For Quick Alerts
ALLOW NOTIFICATIONS  
For Daily Alerts

ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!

|

ಹಿಂದೂ ಕಥೆ ಪುರಾಣಗಳಲ್ಲಿ ವಿಶೇಷವಾದ ಜೀವನ ಸಂಗತಿಗಳಿರುವುದನ್ನು ನಾವು ಕಾಣಬಹುದು. ಹಾಗೆಯೇ ಪುರಾಣದ ಕಥೆಗಳು ವಿಶೇಷ ಹಿನ್ನೆಲೆಗಳನ್ನು ಹೊಂದಿವೆ. ಅವುಗಳ ಕೆಲವು ಪುರಾವೆಗಳು ಇಂದಿಗೂ ಇವೆ ಎನ್ನುವುದು ಆಶ್ಚರ್ಯದ ಸಂಗತಿ. ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ರಾಮಾಯಣವೂ ಒಂದು. ರಾಮಾಯಣದಲ್ಲಿ ಅನೇಕ ಕಥೆಗಳು ಸೇರಿಕೊಂಡಿವೆ. ರಾಮಾಯಣದ ದುಷ್ಟ ರಾಜನಾದ ರಾವಣನೇ ರಾಮಾಯಣದ ಕಥೆಗೆ ಮೂಲ ಕಾರಣ ಎಂದು ಹೇಳಬಹುದು. ಇಂತಹ ಒಂದು ದುಷ್ಟ ರಾವಣನ ಸಾವಿನ ಸಂಗತಿಯು ಇಂದಿಗೂ ಪ್ರಚಲಿತದಲ್ಲಿದೆ... ಮುಂದೆ ಓದಿ..

ರಾಮಾಯಣದಲ್ಲಿ ರಾಮ ಮತ್ತು ಲಕ್ಷ್ಮಣ

ರಾಮಾಯಣದಲ್ಲಿ ರಾಮ ಮತ್ತು ಲಕ್ಷ್ಮಣ

ಕೆಲವು ಸಂಗತಿಗಳು ರಹಸ್ಯಗಳಿಂದ ಕೂಡಿಕೊಂಡಿವೆ. ನಮಗೆ ತಿಳಿದಿರುವಂತೆ ರಾಮಾಯಣದಲ್ಲಿ ರಾಮ ಮತ್ತು ಲಕ್ಷ್ಮಣ ಅತ್ಯಂತ ಪ್ರೀತಿಪಾತ್ರರಾದ ಸಹೋದರರು. ಅಣ್ಣನ ಜೊತೆಯಲ್ಲಿಯೇ ಲಕ್ಷ್ಮಣ ಸದಾ ಇರಲು ಬಯಸುತ್ತಿದ್ದನು. ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಣ ಮಾಡಿದನು. ನಂತರ ಸೀತೆಯನ್ನು ಹುಡುಕಿ, ರಾವಣನೊಂದಿಗೆ ಹೋರಾಡಿದರು. ಯುದ್ಧದಲ್ಲಿ ರಾವಣ ಸೋತನು. ಸೀತೆಯನ್ನು ಬಿಡಿಸಿಕೊಂಡು ಬಂದರು ಎನ್ನುವುದು ಎಲ್ಲರು ತಿಳಿದಿರುವ ವಿಚಾರ. ಆದರೆ ನಂತರ ರಾವಣನು ಏನಾದ ಎನ್ನುವುದು ರಹಸ್ಯವಾಗಿಯೇ ಉಳಿದ ಸಂಗತಿ!

ರಾವಣನ ದೇಹವು ಶ್ರೀಲಂಕಾದ ಗುಹೆಯೊಂದರಲ್ಲಿ ಇದೆಯಂತೆ

ರಾವಣನ ದೇಹವು ಶ್ರೀಲಂಕಾದ ಗುಹೆಯೊಂದರಲ್ಲಿ ಇದೆಯಂತೆ

ಈ ವಿಚಾರವಾಗಿಯೇ ನಡೆಸಿದ ಸಂಶೋಧನೆಯ ಪ್ರಕಾರ ರಾವಣನ ದೇಹವು ಶ್ರೀಲಂಕಾದ ಗುಹೆಯೊಂದರಲ್ಲಿ ಇದೆ ಎನ್ನುವುದು ತಿಳಿದು ಬಂದಿದೆ. ಈ ಕುತೂಹಲಕಾರಿ ಸಂಶೋಧನೆಯ ಪ್ರಕಾರ ರಾಮಾಯಣಕ್ಕೆ ಸಂಬಂಧಿಸಿದ 50 ಪ್ರದೇಶಗಳನ್ನು ತನಿಖೆ ಮಾಡಲಾಗಿತ್ತು. ಅದರಲ್ಲಿರುವ ಒಂದು ಗುಹೆಯಲ್ಲಿ ರಾವಣನ ದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

Most Read:ವಿಶ್ವದೆಲ್ಲೆಡೆಯಿಂದ ಮಹಿಳೆಯರು ಗರ್ಭಿಣಿಯಾಗಲು ಈ ಸ್ಥಳಕ್ಕೆ ಬರುತ್ತಾರಂತೆ!

