For Quick Alerts
ALLOW NOTIFICATIONS  
For Daily Alerts

ನೀವು ಅರಿಯದೇ ಇರುವ ಹಣಗಳಿಕೆಯ 7 ಸೂತ್ರಗಳು ಇಲ್ಲಿದೆ ನೋಡಿ

|

ಇಂದಿನ ಕಾಲದಲ್ಲಿ ದುಡ್ಡಿದ್ದರೆ ಸಮಾಜದಲ್ಲಿ ಒಂದು ಪ್ರತಿಷ್ಠೆ ಬೆಲೆ ಇರುತ್ತದೆ. ಆದರೆ ಗಳಿಸಿದ ದುಡ್ಡನ್ನು ನಿಯಮಿತವಾಗಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದ್ದೇ ಇರುತ್ತದೆ. ನೀವು ಹಣ ಗಳಿಸಿದ ಅದನ್ನು ಹೇಗೇ ಬೇಕೋ ಹಾಗೆ ಖರ್ಚು ಮಾಡುತ್ತಿದ್ದರೆ ಗಳಿಸಿದ ದುಡ್ಡು ನೀರಿನಂತೆ ಖರ್ಚಾಗುತ್ತಲೇ ಇರುತ್ತದೆ. ಜಗತ್ತಿನಲ್ಲಿರುವ ಎಷ್ಟೋ ಶ್ರೀಮಂತರು ಹುಟ್ಟುತ್ತಲೇ ಶ್ರೀಮಂತರಾಗಿಲ್ಲ. ಕಷ್ಟಪಟ್ಟ ದುಡಿದು ಪೈಸೆಗೆ ಪೈಸು ಕೂಡಿದ್ದು ಇಂದು ವಿಶ್ವದಲ್ಲಿ ಉನ್ನತ ನೆಲೆಯಲ್ಲಿದ್ದಾರೆ. ನಾವು ಎಷ್ಟೋ ದುಡ್ಡು ಮಾಡಿದ ಖ್ಯಾತಿವಂತರ ವಿಷಯಗಳನ್ನು ಅರಿತುಕೊಳ್ಳುತ್ತೇವೆ ಆದರೆ ಅವರುಗಳು ಪಟ್ಟ ಶ್ರಮ, ಮಾಡಿದ ತ್ಯಾಗಗಳಿಂದ ಅವರಿಂದು ಉನ್ನತ ಹುದ್ದೆ ಮತ್ತು ದರ್ಜೆಯಲ್ಲಿದ್ದಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಆಹಾರ, ನಿದ್ದೆ, ವಿಶ್ರಾಂತಿಯನ್ನು ತ್ಯಾಗ ಮಾಡಿ ಅವರಿಂದ ತಮ್ಮ ಸ್ಥಾನವನ್ನು ಗಟ್ಟಿ ಮಾಡಿದ್ದಾರೆ.

seven secret of Money secret plan you dont now

ಇಂದಿನ ನಮ್ಮ ಲೇಖನದಲ್ಲಿ ದುಡ್ಡು ಉಳಿಸುವ ಕೆಲವೊಂದು ಸರಳ ತಂತ್ರಗಳನ್ನು ನಾವು ತಿಳಿಸಿಕೊಡುತ್ತಿದ್ದು ಇದರಿಂದ ನಿಮ್ಮ ಯಶಸ್ಸನ್ನು ನೀವು ಸಾಧಿಸಿಕೊಳ್ಳಬಹುದು. ನೀವು ಹಣ ಗಳಿಸುವ ಮೂಲಗಳು ಯಾವ ರೀತಿ ಇವೆ ಹೇಗಿವೆ ಎಂಬುದನ್ನು ತಿಳಿದುಕೊಂಡು ನೀವು ಹಣವನ್ನು ಗಳಿಸಬೇಕು ಅದೇ ರೀತಿ ಗಳಿಸಿದ ಹಣವನ್ನು ಯಾವ ರೀತಿಯಲ್ಲಿ ಉಳಿಸಿಕೊಳ್ಳುವುದೂ ಎಂಬುದನ್ನು ನೀವು ಅರಿತುಕೊಂಡಿರಬೇಕು. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದು ಇದರಿಂದ ನೀವು ಉತ್ತಮ ರೀತಿಯಲ್ಲಿ ಹಣ ಉಳಿತಾಯ ಮಾಡಬಹುದು ಅದೇ ರೀತಿ ಹಣ ಖರ್ಚಾಗುವುದನ್ನು ತಡೆಗಟ್ಟಬಹುದು.

