದು ಕ್ಷಣಕ್ಕೆ ಮನಸ್ಸು ಇನ್ನೊಂದು ಪ್ರೀತಿಯ ಬಂಧವನ್ನು ಬಯಸಬಹುದು. ನಂಬಿಕೆ, ಪ್ರೀತಿ, ವಿಶ್ವಾಸ ಹಾಗೂ ಅನುಬಂಧಗಳು ಹೃದಯವನ್ನು ಬೆಸೆಯದೆ ಇದ್ದಾಗ ಈ ರೀತಿಯ ಸಮಸ್ಯೆಗಳು ಎದುರಾಗುವುದು. ತಾಂತ್ರಿಕತೆ ಹಾಗೂ ಆಧುನಿಕತೆಯ ಇಂದಿನ ದಿನದಲ್ಲಿ ಎಲ್ಲರೂ ಸ್ವಾವಲಂಭಿಯಾಗಿ ಬದುಕಲು ಬಯಸುತ್ತಾರೆ. ಸ್ವಾವಲಂಭನೆ ಹಾಗೂ ಆರ್ಥಿಕವಾಗಿ ಸಬಲರಾಗಿರುವುದರಿಂದ ಇನ್ನೊಂದು ವ್ಯಕ್ತಿಯ ಮೇಲೆ ಅವಲಂಬಿತರಾಗುವುದು ವಿರಳವಾಗುತ್ತಿದೆ.

ಆರ್ಥಿಕ ಸ್ವಾವಲಂಭನೆಯಿಂದ ಹೆಚ್ಚಿನ ಜನರು ಹೊಂದಾಣಿಕೆಗೆ ಅಥವಾ ಪ್ರೀತಿಗಾಗಿ ಸೋಲುವ ಮನೋಭಾವ ಕಡಿಮೆಯಾಗಿದೆ ಎಂದು ಹೇಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರು ತಮ್ಮ ಮಾಜಿ ಪ್ರೀತಿ ಅಥವಾ ಮನಸ್ಸು ಬಯಸಿದ ಪ್ರೀತಿಗಾಗಿ ಕೆಲವು ಪರಿಣಾಮಕಾರಿ ಬದಲಾವಣೆಯನ್ನು ಬಯಸುತ್ತಾರೆ. ಹಾಗಾದರೆ ರಾಶಿಚಕ್ರದ ಅನುಸಾರ ವ್ಯಕ್ತಿ ಯಾವೆಲ್ಲಾ ವರ್ತನೆ ತೋರುವರು? ಅವರ ಮನಃಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ.

ಮೇಷ

ಮೇಷ

ಮೇಷ ರಾಶಿಯವರು ಮುಖದಲ್ಲಿ ತುಂಬಾ ಪ್ರೌಢರಂತೆ ಕಾಣಿಸುವರು. ಆದರೆ ತನ್ನ ಮಾಜಿ ಪ್ರೇಮಿಯನ್ನು ಮರಳಿ ಪಡೆಯಬೇಕೆಂದು ಬಯಸಿದರೆ ಆಗ ಆಕೆ ಮಕ್ಕಳಂತೆ ವರ್ತಿಸುವಳು. ಆಕೆ ಯಾವಾಗಲೂ ತನ್ನ ಮನೆಯಿಂದ ಹೊರಗೆ ಬಂದು ನೀನು ನನ್ನನ್ನು ಬಿಟ್ಟು ತಪ್ಪು ಮಾಡಿದೆ ಎನ್ನುವಂತಹ ಭಾವನೆ ಮೂಡಿಸವಳು. ಆಕೆ ಮಕ್ಕಳಂತೆ ಆತನ ಮನೆಯ ಮುಂದೆ ಕುಳಿತುಕೊಳ್ಳುವಳು. ತಮ್ಮ ಪ್ರೀತಿಯ ದಿನಗಳು ನೆನಪಿಗೆ ಬರದಂತೆ ಮಾಡುವ ಆಕೆಯ ಪ್ರಯತ್ನವನ್ನು ತಡೆಯಲು ಸಾಧ್ಯವಿಲ್ಲ.

