Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಬಂಧಗಳ ವಿಷಯದಲ್ಲಿ 'ಕರ್ಕ ರಾಶಿ'ಯವರು ಇಂತಹ ಸಮಸ್ಯೆಗಳನ್ನು ಎದುರಿಸುವರು...
ಜ್ಯೋತಿಷ್ಯ ಶಾಸ್ತ್ರವು ಅಗಾದವಾದ ವಿಚಾರ. ಇದರಿಂದ ವ್ಯಕ್ತಿಯ ವೃತ್ತಿಜೀವನ, ವಿವಾಹ ಬಂಧನ, ವೈವಾಹಿಕ ಸಂಬಂಧ ಸೇರಿದಂತೆ ಎಲ್ಲಾ ಬಗೆಯ ವಿಚಾರಗಳನ್ನು ತೆರೆದಿಡುತ್ತದೆ. ವ್ಯಕ್ತಿಯ ರಾಶಿಚಕ್ರದ ಆಧಾರದ ಮೇಲೆ ಅವರ ಸಂಬಂಧ ಹೇಗಿರುತ್ತದೆ ಎನ್ನುವುದನ್ನು ಊಹಿಸಬಹುದು. ಹನ್ನೆರಡು ರಾಶಿಚಕ್ರಗಳಿಗೆ ಹೋಲಿಸಿದರೆ ಕರ್ಕ ರಾಶಿಯ ವ್ಯಕ್ತಿಗಳು ಅತ್ಯಂತ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಅಲ್ಲದೆ ಜನರೊಂದಿಗೆ ಬಹುಬೇಗ ಸಂಬಂಧವನ್ನು ಬೇಳೆಸುತ್ತಾರೆ ಎನ್ನಲಾಗುವುದು. ನಿಷ್ಠಾವಂತ ವ್ಯಕ್ತಿಗಳಾದ ಇವರು ತಮ್ಮ ಸಂಬಂಧಗಳನ್ನು ದೀರ್ಘಾವಧಿಯವರೆಗೆ ಕಾಯ್ದುಕೊಳ್ಳುವರು ಎನ್ನಲಾಗುತ್ತದೆ.
ಗ್ರಹಗಳ ಪ್ರಭಾವ ಹಾಗೂ ನಕ್ಷತ್ರಗಳ ಪಾತ್ರ ವ್ಯಕ್ತಿಯ ಮೇಲೆ ಮಹತ್ತರವಾದ ಬದಲಾವಣೆ ಅಥವಾ ಪರಿಣಾಮವನ್ನುಂಟುಮಾಡುವುದು. ಕರ್ಕ ರಾಶಿಯ ಮೇಲೆ ಇವುಗಳ ಪ್ರಭಾವ ಹೇಗಿದೆ? ಇದರಿಂದ ಕರ್ಕ ರಾಶಿಯವರು ಸಂಬಂಧಗಳಲ್ಲಿ ಯಾವ ಬಗೆಯ ಸಮಸ್ಯೆಗಳನ್ನು ಹಾಗೂ ಸನ್ನಿವೇಶಗಳನ್ನು ಎದುರಿಸ ಬೇಕಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ನಿರಂತರ ಪ್ರೀತಿಯ ಅಗತ್ಯತೆ
ಸಂಬಂಧಗಳ ವಿಚಾರದಲ್ಲಿ ಪ್ರತಿಯೊಬ್ಬರು ಸಹ ನಿರಂತರ ಪ್ರೀತಿಯನ್ನು ತೋರಿಸುವ ಪಾಲುದಾರರನ್ನು ಹೊಂದಿರಲು ಬಯಸುತ್ತಾರೆ. ಹಾಗೆಯೇ ಕರ್ಕ ರಾಶಿಯವ್ಯಕ್ತಿಗಳು ಸಹ. ಪ್ರೀತಿ ಮತ್ತು ಸಂಗಾತಿಯು ಇವರ ಜೀವನದಲ್ಲಿ ಅತ್ಯಂತ ಮಹತ್ತರವಾದ ವಿಷಯವಾಗಿರುತ್ತದೆ. ಇವರು ಬಯಸಿದ ವ್ಯಕ್ತಿಯಿಂದ ಪ್ರೀತಿ ಪಡೆಯಲು ಸಾಧ್ಯವಾಗದೆ ಇದ್ದರೆ ಅದೊಂದು ಕಠಿಣವಾದ ಹಾಗೂ ಕಹಿಯಾದ ಸಂಗತಿ ಎಂದು ಭಾವಿಸುವರು. ತಮ್ಮ ಸಂಗಾತಿಯಿಂದ ಅಥವಾ ಸಂಬಂಧದಲ್ಲಿ ನಿರಂತರವಾದ ಪ್ರೀತಿ ದೊರೆಯಬೇಕು ಎಂದು ಬಯಸುವರು.