1. ಸಂಬಳವೊಂದೇ ಮುಖ್ಯವಲ್ಲ

1. ಸಂಬಳವೊಂದೇ ಮುಖ್ಯವಲ್ಲ

ನೀವು ಗಳಿಸಿದ ಹಣದಿಂದ ನೀವು ಇನ್ನಷ್ಟು ಲಾಭವನ್ನು ಗಳಿಸುವಂತಿರಬೇಕು. ಹಣದ ಹಿಂದೆ ನೀವು ಹೋಗದೇ ಹಣ ನಿಮ್ಮ ಹಿಂದೆ ಬರುವಂತೆ ಮಾಡಬೇಕು. ಅಂದರೆ ನಿಮ್ಮ ಯೋಜನೆಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುವಂತಿರಬೇಕು. ರಾಬರ್ಟ್ ಕಿಯಾಸ್ಕಿ ಹೆಸರಿನ ಖ್ಯಾತ ಲೇಖಕರು "ರಿಚ್ ಡ್ಯಾಡ್ ಪೂವರ್ ಡ್ಯಾಡ್" ಎಂಬ ಪುಸ್ತಕದಲ್ಲಿ ಹಣದ ಸಿದ್ಧಾಂತದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಆದಾಯದ ಮೂಲಗಳನ್ನು ಅರಿತುಕೊಂಡು ಅದರಲ್ಲಿ ನಾವು ಸಕ್ರಿಯರಾದರೆ ನಾವು ಹೆಚ್ಚುವರಿ ದುಡ್ಡನ್ನು ಗಳಿಸಬಹುದಾಗಿದೆ.

Most Read: ಭಾರೀ ಬೆಲೆ ಬಾಳುವ ವಜ್ರದ ಉಂಗುರ ನುಂಗಿದ ಟರ್ಕಿಯ ವ್ಯಕ್ತಿ!

2. ಸಮಯದ ಪ್ರಯೋಜನವನ್ನು ಪಡೆದುಕೊಳ್ಳಿ

2. ಸಮಯದ ಪ್ರಯೋಜನವನ್ನು ಪಡೆದುಕೊಳ್ಳಿ

ಸಮಯದ ಪ್ರಯೋಜನವನ್ನು ಅರಿತುಕೊಂಡು ನಾವು ಹಣವನ್ನು ಹೂಡಿಕೆ ಮಾಡಬೇಕು. ಮಾರುಕಟ್ಟೆಯಲ್ಲಿ ಯಾವ ಸಮಯದಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಎಂಬ ತತ್ವವನ್ನು ನಾವು ಅರಿತುಕೊಂಡಿರಬೇಕು.

3. ಬರವಣಿಗೆಯನ್ನು ಅಳವಡಿಸಿಕೊಳ್ಳಿ

3. ಬರವಣಿಗೆಯನ್ನು ಅಳವಡಿಸಿಕೊಳ್ಳಿ

ನಿಮ್ಮ ತಲೆಯಲ್ಲಿ ಯೋಚನೆಗಳನ್ನು ಇರಿಸಿಕೊಂಡು ಅದನ್ನು ಬರವಣಿಗೆಗೆ ತರುವುದು ಮುಖ್ಯವಾಗಿದೆ. ನೀವು ಯಾವುದಕ್ಕೆ ಖರ್ಚು ಮಾಡಿದ್ದೀರಿ ಮತ್ತು ಯಾವುದಕ್ಕೆ ಎಷ್ಟು ವಿನಿಯೋಗಿಸಿದ್ದೀರಿ ಎಂಬ ಲೆಕ್ಕಾಚಾರ ನಿಮ್ಮ ಬಳಿ ಇದ್ದರೆ ಇದರಿಂದ ಹೆಚ್ಚುವರಿ ಹಣ ಖರ್ಚಾಗುವುದನ್ನು ನೀವು ತಡೆಹಿಡಿಯಬಹುದು. ನೀವು ಹಣ ಉಳಿತಾಯಕ್ಕೆ ಯಾವುದಾದರೂ ಯೋಜನೆಯನ್ನು ಹಾಕಿಕೊಂಡಿದ್ದರೆ ಕೂಡ ಅದನ್ನು ಬರೆಯುವ ಹವ್ಯಾಸ ಮಾಡಿಕೊಳ್ಳಿ

