For Quick Alerts
ALLOW NOTIFICATIONS  
For Daily Alerts

ನವೆಂಬರ್ ತಿಂಗಳ ರಾಶಿ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

|

ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು ಹೇಳಲಾಗುತ್ತದೆ. ಒಂದು ವಾರದಲ್ಲಿ ಸೌರಮಂಡಲದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿಕೊಂಡು ವಾರ ಭವಿಷ್ಯ ಹೇಳಲಾಗುತ್ತದೆ.

ಈ ವಾರ ಭವಿಷ್ಯ ಹೆಚ್ಚು ಉಪಯೋಗಕಾರಿ. ಯಾಕೆಂದರೆ ನಮಗೆ ಬರುವಂತಹ ಸಮಸ್ಯೆಗಳು, ಎದುರಾಗುವ ಆಪತ್ತು ಇತ್ಯಾದಿಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ನಡೆದು ಕೊಳ್ಳಬಹುದು. ತಿಂಗಳ ಭವಿಷ್ಯವೂ ಅದೇ ರೀತಿಯಾಗಿದೆ. ತಿಂಗಳ ಕಾಲ ಗ್ರಹಗತಿಗಳು ಯಾವ ರೀತಿಯಲ್ಲಿ ಇರುವುದು ಎನ್ನುವುದನ್ನು ತಿಳಿದು ಜ್ಯೋತಿಷ್ಯ ಹೇಳಲಾಗುತ್ತದೆ. ನವೆಂಬರ್ ತಿಂಗಳ ರಾಶಿ ಭವಿಷ್ಯವು ಹೇಗೆ ಇರಲಿದೆ ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.

ಮೇಷ(ಮಾ.21-ಎ.19)

ಮೇಷ(ಮಾ.21-ಎ.19)

ಪ್ರತೀ ವರ್ಷದಂತೆ ಈ ಸಮಯದಲ್ಲಿ ನೀವು ಬೇರೆಯವರೊಂದಿಗೆ ಸಂವಹನ ನಡೆಸುವುದು ತೀವ್ರವಾಗಿರುವುದು. ವೃಶ್ಚಿಕ ರಾಶಿಯು ನಿಮ್ಮ ಕುಂಡಲಿಯಲ್ಲಿ ಹಾದು ಹೋಗುವ ಪರಿಣಾಮ ನೀವು ಮಾನಸಿಕ, ತತ್ವಜ್ಞಾನ, ಬೌದ್ಧಿಕ, ಆರ್ಥಿಕ ಮತ್ತು ಲೈಂಗಿಕ ವಿಚಾರದಲ್ಲಿ ಶಕ್ತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವಿರಿ. ನಿಮ್ಮ ರಾಶಿಯ ಅಧಿಪತಿಯಾಗಿರುವಂತಹ ಮಂಗಳನ ಆವರ್ತನ ಇದಕ್ಕೆ ಸೇರ್ಪಡೆ, 11 ತಾರೀಕಿನ ಬಳಿಕ ನಿಮಗೆ ವೃಶ್ಚಿಕದ ಫಲ ಕಂಡುಬರಲಿದೆ. 12ನೇ ತಾರೀಕಿನ ಬಳಿಕ ನಿಮಗೆ ಕೆಲವೊಂದು ಪ್ರಶ್ನೆಗಳು ಕಾಡುವುದು. ಅದೇನೆಂದರೆ ಸಂಬಂಧದಿಂದ ಏನು ಬೇಕು ಮತ್ತು ಇದರಿಂದ ಪಡೆಯಲು ನೀವು ಏನನ್ನು ಹೂಡಿಕೆ ಮಾಡಲು ಬಯಸುತ್ತಿದ್ದೀರಿ ಎನ್ನುವುದು.

Most Read: ಈ ಮೂರು ರಾಶಿಚಕ್ರದವರು ತಮ್ಮ ನೋವು ಅಥವಾ ದುಃಖವನ್ನು ಪರರಿಗೆ ತಿಳಿಸಲು ಬಯಸುವುದಿಲ್ಲ!

