For Quick Alerts
ALLOW NOTIFICATIONS  
For Daily Alerts

ಅಗ್ನಿ ಚಿಹ್ನೆಗಳು ಎಂದರೇನು? ಇದರ ಅಡಿಯಲ್ಲಿ ಯಾವ್ಯಾವ ರಾಶಿಯವರು ಬರುತ್ತಾರೆ?

By Divya Pandith
|

ಬ್ರಹ್ಮಾಂಡವನ್ನು ಪ್ರಮುಖವಾಗಿ ಐದು ಮೂಲಭೂತ ಅಂಶಗಳಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಅಗ್ನಿ, ನೀರು, ಭೂಮಿ, ಗಾಳಿ ಮತ್ತು ಆಕಾಶ ಈ ಐದು ಮೂಲ ಭೂತಗಳನ್ನು ಪಂಚಭೂತಗಳು ಎಂದು ಸಹ ಕರೆಯಲಾಗುವುದು. ಸೃಷ್ಟಿಗೆ ಅಗತ್ಯವಾದ ಇವುಗಳನ್ನು ದೈವ ಶಕ್ತಿ ಎಂದು ಸಹ ಆರಾಧಿಸಲಾಗುವುದು. ಅಲ್ಲದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಚಕ್ರಗಳನ್ನು ಬೆಂಕಿ, ನೀರು, ಭೂಮಿ ಮತ್ತು ಗಾಳಿಯ ನಾಲ್ಕು ಅಂಶಗಳ ನಡುವೆ ವಿಂಗಡಿಸಲಾಗಿದೆ. ಅದನ್ನು ರಾಶಿಚಕ್ರದ ಚಿಹ್ನೆ ಎಂದು ಕರೆಯಲಾಗುವುದು. ರಾಶಿಚಕ್ರದ ವಿಶಿಷ್ಟ ಗುಣಲಕ್ಷಣಗಳು ಮೂಲತಃ ಚಿಹ್ನೆಗಳನ್ನು ಅವಲಂಬಿಸಿರುತ್ತವೆ ಎನ್ನಲಾಗುವುದು.

Revealing Traits Of The FIRE Zodiac Signs..

ಬೆಂಕಿಯ ಚಿಹ್ನೆಯಡಿಯಲ್ಲಿ ಮೇಷ, ಸಿಂಹ ಮತ್ತು ಧನು ರಾಶಿಗಳು ಬರುತ್ತವೆ. ಭೂಮಿ ಚಿಹ್ನೆಯಡಿಯಲ್ಲಿ ವೃಷಭ, ಕನ್ಯಾ ಮತ್ತು ವೃಶ್ಚಿಕ ರಾಶಿಗಳು ಬರುತ್ತವೆ. ನೀರಿನ ಚಿಹ್ನೆಯಡಿಯಲ್ಲಿ ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಗಳು ಬರುತ್ತವೆ. ಗಾಳಿಯ ಚಿಹ್ನೆಯಡಿಯಲ್ಲಿ ಮಿಥುನ, ತುಲಾ ಮತ್ತು ಕುಂಭ ರಾಶಿಗಳು ಬರುತ್ತವೆ. ಜನ್ಮ ಕುಂಡಲಿಯಲ್ಲಿ ಮೊದಲ ಮನೆ, ಐದನೇ ಮನೆ ಮತ್ತು ಒಂಬತ್ತನೇ ಮನೆಯನ್ನು ಬೆಂಕಿಯ ಚಿಹ್ನೆಯ ಸ್ಥಾನ ಎಂದು ಗುರುತಿಸಲಾಗುವುದು. ಈ ಮನೆಗಳಲ್ಲಿ ಅನುಕ್ರಮವಾಗಿ ಬರುವ ರಾಶಿಚಕ್ರಗಳು ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಗಳು. ಹಾಗಾಗಿ ಇವರು ಬೆಂಕಿಯ ಚಿಹ್ನೆಯವರು ಎಂದು ಹೇಳಲಾಗುವುದು. ಬೆಂಕಿ ಚಿಹ್ನೆಯ ಅಡಿಯಲ್ಲಿ ಬರುವ ರಾಶಿಚಕ್ರಗಳ ಬಗ್ಗೆ ಹಾಗೂ ಬೆಂಕಿ ಚಿಹ್ನೆಯ ಕುರಿತು ಇನ್ನಷ್ಟು ಸಂಗತಿಗಳನ್ನು ತಿಳಿದುಕೊಳ್ಳಲು ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ಉಷ್ಣತೆ ಹಾಗೂ ಸ್ವಾಗತದ ಸ್ವಭಾವ