ವೃಷಭ

ವೃಷಭ

ಈ ರಾಶಿಯ ಮಹಿಳೆಯರು ನಾಯಿ ಮರಿಗಿಂತ ಹೆಚ್ಚು ಪ್ರಾಮಾಣಿಕ ವ್ಯಕ್ತಿಯಾಗಿ ತೋರುವರು. ವಾದಗಳನ್ನು ಇಷ್ಟಪಡದ ವ್ಯಕ್ತಿಗಳು ಎನ್ನಬಹುದು. ಏಕೆಂದರೆ ಸಂಗಾತಿಯೊಂದಿಗೆ ವಾದ ಮಾಡುವುದರಿಂದ ಅಂತ್ಯದಲ್ಲಿ ಒಂದು ಬಗೆಯ ಅಪರಾಧದ ಭಾವನೆಗೆ ಒಳಗಾಗುವರು. ಇವರು ತಮ್ಮ ಹಳೆಯ ಪ್ರೀತಿ ಅಥವಾ ಪ್ರಸ್ತುತ ಪ್ರೀತಿಯ ಜೀವನದಿಂದ ಬದಲಾವಣೆಯನ್ನು ಬಯಸಿದರೆ ಸಂದೇಶದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಕಣ್ಣುಗಳಿಂದಲೇ ಆಕರ್ಷಿಸುವ ಇವರು ತಮ್ಮ ನಿರ್ಧಾರವನ್ನು ಮುರಿಯಲು ಸಮಯವನ್ನು ಕಾಯುತ್ತಿರುತ್ತಾರೆ.

Most Read: ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ- ಮದುವೆಯ ಸಂದರ್ಭದಲ್ಲಿ ಸಮಸ್ಯೆ ಬರಲಿದೆ!!

ಮಿಥುನ

ಮಿಥುನ

ಇವರನ್ನು ಮಾರಾಟಗಾರರನ್ನು ಹೋಲುವ ಮನಃಸ್ಥಿತಿಯವರು ಎಂದು ಹೇಳಬಹುದು. ಇವರು ತಮ್ಮ ಪ್ರೀತಿಯಲ್ಲಿ ಬದಲಾವಣೆ ಬಯಸಿದರೆ ಮೊದಲು ಒಂದು ಚಿಕ್ಕ ಚರ್ಚೆಯನ್ನು ಕೈಗೊಳ್ಳುತ್ತಾರೆ. ನಂತರ ಪರಸ್ಪರ ಒಟ್ಟಿಗೆ ಆರಾಮದಾಯಕವಾಗಿ ಮಾತನಾಡಲು ಬಯಸುತ್ತಾರೆ. ತಮ್ಮ ಎಲ್ಲಾ ಕೌಶಲ್ಯವನ್ನು ಬಳಸಿ ಒಟ್ಟಿಗೆ ಇರುವ ಮೂಲಕ ವಿನೋದವನ್ನು ಹೊಂದುತ್ತಾರೆ.

ಕರ್ಕ

ಕರ್ಕ

ಈ ರಾಶಿಯ ಮಹಿಳೆಯರು ತಮ್ಮ ಪಾಲುದಾರರನ್ನು ಮಕ್ಕಳಂತೆ ಪ್ರೀತಿಸುತ್ತಾರೆ. ಇವರು ತಮ್ಮ ಹಳೆಯ ಪ್ರೀತಿಯನ್ನು ಅಥವಾ ಪ್ರೀತಿಯ ಜೀವನದಲ್ಲಿ ಬದಲಾವಣೆಯನ್ನು ಬಯಸಿದರೆ ಮನೆಯ ಸದಸ್ಯರಿಗಾಗಿ ಅಚ್ಚರಿಯನ್ನುಂಟುಮಾಡುವ ಭಕ್ಷ್ಯವನ್ನು ಮಾಡಿ ಬಡಿಸುತ್ತಾರೆ. ಇದು ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನವಾಗಿದೆ. ಇವರು ಒಂದೇ ಸಮಯದಲ್ಲಿ ಎರಡು ಪ್ರೀತಿಯ ಕಾಳಜಿ ತೋರುವರು.

Most Read:ಅಂಗೈಯಲ್ಲಿರುವ ರೇಖೆಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಳ್ಳಿ!

ಸಿಂಹ

ಸಿಂಹ

ಈ ಮಹಿಳೆಯರು ತಮ್ಮ ಮಾಜಿ ಪ್ರೇಮಿಯ ಬಗ್ಗೆ ಬಹಳಷ್ಟು ಹೆಮ್ಮೆಯನ್ನು ಪಡೆದುಕೊಂಡಿರುತ್ತಾರೆ. ಇವರು ತಮ್ಮ ತಪ್ಪುಗಳನ್ನು ಅರಿತುಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಪ್ರೇಮಿಗಳ ಎದುರು ದೊಡ್ಡ ಅತಿಥಿಗಳಂತೆ ತೋರ್ಪಡಿಸಿಕೊಳ್ಳುವುದು ಹಾಗೂ ದುಬಾರಿ ಬೆಲೆಯ ಉಡುಗೆ ತೊಡುವುದರ ಮೂಲಕ ಪ್ರದರ್ಶನ ಗೈಯತ್ತಾರೆ. ನಂತರ ಅವರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುವರು.

