For Quick Alerts
ALLOW NOTIFICATIONS  
For Daily Alerts

ಈ ದೀಪಾವಳಿಯಂದು, ರಾಶಿಚಕ್ರದ ಅನುಗುಣವಾಗಿ 'ಲಕ್ಷ್ಮೀ ದೇವಿ'ಯನ್ನು ಪೂಜಿಸಿದರೆ, ಸಂಪತ್ತು ವೃದ್ಧಿಯಾಗುವುದು

|

ದೀಪಾವಳಿ ಹಬ್ಬ ಹಿಂದೂ ಧರ್ಮದವರಿಗೆ ಅತ್ಯಂತ ಸಡಗರ ಹಾಗೂ ಸಂಭ್ರಮದ ಹಬ್ಬ. ಮನೆಯನ್ನು ಅಲಂಕರಿಸುವುದು, ಬಂಧು-ಬಾಂಧವರನ್ನು ಆಮಂತ್ರಿಸುವುದು, ಪರಸ್ಪರ ಉಡುಗೊರೆಗಳನ್ನು ನೀಡುವುದು, ಸಿಹಿ ಹಂಚುವುದು ಎಂದರೆ ಎಲ್ಲರಿಗೂ ಒಂದು ಬಗೆಯ ಸಂತೋಷ-ಸಡಗರ. ಹಬ್ಬದ ದಿನ ರಾತ್ರಿ ಮನೆಯನ್ನು ಬೆಳಗುವುದರ ಮೂಲಕ ಜೀವನದ ಕತ್ತಲೆಯು ಕಳೆದು ಬೆಳಕು ಬರಲಿ ಎಂದು ಆಶಿಸುತ್ತಾರೆ. ಲಕ್ಷ್ಮಿ ದೇವಿಗೆ ಮೀಸಲಾದ ಈ ಹಬ್ಬವನ್ನು ದೇಶದಾದ್ಯಂತ ಆಚರಿಸುವುದು ವಿಶೇಷ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರಗಳಿಗೂ ಒಂದೊಂದು ಬಣ್ಣ, ಹರಳು, ವಸ್ತುಗಳು ಬಹುಳ ಶುಭ ಶಕುನವನ್ನು ತಂದು ಕೊಡುತ್ತವೆ. ದೀಪಾವಳಿ ಹಬ್ಬದ ಸಮಯದಲ್ಲಿ ಈ ಶುಭ ಶಕುನದ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿ ಅಥವಾ ಬಳಸಿಕೊಳ್ಳುವುದರ ಮೂಲಕ ನಮ್ಮ ಆಶಯಗಳನ್ನು ದೇವರಿಗೆ ಬಹುಬೇಗ ತಲುಪಿಸಬಹುದು. ಅಲ್ಲದೆ ಬಹುಬೇಗ ದೇವರ ಆಶೀರ್ವಾದಕ್ಕೆ ಪಾತ್ರರಾಗಬಹುದು. ನಿಮಗೂ ಈ ದೀಪಾವಳಿ ಹಬ್ಬವು ಸುದೀರ್ಘವಾದ ಸಂತೋಷ ಹಾಗೂ ಸಮೃದ್ಧಿಯನ್ನು ತಂದುಕೊಡಲಿ ಎನ್ನುವ ಆಶಯವಿದ್ದರೆ ತಪ್ಪದೆ ಈ ರೀತಿಯಲ್ಲಿ ಹಬ್ಬದ ಆಚರಣೆ ಅಥವಾ ಆರಾಧನೆ ಮಾಡಿ...

