For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ಏಡ್ಸ್ ಸೋಂಕು ತಗುಲಿಸುವುದು ಎಂದರೆ ಆತನಿಗಿಷ್ಟ

By Sushma Charhra
|

ಇತ್ತೀಚೆಗೆ ಪ್ರೀತಿ ಅನ್ನೋದು ರಸ್ತೆಯ ವಸ್ತುವಿನಂತೆ ಆಗಿ ಹೋಗಿದೆ. ಒಂದು ರಾತ್ರಿಯ ವಿಷಯ ಹೆಚ್ಚಿನವರಿಗೆ ಸಾಧಾರಣ ವಿಷಯವಾಗಿದೆ ಮತ್ತು ಅದಕ್ಕಾಗಿ ಅವರು ಹೆಚ್ಚು ತಲೆಕೆಡಿಸಿಕೊಳ್ಳದೆ ಯಾರೊಂದಿಗೆ ಬೇಕಾದರೂ ಕಳೆಯಲು ಸಿಧ್ಧವಿರುವ ಮನಸ್ಥಿತಿಯವರಾಗಿದ್ದಾರೆ. ಆದರೆ ನೀವು ಪ್ರೀತಿಸಿದ ವ್ಯಕ್ತಿ ಎಷ್ಟು ಸ್ವಚ್ಛವಾಗಿದ್ದರು ಎಂಬುದನ್ನು ಇಬ್ಬರೂ ಅಲೋಚಿಸಬೇಕಾಗುತ್ತದೆ. ಒಂದು ಕ್ಷಣ ಮಾತ್ರದಲ್ಲಿ ಕಳೆದುಹೋಗುವ ನಿಮ್ಮ ಜಾಗರೂಕತೆ ನಿಮಗೆ ಬಹುದೊಡ್ಡ ಅಗತ್ಯಕ್ಕಿಂತ ಹೆಚ್ಚಿನ ನಷ್ಟವನ್ನು ಉಂಟು ಮಾಡಬಹುದು.

ಇದೊಂದು ವಿಚಿತ್ರ ವ್ಯಕ್ತಿಯ ಕಥೆ.ಈತ ಸುಮಾರು 10 ಮಂದಿ ಪುರುಷರಿಗೆ HIV ಸೋಂಕು ಹರಡುವಂತೆ ಮಾಡಿದ್ದಾನೆ. ಹೀಗೆ ಮಾಡಿರುವುದು ಕೇವಲ ಆತ ಸೇಡು ತೀರಿಸಿಕೊಳ್ಳುವ ಕಾರಣದಿಂದ..!

ಹಾಗಾದ್ರೆ ಆ ವ್ಯಕ್ತಿಯ ಬಗೆಗಿನ ಪೂರ್ಣ ವಿವರವನ್ನು ಇಲ್ಲಿ ಓದಿ..

ಅವನು ಡ್ಯಾರಲ್ ರೋಝ್. 26 ವರ್ಷದ ವ್ಯಕ್ತಿ. ವೃತ್ತಿಯಲ್ಲಿ ಹೇರ್ ಡ್ರೆಸ್ಸರ್ ಆಗಿ ಕೆಲಸ ನಿರ್ವಹಿಸುತ್ತಾನೆ. ಸುಮಾರು 10 ಮಂದಿಗೆ ಬೇಕಂತಲೆ HIV ಹರಡುವಂತೆ ಮಾಡಿದ್ದಾನೆ. ಸ್ವತಃ ತಾನೂ ಕೂಡ HIV ಯಿಂದ ಬಳಲುತ್ತಿದ್ದರೂ ಯಾವುದೇ ಔಷಧಿಯನ್ನೂ ಪಡೆಯಲಿಲ್ಲ.

ಅವನು ಯಾವತ್ತೂ ಔಷಧಿ ಪಡೆಯಲು ಇಚ್ಛಿಸಿಲ್ಲ

ಅವನು ಯಾವತ್ತೂ ಔಷಧಿ ಪಡೆಯಲು ಇಚ್ಛಿಸಿಲ್ಲ

ವಿಚಿತ್ರವೆಂದರೆ ಈತನಿಗೆ ವೈದ್ಯರು ನೀಡಿದ ಔಷಧಿಯ ಬಗ್ಗೆ ಖುಷಿಯಾಗಿಲ್ಲವಂತೆ, ಅದಕ್ಕಾಗಿ ಆತ ಆನ್ ಲೈನ್ ಮೂಲಕ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾನಂತೆ.