ಉಷ್ಣತೆ ಹಾಗೂ ಸ್ವಾಗತದ ಸ್ವಭಾವ

ಬೆಂಕಿ ಎಂದರೆ ಉಷ್ಣತೆ ಎನ್ನುವುದು ಸಾಮಾನ್ಯವಾಗಿ ಎಲ್ಲರೂ ತಿಳಿದ ವಿಚಾರ. ಬೆಂಕಿಯ ಚಿಹ್ನೆಯು ಅದನ್ನೇ ಪ್ರತಿಬಿಂಬಿಸುತ್ತದೆ. ಇದೇ ಗುಣವನ್ನು ಅಗ್ನಿ ಚಿಹ್ನೆ ಹೊಂದಿರುವ ವ್ಯಕ್ತಿಗಳಲ್ಲಿ ಅಡಕವಾಗಿರುತ್ತವೆ. ಹೆಚ್ಚು ಉಷ್ಣತೆಯ ಸ್ವಭಾವ ಹಾಗೂ ಸ್ನೇಹಿತರನ್ನು ನಗುಮುಖದಿಂದ ಸ್ವಾಗತಿಸುವ ಗುಣಗಳು ಇರುತ್ತವೆ. ಆಯಾ ರಾಶಿಚಕ್ರಗಳ ಮನೆಯವರು ಅವರ ಸ್ವಭಾವದಲ್ಲಿ ಹೆಚ್ಚು ಆರಾಮಾದಾಯಕವಾಗಿರುತ್ತಾರೆ. ಅಗ್ನಿ ಚಿಹ್ನೆಯನ್ನು ಹೊಂದಿರುವವರ ಆಪ್ತರು ಅವರಿಂದ ಬೆಚ್ಚಗಿನ ಅಥವಾ ಸುರಕ್ಷಿತವಾದ ಭರವಸೆಯನ್ನು ಹೊಂದಿರುತ್ತಾರೆ. ಬೆಂಕಿಯ ಚಿಹ್ನೆಯಡಿಯಲ್ಲಿ ಬರುವ ರಾಶಿಚಕ್ರದವರು ತಮ್ಮವರು ಹಾಗೂ ಅವರ ಸ್ನೇಹಿತರಿಗೆ ಹೆಚ್ಚು ರಕ್ಷಣಾತ್ಮಕವಾಗಿ ಇರುತ್ತಾರೆ. ಇವರ ಸುತ್ತಲಿರುವ ವ್ಯಕ್ತಿಗಳು ಇವರಿಗೆ ನೋವಾಗದಂತೆ ಮಾಡದಿದ್ದರೆ ಸಂತೋಷದಿಂದ ಇರುತ್ತಾರೆ ಎಂದು ಹೇಳಬಹುದು.