ಮೇಷ

ಮೇಷ

ಈ ರಾಶಿಚಕ್ರದವರು ಮಂಗಳ ಗ್ರಹದಿಂದ ಆಳಲ್ಪಡುವ ವ್ಯಕ್ತಿಗಳು. ಇವರು ಶಕ್ತಿವಂತರು ಮೊಂಡು ಸ್ವಭಾವದವರು, ಮಹತ್ವಾಕಾಂಕ್ಷೆ ಹೊಂದಿದವರು ಹಾಗೂ ಸುಲಭವಾಗಿ ತೃಪ್ತಿಗೆ ಒಳಗಾಗದ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರು ಶಿಕ್ಷಣ, ಸಾಮಾಜಿಕ ಕ್ಷೇತ್ರ ಅಥವಾ ಹಣಕಾಸುಗಳ ವಿಚಾರದಲ್ಲಿ ಸಂತೋಷವನ್ನು ಅನುಭವಿಸುವರು. ನೀವು ನಮ್ಮ ಆಸೆಯಂತಹ ಜೀವನವನ್ನು ಕಂಡುಕೊಳ್ಳಲು ದೇವರಿಗೆ ಕೆಲವು ರೀತಿಯಲ್ಲಿ ಪ್ರಾರ್ಥನೆ ಕೈಗೊಳ್ಳಬೇಕು.ಪ್ರಾರ್ಥನೆ ಮಾಡುವ ಕೊಠಡಿಯ ಗೋಡೆಗಳು ಕೆಂಪು ಬಣ್ಣವನ್ನು ಹೊಂದಿರಬೇಕು. ಅದು ಅಪಾರವಾದ ಪ್ರಗತಿಯನ್ನು ತಂದುಕೊಡುವುದು. ಪೂರ್ವಿಕರ ಆಸ್ತಿಯನ್ನು ಪಡೆಯಲು ಕೆಂಪು ಬಟ್ಟೆಯಲ್ಲಿ ಕಟ್ಟಿದ ಜಪದ ಮಾಲೆಯನ್ನು ಧರಿಸಬೇಕು. ದೀಪಾವಳಿ ಹಬ್ಬದ ದಿನ ರಾತ್ರಿ ಬಿಳಿ ಬಟ್ಟೆಯಲ್ಲಿ ಮಿಶ್ರ ಬಣ್ಣಗಳನ್ನು ಹಾಕಿ ಪವಿತ್ರವಾದ ಸ್ಥಳದಲ್ಲಿ ಇರಿಸಿ. ಇದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುವುದು. ಮನೆಯ ಮುಖ್ಯ ದ್ವಾರದಲ್ಲಿ ಬೆಳಕಿರುವಂತೆ ನೋಡಿಕೊಳ್ಳಿ.

ವೃಷಭ

ವೃಷಭ

ಈ ರಾಶಿಚಕ್ರದವರು ಸಾಮಾನ್ಯವಾಗಿ ಕುಟುಂಬ, ಸಮಾಜ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಇವರು ಈ ದೀಪಾವಳಿ ಸಮೃದ್ಧಿಯನ್ನು ತರಬೇಕೆಂದರೆ ಕೆಲವು ಬದಲಾವಣೆಯನ್ನು ಅನುಸರಿಸಬೇಕು. ತಾವು ಪೂಜೆ ಮಾಡುವ ಕೊಠಡಿಯು ಬಿಳಿಬಣ್ಣದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಲಕ್ಷ್ಮಿ ಮತ್ತು ಗಣೇಶನ ಪೂಜೆ ಮಾಡುವಾಗ ಕಮಲದ ಹೂವನ್ನು ಇಡಲು ಮರೆಯದಿರಿ. ಪೂಜೆಯ ಬಳಿಕ ಕಮಲದ ಹೂವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಡಿ. ನೀವು ನಿರಂತರವಾಗಿ ಹಣದ ವ್ಯಯವನ್ನು ಅನುಭವಿಸುತ್ತಿದ್ದರೆ ಐದು ಅಶ್ವತ್ತ್ಥ ಎಲೆಗೆ ಅರಿಶಿನ ಮತ್ತು ಚಂದನವನ್ನು ಬಳಿದು ನೀರಿನಲ್ಲಿ ಬಿಡಿ. ಲಕ್ಷ್ಮಿಯ ಪೂಜೆಗೆ ಕಮಲಗಟ್ಟದ ಹಾರವನ್ನು ಹಾಕಿ. ಬಳಿಕ ಹಾರವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿಡಿ. ಇದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುವುದು.

