Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಅಚ್ಚರಿ ಲೋಕ: ತಮ್ಮದೇ ಸಾವನ್ನು ಚಿತ್ರೀಕರಿಸಿರುವವರು!!
ಹುಟ್ಟು ಅನಿಶ್ಚಿತ ಮತ್ತು ಸಾವು ನಿಶ್ಚಿತ ಎನ್ನಲಾಗುತ್ತದೆ. ಕೆಲವರು ಸಾವಿನೆಡೆಗೆ ಸಾಗಿದಂತೆ ಹೆಚ್ಚು ಖುಷಿಯಿಂದ ಇರುವುದನ್ನು ಕಾಣುತ್ತೇವೆ. ಇಹಲೋಕದ ಮೋಹವನ್ನು ತ್ಯಜಿಸಿರುವವರಿಗೆ ಮಾತ್ರ ಹೀಗೆ ಇರಲು ಸಾಧ್ಯ. ಕೆಲವೊಂದು ಜನರು ಸಾಯುತ್ತಿರುವ ದೃಶ್ಯಗಳನ್ನು ಇಂದಿನ ಆಧುನಿಕ ಯುಗದಲ್ಲಿ ಸೆರೆ ಹಿಡಿಯುವುದು ಅಷ್ಟೊಂದು ಕಷ್ಟವೇನಲ್ಲ. ಆದರೆ ಕೆಲವು ಜನರು ತಮ್ಮ ಸಾವನ್ನು ತಾವೇ ರೆಕಾರ್ಡ್ ಮಾಡಿಕೊಂಡಿರುವುದು ಮಾತ್ರ ತುಂಬಾ ಅಚ್ಚರಿಯ ವಿಚಾರವಾಗಿದೆ. ಹಲವಾರು ಮಂದಿ ಇಂತಹ ಕೆಲಸ ಮಾಡಿದ್ದಾರೆ. ಸೈನೇಡ್ ಸೇವನೆಯಿಂದ ಹಿಡಿದು ಸಾಯಲು ಉಪವಾಸ ಮಾಡುವುದು ಇದರಲ್ಲಿ ಒಳಗೊಂಡಿದೆ. ಇದು ನಿಮಗೆ ಆಘಾತ ನೀಡಬಹುದು. ತಮ್ಮ ಸಾವಿನ ಬಗ್ಗೆ ತಾವೇ ರೆಕಾರ್ಡ್ ಮಾಡಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯುವ....

ಕಾರ್ಲ್ ಪ್ಯಾಟಿಸನ್ ಸ್ಮಿತ್ ಸಾವು
ಕಾರ್ಲ್ ಪ್ಯಾಟಿಸನ್ ಸ್ಮಿತ್ ಅವರು ವೃತ್ತಿಯಲ್ಲಿ ಸರೀಸೃಪ ಶಾಸ್ತ್ರಜ್ಞರಾಗಿದ್ದರು. ಹಾವೊಂದು ತನಗೆ ಕಚ್ಚಿದ ಬಳಿಕ ದೇಹದಲ್ಲಿ ನಿಧಾನವಾಗಿ ವಿಷ ಹೇಗೆ ಪಸರಿಸಿತು ಮತ್ತು ಸಾವು ಹತ್ತಿರ ಹೇಗೆ ಬಂತು ಎಂದು ಬರೆದಿದ್ದಾರೆ. ಹಾವಿನ ಬಗ್ಗೆ ಅಧ್ಯಯನ ಮಾಡಲು ಹಾವನ್ನು ಹಿಡಿದಾಗ ಅದು ಕಚ್ಚಿದೆ. ಇದರ ಬಳಿಕ ತನ್ನ ಅನುಭವ ಮತ್ತು ಆಹಾರ ಸೇವನೆ ಬಗ್ಗೆ ಅವರು ಬರೆದಿದ್ದಾರೆ.
ಹಾವು ಕಚ್ಚಿದ ದಿನ ರಕ್ತಸ್ರಾವದೊಂದಿಗೆ ತುಂಬಾ ಚಳಿ ಹಾಗೂ ನಡುಕವಾಗುತ್ತಲಿತ್ತು. . ಮರುದಿನ ಅವರಿಗೆ ರಕ್ತಸ್ರಾವವು ಅತಿಯಾಗಿ ಆಯಿತು ಮತ್ತು ಮೂತ್ರದ ಬದಲು ರಕ್ತವಿಸರ್ಜನೆಯಾಯಿತು. ಇದರ ಬಳಿಕ ಬಾಯಿ, ಮೂಗು ಮತ್ತು ಗುದನಾಳದಲ್ಲೂ ರಕ್ತಸ್ರಾವವಾಯಿತು. ಅವರು ಚಿಕಿತ್ಸೆ ವೇಳೆ ಮೃತಪಟ್ಟರು ಮತ್ತು ಮರಣೋತ್ತರ ವರದಿಯ ಪ್ರಕಾರ ದೇಹದೊಳಗಿನ ಅತಿಯಾದ ರಕ್ತಸ್ರಾವವದಿಂದಾಗಿ ಅವರು ಮೃತರಾದರು.

