For Quick Alerts
ALLOW NOTIFICATIONS  
For Daily Alerts

  ಈ ಮನೆಯಲ್ಲಿ ಅಮ್ಮ ತಂದೆ, ತಂದೆ ತಾಯಿಯಾಗಿದ್ದಾರೆ: ಮಗು ಮಾತ್ರ ತಟಸ್ಥ

  |

  ಒಂದು ಮಗುವಿಗೆ ತಂದೆ-ತಾಯಿಯಾಗಿ ಕಾರ್ಯ ನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ. ಮಗುವಿನ ಅಗತ್ಯತೆಗಳನ್ನು ಅರಿತು ಅವುಗಳನ್ನು ಪೂರೈಕೆ ಮಾಡುವುದು ಒಂದು ಸಾಧಾರಣ ಕೆಲಸವಲ್ಲ. ಉತ್ತಮ ಸಂಸ್ಕಾರಗಳನ್ನು ನೀಡುವುದರ ಮೂಲಕ ಸಮಾಜದಲ್ಲಿ ಇತರರಿಗೆ ಹಾನಿಯುಂಟಾಗದಂತೆ ಬದುಕಲು ಕಲಿಸಿಕೊಡಬೇಕಾಗುವುದು. ಆ ಪುಟ್ಟ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಾ, ಪ್ರೀತಿಯ ಭರವಸೆ ನೀಡಬೇಕು. ಆಗಲೇ ಬಾಂಧವ್ಯ ಹಾಗೂ ಪ್ರೀತಿಯ ಬಂಧ ಗಟ್ಟಿಯಾಗುವುದು.

  ಹೌದು, ತಂದೆ ತಾಯಿಯ ರೂಪದಲ್ಲಿ ಸಲಿಂಗಕಾಮಿಗಳು ಮಗುವೊಂದಕ್ಕೆ ತಂದೆ ತಾಯಿಗಳಾಗುವುದರ ಮೂಲಕ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಹೊಂದಿದ್ದಾರೆ. ಇವರ ಸ್ಫೂರ್ತಿದಾಯಕ ಕಥೆಯನ್ನು ಈ ಮುಂದೆ ವಿವರಿಸಲಾಗಿದೆ ನೋಡಿ.

  ಅವರು...

  ಅವರು...

  ಟ್ರೆಸ್ಟನ್ ಮತ್ತು ಭಿಪ್ ಒರೆಗಾನ್‍ಅಲ್ಲಿ ಒಟ್ಟಿಗೆ ವಾಸಿಸುತ್ತಿರುವ ಸಲಿಂಗಕಾಮಿ ದಂಪತಿಗಳು. ಈ ದಂಪತಿಗಳು ಜೈವಿಕವಾಗಿ ಜನಿಸಿದ ಮಕ್ಕಳನ್ನು ದತ್ತುಪಡೆದುಕೊಂಡಿದ್ದಾರೆ. ಬಿಪ್ ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಟೆಸ್ಟಾನ್ ಸಲಿಂಗಕಾಮಿ ಟ್ರಾನ್ಸ್ ಮ್ಯಾನ್. ಇವರು ತಮ್ಮ ಮಕ್ಕಳನ್ನು ಬೆಳೆಸಲು ಮುಂದಾದರು.

  ಅವರ ಮಕ್ಕಳು...

  ಅವರ ಮಕ್ಕಳು...

  ಇವರ ಸಹೋದರಿಯರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿತ್ತು. ಅವರಿಗೆ ಆ ಮಕ್ಕಳನ್ನು ನೋಡಿಕೊಳ್ಳಲು ಅಷ್ಟು ಅನುಕೂಲಕರ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅವರ ಕುಟುಂಬದಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಹೆಚ್ಚಿನ ಒತ್ತಡ ನೀಡಲಾಗುತ್ತಿತ್ತು. ಈ ಒಂದು ಪರಿಸ್ಥಿತಿ ಟ್ರಿಸ್ಟಾನ್‍ಗೆ ಒಂದು ಸುವರ್ಣ ಅವಕಾಶವಾಗಿತ್ತು. ಈ ಹಿನ್ನೆಲೆಯನ್ನು ಬಳಸಿಕೊಂಡು ಟ್ರೆಸ್ಟನ್ ಜೈವಿಕ ಮಗುವನ್ನು ಹೊಂದುವುದರ ಮೂಲಕ ಗರ್ಭಿಣಿಯಾದರು.

