For Quick Alerts
ALLOW NOTIFICATIONS  
For Daily Alerts

ಕಣ್ಣು ,ಮೂಗು ಸುಟ್ಟು ಹೋದ ಈ ಹುಡುಗಿ ಈಗ ಹೇಗೆ ಕಾಣುತ್ತಿದ್ದಾಳೆ ನೋಡಿ

|

ಕಷ್ಟ ಎನ್ನುವುದು ಕೇವಲ ಯಾವುದೋ ಒಂದು ವಿಚಾರಕ್ಕೆ ಸೀಮಿತವಾಗಿರುವುದಿಲ್ಲ. ಸಂಬಂಧದ ವಿಚಾರದಲ್ಲಿ ಇರಬಹುದು, ಹಣಕಾಸಿನ ವಿಚಾರದಲ್ಲಿ ಇರಬಹುದು, ಆಸ್ತಿಯ ವಿಚಾರದಲ್ಲಿ ಇರಬಹುದು ಅಥವಾ ಕೆಲಸದ ವಿಚಾರವೇ ಆಗಿರಬಹುದು. ವಿವಿಧ ರೂಪದಲ್ಲಿ ಕಷ್ಟಗಳು ಎದುರಾಗಿ, ಜೀವನವನ್ನು ಒಮ್ಮೆ ಕಂಗೆಡಿಸುವಂತೆ ಮಾಡುತ್ತವೆ. ಅಂತಹ ಸಮಯದಲ್ಲಿ ನಾವು ನಮ್ಮ ಸಂಯಮ ಅಥವಾ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಆದಷ್ಟು ಧೈರ್ಯವನ್ನು ತಂದುಕೊಂಡು ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಬೇಕು.

ಹೌದು, ಕಷ್ಟ ಎನ್ನುವುದು ಯಾವ ವ್ಯಕ್ತಿಯನ್ನು ಬಿಟ್ಟಿದ್ದಿಲ್ಲ. ಮಾನವರಿಂದ ಹಿಡಿದು ದೇವತೆಗಳ ವರೆಗೆಗೂ ಕಷ್ಟಗಳು ಕಾಡಿವೆ. ನಮ್ಮ ಕಲ್ಪನೆಗೂ ಸಿಗದಂತೆ ಬರುವಂತಹ ಕಷ್ಟಗಳ ಬಗ್ಗೆ ಚಿಂತಿಸುತ್ತಾ ಕುಳಿತು ಇರುವ ನೆಮ್ಮದಿಯನ್ನು ಕೆಡಿಸಿಕೊಳ್ಳಬಾರದು. ಬದಲಿಗೆ ಇತರರಿಗೆ ಇರುವ ಕಷ್ಟಗಳನ್ನು ನೋಡಿ ನಮ್ಮ ಕಷ್ಟಗಳು ಏನೂ ಅಲ್ಲ ಎನ್ನುವುದನ್ನು ಅರಿಯಬೇಕು. ಆಗಲೇ ನಮಗೆ ಬದುಕಿನ ಬಗ್ಗೆ ಒಂದಿಷ್ಟು ಧೈರ್ಯ ಹಾಗೂ ಭರವಸೆಯು ಮೂಡುವುದು.

Crissy Steltz

ಅಂದೊಂದು ಅಪಘಾತ ಸಂಭವಿಸಿತ್ತು

ಕ್ರಿಸ್ಸಿ ಸ್ಟೆಲ್ಜ್ ಎಂಬ ಒಬ್ಬ ಸುಂದರ ಹುಡುಗಿ. ಆಕೆಗೆ ಆಗ ಕೇವಲ 16 ವರ್ಷ. ಒಂದು ದಿನ ಅವಳು ತನ್ನ ಕುಟುಂಬದವರನ್ನು ಬಿಟ್ಟು ತನ್ನ ಗೆಳೆಯನೊಂದಿಗೆ ವಾಸಿಸಲು ನಿರ್ಧರಿಸಿ ಬಂದಿದ್ದಳು. ದುರಾದೃಷ್ಟವೆಂದರೆ ಗೆಳೆಯನ ಮನೆಯಲ್ಲಿ ನಡೆದಿದ್ದ ಪಾರ್ಟಿಯೊಂದರಲ್ಲಿ ಅತಿಥಿಯೊಬ್ಬರು ಆಡುತ್ತಿದ್ದ ಶಾಟ್ ಗನ್ ತಗುಲಿ ಅಪಘಾತಕ್ಕೆ ಒಳಗಾದಳು. ಹೆತ್ತವರಿಂದ ದೂರ ಆಗಿರುವುದಲ್ಲದೆ ತನ್ನ ಸುಂದರ ಮುಖವನ್ನು ಕಳೆದುಕೊಂಡಳು.