ಪ್ರಸಾದ್ ಸಾವು
ಪ್ರಸಾದ್ ಎಂಬ ವ್ಯಕ್ತಿಯೊಬ್ಬ ಸೈನೇಡ್ ಬಗ್ಗೆ ವಿವರ ನೀಡುವ ಮೊದಲು ವೈದ್ಯಕೀಯ ಲೋಕಕ್ಕೆ ಅದರ ರುಚಿ ಹೇಗಿರುತ್ತದೆ ಎಂದು ತಿಳಿದಿರಲಿಲ್ಲ. ಒಂದು ಕಪ್ ಸೈನೇಡ್ ಕುಡಿದು ಪ್ರಸಾದ್ ಸಾವನ್ನಪ್ಪಿದ. ಆತ ತನ್ನ ಸಾವಿನ ಬಗ್ಗೆ ಬರಹವನ್ನು ಪೂರ್ತಿಗೊಳಿಸುವ ಮೊದಲೇ ಸಾವನ್ನಪ್ಪಿದ. ಆತನ ಬರಹದಲ್ಲಿ ಹೀಗಿತ್ತು. ವೈದ್ಯರೇ, ಇದು ಪೊಟಾಶಿಯಂ ಸೈನೇಡ್. ನಾನು ಇದರ ರುಚಿ ನೋಡಿದೆ. ಇದು ನಿಧಾನವಾಗಿ ಬರುವುದು ಮತ್ತು ಸುಡಲು ಆರಂಭವಾಗುವುದು, ಸಂಪೂರ್ಣ ನಾಲಗೆ ಸುಡುವುದು ಮತ್ತು ತುಂಬಾ ಕಠಿಣವಾಗುವುದು. ಇದು ತುಂಬಾ ಅತಿಕಾರದ ರುಚಿ ಹೊಂದಿದೆ. ನಾನೊಂದು ಕಥೆಯಲ್ಲಿ ಓದಿದ್ದೆ. ಒಬ್ಬ ವ್ಯಕ್ತಿಯನ್ನು ಕೊಲ್ಲಲ್ಲು ಪುಸ್ತಕಕ್ಕೆ ಸೈನೇಡ್ ಹಚ್ಚಲಾಗಿತ್ತು. ಆತ ಬೆರಳಿನಿಂದ ಪುಟ ತಿರುಗಿಸಿ, ನಾಲಗೆಗೆ ಇಡುತ್ತಲಿದ್ದ. ಹೀಗೆ ಸೈನೇಡ್ ಗೊತ್ತಿಲ್ಲದೆ ಸೇವಿಸಿ ಸತ್ತ ಮತ್ತು ಇದರ ಬಗ್ಗೆ ಯಾರಿಗೂ ಸಂಶಯವಾಗಲಿಲ್ಲ. ಸೈನೇಡ್ ಬಳಸಿಕೊಂಡು ಹೇಗೆ ಸುಲಭವಾಗಿ ಕೊಲ್ಲಬಹುದು ಎಂದು ನನಗೀಗ ಅರಿವಾಗಿದೆ.