ಸಂಗಾತಿ ದೂರವಾಗುವ ಭಯ
ಇವರು ತಮ್ಮ ಸಂಗಾತಿ ಸದಾ ಬಳಿಯಲ್ಲಿಯೇ ಇರಬೇಕು ಎಂದು ಭಾವಿಸುತ್ತಾರೆ. ಅವರು ಸ್ವಲ್ಪ ದಿನದ ಮಟ್ಟಿಗೆ ದೂರವಿದ್ದರೂ ಅಸುರಕ್ಷಿತವಾದ ಭಾವನೆಯನ್ನು ಹೊಂದುವರು. ಇದು ಇವರ ಸಂಬಂಧ ಯಶಸ್ವಿಯಾಗಲು ಸಹಾಯ ಮಾಡುವುದು. ಕೆಲವೊಮ್ಮೆ ಸಂವಹನದ ಕೊರತೆಯಿಂದ ಇಬ್ಬರ ನಡುವೆ ಸಮಸ್ಯೆಗಳು ಉದ್ಭವಿಸುವುದು. ಇದಕ್ಕೆ ಅತಿಯಾದ ಸ್ವಾಮ್ಯತ್ವದ ಗುಣವು ಕಾರಣವಾಗಿರುವುದು. ನಂಬಿಕೆಯ ಸಮಸ್ಯೆಯಿಂದಲೂ ಸಂಬಂಧ ಹಾಳಾಗಬಹುದು ಅಥವಾ ಅಂತ್ಯವಾಗಬಹುದು ಎನ್ನುವ ಭಯವಿರುತ್ತದೆ.

ಅತಿಯಾದ ಕಾಳಜಿ ಬೇಸರವನ್ನುಂಟುಮಾಡುವುದು
ಸಂಬಂಧಗಳಲ್ಲಿ ಪರಸ್ಪರ ಕಾಳಜಿಯು ಅತ್ಯಗತ್ಯವಾಗಿರುತ್ತದೆ. ಆದರೆ ಅದೇ ಕಾಳಜಿ ಅತಿಯಾಗಿ ತೋರಿಸುವುದರಿಂದ ಅದೊಂದು ಬಗೆಯ ಗೊಂದಲ ಹಾಗೂ ಉಸಿರುಗಟ್ಟಿಸುವಂತಹ ಅನುಭವವನ್ನು ನೀಡುವುದು. ಇವರು ತೋರುವ ಅತಿಯಾದ ಕಾಳಜಿಯು ಸಂಬಂಧದಲ್ಲಿ ಸ್ವಾತಂತ್ರ್ಯವನ್ನು ಹಾಳುಮಾಡುವುದು. ಅಲ್ಲದೆ ಸಮತೋಲಿತ ಸಂಬಂಧ ಹೊಂದಲು ಕಷ್ಟವಾಗುವುದು. ಹಾಗಾಗಿ ಇವರು ಅತಿಯಾದ ಪ್ರೀತಿಯಿಂದಲೂ ಉಸಿರುಗಟ್ಟಿ ದಂತಹ ಅನುಭವ ಅಥವಾ ಭಾವನೆಯನ್ನು ಹೊಂದುವರು.

ಪ್ರೀತಿಯ ಕಲ್ಪನೆ
ಜೀವನದ ಕೊನೆಯ ಹಂತದವರೆಗೂ ಒಂದೇ ಸಂಬಂಧದಲ್ಲಿ ಉಳಿಯಬೇಕು, ತಾವು ಬಯಸುವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಇರಬೇಕು ಹಾಗೂ ಪ್ರೀತಿಯ ಜೀವನದ ಸೌಂದರ್ಯ ಹೃದಯವನ್ನು ತುಂಬಬೇಕು ಎನ್ನುವ ಕಲ್ಪನೆಯನ್ನು ಹೊಂದಿರುತ್ತಾರೆ. ಇನ್ನೊಂದೆಡೆಗೆ ವಿಭಿನ್ನ ಪಾಲುದಾರರೊಂದಿಗೆ ಪ್ರಯೋಗ ನಡೆಸುವುದು ಮತ್ತು ಪ್ರೀತಿಯ ಪರಿಕಲ್ಪನೆಯನ್ನು ಅನ್ವೇಷಿಸುವ ಪರಿಕಲ್ಪನೆಯು ಇವರನ್ನು ಸಮಾನವಾಗಿ ಆಕರ್ಷಿಸುತ್ತದೆ. ಹಾಗಾಗಿ ಇವರ ಜೀವನದಲ್ಲಿ ಹೃದಯವು ಎರಡು ಆಕರ್ಷಕ ಮಾರ್ಗಗಳ ನಡುವೆ ತೂಗಾಡುತ್ತದೆ.

ಭವಿಷ್ಯದ ಯೋಜನೆ ವಸ್ತುನಿಷ್ಠವಾಗಿರುವುದಿಲ್ಲ
ಇವರು ಮದುವೆಯ ಕಲ್ಪನೆಯನ್ನು ಹಾಗೂ ಸಂಬಂಧವನ್ನು ಪ್ರೀತಿಸುತ್ತಾರೆ. ಜೊತೆಗೆ ತಮ್ಮದೇ ಆದ ಸ್ವಂತ ಮನೆಯಲ್ಲಿ ಸಂಸಾರ ನಡೆಸುತ್ತಾರೆ, ಮಕ್ಕಳನ್ನು ಹೊಂದುತ್ತಾರೆ. ನಿಮ್ಮ ಸಮಯವನ್ನು ಇವುಗಳಿಗಾಗಿ ಸೂಕ್ತ ರೀತಿಯಲ್ಲಿ ನಿಯೋಜಿಸುತ್ತೀರಿ. ಆದರೆ ಕೆಲವೊಮ್ಮೆ ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟತೆ ಹೊಂದಿರುವುದಿಲ್ಲ. ಇದು ಸಂಬಂಧಗಳಲ್ಲಿ ಗೊಂದಲ ಸೃಷ್ಟಿಸುವುದು. ಪರಸ್ಪರ ಚರ್ಚೆಯ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಬಹುದು.



Click it and Unblock the Notifications