ಕನ್ಯಾ

ಕನ್ಯಾ

ಇವರು ತಮ್ಮ ಹಿಂದಿನ ಪ್ರೀತಿ ಅಥವಾ ಪ್ರೀತಿಯ ಬದಲಾವಣೆಯ ವಿಚಾರ ಬಂದಾಗ ಹೆಚ್ಚು ಪ್ರಣಯ ಪೂರಕವಾದ ರೀತಿಯಲ್ಲಿ ವರ್ತಿಸುತ್ತಾರೆ. ಇವರು ಸಾಮಾನ್ಯವಾಗಿ ಉತ್ತಮ ಸ್ನೇಹಿತರಾಗಿರಲು ಬಯಸುತ್ತಾರೆ. ಭೂಮಿಯ ಚಿಹ್ನೆಯನ್ನು ಹೊಂದಿರುವ ಇವರು ಪ್ರೇಮಿಯೊಂದಿಗೆ ಉತ್ತಮ ಹೊಂದಾಣಿಕೆಯಿಂದ ಅರ್ಥಮಾಡಿಕೊಳ್ಳುವರು. ಹಾಗಾಗಿ ಇವರು ಪ್ರೇಮಿಯು ಅಸಹಾಯಕರಾಗಿರುವ ಸಮಯಕ್ಕಾಗಿ ಕಾಯುತ್ತಿರುತ್ತಾರೆ.

Most Read: ಬರೀ ಹದಿನೈದೇ ದಿನಗಳಲ್ಲಿ ಬಿಳಿ ಕೂದಲನ್ನು ಕಪ್ಪು ಮಾಡುವ ಮನೆಮದ್ದುಗಳು

ತುಲಾ:

ತುಲಾ:

ಇವರು ಸಾಮಾನ್ಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ದುಂಬಿ ಎಂದು ಹೇಳಬಹುದು. ಇತರ ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಡೇಟಿಂಗ್ ಆಮಂತ್ರಣವನ್ನು ಬಯಸುವರು. ಇವರಿಗೆ ತಮ್ಮ ಪ್ರೇಮಿಯನ್ನು ಹೇಗೆ ಆಕರ್ಷಿಸಬೇಕು ಎನ್ನುವುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಇವರು ಪ್ರೀತಿಯ ಇನ್ನೊಂದು ಅವಕಾಶ ಪಡೆದುಕೊಳ್ಳಲು ಸಾಮಾಜಿಕ ಸಭೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ವೃಶ್ಚಿಕ:

ವೃಶ್ಚಿಕ:

ಇವರಿಗೆ ಪ್ರೀತಿ ಎನ್ನುವುದು ಎಂದಿಗೂ ಮುಗಿಯದ ವಿಚಾರವಾಗಿರುತ್ತದೆ. ಇವರು ಪ್ರೀತಿಗಾಗಿ ಸದಾ ಹೋರಾಟವನ್ನು ನಡೆಸುತ್ತಿರುತ್ತಾರೆ. ಪರಸ್ಪರ ಇಬ್ಬರ ನಡುವೆ ಏನಾದರೂ ನಡೆದರೆ ಅದನ್ನು ಸುಲಭವಾಗಿ ಮರೆತು ಬಿಡಬಹುದು. ಇವರು ಕರೆ ಮಾಡುವುದರ ಮೂಲಕ ಒಂದಿಷ್ಟು ಸಮಯವನ್ನು ಪ್ರೇಮಿಯೊಂದಿಗೆ ಕಳೆಯುತ್ತಾರೆ.

