Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಂಗೈ ನೋಡಿ ನೀವು ಲಾಟರಿ ಗೆಲ್ಲುತ್ತೀರಾ, ಇಲ್ಲವಾ? ಎಂದು ಹೇಳಬಹುದಂತೆ!!
ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದು ಒಂದು ರೀತಿಯ ಚಟವಿದ್ದಂತೆ. ಕೆಲವರು ಹಲವಾರು ವರ್ಷಗಳಿಂದ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಲೇ ಇದ್ದರೂ ಅವರಿಗೆ ಅದೃಷ್ಟ ಮಾತ್ರ ಒಲಿಯುವುದಿಲ್ಲ. ಆದರೆ ಕೆಲವರು ಮೊದಲ ಸಲ ಖರೀದಿ ಮಾಡಿದರೂ ಅವರಿಗೆ ಬಹುಮಾನ ಬಂದಿರುತ್ತದೆ. ಅಂಗೈ ನೋಡಿ ಜ್ಯೋತಿಷಿ ಹೇಳುವಂತಹವರು ನಿಮ್ಮ ಹಸ್ತರೇಖೆಗೆ ಅನುಗುಣವಾಗಿ ನೀವು ಲಾಟರಿ ಗೆಲ್ಲುತ್ತೀರಾ, ಇಲ್ಲವಾ? ಎನ್ನುವುದನ್ನು ಹೇಳುವರು. ನೀವು ಅದೃಷ್ಟವಂತ ವ್ಯಕ್ತಿಯೇ ಎಂದು ಪರೀಕ್ಷಿಸಲು ಮುಂದಾಗಿ...

ಅಂಗೈಯಲ್ಲಿ ಹೆಚ್ಚಿನ ಹಣದ ಗೆರೆಗಳಿದ್ದರೆ...
ಉಂಗುರದ ಬೆರಳು ಮತ್ತು ಕಿರುಬೆರಳಿನ ಮಧ್ಯೆ ಹಣದ ಗೆರೆಯು ಇರುವುದು. ಹಣದ ಗೆರೆಯು ಒಂದಕ್ಕಿಂತ ಹೆಚ್ಚು ಇದ್ದರೆ ಆಗ ಲಾಟರಿ ಗೆಲ್ಲುವ ಅಥವಾ ಜಾಕ್ ಪಾಟ್ ಹೊಡೆಯುವ ಸಂಭವವಿರುವುದು. ಇದನ್ನು ಹೊರತುಪಡಿಸಿ, ನೀವು ಈ ಕೆಲಸದಲ್ಲಿ ಸ್ಥಿರತೆಯಿಂದ ಇದ್ದರೆ ಲಾಟರಿ ಒಲಿಯುವುದು.

ತಲೆಗೆರೆಯು ಮೇಲ್ಮುಖವಾಗಿದ್ದರೆ...
ಹಸ್ತಮುದ್ರಿಕಾ ಶಾಸ್ತ್ರದಲ್ಲಿ ತಲೆಗೆರೆಯು ತುಂಬಾ ಪ್ರಾಮುಖ್ಯತೆ ಪಡೆದಿದೆ. ತಲೆಗೆರೆಯು ಅಂತ್ಯದಲ್ಲಿ ಕವಲೊಡೆದು, ಮೇಲ್ಮುಖವಾಗಿ ಸಾಗಿದರೆ ಇದರರ್ಥ ಒಳ್ಳೆಯ ಅದೃಷ್ಟವಿದೆ ಮತ್ತು ಶ್ರೀಮಂತರಾಗುವ ಲಕ್ಷಣಗಳಿವೆ. ಅರಿವಿಲ್ಲದೆಯೇ ನೀವು ಅದೃಷ್ಟ ಪರೀಕ್ಷೆ ಮಾಡಬಹುದು.

ವಿಧಿಗೆರೆಯು ಮೇಲ್ಮುಖವಾಗಿ ಕವಲೊಡೆದಿರುವುದು
ಕವಲೊಡೆದ ವಿಧಿಗೆರೆಯು ಮೇಲ್ಮುಖವಾಗಿ ಸಾಗಿದಾಗ ನಿಮಗೆ ಹಠಾತ್ ಆಗಿ ಲಾಟರಿಯಲ್ಲಿ ಕೋಟ್ಯಂತರ ರೂ. ಗೆಲ್ಲುವಂತಹ ಸಂಭವವಿದೆ ಎಂದು ಹೇಳಬಹುದು.

ಜೀವನದ ಗೆರೆ ಮತ್ತು ತಲೆಗೆರೆ ಆರಂಭದಲ್ಲಿ ಮೇಲ್ಮುಖವಾದ ಗೆರೆ
ಜೀವನದ ಗೆರೆ ಮತ್ತು ತಲೆಗೆರೆಯ ಆರಂಭದಲ್ಲಿ ಮೇಲ್ಮುಖವಾದ ಗೆರೆಯಿದ್ದರೆ ಆಗ ಆ ವ್ಯಕ್ತಿಯು ಲಾಟರಿ ಗೆಲ್ಲುವ ಸಾಧ್ಯತೆಯು ಹೆಚ್ಚಾಗಿರುವುದು. ಈ ವ್ಯಕ್ತಿಗಳಿಗೆ ಜೀವನದಲ್ಲಿ ಹೆಚ್ಚು ಕಷ್ಟಗಳು ಬರಲ್ಲ.

ಗುರು ಅಥವಾ ಅಪೋಲೊ ಪರ್ವತದಲ್ಲಿ ನಕ್ಷತ್ರ
ಗುರು ಅಥವಾ ಅಪೋಲೊ ಪರ್ವತದಲ್ಲಿ ನಕ್ಷತ್ರ ಕಂಡುಬಂದರೆ ಆಗ ಇದನ್ನು ತುಂಬಾ ಅದೃಷ್ಟವೆಂದು ಪರಿಗಣಿಸಲಾಗುವುದು. ಇಂತಹ ಚಿಹ್ನೆಯಿದ್ದರೆ ಆಗ ನೀವು ಅನಿರೀಕ್ಷಿತವಾಗಿ ಲಾಟರಿ ಗೆಲ್ಲುವ ಅಥವಾ ಜಾಕ್ ಪಾಟ್ ಹೊಡೆಯುವ ಸಾಧ್ಯತೆಯಿರುವುದು.

ಒಳಜ್ಞಾನದ ಗೆರೆ
ಕಿರುಬೆರಳಿನಿಂದ ವಕ್ರವಾಗಿರುವ ಗೆರೆಗಳು ಕೆಳಗಡೆ ಸಾಗುತ್ತಲಿದ್ದರೆ ಆಗ ಇದನ್ನು ಒಳಜ್ಞಾನದ ಗೆರೆ ಎಂದು ಕರೆಯಲಾಗುವುದು. ಈ ಗೆರೆಯು ಅಂಗೈಯಲ್ಲಿದ್ದರೆ ಆಗ ಹಣ ಬರುವುದು. ಅನಿರೀಕ್ಷಿತವಾಗಿ ನಿಮಗೆ ಧನಲಾಭವಾಗಬಹುದು. ಸೂಕ್ಷ್ಮ ಹಾಗೂ ಒಳಜ್ಞಾನದಿಂದ ನೀವು ಹಣ ಪಡೆಯಲು ಅದೃಷ್ಟವಂತರಾಗಿರುವಿರಿ.



Click it and Unblock the Notifications