ಅವನ ಔಷಧಿ ಬಗ್ಗೆ ತಿಳಿದರೆ ಆಶ್ಚರ್ಯಗೊಳ್ಳುತ್ತೀರಿ

ಅವನ ಔಷಧಿ ಬಗ್ಗೆ ತಿಳಿದರೆ ಆಶ್ಚರ್ಯಗೊಳ್ಳುತ್ತೀರಿ

ಆಶ್ಚರ್ಯವೆಂದರೆ ಈ ವ್ಯಕ್ತಿ ತನ್ನ ಮೂತ್ರವನ್ನು ತಾನೇ ಕುಡಿದರೆ, ವೈದ್ಯರ ಬಳಿ ಔಷಧಗಳನ್ನು ತೆಗೆದುಕೊಳ್ಳುವ ಅಗತ್ಯವೇ ಬರುವುದಿಲ್ಲ ಮತ್ತು ಯಾವುದೇ ವೈರಸ್ ಕೂಡ ಆತನನ್ನು ಆಕ್ರಮಿಸಲು ಸಾಧ್ಯವಿಲ್ಲ ಎಂದು ನಂಬಿದ್ದಾನೆ. . ಅಷ್ಟೇ ಅಲ್ಲ, ಆತ ತನ್ನ ಜನನಾಂಗಕ್ಕೆ ಆಪಲ್ ಸಿಡರ್ ವಿನೆಗರ್ ಮತ್ತು ಆಲೀವ್ ಎಲೆಯನ್ನು ಬಳಸಿ ತಯಾರಿಸಿದ ಏನೋ ಔಷಧಿಯನ್ನು ಹಚ್ಚಿಕೊಳ್ಳುತ್ತಾನಂತೆ.

ಅವನು ಪುರುಷರನ್ನು ಗೆ ಡೇಟಿಂಗ್ ಸೈಟ್ ಮೂಲಕ ಹುಡುಕಿದ್ದಾನೆ

ಅವನು ಪುರುಷರನ್ನು ಗೆ ಡೇಟಿಂಗ್ ಸೈಟ್ ಮೂಲಕ ಹುಡುಕಿದ್ದಾನೆ

HIV ಹರಡುವ ಉದ್ದೇಶದಿಂದ, ಈತ ಪುರುಷರನ್ನು ಟಾರ್ಗೆಟ್ ಮಾಡಿದ್ದಾನೆ. ಅದೂ ಕೂಡ ಗೆ ಡೇಟಿಂಗ್ ವೆಬ್ ಸೈಟ್ ಮೂಲಕ. ಅವರ ಜೊತೆಗೆ ರಕ್ಷಣೆ ಇಲ್ಲದ ಲೈಂಗಿಕ ಸಂಪರ್ಕಕ್ಕೆ ಪ್ರೇರೇಪಿಸುತ್ತಾನೆ.

ನಾಜೂಕಾಗಿ ಸೋಂಕು ಹರಡಿದ್ದಾನೆ.

ನಾಜೂಕಾಗಿ ಸೋಂಕು ಹರಡಿದ್ದಾನೆ.

ಇವನ ಜೊತೆ ಸಂಪರ್ಕಕ್ಕೆ ಒಳಗಾದ ಕೆಲವರು ತಾವು ಸುರಕ್ಷಿತವಾಗಿದ್ದೇವೆ ಎಂದು ಅಂದುಕೊಂಡಿದ್ದಾರೆ. ಯಾಕೆಂದರೆ ಸಂಪರ್ಕದ ಸಮಯದಲ್ಲಿ ಅವರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಆದರೆ ರೋಝ್ , ಕಾಂಡೋಮ್ ನ ಕತ್ತರಿಸಿ ಕೊಟ್ಟಿದ್ದಾನೆ ಎಂಬುದು ನಂತರದ ದಿನಗಳಲ್ಲಿ ಪತ್ತೆಯಾಗಿದೆ.