ಧನು

ಧನು

ಸದಾ ಹೊರಾಂಗಣದಲ್ಲಿ ಹೆಚ್ಚು ಸಮಯವನ್ನು ಕಳೆಯುವ ಇವರಿಗೆ ಪ್ರೀತಿಯು ಒಂದು ಸಾಹಸದ ವಿಚಾರವಾಗಿರುತ್ತದೆ. ಇವರು ಹಳೆಯ ಪ್ರೀತಿಯನ್ನು ಮೊದಲು ಭೇಟಿಯಾದ ಸ್ಥಳದಲ್ಲಿ ಪುನಃ ಭೇಟಿಯಾಗಲು ಬಯಸುತ್ತಾರೆ. ಹಿಂದಿನ ಪ್ರೀತಿಯನ್ನು ಪುನಃ ಪಡೆದುಕೊಳ್ಳಲು ಬಯಸಿದರೆ ಒಟ್ಟಿಗೆ ಹೋಗಲು ಸಿದ್ಧರಾಗುತ್ತಾರೆ. ಉತ್ತಮ ಸ್ನೇಹದ ರೀತಿಯಲ್ಲಿ ಸಂಬಂಧವನ್ನು ಪಡೆದುಕೊಳ್ಳುವರು.

 ಮಕರ

ಮಕರ

ಈ ರಾಶಿಯ ಮಹಿಳೆಯರು ಸ್ವಾಭಾವಿಕವಾಗಿ ಪ್ರತಿಭಾನ್ವಿತ ತಂತ್ರಜ್ಞರಾಗಿರುತ್ತಾರೆ. ಇವರು ಸಂಬಂಧದ ವಿಚಾರದಲ್ಲಿ ಹೆಚ್ಚು ಅದ್ಭುತವನ್ನು ಕಾಣಲು ಬಯಸುತ್ತಾರೆ. ಸಂಬಂಧವನ್ನು ಒಮ್ಮೆಲೇ ಮುರಿಸು ಬಿಡಬಹುದು. ನಂತರ ಪುನಃ ಅದನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇವರು ತಮ್ಮ ಪ್ರೇಮಿಗೆ ಅತ್ಯುತ್ತಮ ಗೆಳೆತನವನ್ನು ನೀಡಲು ಬಯಸುತ್ತಾರೆ. ಈ ಮೂಲಕ ಹೆಚ್ಚಿನ ಪ್ರಭಾವ ಬೀರುವರು.

ಕುಂಭ

ಕುಂಭ

ಬಹುತೇಕ ಶಾಂತ ಸ್ವಭಾವವನ್ನು ಹೊಂದಿರುವ ಇವರು ಹೆಚ್ಚು ಮಾತನಾಡಲು ಬಯಸದ ವ್ಯಕ್ತಿಗಳು ಎನ್ನಬಹುದು. ನಿಧಾನವಾಗಿ ಸಂವಹನ ನಡೆಸುವುದರ ಮೂಲಕ ಸ್ನೇಹವನ್ನು ಸಂಪಾದಿಸುವರು. ತದನಂತರ ಮಾತುಕತೆಯನ್ನು ಪ್ರಾರಂಭಿಸುತ್ತಾರೆ. ನಿಧಾನ ಸಂವಹನ ಕೌಶಲ್ಯದಿಂದಲೇ ತಮ್ಮ ಪ್ರೀತಿಯನ್ನು ಆಕರ್ಷಿಸುವರು.

ಮೀನ

ಮೀನ

ಮೀನರಾಶಿಯ ಮಹಿಳೆಯರು ಸೃಜನಶೀಲತೆಯನ್ನು ಹೊಂದಿರುತ್ತಾರೆ ಎನ್ನಬಹುದು. ತಮ್ಮ ಪಾಲುದಾರರ ಮನಸ್ಸಿನಲ್ಲಿ ಸಾಕಷ್ಟು ವಿಶೇಷ ಕಲ್ಪನೆ ಮೂಡುವಂತೆ ಮಾಡುವರು. ವಿಘಟನೆ ಸಂಭವಿಸಿದಾಗ ಅದನ್ನು ಸುಲಭವಾಗಿ ಸ್ವೀಕರಿಸಲು ಅವರಿಗೆ ಕಷ್ಟವಾಗಬಹುದು. ಇವರ ಪ್ರೇಯಸಿ ಸಂಗಾತಿಗಾಗಿ ಕವಿತೆ ಅಥವಾ ವಿಶೇಷ ಬರಹಗಳನ್ನು ಬರೆಯುವುದರ ಮೂಲಕ ಹೆಚ್ಚಿನ ಪ್ರೀತಿ ತೋರುವರು.

English summary

Signs of women Likely To Get Back With An Ex

Relationships, breakups and the reaction of people to breakups, all seem unpredictable these days. While the way one expresses love can be predicted through astrology, how they react can also be known. Similarly, what one does when one wants the ex back in life, can also be checked by knowing the person's zodiac sign.
Story first published: Saturday, October 6, 2018, 12:52 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more