ಅನಾಮಿಕ ಜರ್ಮನಿ ವ್ಯಕ್ತಿ
58ರ ಹರೆಯದ ವ್ಯಕ್ತಿಯೊಬ್ಬನ ಶವವು ಕಾಡಿನ ಮಧ್ಯೆ ಬೇಟೆಗಾರರಿಬ್ಬರಿಗೆ ಸಿಕ್ಕಿದೆ. ಸ್ವಲ್ಪ ದೂರದಲ್ಲೇ ಚಾಪೆ ಕೂಡ ಸಿಕ್ಕಿದೆ. ವ್ಯಕ್ತಿಯು ಸಾಯುವ ಮೊದಲು ಉಪವಾಸ ಮಾಡಿಕೊಂಡಿದ್ದನೆಂದು ಇದು ಹೇಳುತ್ತದೆ. ಆದರೆ ಸಂಪೂರ್ಣ ವಿವರವನ್ನು ಸಾರ್ವಜನಿಕಗೊಳಿಸಿಲ್ಲ. ತನ್ನ ಮಗಳೊಂದಿಗೆ ತುಂಬಾ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಹೀಗೆ ಮಾಡಿಕೊಂಡಿದ್ದಾನೆ ಎಂದು ಆತನಲ್ಲಿದ್ದ ಡೈರಿಗಳು ಹೇಳಿವೆ. ಆತ ನಿರುದ್ಯೋಗಿಯಾಗಿದ್ದ ಮತ್ತು ಕಾಡಿನಲ್ಲಿ ಏನೂ ತಿನ್ನದೆ ಕೇವಲ ನೀರು ಮಾತ್ರ ಸೇವಿಸುತ್ತಿದ್ದ.

ನಾರ ಅಲ್ಮೆಡಾ ಸಾವು
24ರ ಹರೆಯದ ಬ್ರೆಜಿಲಿನ ಬ್ಲಾಗರ್ ಆಗಿದ್ದ ನಾರ ಅಲ್ಮೆಡಾ ಅವರು 2018ರಲ್ಲಿ ಹೊಟ್ಟೆಯ ಕ್ಯಾನ್ಸರ್ ನಿಂದ ಸಾವನ್ನಪ್ಪಿದರು. ಸಾವಿಗೆ ಒಂದು ವರ್ಷಕ್ಕೆ ಮೊದಲು ಕ್ಯಾನ್ಸರ್ ಬಗ್ಗೆ ತಿಳಿದುಬಂತು ಮತ್ತು ಆಕೆ ತನ್ನ ಆರೋಗ್ಯ ಮತ್ತು ಪಡೆಯುತ್ತಿರುವ ಚಿಕಿತ್ಸೆ ಎಲ್ಲವನ್ನು ದಾಖಲಿಸಿಕೊಂಡಿದ್ದಾಳೆ. ಆಕೆ 4.5 ಮಿಲಿಯನ್ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಗಳಿದ್ದಾರೆ ಮತ್ತು ಆಕೆ ತನ್ನ ಭಾವನೆಗಳನ್ನು, ನಿದ್ರೆಯಿಲ್ಲದೆ ಕಳೆದ ರಾತ್ರಿಗಳು ಮತ್ತು ಎದುರಿಸುವ ನೋವು-ಸಂಕಷ್ಟ ಹೀಗೆ ಎಲ್ಲಾ ಫೋಟೊಗಳನ್ನು ಯಾವಾಗಲೂ ಶೇರ್ ಮಾಡಿಕೊಳ್ಳುತ್ತಿದ್ದಳು. ಸಾವಿಗೆ ಒಂದು ತಿಂಗಳು ಮೊದಲು ಆಕೆ ಫೋಟೊವನ್ನು ಶೇರ್ ಮಾಡಿ ಹೀಗೆ ಬರೆದಿದ್ದಳು...ಅಂತ್ಯದಲ್ಲಿ ಎಲ್ಲವೂ ಸರಿಯಾಗಿ ನಾನು ತುಂಬಾ ಬಲಿಷ್ಠವಾಗಿ ಮರಳಲಿದ್ದೇನೆಂದು ನಂಬಿದ್ದೇನೆ. ಬೇರೆ ಜನರಿಗೂ ನೆರವಾಗಲು ಬಯಸಿದ್ದೇನೆ. ದುರಾದೃಷ್ಟದಿಂದ ಇದು ಸಂಭವಿಸಲೇ ಇಲ್ಲ.



Click it and Unblock the Notifications