For Quick Alerts
ALLOW NOTIFICATIONS  
For Daily Alerts

ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದ ಮೇಷ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ

|

ಮೇಷ ರಾಶಿಯವರು ಹೆಚ್ಚು ಧೈರ್ಯಶಾಲಿಗಳಾಗಿದ್ದು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸದೆಯೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿದ್ದಾರೆ. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಸ್ವಭಾವವನ್ನು ಈ ರಾಶಿಯವರು ಹೊಂದಿಲ್ಲ. ಆ ತಿಂಗಳು ಅವರ ದಾರಿಗೆ ಯಾವ ವಿಷಯ ಬರುತ್ತದೆ ಎಂಬುದು ಮುಖ್ಯವಾಗಿರುತ್ತದೆ.

ತಾವೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇವರು ಸಿದ್ಧಹಸ್ತರಾಗಿದ್ದು ಪ್ರತಿಯೊಂದು ಕೆಲಸವನ್ನು ಇವರು ಆರಂಭಿಸಿ ಅದನ್ನು ಮುಗಿಸುವಲ್ಲಿ ಪ್ರವೀಣರಾಗಿದ್ದಾರೆ. ಇವರು ಸ್ವತಂತ್ರರಾಗಿದ್ದು ಗೌರವಪಾತ್ರೂ ಹೌದು. ಇದೇ ