For Quick Alerts
ALLOW NOTIFICATIONS  
For Daily Alerts

'ಮಲದ ಕಸಿ'ಯ ಹೊಸ ಚಿಕಿತ್ಸೆ! ಅಚ್ಚರಿಯಾದರೂ ನಂಬಲೇಬೇಕು

By Hemanth
|

ಹೃದಯದ ಕಸಿ, ಕಿಡ್ನಿ ಕಸಿ, ಲಿವರ್ ಕಸಿ ಇತ್ಯಾದಿಗಳನ್ನು ನೀವು ಕೇಳಿರಬಹುದು. ಆದರೆ ಮಲದ ಕಸಿ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿರಲು ಸಾಧ್ಯವೇ ಹೇಳಿ? ಆದರೆ ಇಂತಹ ಕೆಲವು ವಿಚಿತ್ರ ಚಿಕಿತ್ಸೆಗಳು ಕೂಡ ಇದೆ.

ಮಲದ ಕಸಿ ಎನ್ನುವ ಪದವನ್ನು ಕೇಳಿಯೇ ನಿಮಗೆ ಅಸಹ್ಯವೆನಿಸಬಹುದು. ಏನಿದು ಮಲದ ಕಸಿ ಎನ್ನುವುದನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಆಗ ನಿಮಗೆ ಈ ಹೊಸ ಚಿಕಿತ್ಸೆ ವಿಧಾನದ ಬಗ್ಗೆ ಕೂಡ ಮಾಹಿತಿ ಸಿಗಲಿದೆ. ಇದನ್ನು ಓದಲು ತಯಾರಾಗಿ. ಜನರು ಈ ಕಸಿ ಮಾಡಿಕೊಳ್ಳಲು ತಾವಾಗಿಯೇ ಮುಂದೆ ಬರುತ್ತಿದ್ದಾರೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲಾಸ್ಟ್ರಿಡಿಯಮ್ ಡಿಫಿಸಿಲ್ ಇನ್ಫೆಕ್ಷನ್ ಎನ್ನುವ ಕಾಯಿಲೆ

ಕ್ಲಾಸ್ಟ್ರಿಡಿಯಮ್ ಡಿಫಿಸಿಲ್ ಇನ್ಫೆಕ್ಷನ್ ಎನ್ನುವ ಕಾಯಿಲೆ

ಕ್ಲಾಸ್ಟ್ರಿಡಿಯಮ್ ಡಿಫಿಸಿಲ್ ಇನ್ಫೆಕ್ಷನ್ ಎನ್ನುವು ಕರುಳಿನ ಉರಿಯೂತ ಕಾಯಿಲೆ(ಐಬಿಡಿ)ಯ ಪರಿಸ್ಥಿತಿಯಾಗಿದೆ. ಇದರಿಂದ ದೀರ್ಘಕಾಲದ ಉರಿಯೂತ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಅಲ್ಸರ್ ಉಂಟಾಗುವುದು. ಇದು ದೊಡ್ಡಕರುಳಿನ ತುಂಬಾ ಒಳಗಿನ ಪದರ ಮತ್ತು ಗುದನಾಳಕ್ಕೆ ಪರಿಣಾಮ ಬೀರುವುದು. ಇದರಿಂದ ಗುದನಾಳದಲ್ಲಿ ರಕ್ತಸ್ರಾವ, ಭೇದಿ ಮತ್ತು ಹೊಟ್ಟೆಯಲ್ಲಿ ಕಿರಿಕಿರಿ ಕಾಣಿಸಬಹುದು.

Most Read: ಅಕ್ಟೋಬರ್ 8 ರಿಂದ 14ರ ವರೆಗಿನ ವಾರ ಭವಿಷ್ಯ

ಮೊದಲ ಕಸಿ ಮಾಡಿಸಿದಾಗ ಮಹಿಳೆ

ಮೊದಲ ಕಸಿ ಮಾಡಿಸಿದಾಗ ಮಹಿಳೆ

ವರದಿಗಳ ಪ್ರಕಾರ ಈ ಕಸಿ ಮಾಡಿಸಿಕೊಂಡವರು 80ರ ಹರೆಯದ ಮಹಿಳೆ. ಆಕೆಯು ಹೊಟ್ಟಯ ಸೋಂಕು ಕ್ಲಾಸ್ಟ್ರಿಡಿಯಮ್ ಡಿಫಿಸಿಲ್ ಇನ್ಫೆಕ್ಷನ್ ನಿಂದ ತೀವ್ರವಾಗಿ ಬಳಲುತ್ತಿದ್ದಳು. ರೋಗಿಯ ನರ್ಸ್ ನ ಪತಿಯಿಂದ ಪಡೆದ ಮಲದ ಸ್ಯಾಂಪಲ್ ನ್ನು ವೈದ್ಯರು ಪಡೆದರು ಮತ್ತು ಅದರಿಂದ ಮಲದ ಶೇಕ್ ಮಾಡಿದರು. ಇದನ್ನು ಕ್ಯಾಲಿಫೋರ್ನಿಯಾದ ಮೊದಲ ಮಲದ ಕಸಿ ಎಂದು ಕರೆಯಲಾಯಿತು. ಇದನ್ನು ಎಫ್ ಎಂಟಿ ಎಂದೂ ಕರೆಯಲಾಗುತ್ತದೆ. ಕಸಿಯು ಯಶಸ್ವಿಯಾಗಿದೆ ಮತ್ತು ಮಹಿಳೆಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ.