ವೃಷಭ(ಎ.20-ಮೇ20)

ವೃಷಭ(ಎ.20-ಮೇ20)

ಫೆರ್ಡಿನಾಡ್ ದ ಬುಲ್ ಕಥೆ ನಿಮಗೆ ತಿಳಿದಿದೆಯಾ? ಆತ ಕಾರ್ಕ್ ಮರದ ಕೆಳಗಡೆ ಕುಳಿತುಕೊಂಡು ಗುಲಾಬಿಯ ಸುವಾಸನೆ ಪಡೆಯಲು ಬಯಸಿದ್ದ. ಆದರೆ ಒಂದು ದಿನ ಆತ ದೊಡ್ಡ ಜೇನುನೊಣದ ಮೇಲೆ ಕುಳಿತುಕೊಂಡ. ಈತನಿಗೆ ಮ್ಯಾಡ್ರಿಡ್ ನಲ್ಲಿ ಗೂಳಿ ಜತೆಗೆ ಹೋರಾಡುವ ಕಾತುರತೆ ಇರಬಹುದು ಎಂದು ಅದು ಭಾವಿಸಿತು. ನಿಮ್ಮ ಸಂಬಂಧದ ಮನೆಯಲ್ಲಿ ಮಂಗಳನೊಂದಿಗೆ ವೃಶ್ಚಿಕದ ಸೂರ್ಯನು ಇರುವನು. ಇದರಿಂದ ನಿಮ್ಮ ಆಕಾಂಕ್ಷೆ ಹಾಗೂ ಮನೋಅಭಿಲಾಷೆ ಹೆಚ್ಚಾಗುವುದು. ವೃಶ್ಚಿಕದಲ್ಲಿ 12ನೇ ತಾರೀಕಿಗೆ ಹೊಸ ಚಂದ್ರ ಬರುವನು. ಇದರಿಂದ ಗೂಳಿಯು ದೊಡ್ಡ ಜೇನುನೊಣದ ಮೇಲೆ ಕುಳಿತ ಭಾವನೆಯಾಗಬಹುದು.

ಮಿಥುನ(ಮೇ21- ಜೂನ್ 20)

ಮಿಥುನ(ಮೇ21- ಜೂನ್ 20)

ವಾಯು ರಾಶಿಯವರಾಗಿರುವ ನೀವು ಹೊಂದಿಕೊಳ್ಳಬಲ್ಲ, ಬಹುಮುಖ ಮತ್ತು ಕೆಲವೊಮ್ಮೆ ಚದುರಿದ ಮನಸ್ಥಿತಿ ಹೊಂದಿರುವ ನೀವು ಅಂತ್ಯದಲ್ಲಿ ಜೀವನಕ್ಕೆ ಯಾವ ರೀತಿಯ ಪರಿಣಾಮವಾಗಿದೆ ಎಂದು ಅಚ್ಚರಿಪಡಲಿದ್ದೀರಿ. ಶಕ್ತಿಯ ಗ್ರಹವಾಗಿರುವ ಪ್ಲೂಟೋ ಮಿಥುನ ರಾಶಿಯ ವಿರುದ್ಧದಲ್ಲಿ ನರ್ತಿಸುತ್ತಿರುವುದು. ನೀವು ಶರಣಾಗಲು ಕಲಿಯುತ್ತಿದ್ದೀರಿ ಅಲ್ಲವೇ? ಸೂರ್ಯ, ಮಂಗಳ ಮತ್ತು ಹೊಸ ಚಂದ್ರ 12ರಂದು ವೃಶ್ಚಿಕದಲ್ಲಿರುವ ಕಾರಣ ದೈನಂದಿನ ಗುಣಮಟ್ಟದ ಜೀವನವನ್ನು ಪರಿವರ್ತಿಸಬೇಕು.