Most Read: ದೀಪಾವಳಿ ವಿಶೇಷ: ಮನಸ್ಸಿನ ಬಯಕೆ ಈಡೇರಲು ಯಾವ್ಯಾವ ರಾಶಿಯವರು ಏನೆಲ್ಲಾ ಮಾಡಬೇಕು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ

ಮಿಥುನ

ಮಿಥುನ

ಇವರು ತಮ್ಮ ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಅನುಕೂಲಕರ ಸ್ಥಿತಿಯನ್ನು ಸೃಷ್ಟಿಸುವರು. ಸ್ವಭಾವತಃ ಹಠಮಾರಿ ಗುಣ ಇರುವ ಇವರು ಸುಲಭವಾಗಿ ಸಮಸ್ಯೆಯನ್ನು ಬಗೆಹರಿಸುವರು. ಇವರು ಜೀವನದಲ್ಲಿ ಅಧಿಕ ಸಂಪತ್ತನ್ನು ಗಳಿಸಲು ಪೂಜೆಯ ಸ್ಥಳವನ್ನು ತಿಳಿ ಹಸಿರು ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಶ್ರೀಮಂತರಾಗಲು ದೀಪಾವಳಿಯ ದಿನ ದಕ್ಷಿಣವರ್ತಿ ಶಂಖವನ್ನು ಪೂಜಿಸಿ, ಕಪಾಟಿನಲ್ಲಿ ಅಥವಾ ಸಂಪತ್ತು ಇಡುವ ಸ್ಥಳದಲ್ಲಿ ಇರಿಸಿ.

ಕರ್ಕ

ಕರ್ಕ

ಸೂಕ್ಷ್ಮ ಪ್ರವೃತ್ತಿಯವರಾದ ಇವರು ಬಹುಬೇಗ ಭಾವುಕರಾಗುತ್ತಾರೆ. ಆದರ್ಶ ವ್ಯಕ್ತಿತ್ವ ಹೊಂದಿರುವ ಇರುವ ಸಂದರ್ಭಗಳನ್ನು ಸುಲಭವಾಗಿ ನಿರ್ವಹಿಸಬಲ್ಲರು. ಇವರು ದೀಪಾವಳಿ ಹಬ್ಬದಂದು ಪೂಜೆ ಮಾಡುವ ಸ್ಥಳವನ್ನು ತಿಳಿ ಹಸಿರು ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ವ್ಯಾಪಾರಸ್ಥರಿಗೆ ಸ್ಥಿರವಾದ ನಷ್ಟವುಂಟಾಗುತ್ತಿದ್ದರೆ ದೀಪಾವಳಿ ಹಬ್ಬದ ದಿನ ಲಕ್ಷ್ಮಿ ಮತ್ತು ಗಣೇಶನ ಆರಾಧನೆಗೆ ಕಮಲದ ಹೂವನ್ನು ಇಡಬೇಕು. ನಿಮ್ಮ ಸಂಪತ್ತು ಅಥವಾ ಕಪಾಟಿನಲ್ಲಿ ಕೆಂಪು ಬಟ್ಟೆಯನ್ನು ಇರಿಸಿ.

