Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಐದು ಅಡಿ ಎತ್ತರವಿದ್ದವಳು ಎರಡು ಅಡಿಯಾದಳು!
ಯಾವುದೇ ಅಪಘಾತ ಅಥವಾ ದುರ್ಘಟನೆಗೆ ಸಿಲುಕಿದಾಗ ನಾವು ವೈದ್ಯರಲ್ಲಿಗೆ ಹೋಗಿ ನಮಗೆ ಆಗಿರುವ ಗಾಯ ಅಥವಾ ನೋವಿಗೆ ಚಿಕಿತ್ಸೆ ಪಡೆದುಕೊಳ್ಳುತ್ತೇವೆ. ನಮಗೆ ಉತ್ತಮ ಚಿಕಿತ್ಸೆ ಸಿಕ್ಕಿದರೆ ಅದರಿಂದ ನಾವು ಬೇಗನೆ ಚೇತರಿಸಿಕೊಳ್ಳುವೆವು. ಆದರೆ ಕೆಲವೊಂದು ಸಲ ನಾವು ಚಿಕಿತ್ಸೆಗೆಂದು ಹೋಗಿರುವುದು ಒಂದು ಕಾಯಿಲೆಗೆ ಆದರೆ ವೈದ್ಯರು ನೀಡಿರುವುದು ಬೇರೆಯೇ ಚಿಕಿತ್ಸೆ. ಹೀಗೆ ಆದರೆ ಅದರಿಂದ ಹಲವಾರು ಸಮಸ್ಯೆಗಳು ಕಂಡುಬರುವುದು ಖಚಿತ.
ಆದರೆ ನಮ್ಮದೇ ದೇಶದಲ್ಲಿ ತುಂಬಾ ವಿಚಿತ್ರ ಹಾಗೂ ಅಪರೂಪದಲ್ಲಿ ಅಪರೂಪವೆನ್ನುವಂತಹ ಘಟನೆಯು ನಡೆದಿದ್ದು, ಮಹಿಳೆಯೊಬ್ಬರ ಉದ್ದವು ಕಳೆದ 25 ವರ್ಷಗಳಲ್ಲಿ ಐದು ಅಡಿಗಿಂತ ಈಗ ಕೇವಲ 2 ಅಡಿಗೆ ಇಳಿದಿದೆ. ಶಾಂತಿ ದೇವಿ ಎಂಬ ಮಹಿಳೆಯ ಎತ್ತರವು ಹೇಗೆ ಕಡಿಮೆಯಾಯಿತು ಎಂದು ನೀವು ಈ ಲೇಖನ ಓದುತ್ತಾ ತಿಳಿಯಿರಿ...

ಆಕೆ ಕಾನ್ಪುರದವಳು
60ರ ಹರೆಯದ ಶಾಂತಿ ದೇವಿ ಎಂಬಾಕೆಯು ಕಾನ್ಪುರದ ಧಾರು ಎಂಬ ಗ್ರಾಮದಲ್ಲಿ ವಾಸವಾಗಿದ್ದಾರೆ. ಆದರೆ ಈಗ ಆಕೆಯು ವಿಚಿತ್ರ ಕಾಯಿಲೆಗಾಗಿ ಇಂಟರ್ನೆಟ್ ನಲ್ಲಿ ಜನಪ್ರಿಯಳಾಗಿದ್ದಾರೆ. ಕಳೆದ 25 ವರ್ಷಗಳಿಂದ ಆಕೆಯ ಎತ್ತರವು ನಿರಂತರವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿದುಬಂದಿದೆ. ಐದು ಅಡಿ ಎತ್ತರವಿದ್ದ ಆಕೆ ಒಂದು ಸಲ ಅಪಘಾತಕ್ಕೆ ಒಳಗಾದ ಬಳಿಕ ಆಕೆಯ ತೂಕ 2 ಅಡಿಗೆ ಕುಸಿದಿದೆ.
ಅಪಘಾತಕ್ಕೆ ಮೊದಲು ಆಕೆಯ ಜೀವನ ಸಹಜವಾಗಿತ್ತು....
