For Quick Alerts
ALLOW NOTIFICATIONS  
For Daily Alerts

ಇದರಲ್ಲಿ ಯಾವುದಾದರೂ ಒಂದು ರೂನ್ ಆಯ್ಕೆ ಮಾಡಿ-ಇದರ ಹಿಂದಿನ ರಹಸ್ಯ ನಾವು ಹೇಳುತ್ತೇವೆ ಕೇಳಿ!

|

ನಾವು ಭೂಮಿ ಮೇಲೆ ಹೇಗೆ ಇದ್ದರೂ ಕೆಲವೊಂದು ಅತೀಂದ್ರಿಯ ಶಕ್ತಿಗಳು ನಮ್ಮ ಕಾರ್ಯದಲ್ಲಿ ನೆರವಾಗುವವು. ಇದು ನಮ್ಮ ಅರಿವಿಗೆ ಬಾರದೆ ಇದ್ದರೂ ಅದರ ಪರಿಣಾಮ ನಮ್ಮ ಮೇಲೆ ಆಗುವುದು. ಇದನ್ನು ತಿಳಿಯುವುದು ನಮಗೆ ತುಂಬಾ ಕಷ್ಟವಾಗಬಹುದು. ಯಾಕೆಂದರೆ ನಾವು ಸಾಮಾನ್ಯ ಮಾನವರು. ಆದರೆ ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿಕೊಂಡವರಿಗೆ ಇದನ್ನು ಅರಿಯುವುದು ಸುಲಭ. ಕೆಲವೊಂದು ಗೌಪ್ಯ ವಿಚಾರಗಳು ನಮ್ಮೊಂದಿಗೆ ದೈವಿ ಶಕ್ತಿಯು ಹಂಚಿಕೊಳ್ಳುವುದು.

ನಾವು ಈ ಲೇಖನದಲ್ಲಿ ನಿಮಗೆ ರೂನ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಸ್ವರ್ಗದ ರಹಸ್ಯವೆಂದು ಕರೆಯಲಾಗುತ್ತದೆ. ರೂನ್ ನಿಂದ ನೀವು ಜೀವನದ ಕೆಲವೊಂದು ಗೌಪ್ಯ ವಿಚಾರಗಳನ್ನು ತಿಳಿಯಬಹುದು. ರೂನ್ ಎಂದರೇನು ಎಂದು ನಿಮಗೆ ಅಚ್ಚರಿಯಾಗುತ್ತಿದೆಯಾ? ಇದು ತುಂಬಾ ಪುರಾತನ ಅಕ್ಷರಗಳ ವ್ಯವಸ್ಥೆ. ಸೆಲ್ಟಿಕ್ಸ್, ಸ್ಕ್ಯಾಂಡಿನೇವಿಯನ್ಸ್ ಮತ್ತು ಜರ್ಮನ್ನರು ರೂಪಿಸಿದರು. ಅದೃಷ್ಟದ ರೂನ್ ನಿಂದ ನಿಮ್ಮ ಜೀವನದ ಬಗ್ಗೆ ತಿಳಿಯಲು ಮುಂದೆ ಓದುತ್ತಾ ಸಾಗಿ...

ಉರುಜ್

ಉರುಜ್

ಈ ರೂನ್ ನಿಮ್ಮ ಆಯ್ಕೆಯಾಗಿದ್ದಲ್ಲಿ ಆಗ ಇದು ಗುಣಮಟ್ಟ ಮತ್ತು ನಿಯಂತ್ರಣದ ಸಂಕೇತವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಬೆಳೆಯಿರಿ ಮತ್ತು ಜವಾಬ್ದಾರಿ ತೆಗೆದುಕೊಳ್ಳಿ ಎಂದು ಇದು ಸೂಚಿಸುವುದು. ಈ ರೂನ್ ಫಲಪ್ರದತೆ, ಆವಿಷ್ಕಾರದಲ್ಲಿ ವಿಸ್ತರಣೆ ಅಥವಾ ಲೈಂಗಿಕ ಉತ್ಸಾಹವು ಹೆಚ್ಚಾಗುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ ನೀವು ತುಂಬಾ ಕ್ರಿಯಾತ್ಮಕ ಕೆಲಸ, ಸಂಬಂಧ ಅಥವಾ ಕುಟುಂಬವನ್ನು ಆರಂಭಿಸಲಿದ್ದೀರಿ.

ಅನ್ಸುಜ್

ಅನ್ಸುಜ್

ಈ ರೂನ್ ದೈವಿಕ ಉಸಿರಿನ ಸಂಕೇತವಾಗಿದ್ದು, ನೀವು ಈ ರೂನ್ ನ್ನು ಆಯ್ಕೆ ಮಾಡಿದರೆ ಆಗ ನಿಮ್ಮ ಗುಣವು ತುಂಬಾ ಉಪಯೋಗಕಾರಿ ಮತ್ತು ವಿಶ್ವಾಸಾರ್ಹವಾಗಿರುವುದು. ಈ ರೂನ್ ಸಾಮಾನ್ಯವಾಗಿ ಭವಿಷ್ಯದಲ್ಲಿ ಉದ್ಯಮವಾಗಿ ತಿದ್ದುಪಡಿ ಭಾಗವಾಗಿ ಅಥವಾ ಮಕ್ಕಳೊಂದಿಗೆ ದ್ವಿಪಕ್ಷೀಯವಾಗಿ ಬೆಳೆಯುವುದನ್ನು ತೋರಿಸುವುದು.