4. ಹಣದ ಮೌಲ್ಯದ ಬಗ್ಗೆ ಅರಿತುಕೊಳ್ಳಿ

4. ಹಣದ ಮೌಲ್ಯದ ಬಗ್ಗೆ ಅರಿತುಕೊಳ್ಳಿ

ಹಣವನ್ನು ಖರ್ಚು ಮಾಡುವ ಸಮಯದಲ್ಲಿ ಹಣದ ಮೌಲ್ಯವನ್ನು ಅರಿತುಕೊಂಡು ಹಣ ಖರ್ಚು ಮಾಡಿ ಇದರಿಂದ ಸಿಕ್ಕಸಿಕ್ಕದಕ್ಕೆಲ್ಲಾ ಹಣಖರ್ಚು ಮಾಡಲು ನಿಮಗೆ ಬಯಕೆಯಾಗುವುದಿಲ್ಲ. ಮತ್ತು ಮೌಲ್ಯವನ್ನು ಅರಿತುಕೊಂಡು ಹಣ ಖರ್ಚು ಮಾಡಲು ನಿಮಗೆ ಸಾಧ್ಯವಾಗುತ್ತದೆ.

Most Read: ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!

5.ಹೊರಗೆ ಕಡಿಮೆ ತಿನ್ನಿ

5.ಹೊರಗೆ ಕಡಿಮೆ ತಿನ್ನಿ

ಹಣವನ್ನು ಉಳಿತಾಯ ಮಾಡಬೇಕೆನ್ನುವವರು ಹೊರಗಡೆ ವೃಥಾ ಹಣ ಖರ್ಚುಮಾಡಬೇಡಿ. ಸಾಧ್ಯವಾದಷ್ಟು ಕಡಿಮೆ ಮೌಲ್ಯದಲ್ಲಿ ದೊರೆಯುವ ಆಹಾರಗಳನ್ನು ಸೇವಿಸಿ. ಐಷಾರಾಮಿಯಾಗಿ ಆಹಾರ ಸೇವಿಸಬೇಕು ಎಂದಾದಲ್ಲಿ ಅದಕ್ಕಾಗಿ ತಿಂಗಳಿನಲ್ಲಿ ಒಂದು ದಿನ ಆಯ್ದುಕೊಳ್ಳಿ.

6. ನಿಮ್ಮ ಬಾಸ್ ನೀವೇ ಆಗಿ

6. ನಿಮ್ಮ ಬಾಸ್ ನೀವೇ ಆಗಿ

ನಿಮ್ಮ ಜೀವನಕ್ಕೆ ನೀವೇ ಬಾಸ್ ಆಗಿ. ಅಂದರೆ ನಿಮ್ಮ ಜೀವನದ ನಿರ್ಧಾರವನ್ನು ಇನ್ನೊಬ್ಬರು ತೆಗೆದು ಕೊಳ್ಳುವಂತಾಗದಿರಲಿ. ನಿಮ್ಮ ಹಣ ಖರ್ಚುಮಾಡುವ ಪದ್ಧತಿಗಳನ್ನು ನೀವೇ ಅರಿತುಕೊಂಡು ಆ ಪ್ರಕಾರ ನಿಮ್ಮ ಕೆಲಸವನ್ನು ಮಾಡಿ.

7. ಇನ್ನೊಬ್ಬರ ಹಣವನ್ನು ಬಳಸಿ

7. ಇನ್ನೊಬ್ಬರ ಹಣವನ್ನು ಬಳಸಿ

ಬ್ಯಾಂಕ್‌ನಿಂ ಹಣವನ್ನು ಸ್ವೀಕರಿಸುವುದು, ಹೂಡಿಕೆ ಮಾಡುವುದು, ನಿಮಗಾಗಿ ಕೆಲಸ ಮಾಡಲು ಇನ್ನೊಬ್ಬರನ್ನು ಹೈಯರ್ ಮಾಡುವುದು ಇದೇ ಮೊದಲಾದ ತಂತ್ರಗಳನ್ನು ಅನುಸರಿಸಿ.

English summary

seven secret of Money secret plan you dont now

Climbing the corporate ladder will only get you so far; at some point, you reach your earning potential and plateau. The rich know that in order to grow wealth, it's important to make your money work hard for you -- not the other way around. In fact, Robert Kiyosaki, author of the No. 1 best-selling personal finance book "Rich Dad, Poor Dad," built his entire money philosophy around this concept. Generating income from passive, rather than active, income sources is the best way to do this.
Story first published: Monday, October 15, 2018, 16:02 [IST]
X
Desktop Bottom Promotion