ಸಿಂಹ

ಸಿಂಹ

ಇವರು ಧೈರ್ಯ ಶಾಲಿಗಳು. ಸ್ವಾರ್ಥಗುಣವನ್ನು ಹೊಂದಿದ್ದರೂ ಸಹ ಅನ್ಯಾಯದ ವಿರುದ್ಧ ಹೋರಾಡುತ್ತಾರೆ. ಇವರ ಕೆಲವು ಉತ್ತಮ ಗುಣಗಳಿಗೆ ಬಂಧು ಬಾಂಧವರು ಶ್ಲಾಘಿಸುವರು. ಈ ದೀಪಾವಳಿ ಹಬ್ಬ ನಿಮಗೆ ಸಮೃದ್ಧಿ ಕಲ್ಪಿಸಬೇಕು ಎಂದುಕೊಂಡಿದ್ದರೆ ನೀವು ಪೂಜೆ ಮಾಡುವ ಸ್ಥಳವು ಕೆಂಪು ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಿ. ಹಸುವಿಗೆ ಆಹಾರ ನೀಡಿ. ಇದರಿಂದ ನಿರಂತರ ನಷ್ಟ ನಿವಾರಣೆಯಾಗುವುದು. ಮನೆಯ ಮುಖ್ಯ ದ್ವಾರದಲ್ಲಿ ದೀಪವನ್ನು ಇಟ್ಟು ಮುಂಜಾನೆಯ ತನಕ ಆರದಂತೆ ನೋಡಿಕೊಳ್ಳಿ. ಇದರಿಂದ ಖ್ಯಾತಿ, ಸಂಪತ್ತು ಮತ್ತು ಜನಪ್ರಿಯತೆ ಹೆಚ್ಚುವುದು.

Most Read: ಕಾಫಿಗೆ ಒಂದೆರಡು ಚಮಚ ತೆಂಗಿನೆಣ್ಣೆ ಬೆರೆಸಿ ಕುಡಿದರೆ, ಆರೋಗ್ಯಕ್ಕೆ ಹಲವಾರು ಲಾಭಗಳಿವೆ

ಕನ್ಯಾ

ಕನ್ಯಾ

ಸ್ವಭಾವತಃ ಪ್ರಾಮಾಣಿಕ ವ್ಯಕ್ತಿಗಳಾದ ಇವರು ಸಂಬಂಧಗಳ ಬಗ್ಗೆ ಹಾಗೂ ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವರು. ಇವರು ನಿರಂತರವಾಗಿ ಕಷ್ಟ ಹಾಗೂ ಸಂಪತ್ತನ್ನು ಕಳೆದುಕೊಳ್ಳುತ್ತಾ ಬಂದಿದ್ದರೆ ಈ ದೀಪಾವಳಿಯಂದು ಸರಿಪಡಿಸಿಕೊಳ್ಳಬಹುದು. ದೇವರ ಮನೆಯನ್ನು ತಿಳಿ ಹಸಿರು ಅಥವಾ ಬಿಳಿ ಬಣ್ಣದಿಂದ ಸಜ್ಜುಗೊಳಿಸಿ. ಪೂಜೆಗೆ ರೇಷ್ಮೆ ಬಟ್ಟೆಯನ್ನು ಇಡಿ. ಲಕ್ಷ್ಮಿ ದೇವಸ್ಥಾನಕ್ಕೆ ಎರಡು ಕಮಲಗಟ್ಟ ಹಾರವನ್ನು ಪೂಜೆಗೆ ನೀಡಿ. ಇದರಿಂದ ಸಂಪತ್ತು ವೃದ್ಧಿಯಾಗುವುದು. ಋಣಭಾರದಿಂದ ಬಳಲುತ್ತಿದ್ದರೆ ಮೂರುದಿನಗಳ ಕಾಲ ಸಿಹಿ ಆಹಾರವನ್ನು ಕಾಗೆಗೆ ನೀಡಿ.

ತುಲಾ

ತುಲಾ

ಆಕರ್ಷಕ ಮತ್ತು ಭಾವನಾತ್ಮಕ ವ್ಯಕ್ತಿಗಳು ಇವರು. ನ್ಯಾಯಕ್ಕೆ ಹಾಗೂ ಸಮತೋಲನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಜೀವನದಲ್ಲಿ ಯಶಸ್ಸನ್ನು ಬಯಸುವ ಇವರು ಸಾಕಷ್ಟು ಶ್ರಮವನ್ನು ವಹಿಸುವರು.