ಕರ್ಕಾಟಕ(ಜೂನ್ 21-ಜುಲೈ 22)

ಕರ್ಕಾಟಕ(ಜೂನ್ 21-ಜುಲೈ 22)

ಭಾವನೆಗಳ ವಿಚಾರದಲ್ಲಿ ನೀವು ಹೆಚ್ಚು ಶಿಸ್ತುಬದ್ಧ ಹಾಗೂ ಜವಾಬ್ದಾರಿಯಿಂದ ಇರುವುದು ಅತೀ ಅಗತ್ಯವಾಗಿದೆ. ಜವಾಬ್ದಾರಿ ಹಾಗೂ ಶಿಸ್ತಿಗೆ ಹೆಸರಾಗಿರುವಂತಹ ಶನಿಗ್ರಹವು 2017ರ ಜೂನ್ ನಿಂದ ಕರ್ಕಾಟಕ ರಾಶಿಯಲ್ಲಿದೆ. ಸ್ವಆರೈಕೆ ಮತ್ತು ಸ್ವಪೋಷಣೆ ಬಗ್ಗೆ ನೀವು ಈಗಾಗಲೇ ಚೆನ್ನಾಗಿ ಕಲಿತಿರಬಹುದು. ಬೇರೆಯವರ ತಪ್ಪಿಗೆ ಕೂಡ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ಇಲ್ಲಿ ಹೇಳಬೇಕಾಗುತ್ತದೆ. ಬೇರೆಯವರಿಗಿಂತ ನಿಮ್ಮನ್ನು ನೀವು ದೂರ ಮಾಡಿಕೊಂಡಿದ್ದೀರಿ. ಆದರೆ 8ನೇ ತಾರೀಕಿಗೆ ಶನಿಯು ಹಿಮ್ಮುಖವಾಗುವ ಕಾರಣದಿಂದ ನಿಮಗೆ ಒಳಗಿನಿಂದ ನಿಮ್ಮನ್ನು ಬೆಳೆಸಿಕೊಂಡು ನೀವು ಯಾರೆಂದು ತೋರಿಸಲು ಅವಕಾಶ ಸಿಗಲಿದೆ.

ಸಿಂಹ(ಜುಲೈ 23-ಆ.22)

ಸಿಂಹ(ಜುಲೈ 23-ಆ.22)

ನೀವೊಬ್ಬ ಸಂಘಜೀವಿ, ಸಂಭ್ರಮಿಸಲು ಬಯಸುವ ಮತ್ತು ಹೊರಗಡೆ ಸುತ್ತಾಡಲು ಹೋಗುವ ಗುಣವನ್ನು ಹೊಂದಿರುವವರು. ಆದರೆ ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ನೆಲೆಯಾಗಿರುವ ಮನೆಗಳಲ್ಲಿ ಸೂರ್ಯ ಮತ್ತು ಮಂಗಳನು ವೃಶ್ಚಿಕ ರಾಶಿಯಲ್ಲಿ ಆವರ್ತನ ಪಡೆಯುವ ಕಾರಣದಿಂದಾಗಿ ನೀವು ತುಂಬಾ ಖಾಸಗಿ, ಆತ್ಮವಲೋಕಿತ ವ್ಯಕ್ತಿಯಾಗಿರುವಿರಿ. ಈ ಸಮಯದಲ್ಲಿ ನಿಮ್ಮನ್ನು ನೀವು ಸಂತೋಷಪಡಿಸಿಕೊಳ್ಳಿ ಮತ್ತು ಆಂತರಿಕ ಜೀವನದ ಪವಾಡವನ್ನು ಸಂಭ್ರಮಿಸಿ. ನೀವು ಮನೆಯಲ್ಲೇ ಯಾವುದಾದರೂ ಪ್ರಾಜೆಕ್ಟ್ ತೆಗೆದುಕೊಳ್ಳಿ. ಯಾಕೆಂದರೆ ನಿಮಗೆ ಮಂಗಳನ ಶಕ್ತಿಯು ಸಿಗುವುದು.

Most Read: ಜನರ ಮನಸ್ಸಿಗೆ ನೋವು ಮಾಡಬಲ್ಲ ರಾಶಿಚಕ್ರದವರು, ಈ ಕ್ರಮಾಂಕದಲ್ಲಿ ಇದ್ದಾರೆ ನೋಡಿ...