Most Read: ಲೋಹದ ತಟ್ಟೆಗಳಿಂದ ಆಹಾರ ಸೇವಿಸಿದರೆ ಸಿಗುವ ಆರೋಗ್ಯಕಾರಿ ಲಾಭಗಳು

ಕೆಲವೊಮ್ಮೆ ಅನಿಯಂತ್ರಿತ ಆದರೂ ಸ್ವತಂತ್ರ

ಕೆಲವೊಮ್ಮೆ ಅನಿಯಂತ್ರಿತ ಆದರೂ ಸ್ವತಂತ್ರ

ಚೆಂಕಿಯ ಚಿಹ್ನೆ ಹೊಂದಿರುವವರು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಅವರ ದಾರಿಯಲ್ಲಿ ಅಡೆತಡೆ ಉಂಟಾದರೆ ಬೆಂಕಿಯಂತಹ ಕೋಪ ಬರುವುದು. ಸ್ವಂತ ಮನೆಯಲ್ಲಿಯೇ ಅಗ್ನಿಯ ಚಿಹ್ನೆ ಹೊಂದಿರುವುದರಿಂದ ಇವರಿಗೆ ತಕ್ಷಣಕ್ಕೆ ಹೆಚ್ಚು ಕೋಪ ಬರುವುದು. ಇವರು ಇತರರು ಮಾಡುವ ಅನಪೇಕ್ಷಿತ ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ಜೊತೆಗೆ ಇವರು ಕೆಲಸ ಮಾಡುವ ಸ್ಥಳದಲ್ಲಿ ಇತರರು ಆದೇಶ ಮಾಡುವುದನ್ನು ಬಯಸದ ವ್ಯಕ್ತಿಗಳು ಎನ್ನಲಾಗುವುದು. ಇವರು ತಮ್ಮ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಗಳು ಎಂದು ಭಾವಿಸುವರು. ಜೊತೆಗೆ ಇತರರು ಹಾಗೆಯೇ ಭಾವಿಸಬೇಕೆಂದು ಬಯಸುವರು. ಕೆಲವೊಮ್ಮೆ ಇವರ ಸ್ವಭಾವದಲ್ಲಿ ಅನಿಯಂತ್ರಿತರಾಗಿರುವಂತೆ ಕಾಣುವರು. ಇವರು ಇತರರ ಆದೇಶಗಳನ್ನು ಸ್ವೀಕರಿಸದ ವ್ಯಕ್ತಿಗಳಾಗಿರುತ್ತಾರೆ.

Most Read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಚಕ್ರದ ಮಹಿಳೆಯರು ಅತ್ಯುತ್ತಮ ಪತ್ನಿಯರಾಗಬಲ್ಲರು

ಬೆಂಕಿಯಂತೆ ಉತ್ಕಟ ಭಾವದಿಂದ ಸಕ್ರಿಯರಾಗಬಹುದು:

ಬೆಂಕಿಯಂತೆ ಉತ್ಕಟ ಭಾವದಿಂದ ಸಕ್ರಿಯರಾಗಬಹುದು:

ಬೆಂಕಿ ಅರ್ಧ ಸುಟ್ಟು ಬೂದಿಯಾದ ಮೇಲೂ ಮತ್ತೊಮ್ಮೆ ಕಿಡಿಕಾಡಲು ನಿರ್ಧರಿಸಬಹುದು. ಇಲ್ಲವೇ ಗಾಳಿಯನ್ನು ಅನುಸರಿಸಿ ಪುನಃ ಬೆಂಕಿಯಾಗಿ ಉರಿಯಲು ಕಾರಣವಾಗಬಹುದು. ಹಾಗೆಯೇ ಬೆಂಕಿಯ ಚಿಹ್ನೆ ಹೊಂದಿರುವ ವ್ಯಕ್ತಿಗಳು ಹೆಚ್ಚು ಸಕ್ರಿಯರಾಗಿರುತ್ತಾರೆ. ಅವರು ಯಾವುದಾದರೂ ವಿಚಾರಗಳಿಗೆ ಭಾವೋದ್ರಿಕ್ತರಾಗಿದ್ದರೆ ಅದರಲ್ಲಿ ಮಹತ್ತರವಾದ ಉತ್ಸಾಹವನ್ನು ತೋರಿಸುತ್ತಾರೆ. ಅಪೇಕ್ಷಿತ ವಿಚಾರಗಳನ್ನು ನೋಡಲು ಹಾಗೂ ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹೆಚ್ಚಿನ ಉತ್ಸಾಹವನ್ನು ತೋರುವರು. ಈ ಸ್ವಭಾವವು ಇವರಿಗೆ ದೈಹಿಕ ಜೀವನ ಕ್ರಮಗಳನ್ನು ನೇರವಾಗಿ ಶಕ್ತಿಯಿಂದ ನಿರ್ದೇಶಿಸಲು ಸಹಾಯ ಮಾಡುವುದು. ಕೆಲವೊಮ್ಮೆ ಗಾಳಿಯ ಉಪಸ್ಥಿತಿ ಬರುವವರೆಗೂ ಬೆಂಕಿ ಅಡಗಿರುತ್ತದೆಯೋ ಹಾಗೆಯೇ ಇವರು ಜೀವನದಲ್ಲಿ ಕೆಲವೊಮ್ಮೆ ಸೋಮಾರಿ ವರ್ತನೆಯಿಂದ ಸುಮ್ಮನೆ ಕುಳಿತುಕೊಳ್ಳಬಹುದು.

