Latest Updates
-
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ?
ಸಂಬಂಧಗಳ ವಿಷಯದಲ್ಲಿ 'ಕುಂಭ ರಾಶಿ'ಯವರು ಇಂತಹ ಸಮಸ್ಯೆಗಳನ್ನು ಎದುರಿಸುವರು...
ರಾಶಿಗಳಲ್ಲಿ ತುಂಬಾ ಆಕರ್ಷಣೀಯ ಹಾಗೂ ಸ್ನೇಹಿತರ ಬಳಗದಲ್ಲಿ ಜನಪ್ರಿಯರಾಗಿರುವಂತಹ ಕುಂಭ ರಾಶಿಯವರು ಕ್ರಿಯಾತ್ಮವಾಗಿರುವ ವ್ಯಕ್ತಿಗಳು ಸಹ. ಇವರು ದೃಷ್ಟಿಕೋನ ಉಲ್ಲವರು ಮತ್ತು ನಿಷ್ಕಪಟವಾಗಿರುವವರು. ಮುಗ್ಧತೆಯಿಂದಾಗಿ ಇವರಿಗೆ ಎರಡು ಬಗೆಯ ಪರಿಣಾಮಗಳು ಉಂಟಾಗಬಹುದು. ಇವರಿಗೆ ಹಲವಾರು ಮಂದಿ ಸ್ನೇಹಿತರು ಇರಬಹುದು. ಆದರೆ ತುಂಬಾ ಹತ್ತಿರದವರು ಕಡಿಮೆ. ಯಾಕೆಂದರೆ ಇವರು ತಮ್ಮ ಮನಸ್ಸಿನಲ್ಲಿರುವುದನ್ನು ಬೇಗನೆ ಹೇಳಲ್ಲ.
ಕುಂಭ ರಾಶಿಯವರು ಯಾವಾಗಲೂ ಸತ್ಯವನ್ನು ಬಯಸುವವರು. ಭೂಮಿ ಮೇಲಿನ ವೈಚಿತ್ರಗಳನ್ನು ಇವರು ಕಲಿತು ಅದನ್ನು ಹೊರಜಗತ್ತಿಗೆ ತಿಳಿಸಲು ಬಯಸುವರು. ಪರಿಪೂರ್ಣತೆ ಸಾಧಿಸಲು ಬೇಕಾಗಿರುವಂತಹ ಕಠಿಣ ಪರಿಶ್ರಮವನ್ನು ಇವರು ಹಾಕುವರು. ಜಾಣ್ಮೆಯೊಂದಿಗೆ ಕ್ರಿಯಾತ್ಮಕ ಬುದ್ಧಿ ಇವರಲ್ಲಿದೆ. ಇವರು ತಮ್ಮ ಜಾಣ್ಮೆ ಮತ್ತು ಕ್ರಿಯಾತ್ಮಕತೆ ಸಂಬಂಧದಲ್ಲಿ ಅಳವಡಿಸಿಕೊಳ್ಳುತ್ತಾರೆಯಾ ಎಂದು ತಿಳಿಯಿರಿ.

ಸಂಗಾತಿಯು ಬೇಸರ ಮೂಡಿಸುತ್ತಿದ್ದರೆ ನೀವು ಸಹಿಸುವುದಿಲ್ಲ
ನಿಮಗೆ ಜೀವನದಲ್ಲಿ ತುಂಬಾ ಲವಲವಿಕೆ ಮತ್ತು ಅನುಭವ ಬೇಕು. ಪ್ರತಿನಿತ್ಯವು ನೀವು ಏನಾದರೂ ಹೊಸತನ್ನು ಕಲಿಯಲು ಮತ್ತು ಅನುಭವಿಸಲು ಬಯಸುವಿರಿ. ಜೀವನದಲ್ಲಿ ಜ್ಞಾನ ಸಂಪಾದನೆ ಮಾಡುವುದು ನಿಮ್ಮ ಗುರಿ. ಇದರಿಂದಾಗಿ ನೀವು ತುಂಬಾ ಸಾಹಸ ಪ್ರಿಯರಾಗಿರುವಿರಿ. ಬೋರ್ ಹೊಡೆಸುವಂತಹ ಸಂಗಾತಿ ಜತೆಗೆ ನೀವು ಹೊಂದಿಕೊಳ್ಳಲು ಕಷ್ಟಪಡುವಿರಿ. ನಿಮಗೆ ಬೇಸರದ ಬಗ್ಗೆ ಭೀತಿಯಾಗುವುದು ಮತ್ತು ಸಂಗಾತಿ ಜತೆಗೆ ಜಗಳವಾಡುವ ಬದಲು ನೀವು ಜತೆಯಾಗಿರಲು ಪ್ರಯತ್ನಿಸುವಿರಿ.

