For Quick Alerts
ALLOW NOTIFICATIONS  
For Daily Alerts

ನಮ್ಮನ್ನೆಲ್ಲಾ ಅಚ್ಚರಿ ಕೂಪಕ್ಕೆ ತಳ್ಳುವ ಜಗತ್ತಿನ 'ವಿಸ್ಮಯಕಾರಿ ಕಲ್ಲುಗಳು'!

|

ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಕಂಡವರು ಈ ಬೆಟ್ಟದ ಮೇಲೆ ಇಷ್ಟು ದೊಡ್ಡ ಕಲ್ಲುಗಳು ತಲುಪಿದ್ದಾದರೂ ಹೇಗೆ ಎಂದು ಅಚ್ಚರಿ ಪಡದೇ ಇರುವುದಿಲ್ಲ. ಆದರೆ ವಿಶ್ವದ ಹಲವೆಡೆ ಇರುವ ಕೆಲವು ವಿಸ್ಮಯಕಾರಿ ಕಲ್ಲುಗಳನ್ನು ಕಂಡರೆ ಈ ಕಲ್ಲುಗಳೇನೂ ಅಲ್ಲ! ಕೆಲವು ಕಲ್ಲುಗಳು ತಮ್ಮೊಂದಿಗೆ ಹಲವಾರು ಅಗೋಚರ ವಿಸ್ಮಯಗಳನ್ನು ಹೊಂದಿದ್ದು ಇದಕ್ಕೆ ಸೂಕ್ತ ವಿವರಣೆ ಇನ್ನಷ್ಟೇ ಬರಬೇಕಾಗಿದೆ.

Mysterious Stones Found On Earth

ಇವುಗಳ ಹಿಂದಿನ ಇತಿಹಾಸವೂ ಅತಿ ರೋಚಕವಾಗಿದ್ದು ಇವುಗಳ ಈ ವಿಚಿತ್ರ ಪರಿಣಾಮಕ್ಕೆ ಸ್ಪಷ್ಟ ಕಾರಣವನ್ನು ಹೇಳಲು ಇದುವರೆಗೆ ಸಾಧ್ಯವಾಗಿಲ್ಲ. ಬನ್ನಿ, ವಿವರಿಸಲು ಅಸಾಧ್ಯವಾಗಿರುವ, ಜಗತ್ತಿನ ವಿವಿಧ ಭಾಗಗಳಲ್ಲಿರುವ ಈ ವಿಸ್ಮಯಕಾರಿ ಕಲ್ಲುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ.

ಎನಿಗ್ಮಾಲಿಥ್ ಕಲ್ಲು

ಎನಿಗ್ಮಾಲಿಥ್ ಕಲ್ಲು

ನಾವು ವಿದ್ಯುತ್ ಉಪಕರಣವೊಂದನ್ನು ವಿದ್ಯುತ್ ಸಂಪರ್ಕಕ್ಕೆ ಕಲ್ಪಿಸಲು ಉಪಯೋಗಿಸುವ ಮೂರು ಪಿನ್ನುಗಳ ಪ್ಲಗ್ ಒಂದನ್ನೇ ಯಥಾವತ್ತಾಗಿ ಹೋಲುವಂತಿರುವ ಭಾಗವೊಂದು ಕಲ್ಲಿನಲ್ಲಿ ಮೊಳಕೆಯೊಡೆದಂತೆ ಹೊರಬಂದಿರುವುದು ಅತ್ಯಂತ ವಿಸ್ಮಯಕಾರಿ ಸೋಜಿಗವಾಗಿದೆ. 1998 ರಲ್ಲಿ ಎಲೆಕ್ಟ್ರಿಕಲ್ ಅಭಿಯಂತರರಾದ ಜಾನ್ ಜೆ. ವಿಲಿಯಂ ಎಂಬವರು ಮಾನವರು ವಾಸಿಸುತ್ತಿಲ್ಲದಿರುವ ಸ್ಥಳವೊಂದರಲ್ಲಿ ಈ ಕಲ್ಲನ್ನು ಕಂಡರು. ಇವರಿಗೆ ಈ ಕಲ್ಲು ಇತ್ತೀಚೆಗೆ ಸಿಕ್ಕಿದ್ದರೂ, ಈ ಕಲ್ಲು ಸುಮಾರು ಒಂದು ಲಕ್ಷ ವರ್ಷ ಹಳೆಯದು ಎಂದು ಪ್ರಾಕ್ತನಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಜಾನ್ ರಿಗೆ ಈ ಕಲ್ಲು ಅತ್ಯಮೂಲ್ಯವಾಗಿದ್ದು ಯಾವುದೇ ಬೆಲೆಗೂ ಇದನ್ನು ಮಾರಲು ಇಚ್ಛಿಸುತ್ತಿಲ್ಲ. ಆದರೆ ಸಂಶೋಧನೆಗೆ ಮುಂದಾಗುವವರಿಗೆ ಮಾತ್ರ ಒದಗಿಸಿ ಇದರ ರಹಸ್ಯವನ್ನು ಕಂಡುಕೊಳ್ಳಲು ನೆರವಾಗುತ್ತಿದ್ದಾರೆ.