ಅಪಘಾತಕ್ಕೆ ಮೊದಲು ಆಕೆಯ ಜಿವನ ಸಾಮಾನ್ಯವಾಗಿತ್ತು. ಆದರೆ ಒಂದು ಸಲ ಆಕೆಯ ಮೇಲೆ ಮನೆಯ ಮೇಲ್ಘಾವಣಿಯು ಬಿದ್ದು ಆಕೆ ಗಾಯಗೊಂಡಳು. ಆಕೆಯನ್ನು ತಕ್ಷಣ ಪತಿ ಗ್ಯಾನಚರಣ್ ಕುಶ್ವಾ ಮತ್ತು ಇತರ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಗಾಯಗಳಿಗೆ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಮರಳಿದಳು.
ನೋವಿನ ಬಗ್ಗೆ ದೂರಿದಳು
ಆಕೆ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ತನ್ನ ಮೂಳೆಗಳಲ್ಲಿ ನೋವುಂಟು ಎಂದು ಹೇಳಿಕೊಂಡಿದ್ದಳು. ಇದನ್ನು ನೋಡಿ ಆಕೆಯ ಮಗ ವಿಮಲೇಶ್ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ. ಅವರು ಕೆಲವು ಮಾತ್ರೆಗಳನ್ನು ಬರೆದುಕೊಟ್ಟಿದ್ದರು. ಇದನ್ನು ಸೇವಿಸಿದ ಬಳಿಕ ಆಕೆಯ ಎತ್ತರ ಕಡಿಮೆಯಾಗಿದೆ.
ನಾಲ್ಕೇ ತಿಂಗಳಲ್ಲಿ ಬದಲಾವಣೆ
ಮಾತ್ರೆ ತೆಗೆದುಕೊಂಡ ನಾಲ್ಕೇ ತಿಂಗಳಲ್ಲಿ ಎತ್ತರ ಕುಗ್ಗಿದೆ. ಆರಂಭದಲ್ಲಿ ಎತ್ತರವು ಅರ್ಧ ಅಡಿ ಕಡಿಮೆಯಾಗಿತ್ತು. ಇದರ ಬಳಿಕ ಆಕೆ ಹಲವಾರು ಮಂದಿ ವೈದ್ಯರನ್ನು ಭೇಟಿಯಾದಳು. ಆದರೆ ಸಮಸ್ಯೆ ಮಾತ್ರ ಹಾಗೆ ಉಳಿದುಕೊಂಡಿತು. 25 ವರ್ಷದ ಬಳಿಕ ಆಕೆಯ ಎತ್ತರ 2 ಅಡಿಗೆ ಇಳಿದಿದೆ.
ವೈದ್ಯರ ಪ್ರಕಾರ
ಶಾಂತಿ ದೇವಿಯು ಅಸ್ಥಿರಂಧ್ರತೆ ಸಮಸ್ಯೆ ಎದುರಿಸುತ್ತಿದ್ದಾರೆ. ಆರಂಭದಲ್ಲಿ ಇದು ಪತ್ತೆಯಾಗುವುದಿಲ್ಲ. ಮಹಿಳೆಯರಲ್ಲಿ ಒಸ್ಟ್ರೋಜನ್ ಹಾರ್ಮೋನು ತೀರ ಕಡಿಮೆಯಾದಾಗ ಇಂತಹ ಸಮಸ್ಯೆ ಕಾಡುವುದು ಎಂದು ವೈದ್ಯರು ವಿವರಿಸುವರು.
ಆಕೆಯ ನೋಡಲು ಜನಸಾಗರ
ಆಕೆ ತೀರ ನೋವಿನಿಂದ ಬಳಲುತ್ತಿದ್ದರೂ ಜನರು ಮಾತ್ರ ಆಕೆಯನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಬರುತ್ತಿದ್ದಾರೆ ಮತ್ತು ಆಕೆಯೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಈ ನೈಜ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ಇದನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯಬೇಡಿ. ಕುತೂಹಲಕಾರಿ ಘಟನೆಗಳ ಬಗ್ಗೆ ತಿಳಿಯಲು ಈ ಸೆಕ್ಷನ್ ನಲ್ಲಿ ಹುಡುಕಾಡುತ್ತಿರಿ.



Click it and Unblock the Notifications