Most Read: ನೀವು ಬೆಳಗ್ಗೆ ಕುಡಿಯಬೇಕಾದ 9 ಆರೋಗ್ಯಕಾರಿ ಪಾನೀಯಗಳು

ದೌರ್ಬಲ್ಯವನ್ನು ಅಡಗಿಸಲು ಇವರು ಅವಕಾಶವಾದಿಗಳು

ದೌರ್ಬಲ್ಯವನ್ನು ಅಡಗಿಸಲು ಇವರು ಅವಕಾಶವಾದಿಗಳು

ಅವಕಾಶ ಸಿಕ್ಕಿದ ತಕ್ಷಣ ಅದನ್ನು ಬಳಸಿಕೊಳ್ಳುವರು. ಅವಕಾಶಕ್ಕಾಗಿ ಕಾದು ಕುಳಿತುಕೊಳ್ಳುವ ಪ್ರವೃತ್ತಿ ಇವರದ್ದಾಗಿರುವುದಿಲ್ಲ. ಏಕೆಂದರೆ ಇವರಿಗೆ ಹೆಚ್ಚು ಕಾಲ ಕಾಯುವ ತಾಳ್ಮೆ ಹಾಗೂ ಮನಸ್ಸು ಎರಡೂ ಇರುವುದಿಲ್ಲ. ಸಿಕ್ಕ ಅವಕಾಶಗಳನ್ನು ಬಿಡುವುದಿಲ್ಲ. ಆದ್ದರಿಂದ ಇವರನ್ನು ಅವಕಾಶವಾದಿಗಳು ಎಂದು ಕರೆಯುತ್ತಾರೆ. ಇವರು ತಮ್ಮ ದೌರ್ಬಲ್ಯ ಏನು ಎನ್ನುವುದು ಚೆನ್ನಾಗಿ ತಿಳಿದಿರುತ್ತಾರೆ. ಅದನ್ನು ಪ್ರಪಂಚಕ್ಕೆ ತೋರಿಸಿಕೊಳ್ಳಲು ಬಯಸುವುದಿಲ್ಲ. ಇವರು ಮಾನಸಿಕ ಶಕ್ತಿಯನ್ನು ಹೆಚ್ಚು ಪ್ರದರ್ಶನ ಮಾಡುತ್ತಾರೆ. ಇದು ಕೆಲವೊಮ್ಮೆ ಅವರ ಅಹಂಕಾರಕ್ಕೆ ಕಾರಣವಾಗಬಹುದು ಎನ್ನಲಾಗುವುದು.

English summary

Revealing Traits Of The FIRE Zodiac Signs..

Spiritual beliefs say that the universe is made of five basic elements - fire, water, earth, air and the sky (space). According to astrology, all the twelve zodiac signs are divided among the four elements of fire, water, earth and air. Depending on which element a zodiac sign belongs to, its characteristic traits are identified.
Story first published: Saturday, October 13, 2018, 12:13 [IST]
X
Desktop Bottom Promotion