ಬೆಟ್ಝ್ ಗೋಳದ ರಹಸ್ಯ

ಬೆಟ್ಝ್ ಗೋಳದ ರಹಸ್ಯ

1974ರ ಮಾರ್ಚ್ ತಿಂಗಳಲ್ಲಿ ಅಮೇರಿಕಾದ ಫ್ಲೋರಿಡಾದಲ್ಲಿರುವ ಫೋರ್ಟ್ ಜಾರ್ಜ್ ದ್ವೀಪದ ನಿವಾಸಿ ಟೆರ್ರಿ ಮಾಥ್ಯೂ ಬೆಟ್ಝ್ ಎಂಬುವರು ಅಂದು ಜರುಗಿದ್ದ ಕಾಳ್ಗಿಚ್ಚನ್ನು ಪರಿಶೀಲಿಸುತ್ತಾ ಇದನ್ನು ಹರಡದಂತೆ ತಮ್ಮ ಪ್ರಯತ್ನವನ್ನು ನಡೆಸಿದ್ದರು. ಕಾಳ್ಗಿಚ್ಚಿನ ಬೆಂಕಿಯ ನಡುವೆ ಅವರಿಗೆ ಲೋಹದ ಗೋಳದಂತಹ ವಸ್ತುವೊಂದು ಗೋಚರಿಸಿತ್ತು. ಇತಿಹಾಸತಜ್ಞರ ಪ್ರಕಾರ ಈ ಗೋಳದ ವ್ಯಾಸ 20.32 ಸೆಂ. ಮೀ ಆಗಿದೆ ಹಾಗೂ 9.97 ಕೇಜಿ ತೂಗುತ್ತದೆ. ಕಾಳ್ಗಿಚ್ಚಿನ ನಡುವೆ ಇದ್ದರೂ ಇದರ ಮೇಲ್ಮೈ ಯಾವುದೇ ಗೀರುಗಳನ್ನು ಹೊಂದಿಲ್ಲ ಹಾಗೂ ಶುಭ್ರವಾದ ಹೊಳಪನ್ನು ಉಳಿಸಿಕೊಂಡಿದೆ. ನೋಡಲು ಅತ್ಯಂತ ಆಕರ್ಷಕವಾಗಿದ್ದ ಈ ಗೋಳವನ್ನು ಬೆಟ್ಝ್ ತಮ್ಮ ಕೋಣೆಯಲ್ಲಿಟ್ಟುಕೊಂಡಿದ್ದರು. ಸುಮಾರು ಮೂರು ವಾರಗಳ ಬಳಿಕ ಇದರಲ್ಲಿ ಒಂದು ಚಕಿತಗೊಳಿಸುವ ಅಂಶವೊಂದು ಕಂಡುಬಂದಿತ್ತು. ಅದೇನೆಂದರೆ ತಮ್ಮ ಗಿಟಾರ್ ವಾದನದ ಸಮಯದಲ್ಲಿ ಈ ಗೋಳವೂ ಸಂಗೀತಕ್ಕೆ ಸ್ಪಂದಿಸುತ್ತಿದ್ದುದನ್ನು ಅವರು ಗಮನಿಸಿದರು. ಗಿಟಾರ್ ಸದ್ದಿನೊಂದಿಗೇ ಈ ಗೋಳದಿಂದಲೂ ಅದುರುವಂತಹ ಶಬ್ದ ಹೊರಡುತ್ತಿತ್ತು. ಈ ಸದ್ದು ಬೆಟ್ಝ್ ರವರ ನಾಯಿಗೆ ಸಹಿಸಲಸಾಧ್ಯವಾಗಿದ್ದು ಅತ್ತಿಂದಿತ್ತ ಓಡಾಡಿ ಮೇಜಿನ ಅಡಿಯಲ್ಲಿ ಅವಿತುಕೊಂಡಿತ್ತು. ಈ ಸದ್ದು ಹೇಗೆ ಹೊರಡುತ್ತಿದೆ ಎಂದು ತಿಳಿದುಕೊಳ್ಳಲು ಹಲವಾರು ಸಂಶೋಧನೆಗಳನ್ನು ಬಳಿಕ ನಡೆಸಲಾಯ್ತು. ಆದರೆ ಯಾವ ಮಾಯೆಯ ಪ್ರಭಾವವೋ ಏನೋ ಕೆಲದಿನಗಳ ಬಳಿಕ ಟೆರ್ರಿ ಮತ್ತು ಅವರ ಕುಟುಂಬ ಅತ್ಯಂತ ರಹಸ್ಯಮಯ ರೀತಿಯಲ್ಲಿ ಈ ಜಗತ್ತಿನಿಂದ ಕಾಣೆಯಾಗಿದ್ದಾರೆ.

