Just In
Don't Miss
- News
ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಯಾವ ಪ್ರಾಣಿಗಳು ದಾರಿಗೆ ಅಡ್ಡ ಬಂದರೆ ಶುಭಶಕುನ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ನಂಬಿಕೆಗಳ ಮೇಲೆ ಮನುಷ್ಯನ ಜೀವನ ಕೂಡ ನಿಂತಿದೆ. ಅದು ಮನುಷ್ಯನ ವ್ಯವಹಾರಿಕ ಅಥವಾ ಬೇರೆ ರೀತಿಯ ನಂಬಿಕೆಗಳು ಆಗಿರಬಹುದು. ಜೀವನದಲ್ಲಿ ನಂಬಿಕೆಯಿಲ್ಲದೆ ಇದ್ದರೆ ಏನೂ ಮಾಡಲು ಆಗಲ್ಲ. ಕೆಲವೊಂದು ನಂಬಿಕೆಗಳು ನಮಗೆ ತುಂಬಾ ವಿಚಿತ್ರವೆಂದು ಅನಿಸಿದರೂ ಇದರ ಹಿಂದೆ ಕಾರಣಗಳು ಇರುವುದು. ಇದರಲ್ಲಿ ಮುಖ್ಯವಾಗಿ ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ತುಂಬಾ ಅಪಶಕುನವೆಂದು ಹೇಳಲಾಗುತ್ತದೆ.
ಹೆಚ್ಚಿನವರು ಇದನ್ನು ಮೂಢನಂಬಿಕೆಯಂದು ಹೇಳಿದರೂ ಕೆಲವರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋಗುವರು. ಬೆಕ್ಕು ಅಡ್ಡ ಬಂದರೆ ಆಗ ನೀವು ಆ ಜಾಗದಲ್ಲಿ ಸ್ವಲ್ಪ ಸಮಯ ನಿಂತು ಬಳಿಕ ಪ್ರಯಾಣಿಸಬೇಕು. ಅದೇ ರೀತಿಯಲ್ಲಿ ಪ್ರಕೃತಿಯು ನಮಗೆ ಕೆಲವೊಂದು ಸೂಚನೆಗಳನ್ನು ನೀಡಲು ಪ್ರಾಣಿ ಹಾಗೂ ಪಕ್ಷಿಗಳನ್ನು ದಾರಿಗೆ ಅಡ್ಡ ಬರುವಂತಹ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ಯಾವ ಪ್ರಾಣಿಗಳು ದಾರಿಗೆ ಅಡ್ಡ ಬಂದರೆ ಅದು ಶುಭಶಕುನ ಎಂದು ನಾವು ತಿಳಿಯುವ.

ಹಲ್ಲಿ
ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಹಲ್ಲಿಯು ತುಂಬಾ ಅದೃಷ್ಟ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ದಾರಿಗೆ ಅಡ್ಡವಾಗಿ ಬಂದರೆ ಆಗ ಮುಂದಿನ ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆಯದಾಗಲಿದೆ ಎಂದು ತಿಳಿದುಕೊಳ್ಳಬೇಕು. ನೀವು ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುತ್ತಲಿದ್ದರೆ ಆಗ ಹಲ್ಲಿ ಅಡ್ಡಬಂದರೆ ಅದು ಯಶಸ್ಸಿನ ಸೂಚನೆಯೆಂದು ಹೇಳಲಾಗುತ್ತದೆ.
Most Read: ಗೌಳಿ ಶಾಸ್ತ್ರ: ಬನ್ನಿ ಬನ್ನಿ ಹಲ್ಲಿ ಶಕುನ ಕೇಳ ಬನ್ನಿ!