ಶ್ರೀಲಂಕಾದ ರಾಗ್ಲಾ ಕಾಡಿನ ನಡುವೆ ಇರುವ ಒಂದು ಗುಹೆಯಲ್ಲಿ ರಾವಣನ ದೇಹ ಇದೆಯಂತೆ!

ಶ್ರೀಲಂಕಾದ ರಾಗ್ಲಾ ಕಾಡಿನ ನಡುವೆ ಇರುವ ಒಂದು ಗುಹೆಯಲ್ಲಿ ರಾವಣನ ದೇಹ ಇದೆಯಂತೆ!

ಹಿಂದೂ ಪುರಾಣಗಳ ಪ್ರಕಾರ, ರಾಮನು ನವರಾತ್ರಿಯ 10ನೇ ದಿನ ಭಗವಾನ್ ರಾಮನು ರಾವಣನನ್ನು ಕೊಂದ. ಹಾಗಾಗಿಯೇ 10ನೇ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಯಿತು ಎನ್ನುವ ಕಥೆಯಿದೆ. ರಾಮ ಅಯೋಧ್ಯೆಗೆ ಮರಳಿದ 20 ದಿನಗಳ ಬಳಿಕ ದೀಪಾವಳಿಯನ್ನು ಆಚರಿಸಲಾಯಿತು. ಸಂಶೋಧನೆಯ ಪ್ರಕಾರ ರಾವಣನ ದೇಹವನ್ನು ಶ್ರೀಲಂಕಾದ ರಾಗ್ಲಾ ಕಾಡಿನ ನಡುವೆ ಇರುವ ಒಂದು ಗುಹೆಯಲ್ಲಿ ಇರಿಸಲಾಗಿದೆ ಎಂದು ಜನರು ಹೇಳುತ್ತಾರೆ. ಗುಹೆಯಲ್ಲಿ ರಾವಣನ ದೇಹವಿದೆ ಎಂದು "ಶ್ರೀಲಂಕಾದ ರಾಷ್ಟ್ರೀಯ ರಾಮಾಯಣ ಸಂಶೋಧನಾ ಕೇಂದ್ರ ಮತ್ತು ಪ್ರವಾಸೋದ್ಯಮ ಸಚಿವಾಲಯ" ಇದನ್ನು ಪತ್ತೆ ಹಚ್ಚಿದೆಯಂತೆ.

Image Source

ಕಥೆಯ ಪ್ರಕಾರ ಏನಿದೆ?

ಕಥೆಯ ಪ್ರಕಾರ ಏನಿದೆ?

ಕಥೆಯ ಪ್ರಕಾರ ರಾಮನು ರಾವಣನನ್ನು ಕೊಂದರೂ, ರಾಮನು ರಾವಣನ ದೇಹವನ್ನು ರಾವಣನ ಸಹೋದರನ ಕೈಗೆ ಹಸ್ತಾಂತರಿಸಿದ್ದನು ಎಂದು ಹೇಳಲಾಗುವುದು. ರಾವಣನ ಸಹೋದರನಿಗೆ ಮೃತ ದೇಹವನ್ನು ಹಸ್ತಾಂತರಿಸಿದ ನಂತರ ಏನಾಯಿತು ಎನ್ನುವುದರ ಕುರಿತು ಯಾವುದೇ ಕಥೆ-ಪುರಾಣಗಳು ಇಲ್ಲ. ಹಾಗಾಗಿ ರಾವಣನ ಅಂತ್ಯ ಕ್ರಿಯೆಯ ಬಗ್ಗೆ ಸಾಕಷ್ಟು ಸಂದಿಗ್ಧತೆ ಹಾಗೂ ರಹಸ್ಯಗಳು ಅಡಗಿವೆ ಎಂದು ಊಹಿಸಲಾಗುತ್ತದೆ.

Most Read:ಭಾರತದ ಈ ಎಂಟು ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶ ನಿಷೇಧ ಮಾಡಲಾಗಿದೆಯಂತೆ!

ರಾವಣನ ದೇಹವನ್ನು ಹೊಂದಿರುವ ಗುಹೆ 8 ಸಾವಿರ ಅಡಿ ಎತ್ತರದಲ್ಲಿದೆ

ರಾವಣನ ದೇಹವನ್ನು ಹೊಂದಿರುವ ಗುಹೆ 8 ಸಾವಿರ ಅಡಿ ಎತ್ತರದಲ್ಲಿದೆ

ನಂತರ ರಾವಣನ ದೇಹವನ್ನು ಗುಹೆಯಲ್ಲಿ ಇಡಲಾಯಿತು. ಅದು ಅಂದಿನಿಂದ ಇಂದಿಗೂ ಅಲ್ಲಿಯೇ ಇದೆ. ರಾವಣನ ದೇಹವನ್ನು ಹೊಂದಿರುವ ಗುಹೆ 8 ಸಾವಿರ ಅಡಿ ಎತ್ತರದಲ್ಲಿದೆ ಎನ್ನುವುದು ಆಶ್ಚರ್ಯದ ಸಂಗತಿ.

English summary

Rumor Has That Ravana’s Body Is Still Present In This Cave In Sri Lanka

A mummy of Ravana has been found in a cave located in one of the hills .Some balm seem to be applied to the body for preserving it, along with some metallic ornaments.
X
Desktop Bottom Promotion