Most Read: ಈ ದರ್ಗಾದಲ್ಲಿ ಕಲ್ಲುಗಳು ತನ್ನಷ್ಟಕ್ಕೇ ಗಾಳಿಯಲ್ಲಿ ತೇಲುತ್ತವೆಯಂತೆ!!

ಕಾರ್ನಾಕ್-ಮೆಗಾಲಿಥಿಕ್ ನಿಂತಿರುವ ಕಲ್ಲು

ಕಾರ್ನಾಕ್-ಮೆಗಾಲಿಥಿಕ್ ನಿಂತಿರುವ ಕಲ್ಲು

ಸಾಮಾನ್ಯವಾಗಿ ಲಂಬಾಕಾರದ ವಸ್ತುಗಳನ್ನು ನೆಟ್ಟಗೆ ನಿಲ್ಲಿಸದ ಹೊರತು ಇವು ಅಡ್ಡಲಾಗಿರುವುದೇ ಹೆಚ್ಚು. ಒಂದು ಕಲ್ಲು ಹೀಗೆ ಲಂಬಕಾರದಲ್ಲಿ ನಿಂತಿದ್ದರೆ ಇದು ಸ್ವಾಭಾವಿಕ ಎಂದು ತಿಳಿಯಬಹುದು. ಆದರೆ ಫ್ರಾನ್ಸ್ ನಲ್ಲಿರುವ ಬ್ರಿಟನಿ ಎಂಬ ಸ್ಥಳದಲ್ಲಿರುವ ಕಾರ್ನಾಕ್ ಎಂಬ ಹಳ್ಳಿಯಲ್ಲಿ ಇಂತಹ ಹಲವಾರು ಕಲ್ಲುಗಳು ಯಾರೋ ನಿಲ್ಲಿಸಿಟ್ಟಂತೆ ಲಂಬಾಕಾರದಲ್ಲಿ ನಿಂತಿವೆ. ಅವೂ ಒಂದೆರಡಲ್ಲ, ಸಾವಿರಾರು ಹಾಗೂ ಒಂದರ ಪಕ್ಕದಲ್ಲೊಂದರಂತೆ ಸಾಲಾಗಿ ನಿಂತಿವೆ. ಎಷ್ಟು ಕಲ್ಲುಗಳಿವೆ ಎಂದು ಲೆಕ್ಕ ಮಾಡಿದವರಿಗೆ ಮೂರು ಸಾವಿರಕ್ಕೂ ಹೆಚ್ಚು ಕಲ್ಲುಗಳ ಲೆಕ್ಕ ಸಿಕ್ಕಿದೆ. ಇವುಗಳಲ್ಲಿ ಕೆಲವು ಇಪ್ಪತ್ತು ಅಡಿಗಳಷ್ಟು ಎತ್ತರವಿದ್ದರೆ ಕೆಲವು ಒಂದು ಅಡಿಯಷ್ಟು ಚಿಕ್ಕದಿವೆ. ಈ ಕಲ್ಲುಗಳು ಸುಮಾರು ನಾಲ್ಕು ಮೈಲುಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿವೆ.

Most Read: ಯಾರು ಇಲ್ಲದ ಸಮಯದಲ್ಲಿ, ಈ 'ಕಲ್ಲು' ತನ್ನಷ್ಟಕ್ಕೇ ಚಲಿಸುತ್ತದೆ!!

ಅವೇಬರಿ

ಅವೇಬರಿ

ವಿಶ್ವದ ಅತಿ ದೊಡ್ಡ ಕಲ್ಲುಗಳ ವೃತ್ತ ಇಂಗ್ಲೆಂಡಿನ ಪುಟ್ಟ ಗ್ರಾಮವಾದ ಅವೇಬರಿ ಎಂಬಲ್ಲಿದೆ. ಈ ಕಲ್ಲುಗಳನ್ನು ಸುಮಾರು ಕ್ರಿ. ಪೂ 2600 ರಲ್ಲಿ ನಿಲ್ಲಿಸಲಾಗಿದೆ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಇದನ್ನು ಯಾರು, ಏಕೆ ಹೇಗೆ ನಿಲ್ಲಿಸಿದರು ಎಂಬ ಪ್ರಶ್ನೆಗಳಿಗೆ ಇದುವರೆಗೆ ಸೂಕ್ತ ಉತ್ತರ ಸಿಕ್ಕಿಲ್ಲ.

English summary

Mysterious Stones Found On Earth

Few mysterious stones are found around the world. While a man claimed that he saw a rock that had a plug inserted inside, few more mysterious stones are yet to be analysed. The history behind these stones is fascinating, and there are many theories behind that which do not have an explanation still.
X
Desktop Bottom Promotion