ಗೂಬೆ
ಗೂಬೆಯು ನಿಮ್ಮ ದಾರಿಗೆ ಅಡ್ಡ ಬಂದರೆ ಅಥವಾ ಇದು ನಿಮ್ಮ ಕಣ್ಣಿಗೆ ಪದೇ ಪದೇ ಕಾಣಿಸಿಕೊಂಡರೆ ಆಗ ಅದು ಪ್ರಕೃತಿಯ ಕರೆಯೆಂದು ತಿಳಿದುಕೊಳ್ಳಬೇಕು. ಗೂಬೆಯು ಜ್ಞಾನ ಹಾಗೂ ಸ್ವಾತಂತ್ರ್ಯದ ಸಂಕೇತವಾಗಿದೆ. ನೀವು ಯಾವುದೇ ರೀತಿಯ ಗೊಂದಲದಲ್ಲಿ ಇದ್ದರೆ ಆಗ ಪ್ರಕೃತಿಯು ನಿಮಗೆ ನೆರವಾಗಲು ಮುಂದೆ ಬರುವುದು. ನಿಮ್ಮ ಸ್ವಾತಂತ್ರ್ಯದ ಮೇಲೆ ನಂಬಿಕೆಯನ್ನಿಟ್ಟುಕೊಳ್ಳಿ. ಯಾವುದೇ ಪರಿಸ್ಥಿತಿಯಲ್ಲೂ ಬೇರೆಯವರು ನಿಮ್ಮನ್ನು ದಾರಿ ತಪ್ಪಿಸುವುದನ್ನು ತಡೆಯಿರಿ ಎನ್ನುವುದರ ಸೂಚನೆಯಾಗಿದೆ.
Most Read: ನಾಲ್ಕು ಗೂಬೆಗಳಲ್ಲಿ ಒಂದನ್ನ ಆಯ್ಕೆ ಮಾಡಿ... ನಿಮ್ಮ ವ್ಯಕ್ತಿತ್ವ ಎಂತಹದು ಎಂದು ಹೇಳುತ್ತೇವೆ

ಗಿಳಿ
ಗಿಳಿಯು ನಿಮ್ಮ ದಾರಿಗೆ ಅಡ್ಡ ಬರುವುದು ಅಥವಾ ಪದೇ ಪದೇ ನಿಮ್ಮ ಕಣ್ಣಿಗೆ ಕಾಣಿಸುವುದು ಶುಭ ಶಕುನವೆಂದು ಪರಿಗಣಿಸಲಾಗಿದೆ. ಈ ಪಕ್ಷಿಯು ನಿಮಗೆ ಪಿತೃಗಳ ಆಶೀರ್ವಾದದ ಸೂಚನೆಯಾಗಿದೆ ಮತ್ತು ನಿಮ್ಮ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುಂದುವರಿಯಬೇಕೆಂದು ಇದು ಹೇಳುತ್ತದೆ.

ಗಿಡುಗ
ಗಿಡುಗನ ದೊಡ್ಡ ಕಣ್ಣುಗಳು ಕುತೂಹಲದ ಸಂಕೇತವಾಗಿದೆ. ಗಿಡುಗ ನಿಮ್ಮ ದಾರಿಗೆ ಅಡ್ಡ ಬಂದರೆ ಅಥವಾ ಪದೇ ಪದೇ ನಿಮ್ಮ ಕಣ್ಣಿಗೆ ಗೋಚರಿಸಿದರೆ ಆಗ ನಿಮಗೆ ಮುಂದಿನ ದಿನಗಳಲ್ಲಿ ಜೀವನವು ದೊಡ್ಡ ಪಾಠ ಕಲಿಸಲಿದೆ ಎಂದು ಪ್ರಕೃತಿಯ ಸೂಚನೆಯಾಗಿದೆ.

ಗೋಸುಂಬೆ
ಜೀವನದಲ್ಲಿ ಕೆಲವೊಂದು ಸಲ ನೀವು ತುಂಬಾ ಕಠಿಣ ಪರಿಶ್ರಮಪಟ್ಟರೂ ಅದರಿಂದ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆಯಲು ತುಂಬಾ ಕಷ್ಟವಾಗುವುದು. ಇಂತಹ ಸಮಯದಲ್ಲಿ ನೀವು ಜೀವನದ ಗುರಿ ಬದಲಾವಣೆ ಮಾಡುವಿರಿ ಮತ್ತು ಅನುಕೂಲವಾಗಿರುವುದರ ಬಗ್ಗೆ ಆಲೋಚನೆ ಮಾಡುವಿರಿ. ಇಂತಹ ಸಮಯದಲ್ಲಿ ಗೋಸುಂಬೆಯು ದಾರಿಗೆ ಅಡ್ಡ ಬಂದರೆ ಅಥವಾ ಪದೇ ಪದೇ ನಿಮ್ಮ ಕಣ್ಣಿಗೆ ಕಾಣಿಸಿದರೆ, ನೀವು ಅದೇ ಗುರಿಯ ಮೇಲೆ ಗಮನಹರಿಸಬೇಕು ಎಂದು ಪ್ರಕೃತಿಯು ನೀಡುವ ಸೂಚನೆಯಾಗಿರುವುದು.