ಕನ್ಯಾ(ಆ.23-ಸೆ.22)

ಕನ್ಯಾ(ಆ.23-ಸೆ.22)

ನಿಮ್ಮ ಖುಷಿಯು ಕಳೆದ ವರ್ಷದ ತನಕ ಪ್ರತಿಯೊಂದು ಹಂತದಲ್ಲೂ ಕಂಡುಬಂದಿರುವುದು. ಆದರೆ ನಿಮ್ಮ ರಕ್ಷಕ ಗ್ರಹವಾಗಿರುವಂತಹ ಬುಧನು ಕೇಂದ್ರೀಕೃತ, ಬದ್ಧ, ಸೂಕ್ಷ್ಮಗ್ರಹಿಯಾಗಿರುವ ವೃಶ್ಚಿಕ ರಾಶಿಯನ್ನು ಬಿಟ್ಟು, ನಾಲ್ಕನೇ ತಾರೀಕಿನಂದು ಆಶಾವಾದಿ, ಉತ್ಸಾಹಿಯಾಗಿರುವ ಧನು ರಾಶಿಯೆಡೆಗೆ ಪ್ರಯಾಣ ಬೆಳೆಸುವನು ಮತ್ತು 30ರಂದು ಹಿಮ್ಮುಖವಾಗಿ ಡಿಸೆಂಬರ್ 20ರ ತನಕ ಹೀಗೆ ಇರುವನು.

ತುಲಾ(ಸೆ.23-ಅ.22)

ತುಲಾ(ಸೆ.23-ಅ.22)

ಸಂಬಂಧದ ಪ್ರೇಮಿ, ತಂಡದೊಂದಿಗೆ ಕೆಲಸ ಮಾಡುವಾತ ಮತ್ತು ಸಹಕಾರಿಯಾಗಿರುವ ಗುರು ಗ್ರಹವು ಅಕ್ಟೋಬರ್ 2018ರ ತನಕ ನಿಮ್ಮ ರಾಶಿಯಲ್ಲಿ ಪ್ರಯಾಣಿಸುತ್ತಿರುವನು. ನೀವು ಈಗ ಇದರ ಲಾಭ ಪಡೆಯುತ್ತಲಿದ್ದರೆ, ಅದಕ್ಕೆ ನೀವು ಅರ್ಹರಾಗಿದ್ದೀರಿ. ಕಳೆದ 12 ವರ್ಷಗಳಿಂದ ಬಿತ್ತಿರುವಂತಹ ಬೀಜದಿಂದ ನೀವು ಈಗ ಫಲ ಪಡೆಯುತ್ತಿದ್ದೀರಿ. ನಿಮ್ಮ ರಕ್ಷಕ ಗ್ರಹವಾಗಿರುವ ಶುಕ್ರನು 22ನೇ ತಾರೀಕಿನ ತನಕ ತುಲಾ ರಾಶಿಯಲ್ಲೇ ಇರುವನು. ಶುಕ್ರನು ವೃಶ್ಚಿಕ ರಾಶಿಗೆ ಪ್ರಯಾಣಿಸುವ ವೇಳೆ ನಿಮ್ಮ ಕನಸುಗಳನ್ನು ನನಸಾಗಿಸಲು ಜನರು ನೆರವಿಗೆ ಬರುವರು.

ವೃಶ್ಚಿಕ(ಅ.23-ನ.21)

ವೃಶ್ಚಿಕ(ಅ.23-ನ.21)

ಈ ತಿಂಗಳು ನಿಮ್ಮ ಮರುಹುಟ್ಟು, ಗುಣಪಡಿಸುವುದು, ಪುನರುತ್ಪಾದನೆ ಮತ್ತು ಗರಿಷ್ಠ ತೀವ್ರತೆಯದ್ದಾಗಿರುವುದು. ನೀವು ವೃಶ್ಚಿಕ, ಹಾವು ಅಥವಾ ಹದ್ದಿನ ಶಕ್ತಿಯನ್ನು ತೋರಿಸುತ್ತೀರಾ ಎನ್ನುವುದು ನಿಮ್ಮ ಮೇಲೆ ಬಿಟ್ಟಿರುವ ವಿಚಾರವಾಗಿದೆ. ನಿಮ್ಮ ರಕ್ಷಕ ಗ್ರಹವಾಗಿರುವಂತಹ ಮಂಗಳನು 11ನೇ ತಾರೀಕಿನಂದು ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸೇರಿಕೊಳ್ಳುವ ಕಾರಣ, ಈ ತಿಂಗಳು ನಿಮಗೆ ತುಂಬಾ ಶಕ್ತಿಯುತವಾಗಿರಲಿದೆ.