ಸಂಗಾತಿ ಜತೆಗಿನ ಭವಿಷ್ಯದ ಬಗ್ಗೆ ಸ್ಪಷ್ಟತೆ ನೀಡಲಾರಿರಿ
ವಿಶ್ವದ ಮುಂದೆ ಪ್ರಕಟಗೊಳ್ಳುವ ಭೀತಿಯಿಂದಾಗಿ ನೀವು ಜೀವನಪೂರ್ತಿ ಯಾವುದೇ ಸಂಬಂಧದಲ್ಲಿ ತೊಡಗಿಕೊಳ್ಳಲು ಹಿಂಜರಿಯುವಿರಿ. ನಿಮಗೆ ಸ್ವತಂತ್ರ ಬೇಕಾಗಿದೆ ಮತ್ತು ಸಂಬಂಧವು ಸ್ವತಂತ್ರವನ್ನು ಕಿತ್ತುಕೊಳ್ಳಬಹುದು ಎಂದು ನೀವು ಭಾವಿಸುವಿರಿ. ಇಂತಹ ಗೊಂದಲದಿಂದಾಗಿ ಭವಿಷ್ಯದ ಬಗ್ಗೆ ಸಂಗಾತಿಗೆ ಯಾವುದೇ ಸ್ಪಷ್ಟ ಉತ್ತರ ನೀಡಲು ವಿಫಲವಾಗುವಿರಿ. ಪ್ರೀತಿ ಮತ್ತು ವೈವಿಧ್ಯತೆಯ ಹೊಸತಕ್ಕೆ ಹೊಂದಿಕೊಳ್ಳಲು ನಿಮಗೆ ಸಿಗುವಂತಹ ಅವಕಾಶ ಕಳಕೊಳ್ಳುವ ಭೀತಿಯು ನಿಮ್ಮನ್ನು ಕಾಡುವುದು.

ನಿಮ್ಮನ್ನು ತಪ್ಪಾಗಿ ಅರ್ಥೈಸಲಾಗುವುದು
ನಿಮ್ಮ ಜ್ಞಾನವು ಸಂಗಾತಿಯೊಂದಿಗೆ ಹೊಂದಿಕೆಯಾಗದು. ಜಾಣ್ಮೆ ಮತ್ತು ಇತರ ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿರುವುದು ಸಮಸ್ಯೆಯಾಗಬಹುದು. ಕಾರಣವೇನೆ ಇದ್ದರೂ ಇವರು ತಪ್ಪಾಗಿ ಅರ್ಥೈಸಿಕೊಳ್ಳುವರು. ಅದ್ಭುತ ಸಂವಹನಗಾರರು ಎಲ್ಲಾ ವಿಚಾರವನ್ನು ಸರಿಯಾಗಿ ನಿಭಾಯಿಸುವರು. ಕೆಲವೊಂದು ಸಲ ಸಮಸ್ಯೆಯೇ ಇರಲಿಲ್ಲವೆಂದು ಅವರಿಗೆ ಅನಿಸುವುದು.

ಒಳ್ಳೆಯ ಚರ್ಚಾಪಟು ಮತ್ತು ಸಂವಹನಗಾರರು
ನಿಮ್ಮದು ತುಂಬಾ ಚುರುಕು ಮೆದುಳಾಗಿರುವ ಕಾರಣದಿಂದಾಗಿ ಇದು ಜಗಳ ಮತ್ತು ಚರ್ಚೆಯನ್ನು ನಿಭಾಯಿಸಲು ನೆರವಾಗುವುದು. ನೀವು ಒಳ್ಳೆಯ ಚರ್ಚಾಪಟು ಮತ್ತು ಸಂವಹನಗಾರ. ನೀವು ಜನರಿಗೆ ತರ್ಕದ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವಿರಿ. ಆದರೆ ಸಂಗಾತಿಯ ವಿಚಾರಕ್ಕೆ ಬಂದರೆ ಅವರಗೆ ಮನವರಿಕೆ ಮಾಡಲು ನಿಮಗೆ ಸಾಧ್ಯವಾಗದು. ಹೆಚ್ಚು ಮಾತನಾಡಿದರೆ ಕೆಲವೊಂದು ಆಲೋಚನೆಗಳು ಹಾಳಾಗಬಹುದು ಮತ್ತು ಸಂಗಾತಿಗೆ ಇದರಿಂದ ಬೇಸರ ಮೂಡಬಹುದು.

ಸಂಬಂಧದಲ್ಲಿ ನಿಮಗೆ ಅಗತ್ಯವಾಗಿರುವ ಜಾಗ ಸಿಗುತ್ತಿಲ್ಲವೆಂದು ಭಾವಿಸುವಿರಿ
ಸಂಬಂಧದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆಗಿರುವಂತಹ ಜಾಗ ಬೇಕಿರುವುದು. ಆದರೆ ಕುಂಭ ರಾಶಿಯವರಿಗೆ ಇದು ಹೆಚ್ಚೇ ಬೇಕು. ಇವರು ಹೆಚ್ಚು ಭಾವನಾತ್ಮಕವಾಗಿಯು ಇರುವ ಕಾರಣದಿಂದಾಗಿ, ತಮ್ಮ ವೈಯಕ್ತಿಕ ಜಾಗವನ್ನು ಭಾವನೆಗಳು ಆವರಿಸಿಕೊಳ್ಳುವುದು ಇಷ್ಟಪಡಲ್ಲ. ಸಂಗಾತಿಯು ಭಾವನಾತ್ಮಕವಾಗಿದ್ದರೆ ಆಗ ಇವರು ಬಯಸುತ್ತಿರುವಂತಹ ಜಾಗವು ಹೆಚ್ಚಾಗಿದೆಯೆನ್ನುವ ಭಾವನೆ ಬರಬಹುದು. ಇದರಿಂದಾಗಿ ಇವರಿಗೆ ಸುಲಭವಾಗಿ ವೈಯಕ್ತಿಕ ಜಾಗವು ಸಿಗದು.



Click it and Unblock the Notifications