ಇವರು ಈ ದೀಪಾವಳಿಯಲ್ಲಿ ದೇವರ ಆರಾಧನೆ ಸ್ಥಳವನ್ನು ಹಸಿರು ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಬ್ಬದ ದಿನ ಮುಂಜಾನೆಯೇ ದೇವಸ್ಥಾನಕ್ಕೆ ತೆರಳಿ ತೆಂಗಿನಕಾಯಿ ನೀಡಬೇಕು. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದು. ಋಣಭಾರದಲ್ಲಿ ಸಿಲುಕಿಕೊಂಡಿದ್ದರೆ ದೀಪಾವಳಿ ಹಬ್ಬದ ದಿನ ರಾತ್ರಿ ಲಕ್ಷ್ಮಿ ವಿಗ್ರಹದ ಹತ್ತಿರ ಕಮಲದ ಹೂವನ್ನು ಅರ್ಪಿಸಿ. ಒಂಬತ್ತು ಕನ್ಯೆಯರಿಗೆ ಸಿಹಿ ತಿಂಡಿಯನ್ನು ಅಥವಾ ಆಹಾರವನ್ನು ನೀಡಿ. ಶ್ರೀಮಂತಿಕೆ ಹೆಚ್ಚುವುದು.

ವೃಶ್ಚಿಕ

ವೃಶ್ಚಿಕ

ಇವರು ಜೀವನದ ಆರಮಭಿಕ ಹಂತದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. 28ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಉತ್ತುಂಗಕ್ಕೆ ಏರುತ್ತಾಹೋಗುವರು. ಈ ರಾಶಿಯವರು ಕಷ್ಟ ಹಾಗೂ ನಷ್ಟವನ್ನು ಅನುಭವಿಸುತ್ತಿದ್ದರೆ ಈ ದೀಪಾವಳಿಯಂದು ಒಂದಿಷ್ಟು ಬದಲಾವಣೆಯನ್ನು ತಂದುಕೊಳ್ಳಬೇಕು. ಪೂಜಾ ಸ್ಥಳವನ್ನು ಬಿಳಿ ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಿ. ಸಮುದ್ರ ಅಥವಾ ನದಿಯ ಸಮೀಪ ಪೂಜೆ ಗೈಯುವುದು ಯಶ್ಸನ್ನು ತಂದುಕೊಡುವುದು. ಪ್ರಗತಿಯನ್ನು ಪಡೆಯಲು ಗುರು ಮಂತ್ರವನ್ನು ಪಠಿಸಬೇಕು. ನೈಜ ಯೋಗಕ್ಷೇಮವನ್ನು ಬಯಸುತ್ತೀರಾ ಎಂದಾದರೆ ಹಣೆಯ ಮೇಲೆ ಹಳದಿ, ಚಂದನ ಅಥವಾ ಗುಲಾಬ್ ಜಲಮಿಶ್ರಣವನ್ನು ಅನ್ವಯಿಸಲು ಮರೆಯದಿರಿ.

Most Read: ಸಣ್ಣ-ಪುಟ್ಟ ವಿಷಯಕ್ಕೆ ಅಳುವಂತಹ ವ್ಯಕ್ತಿಗಳಲ್ಲಿರುವ ಐದು ಗುಣಗಳು!