ಅವಳು ಆಗಲೇ ಎಚ್ಚರಿಸಿದ್ದಳು:

ಆ ಅತಿಥಿಯು ಗನ್ ಅನ್ನು ನೇರವಾಗಿ ಹಿಡಿದು ಓಡಾಡುವಾಗ ಕ್ರಿಸ್ಸಿ ಆತನಿಗೆ ಎಚ್ಚರಿಸಿದ್ದಳು. ಅದು ಅಪಾಯಕಾರಿ, ಹಾಗೆ ಮಾಡಬಾರದು ಎಂದು ತಿಳಿ ಹೇಳಿದ್ದಳು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಆ ಅತಿಥಿ ಇದರಲ್ಲಿ ಬುಲೆಟ್ ತುಂಬಿಲ್ಲ ಎನ್ನುತ್ತಾ ಓಡಾಡುತ್ತಿದ್ದನು. ಅಷ್ಟರಲ್ಲಿಯೇ ಆಕಸ್ಮಿಕ ಎನ್ನುವಂತೆ ಗುಂಡು ಕ್ರಿಸ್ಸಿಯ ಮುಖಕ್ಕೆ ಹಾರಿತು.

ಅವಳ ಸ್ಥಿತಿ ಕೆಟ್ಟದಾಗಿತ್ತು:

ಗುಂಡಿನಿಂದಾಗಿ ಮುಖ ತುಂಡರಿಸಿದ್ದರೂ ಅವಳು ಜಾಗೃತಳಾಗಿದ್ದಳು. ಅವಳು ಆಘಾತವಾದ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತಾ ವಿವರಿಸುತ್ತಿದ್ದಳು "ಗಾಯಗೊಂಡ ಪ್ರಾಣಿ ಎಂದಿಗೂ ಎದ್ದೇಳುವುದಿಲ್ಲ. ನಾನು ತಿಳಿದಂತೆ ಅವು ಪುನಃ ಉಳಿದುಕೊಂಡಿಲ್ಲ. ಆದರೆ ನಾನು ಎದ್ದೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು."

ಅಪಘಾತದಲ್ಲಿ ಕಣ್ಣು, ಮೂಗು ಕಳೆದುಕೊಂಡಿದ್ದಳು:

ಅಪಘಾತದಲ್ಲಿ ಕ್ರಿಸ್ಸಿ ಅವಳ ಕಣ್ಣು ಮತ್ತು ಮೂಗನ್ನು ಕಳೆದುಕೊಂಡಿದ್ದಳು. ಆ ಅಪಘಾತದಲ್ಲಿ ಅವಳು ಕುರುಡುತನಕ್ಕೆ ಒಳಗಾಗಿದ್ದಳು. ಜೊತೆಗೆ ಎಂದಿಗೂ ವಾಸನೆಯನ್ನು ಗುರುತಿಸಲಾಗದಂತಹ ಸ್ಥಿತಿಗೆ ಬಂದು ತಲುಪಿದಳು. ಇಷ್ಟೇ ಅಲ್ಲದೆ ಮುಖದಲ್ಲಿ ಎಂದಿಗೂ ಸರಿಪಡಿಸಲಾಗದಂತಹ ಕುರೂಪತೆಯ ಗಾಯವು ಉಳಿದುಕೊಂಡಿತು.

ಸಾಧಿಸಿ ತೋರಿಸಿದಳು:

ಇಂತಹ ಗಂಭೀರ ಗಾಯಗಳ ನಡುವೆಯೂ ಕ್ರಿಸ್ಸಿ ತನ್ನ ಬದುಕನ್ನು ಮುಂದುವರಿಸುವ ಪಣವನ್ನು ತೊಟ್ಟಳು. ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿ, ಪದವಿಯನ್ನು ಪಡೆದಳು. 11 ವರ್ಷಗಳ ಕಾಲ ತನ್ನ ಮುಖದಲ್ಲಿ ಉಂಟಾದ ನ್ಯೂನತೆಯನ್ನು ಮರೆಮಾಚಲು ಕಣ್ಣು ಮತ್ತು ಮುಖಕ್ಕೆ ಮುಖವಾಡ (ಮಾಸ್ಕ್ )ಧರಿಸುತ್ತಿದ್ದಳು.

ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ:

ಕ್ರಿಸ್ಸಿ 11 ವರ್ಷಗಳ ಕಾಲ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೂ ಯಾವುದೇ ವೈದ್ಯಕೀಯ ಚಿಕಿತ್ಸೆಯಿಂದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ. ಬದಲಿಗೆ ಕಾಸ್ಮೆಟಿಕ್ ಚಿಕಿತ್ಸೆಯ ಮೂಲಕ ಕೃತಕ ಮೂಗು ಮತ್ತು ಕಣ್ಣನ್ನು ಪಡೆದುಕೊಂಡಳು ಅಷ್ಟೆ.