ಕಸಿ ಹೇಗೆ ಮಾಡಲಾಯಿತು?

ಕಸಿ ಹೇಗೆ ಮಾಡಲಾಯಿತು?

ಕಸಿಗೆ ಸುರಕ್ಷಿತವೆಂದು ಕಂಡುಬರುವ ಆರೋಗ್ಯವಂತ ವ್ಯಕ್ತಿಗಳಿಂದ ಮಲದ ಸ್ಯಾಂಪಲ್ ನ್ನು ಆಸ್ಪತ್ರೆಯು ಪಡೆಯುತ್ತದೆ. ಇದರ ಬಳಿಕ ಮಲವನ್ನು ಸಂಸ್ಕರಿಸಿ ಅದನ್ನು ಬಳಸಲು ಯೋಗ್ಯವನ್ನಾಗಿಸಲಾಗುವುದು. ಕೊಲೊನೊಸ್ಕೊಪಿ, ಎಂಟೊಸ್ಕೊಪಿ ಅಥವಾ ಎನೆಮಾ ಮೂಲಕ ಮಲವನ್ನು ಕಸಿ ಮಾಡಲಾಗುವುದು.

ಅಮೆರಿಕಾದಲ್ಲಿ ಈ ಚಿಕಿತ್ಸೆ ಜನಪ್ರಿಯವಾಗುತ್ತಿದೆ

ಅಮೆರಿಕಾದಲ್ಲಿ ಈ ಚಿಕಿತ್ಸೆ ಜನಪ್ರಿಯವಾಗುತ್ತಿದೆ

ಮಲದ ಕಸಿ ಮಾಡುವಂತಹ ಆಸ್ಪತ್ರೆಗೆ ಎರಡು ಗಂಟೆಯಲ್ಲಿ ತಲುಪಬಹುದಾದ ವ್ಯಾಪ್ತಿಯಲ್ಲಿ ಶೇ. 98ರಷ್ಟು ಅಮೆರಿಕಾದ ಜನಸಂಖ್ಯೆಯು ವಾಸಿಸುತ್ತಿದೆ ಎಂದು ಸಂಶೋಧನ ಸಮೀಕ್ಷೆಗಳು ಹೇಳಿವೆ. ಮಲವನ್ನು ಶೀತಲೀಕರಣಗೊಳಿಸಿ ಒಂದು ವಾರದ ಅವಧಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ.

Most Read: ಕೂದಲಿಗೆ ರೆಡ್ ವೈನ್ ಬಳಸಿ-ಇದರಿಂದ ಸಾಕಷ್ಟು ಪ್ರಯೋಜನಗಳಿವೆ

ಮಲದ ಕಸಿಯು ಹೊಸ ಟ್ರೆಂಡ್ ಆಗುತ್ತಿದೆ

ಮಲದ ಕಸಿಯು ಹೊಸ ಟ್ರೆಂಡ್ ಆಗುತ್ತಿದೆ

ಜನರು ಈ ಚಿಕಿತ್ಸೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಹಿನ್ನೆಲೆಯಲ್ಲಿ ಮಲದ ಕಸಿ ಚಿಕಿತ್ಸೆಯು ಟ್ರೆಂಡ್ ಆಗುತ್ತಿದೆ. ಈ ಚಿಕಿತ್ಸೆಯು ಐಬಿಡಿಯಿಂದ ಆಟೋಇಮ್ಯೂನ್ ಕಾಯಿಲೆಗಳಿಗೆ ಬಳಸಬಹುದು ಎಂದು ವೈದ್ಯರು ಹೇಳಿದ್ದಾರೆ. ಈ ಹೊಸ ಚಿಕಿತ್ಸೆ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅನಿಸಿಕೆಯನ್ನು ಮನದಲ್ಲೇ ಇರಲು ಬಿಡಬೇಡಿ. ಬರೆದು ಕಮೆಂಟ್ ಬಾಕ್ಸ್ ಗೆ ಹಾಕಿ.

English summary

Poop Transplant Is The New Treatment!

In a research, it has been found out that faecal transplant wipes out the symptoms of ulcerative colitis where the condition is inflammatory bowel disease that causes ulcers in intestines. This condition can lead to abdominal discomfort, rectal bleeding and diarrhoea as well. With poop transplant, doctors believe that it can give hope to millions who are suffering from the painful condition.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more