ಧನು(ನ.22-ಡಿ.21)

ಧನು(ನ.22-ಡಿ.21)

ನಿಮ್ಮ ಕನಸು, ಪ್ರೇರಣೆ, ಆಧ್ಯಾತ್ಮಿಕತೆ ಮತ್ತು ಅಂತಃಪ್ರಜ್ಞೆಯ 12ನೇ ಮನೆಗೆ ವೃಶ್ಚಿಕ ರಾಶಿಯು ಪ್ರವೇಶ ಪಡೆಯುವ ಕಾರಣದಿಂದಾಗಿ ನವಂಬರ್ ತಿಂಗಳಲ್ಲಿ ಪರದೆಯ ಹಿಂದೆ ಹಲವಾರು ಚಟುವಟಿಕೆಗಳು ನಡೆಯಲಿದೆ. ಸಂವಹನದ ರಾಶಿಯಾಗಿರುವಂತಹ ಬುಧನು ನಿಮ್ಮ 2ನೇ ಮನೆಗೆ ಬಂದಿರುವ ಕಾರಣದಿಂದ ನಿಮಗೆ ಏನಾಗುತ್ತಿದೆ ಎಂದು ಹಂಚಿಕೊಳ್ಳಲು ಸುಲಭವಾಗುವುದು. ಯಾಕೆಂದರೆ ಹಿಮ್ಮುಖ ಪ್ರಯಾಣವು 30ರಂದು ಆರಂಭವಾಗಲಿದೆ.

ಮಕರ(ಡಿ.22-ಜ.19)

ಮಕರ(ಡಿ.22-ಜ.19)

ಎಲ್ಲಿಗೆ ಹೋಗುತ್ತಿದ್ದೀರಿ ಎಂದು ನಿಮಗೆ ತಿಳಿದಿರುವುದು. ಆದರೆ ನಿಮ್ಮ ರಾಶಿಯ ಅಧಿಪತಿಯಾಗಿರುವಂತಹ ಶನಿಯು ಐದು ತಿಂಗಳ ವಿರುದ್ಧಗತಿಯ ಆವರ್ತನವನ್ನು 8ರಂದು ಆರಂಭಿಸುವ ಕಾರಣ ಬೆಟ್ಟದ ಮೇಲೆ ಕಾಲಿಡಬೇಕೆಂಬ ನಿಮ್ಮ ಹಾದಿ ಸುಲಭವಾಗಿರದು. ಕರ್ಮಫಲದಾತನಾಗಿರುವಂತಹ ಶನಿಯು ನಿಮ್ಮ ಜತೆಗಾರನ ಮನೆಯಲ್ಲಿರುವ ಕಾರಣದಿಂದಾಗಿ ನೀವು ವೈಯಕ್ತಿಕ ಹಾಗೂ ವ್ಯವಹಾರಿಕ ಸಂಬಂಧದ ಗುಣಮಟ್ಟವನ್ನು ನೋಡಬೇಕು. ನಿಮಗೆ ಏನು ಬೇಕು ಎಂದು ಹೇಳಿ ಗಡಿ ಹಾಕಿಕೊಳ್ಳಲು ಇದು ಸೂಕ್ತ ಸಮಯ.

Most Read: ಈ ಮಹಿಳೆಗೆ 37ರ ಹರೆಯ, ಅಚ್ಚರಿಯಂದ್ರೆ ಆಕೆ ಈಗ 38 ಮಕ್ಕಳ ತಾಯಿ!

