Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನಿಷ್ಠಾವಂತರಾದ 'ಮಿಥುನ ರಾಶಿ'ಯವರಿಗೆ ಸಂಬಂಧಗಳ ವಿಷಯದಲ್ಲಿ ಕಷ್ಟ ಬರಬಹುದು!
ಮಿಥುನ ರಾಶಿಯನ್ನು ಪ್ರತಿನಿಧಿಸುವ ಚಿಹ್ನೆಯು ಎರಡು ವಿಭಿನ್ನ ವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ. ಅದು ಅವರು ವಿಭಿನ್ನ ಮುಖಗಳನ್ನು ಹೊಂದಿದ್ದಾರೆ ಎನ್ನುವುದನ್ನು ಸೂಚಿಸುವುದು. ಇವರು ಎರಡು ಬಗೆಯ ವ್ಯಕ್ತಿತ್ವವನ್ನು ಪ್ರತಿನಿಧಿಸುವುದರಿಂದ ಮುಂದಿನ ಕ್ಷಣದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ? ಎನ್ನುವುದನ್ನು ನಿರ್ಧರಿಸುವುದು ಬಹಳ ಕಷ್ಟವಾಗುವುದು. ಇವರ ವ್ಯಕ್ತಿತ್ವ ಹಾಗೂ ವರ್ತನೆಗಳು ಇವರ ರಾಶಿಚಕ್ರ ಹಾಗೂ ಗ್ರಹಗತಿಗಳಿಗೆ ಅನುಗುಣವಾಗಿ ಇರುತ್ತವೆ ಎನ್ನಲಾಗುವುದು.
ಮಿಥುನ ರಾಶಿಯನ್ನು ಮಂಗಳ ಗ್ರಹ ಆಳುತ್ತದೆ. ಇದು ಸಂವಹನ, ಬರಹ ಮತ್ತು ಚಲನೆಗಳ ಮೇಲೆ ಅಧಿಕವಾಗಿ ಪ್ರಭಾವ ಬೀರುವುದು. ಇವರಲ್ಲಿ ಹೊಂದಿಕೊಳ್ಳುವಂತಹ ಮುಕ್ತ ಮನಸ್ಸು ಇರುತ್ತದೆ. ಈ ರಾಶಿಚಕ್ರದವರೊಂದಿಗೆ ಮಾತನಾಡಿದರೂ ಒಂದು ಬಗೆಯ ಸಂತೋಷ ದೊರೆಯುವುದು. ಇವರು ಒಂದು ನಗುವು ಸಹ ಉತ್ತಮ ಸ್ನೇಹವನ್ನು ಬೆಸೆಯುವುದು. ಇವರು ಒಂದು ನಗುವನ್ನು ನೀಡಿದರು ಎಂದರೆ ಅವರ ಮನಸ್ಸಿನಲ್ಲಿ ವಿವಿಧ ವಿಚಾರಗಳು ಓಡಾಡುತ್ತಲಿರುತ್ತವೆ ಎಂದು ಹೇಳಲಾಗುವುದು.
ರಾಶಿಚಕ್ರದ ಅನುಸಾರ ಇವರು ನಿಷ್ಠಾವಂತರು, ಶ್ರದ್ಧೆ ಉಳ್ಳವರು, ಭಾವನಾತ್ಮಕವಾಗಿ ಕಾಳಜಿ ಉಳ್ಳವರು ಎಂದು ಹೇಳಲಾಗುತ್ತದೆ. ಇವರು ಸಂಬಂಧಗಳ ವಿಚಾರದಲ್ಲಿ ಹೇಗೆ ವ್ಯವಹರಿಸುತ್ತಾರೆ? ಸಂಬಂಧದಲ್ಲಿ ಯಾವೆಲ್ಲಾ ಬದಲಾವಣೆಯನ್ನು ಕಾಣುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.
ಸ್ವ ಚಿಂತಕರು
ತಮ್ಮ ರಾಶಿಚಕ್ರದ ಅನುಸಾರ ಹೆಚ್ಚು ಆಯ್ಕೆಯ ಪ್ರವೃತ್ತಿ ಹೊಂದಿದವರಾಗಿರುತ್ತಾರೆ. ಅಲ್ಲದೆ ಅತ್ಯಂತ ಚಿಂತಕರು, ಬರಹಗಾರರು ಆಗಿರುವುದರಿಂದ ಅವರ ಅಭಿಪ್ರಾಯಗಳು ಇವರು ಹೇಗೆ ಚಿಂತನೆ ನಡೆಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇವರು ಪ್ರತಿಯೊಂದು ವಿಚಾರದಲ್ಲೂ ತಮ್ಮದೇ ಆದ ಸ್ವಂತ ಅಭಿಪ್ರಾಯವನ್ನು ಹೊಂದಿರುತ್ತಾರೆ. ತಮ್ಮದೇ ಆದ ರೀತಿಯಲ್ಲಿ ಇರುವುದರಿಂದ ಇತರರು ಇವರನ್ನು ಒಪ್ಪಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು.