  ಇದು ಎಲ್ಲೆಡೆ ತಿಳಿಯಿತು...

  ಇದು ಎಲ್ಲೆಡೆ ತಿಳಿಯಿತು...

  ಈ ದಂಪತಿಗಳು ತಮ್ಮ ಸಂಸಾರ ಹಾಗೂ ಮಗುವಿನ ಬಗ್ಗೆ ಪ್ರಪಂಚಕ್ಕೆ ಬಹಿರಂಗ ಪಡಿಸಿದರು. ಇದರಿಂದಾಗಿ ಒಂದು ಟ್ಯಾಬ್ಲ್ಯಾಡ್ ಅಲ್ಲಿ ವಿಷಯವು ಬಿತ್ತರ ಗೊಂಡಿತು. ನಂತರದ ದಿನದಲ್ಲಿ ವಿಷಯವು ಎಲ್ಲೆಡೆ ಪಸರಿಸಿತು. ತಮ್ಮ ಅಭಿಮಾನಿಗಳಿಗೆ ತಮ್ಮ ದಿನನಿತ್ಯದ ವಿಷಯಗಳನ್ನು ತಿಳಿಸಲು ಒಂದು ವೆಬ್‍ಸೈಟ್ ರಚಿಸಿದರು. ಸಲಿಂಗಕಾಮಿಗಳು ಪರಿಪೂರ್ಣವಾದ ಕೌಟುಂಬಿಕ ಜೀವನವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಜಗತ್ತು ಉತ್ಸುಕದಲ್ಲಿತ್ತು...

  ಕೆಲವು ಸಮಸ್ಯೆಗಳು ಎದುರಾದವು...

  ಕೆಲವು ಸಮಸ್ಯೆಗಳು ಎದುರಾದವು...

  ದಂಪತಿಗಳು ಗರ್ಭಿಣಿಯಾಗಿರುವ ಸುದ್ದಿ ಎಲ್ಲೆಡೆ ಹರಡು ಪ್ರಾರಂಭಿಸಿದಂತೆ ಜಗತ್ತಿನಾದ್ಯಂತ ಮಾನ್ಯತೆಯನ್ನು ಪಡೆದುಕೊಂಡರು. ಗರ್ಭಿಣಿಯಾಗಿದ್ದ ಟ್ರಿಸ್ಟನ್ ಅವರ ಪುರುಷತ್ವದ ಬಗ್ಗೆ ಪ್ರಶ್ನೆಗಳು ಪ್ರಾರಂಭವಾದವು. ಜೊತೆಗೆ ಅವರನ್ನು ವಿಭಿನ್ನವಾಗಿ ನೋಡಲು ಪ್ರಾರಂಭಿಸಿದರು. ದೇಹದಲ್ಲಿ ಸ್ತ್ರೀ ವೈಶಿಷ್ಯಗಳನ್ನು ಹುಡುಕುವುದು ತಿಳಿಯಲು ಪ್ರಾರಂಭವಾಯಿತು. ಇದು ದಂಪತಿಗೆ ಒಂದು ಬಗೆಯ ಗೊಂದಲ ಹಾಗೂ ಇರಿಸುಮುರಿಸಿಗೆ ಕಾರಣವಾಯಿತು.

  ನಿರ್ಲಕ್ಷಿಸಿದರು...

  ನಿರ್ಲಕ್ಷಿಸಿದರು...

  ಸ್ಥಿರವಾದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಲು ದಂಪತಿಗಳಿಗೆ ನಿರಾಶೆಯಾಗುತ್ತಿತ್ತು. ಹಾಗಾಗಿ ನಿಧಾನವಾಗಿ ದಂಪತಿಗಳು ನಕಾರಾತ್ಮಕ ಚಿಂತನೆಗಳಿಂದ ದೂರವಾಗಿ ಸಕಾರಾತ್ಮಕ ಚಿಂತನೆಗಳ ಬಗ್ಗೆ ಹೆಚ್ಚು ಗಮನ ನೀಡಲು ನಿರ್ಧರಿಸಿದರು. ಇತರರು ತಮ್ಮ ಬಗ್ಗೆ ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ನಮಗೆ ಪ್ರಮುಖವಾದ ವಿಚಾರವಲ್ಲ ಎನ್ನುವುದನ್ನು ಅರಿತರು. ಜೊತೆಗೆ ತಮ್ಮ ಸಂಸಾರ ಹಾಗೂ ಸಂಬಂಧಗಳ ಬಗ್ಗೆ ಹೆಚ್ಚು ಗಮನ ನೀಡಲು ನಿರ್ಧರಿಸಿದರು.