ಧನು

ಧನು

ಈ ರಾಶಿಯವರಲ್ಲಿ ದೇವಗುರು ಬ್ರಹಸ್ಪತಿಯಂತೆ ಎಲ್ಲಾ ಗುಣಗಳು ಇರುತ್ತವೆ ಎನ್ನಬಹುದು. ಬಹಿರ್ಮುಖಿಯವರಾದ ಇವರು ಇತರರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಇವರು ಸಮೃದ್ಧಿ ಹಾಗೂ ಯಶಸ್ಸನ್ನು ಬಯಸುವುದಾದರೆ ಪೂಜೆಯ ಕೊಠಡಿಯನ್ನು ತಿಳಿ ನೀಲಿಯ ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಿರಂತರ ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿದ್ದರೆ ಅಶ್ವತ್ತ್ಥ ಗಿಡವನ್ನು ಪಡೆದು ನೆಡಬೇಕು. ವೀಳ್ಯದೆಲೆಯ ಮೇಲೆ ಶ್ರೀಂಗ್ ಮಂತ್ರವನ್ನು ಬರೆದು ಒಂದೆಡೆ ಇಟ್ಟು ಬಳಿಕ ಪ್ರಾಣಿಗಳಿಗೆ ಆಹಾರವನ್ನಾಗಿ ನೀಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಸಮೃದ್ಧಿಯನ್ನು ಕಲ್ಪಿಸಿಕೊಡುವಳು.

ಮಕರ

ಮಕರ

ಇವರು ಅತ್ಯಂತ ಬುದ್ಧಿ ಜೀವಿಗಳು. ತಾಳ್ಮೆಯಿಂದ ಇರುವ ಇವರು ಕಷ್ಟ ಪಟ್ಟು ಕೆಲಸ ನಿರ್ವಹಿಸುವರು. ಇವರು ಶ್ರಮಕ್ಕೆ ತಕ್ಕಂತಹ ಪ್ರತಿಫಲ ಹಾಗೂ ಹಣಕಾಸಿನ ಲಾಭವನ್ನು ಪಡೆಯಲು ದೀಪಾವಳಿ ಹಬ್ಬಕ್ಕೆ ಕೆಲವು ಬದಲಾವಣೆಯನ್ನು ಅನುಸರಿಸಬೇಕು. ಇವರು ಪೂಜೆ ಮಾಡುವ ಸ್ಥಳ/ಕೊಠಡಿಯು ಹಸಿರು ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಪ್ರಾರ್ಥನೆಯನ್ನು ಶಾಂತವಾದ ಸ್ಥಳದಲ್ಲಿ ಸಲ್ಲಿಸಬೇಕು. ಕುಟುಂಬದ ಕಷ್ಟ ನಷ್ಟಗಳ ನಿವಾರಣೆಗೆ ಅಶ್ವತ್ತ್ಥ ಎಲೆಯ ತೋರಣವನ್ನು ಮನೆಯ ಬಾಗಿಲಿಗೆ ಹಾಕಬೇಕು. ಆರ್ಥಿಕ ಅಸ್ಥಿರತೆಯನ್ನು ನಿವಾರಿಸಲು ದೀರ್ಘ ಸಮಯಗಳ ಕಾಲ ನೆಲದ ಮೇಲೆ ನಿದ್ರಿಸಿ. ಈ ಸಮಸ್ಯೆಯು ಸುಲಭವಾಗಿ ಬಗೆಹರಿಯುವುದು.