ಗೆಬೊ

ಗೆಬೊ

ಈ ರೂನ್ ಆಶೀರ್ವಾದದ ಸಂಕೇತವಾಗಿದೆ ಮತ್ತು ಈ ರೂನ್ ನ್ನು ನೀವು ಆಯ್ಕೆ ಮಾಡಿದರೆ, ಆಗ ನಿಮಗೆ ಕಾಣದೆ ಇರುವಂತಹ ಅದೃಷ್ಟವು ನಿಮ್ಮ ಕಡೆಗೆ ಬರುತ್ತಿದೆ ಎಂದು ಅರ್ಥೈಸಿಕೊಳ್ಳಬೇಕು. ಇದು ಧನಾತ್ಮಕ ವಿಚಾರವಾಗಿದೆ. ಪ್ರೀತಿ ಹಾಗೂ ಸಂಪರ್ಕದಲ್ಲಿ ಇದು ಒಳ್ಳೆಯದು. ಇದು ಶ್ರೀಮಂತಿಕೆಯ ಧನಾತ್ಮಕ ಸಂಕೇತ ಮತ್ತು ಇದು ಭೂಮಿಯ ಉದಾರತೆಯನ್ನು ಪ್ರದರ್ಶಿಸುವುದು.

ತುರಿಸಾಜ್

ತುರಿಸಾಜ್

ಈ ರೂನ್ ಹೋರಾಟ ಮತ್ತು ಕಠಿಣ ಪರಿಶ್ರಮದ ಸಂಕೇತ. ಇದು ನಿಮ್ಮ ಆಯ್ಕೆಯಾಗಿದ್ದರೆ ಆಗ ಅವಕಾಶವು ನಿಮ್ಮೊಳಗೆ ಇರುವುದು ಮತ್ತು ಯಾವುದೇ ರೀತಿಯ ಒತ್ತಡದ ಪರಿಸ್ಥಿತಿ ಮತ್ತು ಸಂದರ್ಭವನ್ನು ಎದುರಿಸಬಹುದು ಎಂದು ಹೇಳುತ್ತದೆ. ಈ ರೂನ್ ನಿಮ್ಮ ರೂಢಿಗತ ಭಾವನೆಗಳೊಂದಿಗೆ ವ್ಯವಹರಿಸಲು ನಿರ್ದಿಷ್ಟವಾದ ಅಂತಿಮ ಗುರಿಯೊಂದಿಗೆ ವಿಚಾರ ಮಾಡುವ ಸಾಧ್ಯತೆಯಿದೆ ಎಂದು ತೋರಿಸುತ್ತದೆ.

ರೈಡ್ಹೊ

ರೈಡ್ಹೊ

ಈ ರೂನ್ ಒಂದು ಆವರ್ತನ ಅಥವಾ ಪ್ರವಾಸದ ಸಂಕೇತವಾಗಿದೆ. ಈ ರೂನ್ ನ್ನು ನೀವು ಆಯ್ಕೆ ಮಾಡಿದ್ದೇ ಆದರೆ ಆಗ ಜೀವನದ ಗಮನಾರ್ಹ ಆವರ್ತನದಲ್ಲಿ ಇದ್ದೀರಿ ಎಂದು ಹೇಳಬಹುದು. ನೀವು ಕೆಲವೊಂದು ಸ್ಥಳಗಳಿಗೆ ಪ್ರಯಾಣಿಸಲು ತಯಾರಾಗಿರಬಹುದು. ನೀವು ಹೊರಗಡೆ ಹೋಗುವಾಗ ಅಥವಾ ವಿದೇಶಕ್ಕೆ ತೆರಳುವಾಗ ಭದ್ರತೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಈ ರೂನ್ ಹೇಳುತ್ತದೆ.

ಹಗಾಲಾಜ್

ಹಗಾಲಾಜ್

ಈ ರೂನ್ ಬಿರುಗಾಳಿ ಅಥವಾ ಚಂಡಮಾರುತವನ್ನು ಸೂಚಿಸುವುದು. ಇದು ನಿಮ್ಮ ಆಯ್ಕೆ ಎಂದಾಗಿದ್ದರೆ ಆಗ ನಿಮ್ಮ ಜೀವನದಲ್ಲಿ ಕೆಲವೊಂದು ಧ್ವಂಸಕಾರಿ ಬದಲಾವಣೆಗಳು ಬರುತ್ತಿದೆ ಎನ್ನುವುದರ ಸೂಚನೆಯಾಗಿದೆ. ನೀವು ಮಾಡುವಂತಹ ಯಾವುದೇ ಕೆಲಸವಾದರೂ ಅದರಿಂದ ನಿಮಗೆ ಧನಾತ್ಮಕವಾಗಿರುವ ಫಲಿತಾಂಶ ಸಿಗದು. ಇದರ ಬದಲಿಗೆ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಬಂದರೆ ಅದರಿಂದ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡುಬರುವುದು. ಸಮೃದ್ಧಿ ಹಾಗೂ ಗಮನಾರ್ಹ ಪ್ರಶಾಂತತೆಯು ಸಿಗುವುದು.

English summary

Pick A Rune And Know Its Message

There are some easy ways in which you can find out about the hidden message that the universe has been trying to share with you. If you have been wondering how, then choose a rune which is a "whisper" or a "heavenly mystery." Choosing it helps you learn about the hidden message of your life. For those who are wondering what 'Runes' are then it is an old system of alphabets or letters that are believed to be devised by the Celtics, Scandinavians, and the Germans in 98AD.
Story first published: Wednesday, November 14, 2018, 17:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more