ಕುಂಭ(ಜ.20-ಫೆ.18)

ಕುಂಭ(ಜ.20-ಫೆ.18)

ನಿಮ್ಮ ರಕ್ಷಕ ಗ್ರಹವಾಗಿರುವಂತಹ, ಎಚ್ಚರಿಸುವ, ಬಂಡಾಯದ ಗ್ರಹವಾಗಿರುವ ಯುರೇನಸ್ ನಿಮ್ಮನ್ನು ಎಬ್ಬಿಸಿರುವ ಕಾರಣದಿಂದಾಗಿ ನಿಮಗೆ ಒಂದು ದೀರ್ಘ ನಿದ್ರೆಯಿಂದ ಎದ್ದಿರುವಂತಹ ಭಾವನೆಯಾಗಿರಬಹುದು. ಐದು ತಿಂಗಳು ಗಿರಕಿ ಹೊಡೆದ ಬಳಿಕ 11ನೇ ತಾರೀಕಿನ ಬಳಿಕ ಮುನ್ನಡೆಯಲಿದೆ. 10ನೇ ಮನೆಯಲ್ಲಿ ವೃಶ್ಚಿಕ ಗ್ರಹವು ಪ್ರಯಾಣಿಸುವ ಕಾರಣ ನಿಮ್ಮ ವೃತ್ತಿಯಲ್ಲಿ ಮ್ಯಾಜಿಕ್ ಆಗುವಂತಹ ಸಮಯವಿದು. 11ರಂದು ವೃಶ್ಚಿಕದಲ್ಲಿ ಮಂಗಳನು ಆವರ್ತನಾಗುವ ಕಾರಣದಿಂದ ಮತ್ತು 12ರಂದು ವೃಶ್ಚಿಕದಲ್ಲಿ ಹೊಸ ಚಂದ್ರನಿಂದಾಗಿ ನೀವು ಶಕ್ತಿಶಾಲಿ ಯೋಜನೆಯ ಭಾವನೆಯು ನಿಮ್ಮಲ್ಲಿ ಬರಲಿದೆ.

ಮೀನ

ಮೀನ

ನಿಮ್ಮ ರಾಶಿಯಲ್ಲಿ 11ರಂದು ಎಚ್ಚರಿಕೆ ಮತ್ತು ಸೃಜನಶೀಲತೆಯ ಗ್ರಹವಾಗಿರುವಂತಹ ಯುರೇನಸ್ ಮುನ್ನಡೆಯುವ ಕಾರಣದಿಂದಾಗಿ ನಿಜವಾಗಿಯೂ ನೀವು ಏನು ಎಂದು ತಿಳಿಯುವಾಗ ತಲೆಯು ಗಿರಕಿ ಹೊಡೆಯುತ್ತಿರುವುದು. ನೀವು ಕ್ರಿಯಾತ್ಮಕವಾಗಿ ಮರುಎಚ್ಚರಿಕೆ ಮತ್ತು ನಿಮ್ಮದೇ ಆಗಿರುವುದನ್ನು ಪಡೆಯುವಿರಿ. ಯುರೇನಸ್ ನಿಮ್ಮನ್ನು ಒಂದು ಕೇಂದ್ರದಲ್ಲಿ ಇಡುವುದರಿಂದಾಗಿ ನಿಮ್ಮೊಳಗೆ ಒಂದು ರೀತಿಯ ಕ್ರಾಂತಿಯ ಭಾವನೆಯಾಗಿರಬಹುದು. ನಿಮ್ಮನ್ನು ಪುನಃ ಪ್ರಾರಂಭಿಸಿ ಮತ್ತು ವೈಯಕ್ತಿಕ ಜೀವನ ಪರಿಷ್ಕರಿಸಿ. ಇದಕ್ಕಿಂತ ಮೊದಲಿನಂತೆ ನೀವು ನೀವಾಗಿರುವಿರಿ ಹಾಗೂ ನಿಮ್ಮದೇ ವಿಧಾನದಲ್ಲಿ ಇದನ್ನು ಮಾಡಲು ಬಯಸುವಿರಿ.

English summary

November 2018 monthly horoscope

Choose your zodiac sign and enjoy the horoscope. In our horoscopes you will discover the perfect opportunities, weaknesses and challenges that are drawn by an invisible hand of fate on the life's journey of each of us.
Story first published: Thursday, November 1, 2018, 10:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more