  ಅದೃಷ್ಟವಂತರು ಎನ್ನುವ ಭಾವ...

  ಅದೃಷ್ಟವಂತರು ಎನ್ನುವ ಭಾವ...

  ಇವರು ಇತರ ಸಲಿಂಗ ಕಾಮಿಗಳಿಗಿಂತ ಹೆಚ್ಚು ಅದೃಷ್ಟವಂತರು ಎಂದು ಟ್ರಸ್ಟ್ ಮತ್ತು ಬಿಫ್ ಅರಿತಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಟೆಕ್ಸಾಸ್ ಎನ್ನುವ ಓರ್ವ ಮಹಿಳೆ ಮಾತನಾಡಿದಾಗ ಅವಳು ಜೈವಿಕವಾಗಿ ಮಗುವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಳು. ಅಂತಹವರಿಗೆ ಹೋಲಿಸಿದರೆ ತಾವು ಅದೃಷ್ಟವಂತರು ಎಂದು ತಿಳಿದುಕೊಂಡರು.

  ಬಂದ ಹಾಗೆ ಸ್ವೀಕರಿಸಿದರು...

  ಬಂದ ಹಾಗೆ ಸ್ವೀಕರಿಸಿದರು...

  ಮಗುವನ್ನು ಬೆಳೆಸುವಾಗ ಸುತ್ತಲ ಜನರು ಹಾಗೂ ಸಮಾಜದಿಂದ ಪ್ರಚೋದನೆಗಳು ಉಂಟಾಗುತ್ತಿದ್ದವು. ಆದರೆ ದಂಪತಿಗಳು ಶಾಂತವಾಗಿ ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಲೇ ಮಗುವಿಗೆ ಉತ್ತಮ ಪೋಷಕರಾಗುವುದರ ಮೂಲಕ ಪಾಲನೆ ಮಾಡಿದರು. ಇದೀಗ ಅತ್ಯುತ್ತಮ ಪ್ರೀತಿ ವಿಶ್ವಾಸದಿಂದ ಮಗು ಮತ್ತು ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಮಗುವಿಗೆ ಉತ್ತಮ ಪ್ರೀತಿ ವಾತ್ಸಲ್ಯದಿಂದ ಬೆಳೆಸುವುದನ್ನು ತಮ್ಮ ಜೀವನದ ಮುಖ್ಯ ಗುರಿಯನ್ನಾಗಿ ಮಾಡಿಕೊಂಡರು.

  ಒಂದು ಪ್ರೇರಣೆಯ ಕಥೆ...

  ಒಂದು ಪ್ರೇರಣೆಯ ಕಥೆ...

  Image Courtesy

  ಹೌದು, ನಾವು ಎಲ್ಲಾ ಅನುಕೂಲ ಹಾಗೂ ಸಮಾಜದಲ್ಲಿ ಸಹಜತೆಯಲ್ಲಿ ಇದ್ದರೂ ಮಕ್ಕಳ ಪಾಲನೆ ಹಾಗೂ ಲಾಲನೆಯಲ್ಲಿ ಎಡವುತ್ತೇವೆ. ಇದರಿಂದ ಮಕ್ಕಳು ಋಣಾತ್ಮಕ ವರ್ತನೆಯನ್ನು ತೋರುವ ಸಾಧ್ಯತೆಗಳಿರುತ್ತವೆ. ಆದರೆ ಈ ದಂಪತಿಗಳು ತಾವು ಎಂತಹ ಸಮಸ್ಯೆಗಳು ಎದುರಾದರೂ ಅವುಗಳನ್ನು ಶಾಂತವಾಗಿ ಸ್ವೀಕರಿಸುತ್ತಾ ಬಂದರು. ಜೊತೆಗೆ ತಮ್ಮ ಮಕ್ಕಳನ್ನು ಸೂಕ್ತ ರೀತಿಯಲ್ಲಿ ಉತ್ತಮ ವರ್ತನೆ ಹೊಂದುವಂತೆ ಬೆಳೆಸಿದರು.

  Read more about: ಜೀವನ ಕಥೆಗಳು
  English summary

  Mom Is Dad, Dad Is Mom In This House; And The Kid Is Gender Neutral!

  Mom Is Dad, Dad Is Mom In This House; And The Kid Is Gender Neutral!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more