 ತುಂಬಾ ದಿನ ಇವನ ಆಟ ನಡೆಯಲಿಲ್ಲ

ತುಂಬಾ ದಿನ ಇವನ ಆಟ ನಡೆಯಲಿಲ್ಲ

ವೆಬ್ ಸೈಟ್ ನಲ್ಲಿ ಸಿಕ್ಕ ವ್ಯಕ್ತಿಯ ಜೊತೆಗಿನ ಲೈಂಗಿಕ ಸಂಪರ್ಕಕ್ಕೆ ಕುರಿತಾಗಿ ಅವರಿಗೆ ಮೇಸೇಜ್ ಮಾಡಿದ. ಒಂದು ಮೆಸೇಜ್ ನಲ್ಲಿ ""Maybe you have the fever... I have HIV. Whoop" ಎಂದು ಬರೆದಿದ್ದಾನೆ. ಅಂದರೆ ನಿನಗೆ ಜ್ವರವಿರಬಹುದು. ಆದರೆ ನನಗೆ HIV ಇದೆ ಎಂದಿದ್ದಾನೆ. ಇನ್ನೊಂದು ಮೆಸೇಜ್ ನಲ್ಲಿ "I ripped the condom. I got you" ಎಂದಿದ್ದಾನೆ. ಅಂದರೆ ನಾನು ಕಾಂಡೋಮ್ ನ್ನು ಕತ್ತರಿಸಿದ್ದೆ ಎಂದರ್ಥ.

ಆತ ತಾನು ಗುಣಮುಖವಾಗಿದ್ದೇನೆ ಎಂದು ನಂಬಿದ್ದಾನೆ

ಆತ ತಾನು ಗುಣಮುಖವಾಗಿದ್ದೇನೆ ಎಂದು ನಂಬಿದ್ದಾನೆ

ಯಾವಾಗ ಪೋಲೀಸರು ಈತನನ್ನು ಎತ್ತಾಕಿಕೊಂಡು ಹೋಗಿ ಕ್ಲಾಸ್ ತೆಗೆದರೂ ಆಗ ತಾನು ತೆಗೆದುಕೊಂಡ ಚಿಕಿತ್ಸೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿದ್ದೇನೆ ಎಂದು ಹೇಳಿದ್ದಾನೆ. ಆದರೆ ಪೋಲೀಸರು ಹೇಳುವ ಪ್ರಕಾರ, ಆತನಿಗೆ ತಾನು ಗುಣಮುಖನಾಗಿಲ್ಲ ಎಂಬ ವಿಚಾರ ಸ್ಪಷ್ಟವಾಗಿ ತಿಳಿದಿದೆ ಆದರೂ ನಾಟಕವಾಡುತ್ತಿದ್ದಾನೆ ಎಂಬುದು.

ಸದ್ಯ ಈತ ಪೋಲೀಸರ ಅತಿಥಿಯಾಗಿದ್ದಾನೆ..

ಸದ್ಯ ಈತ ಪೋಲೀಸರ ಅತಿಥಿಯಾಗಿದ್ದಾನೆ..

ಯಾವಾಗ ಈತನಿಂದ ಸೋಂಕಿಗೆ ಒಳಗಾದ ವ್ಯಕ್ತಿ ಪೋಲೀಸ್ ದೂರು ದಾಖಲಿಸಿದನೋ, ಆಗ ಪೋಲೀಸರು ಇವನನ್ನು ಅರೆಸ್ಟ್ ಮಾಡಿದ್ದಾರೆ.ಸದ್ಯ ಈಗ ಜೈಲಿನಲ್ಲಿ ಡ್ಯಾರಲ್ ರೋಝ್ ಕಾಲ ಕಳೆಯುತ್ತಿದ್ದಾನೆ.

Read more about: hiv
English summary

Real-life Story Of The Hairdresser Who Infected Men With HIV

Real-life Story Of The Hairdresser Who Infected Men With HIV
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more