ಉಚಿತ ಚಿಕಿತ್ಸೆ:

ವೈದ್ಯರು ಹಾಗೂ ವಿಶೇಷ ಶಸ್ತ್ರ ಚಿಕಿತ್ಸಕರು ಅವಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದರು. ಅದರಂತೆಯೇ ಚಿಕಿತ್ಸೆ ಪಡೆದ ಬಳಿಕ ಕ್ರಿಸ್ಸಿಗೆ ಸಂಪೂರ್ಣವಾಗಿ ಹೊಸ ರೂಪವನ್ನು ನೀಡಿದರು. ಇದರಿಂದ ಕ್ರಿಸ್ಸಿ ಸಂಪೂರ್ಣವಾಗಿ ಹೊಸ ನೋಟವನ್ನು ಪಡೆದಳು. ಅವಳ ಪುಟ್ಟ ಮಗ ತಾಯಿಯನ್ನು ಪ್ರಾಸ್ಥೆಟಿಕ್ ಮುಖದಲ್ಲಿ ನೋಡುವಂತೆ ಮಾಡಿದರು.

ಸಂಗಾತಿಯ ಬೆಂಬಲವಿತ್ತು:

ಕ್ರಿಸ್ಸಿಯ ಜೊತೆಗಾರ ಜೆಫ್ರಿ ದಿಲ್ಗರ್ ಕ್ರಿಸ್ಸಿಗೆ ಎಲ್ಲಾ ಹಂತದಲ್ಲೂ ಉತ್ತಮ ಬೆಂಬಲವನ್ನು ಹಾಗೂ ಧೈರ್ಯವನ್ನು ನೀಡಿದ್ದರು. ಕೇವಲ ಹದಿನಾರನೇ ವರ್ಷದಲ್ಲಿರುವಾಗಲೇ ಪುಟ್ಟ ಮಗುವಿಗೆ ತಂದೆ-ತಾಯಿಯಾಗಿದ್ದರು ಇವರು. ತಮ್ಮ ಮಗು ತಾಯಿಯು ಕೃತಕ ಮುಖವಾಡ ಹೊಂದಿರುವುದನ್ನು ನೋಡಬಾರದು ಎಂದು ಬಯಸುತ್ತಿದ್ದರು. ಅದರಂತೆಯೇ ಕೊನೆಗೆ ಚಿಕಿತ್ಸೆಯ ಮೂಲಕ ಹೊಸ ಮುಖವನ್ನು ಪಡೆದಳು. ಧೈರ್ಯದ ಭರವಸೆಯೊಂದಿಗೆ ಆಕೆಯ ಜೀವನವು ಉತ್ತಮ ರೀತಿಯಲ್ಲಿ ಬದಲಾವಣೆ ಕಂಡಿತು.

ಸರಿ ಸುಮಾರು 11 ವರ್ಷಗಳು ಕಳೆದಿತ್ತು:

ಕ್ರಿಸ್ಸಿ ತನ್ನ ಮುಖದಲ್ಲಿ ಕಣ್ಣು ಮತ್ತು ಮೂಗನ್ನು ಕಳೆದುಕೊಂಡರೂ ತನ್ನ ಜೀವನದ ಭರವಸೆಯನ್ನು ಕಳೆದುಕೊಂಡಿರಲಿಲ್ಲ. ಬದಲಿಗೆ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸುವುದರ ಮೂಲಕ ಒಂದು ಪುಟ್ಟ ಮಗುವಿಗೆ ಧೈರ್ಯವಂತ ತಾಯಿಯಾದಳು. 11 ವರ್ಷದವರೆಗೆ ತನ್ನ ನ್ಯೂನತೆಗಳಿಗೆ ಮಾನಸಿಕವಾಗಿ, ಅಂತರಾಳದಲ್ಲಿ ಮರುಗಿದರೂ ಆಕೆಯಲ್ಲಿ ಸಾಧಿಸಿತೋರುವ ಧೈರ್ಯವಿತ್ತು. ತನ್ನ ಜೀವನದ ಹೋರಾಟಕ್ಕೆ 11 ವರ್ಷದ ಬಳಿಕ ಉತ್ತಮ ಚಿಕಿತ್ಸೆ ಪಡೆಯುವುದರ ಮೂಲಕ ಹೊಸ ಮುಖವನ್ನು ಪಡೆದಳು. ತನ್ನ ಮಗುವಿಗೂ ನೆಮ್ಮದಿಯ ಜೀವನವನ್ನು ನೀಡಿದಳು.

Read more about: eyes
English summary

She Was Shot In The Face And This Is How She Looks Now!

Crissy Steltz was just sweet 16 when the pretty teen decided to move out of her family home to live with her boyfriend. The accident happened at a friend's house party when one of the guests began to play with a stolen shotgun.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more