ಕುಂಭ

ಕುಂಭ

ಅಂತರ್ಮುಖಿಗಳಾದ ಇವರು ಹಠಮಾರಿ ಸ್ವಭಾವದವರು. ಸ್ವತಂತ್ರರಾಗಿರಲು ಬಯಸುವ ಇವರು ಅಪೂರ್ಣತೆಯ ವಿಷಯಗಳನ್ನು ದ್ವೇಷಿಸುವರು. ಭಾವನಾತ್ಮಕ ವಿಚಾರದಿಂದ ಬಂಧನಕ್ಕೆ ಒಳಗಾಗಲು ಬಯಸದ ವ್ಯಕ್ತಿಗಳು ಎನ್ನಬಹುದು. ಇವರು ಜೀವನದಲ್ಲಿ ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯಲು ದೇವರ ಮನೆಯನ್ನು ಬಿಳಿ ಅಥವಾ ತಿಳಿ ಹಸಿರು ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ವ್ಯಾಪಾರ ಹಾಗೂ ಉದ್ಯೋಗದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೆ ಆಲದ ಮರದ ಬೇರನ್ನು ಬಿಳಿಯ ದಾರದಲ್ಲಿ ಸುತ್ತಿ ಮನೆಯ ಮುಖ್ಯದ್ವಾರದ ಬಳಿ ಇಡಬೇಕು. ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆಯನ್ನು ರೀತಿ-ನೀತಿಯ ಅನುಸಾರ ಕೈಗೊಳ್ಳುವುದರ ಮೂಲಕ ರಾತ್ರಿ ಜಾಗರಣೆಯನ್ನು ಮಾಡಿ. ಉತ್ತಮ ಭವಿಷ್ಯ ನಿಮ್ಮದಾಗುವುದು.

ಮೀನ

ಮೀನ

ಸಂವೇದನಾ ಶೀಲರಾದ ಇವರು ತಾಳ್ಮೆ, ಕಾಳಜಿ ಮತ್ತು ಪ್ರೀತಿಯಿಂದ ಜೀವನ ನಡೆಸುತ್ತಾರೆ. ಇದರಿಂದ ಜನರು ಇವರಮೇಲಿನ ದ್ವೇಷವನ್ನು ಮರೆಯುತ್ತಾರೆ. ಹೆಚ್ಚು ಸ್ನೇಹದಿಂದ ಇರುವ ಇವರು ಜಾಣರು ಹೌದು. ಜೀವನದಲ್ಲಿ ಸಾಕಷ್ಟು ಯಶಸ್ಸು ಹಾಗೂ ಸಮೃದ್ಧಿ ಹೊಂದಲು ದೀಪಾವಳಿ ಹಬ್ಬದಿಂದ ಕೆಲವು ಬದಲಾವಣೆಯನ್ನು ತಂದುಕೊಳ್ಳಬೇಕು.

ಪೂಜೆಯ ಕೋಣೆಗೆ ಬಿಳಿ ಅಥವಾ ಕೆಂಪು ಬಣ್ಣವನ್ನು ಬಳಿಯಿರಿ. ಶ್ರೀಮಂತಿಕೆ ಪಡೆಯಲು ಒಂದು ಮಂಗಳವಾರ ಹನುಮಾನ್ ಮಂದಿರಕ್ಕೆ ಹೋಗಿ ಪೂಜೆ ಮಾಡಿಸಿ, ಬಳಿಕ ಸ್ಮಶಾನದಲ್ಲಿ ಇರುವವರಿಗೆ ಬಟ್ಟೆಯ ದಾನ ಮಾಡಿ. ಭವಿಷ್ಯದಲ್ಲಿ ಉತ್ತಮ ಸಹಾಯ ದೊರೆಯುವುದು. ಸುದೀರ್ಘ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದರೆ ಪೂಜೆಯ ಕೋಣೆಯಲ್ಲಿ ಗೋಮೂತ್ರ/ಗಂಜಲವನ್ನು ಇರಿಸಿ. ಹೀಗೆ ಮಾಡುವುದರಿಂದ ಅಪಾರ ಸಂಪತ್ತು ಲಭಿಸುವುದು.

Read more about: zodiac signs
English summary

Pray Lakshmi this Diwali-As per your Zodiac Signs

Those under this zodiac sign have all the qualities of Mangal in them.Strong, blunt,ambitious They are not easily satisfied with minimal.Either in terms of education finance or social living.So follow this remedy and make your life happy. The walls of your prayer room should be painted red this will bring in immense progress. To get ancestral property you need to wear a mala made out of kamalgutta tied in red cloth. On the night of Dipawali , use the mix of chandan and kesar to paint a white cloth and spread this cloth in a place where you keep all your wealth, this will increase your wealth and prevent sudden loss of wealth.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more