ಪ್ರೀತಿಯಲ್ಲಿ ಬಿದ್ದರೆ
ಇವರು ಒಮ್ಮೆ ಯಾರನ್ನಾದರೂ ಪ್ರೀತಿಸಿದರೆ ಅದರಲ್ಲಿ ಬದಲಾವಣೆಯನ್ನು ಸ್ವೀಕರಿಸುವುದಿಲ್ಲ. ತಮ್ಮ ಪ್ರೀತಿ ಪಾತ್ರರು ತಮ್ಮ ಜೀವನದಲ್ಲಿ ಶಾಶ್ವತವಾಗಿರಲು ಬಯಸುತ್ತಾರೆ. ಪ್ರೀತಿಯ ಜೀವನ ದೀರ್ಘಕಾಲ ಒಂದೇ ರೀತಿಯಲ್ಲಿರಬೇಕೆಂದು ಬಯಸುವ ಇವರು ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಅವರು ಬಯಸಿದ ರೀತಿಯಲ್ಲಿ ವ್ಯಕ್ತಿ ಇದ್ದಾರೆ ಎಂದರೆ ಪ್ರೀತಿಯಲ್ಲಿ ಬಹುಬೇಗ ಬೀಳುತ್ತಾರೆ.
Most Read:ಸ್ತ್ರೀಯರು ಬಿಳಿ ಮುಟ್ಟನ್ನು ಹೇಗೆ ನೈಸರ್ಗಿಕವಾಗಿ ಗುಣಪಡಿಸಿಕೊಳ್ಳಬಹುದು
ಬದಲಾವಣೆಯನ್ನು ಬಯಸುವುದಿಲ್ಲ
ತಮ್ಮ ಪ್ರೀತಿಯ ಜೀವನದಲ್ಲಿ ಬದಲಾವಣೆಯನ್ನು ಬಯಸುವುದಿಲ್ಲ. ದಿನಚರಿಯು ಹಾಗೂ ಜೀವನದ ಪರಿ ಒಂದೇ ರೀತಿಯಲ್ಲಿ ಸಾಗುವುದನ್ನು ಬಯಸದ ಇವರು ಪ್ರೀತಿಯ ಜೀವನ ಆರಂಭದಿಂದಲೂ ಒಂದೇ ಬಗೆಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಪ್ರೀತಿಯ ಜೀವನ ಒಂದೇ ರೀತಿಯಲ್ಲಿ ಇರಬೇಕು ಎಂದು ಬಯಸುತ್ತಾರೆ ಆದರೂ ವಾಡಿಕೆಯಲ್ಲಿ ಬದಲಾವಣೆಯನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ತತ್ವಶಾಸ್ತ್ರದಲ್ಲಿ ಕಡಿಮೆ ಆಸಕ್ತಿ ಹೊಂದಿರುವ ಇವರು ಕೆಲವು ಜೀವನದ ತತ್ವಗಳನ್ನು ನಂಬುತ್ತಾರೆ.
ಚಿಕ್ಕ ವಿಚಾರದಲ್ಲೂ ಕಿರಿಕಿರಿ ಉಂಟುಮಾಡುವರು
ಇವರಲ್ಲಿ ಎರಡು ಬಗೆಯ ವ್ಯಕ್ತಿತ್ವ ಅಡಗಿರುವುದರಿಂದ ಇತರರಿಗಿಂತ ಉತ್ತಮ ರೀತಿಯಲ್ಲಿ ವಿಷಯಗಳನ್ನು ಆಲೋಚಿಸುತ್ತಾರೆ. ವಿಮರ್ಶೆ ಮತ್ತು ವಿಶ್ಲೇಷಣೆಯನ್ನು ಹೊಂದಿರುತ್ತಾರೆ. ಉತ್ತಮ ಚಿಂತಕರಾದ ಇವರು ಸಣ್ಣ ಪುಟ್ಟ ವಿಚಾರಗಳಿಗೂ ವಾದಗಳನ್ನು ಸೃಷ್ಟಿಸುವರು. ಇಂತಹ ಪ್ರವೃತ್ತಿಯಿಂದ ಸಂಬಂಧಗಳಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಭಿನ್ನಾಭಿಪ್ರಾಯ ಉಂಟಾಗುವುದು. ಹಾಗಾಗಿ ಆದಷ್ಟು ಭಿನ್ನ ಚಿಂತನೆಗಳನ್ನು ಇವರು ನಿರ್ಲಕ್ಷಿಸಬೇಕಾಗುವುದು.
Most Read:ನೀವು ಮಿಥುನ ರಾಶಿಯವರಲ್ಲಿ ಈ 5 ವಿಷಯಗಳನ್ನು ಕೇಳಲೇಬಾರದು!
ತಮ್ಮದೇ ಆದ ವಿಶೇಷತೆ
ಇವರು ವಿಶೇಷ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಎನ್ನಬಹುದು. ಇವರಿಗೆ ಮನೆಯ ಒಳಾಂಗಣ, ಕೊಠಡಿಯ ಅಲಂಕಾರಗಳ ವಿಚಾರದಲ್ಲಿ ನಿರ್ದಿಷ್ಟವಾದ ಆಸೆಯನ್ನು ಹೊಂದಿರುತ್ತಾರೆ. ಇತರರ ಸಹಾಯ ಇಲ್ಲದೆ ತಮ್ಮದೇ ಆದ ರೀತಿಯಲ್ಲಿ ನಿಭಾಯಿಸಲು ಮುಂದಾಗುತ್ತಾರೆ. ತಮ್ಮ ವಿಭಿನ್ನ ಕಲ್ಪನೆ ಹಾಗೂ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವರು. ಅಲ್ಲದೆ ತಾವು ಇರುವ ಜಾಗ ಹಾಗೂ ಮನೆಯನ್ನು ವಿಶೇಷ ಕಲ್ಪನೆಯಿಂದ ಅಲಂಕರಿಸಲು ಬಯಸುವ ವ್ಯಕ್ತಿಗಳಾಗಿರುತ್ತಾರೆ.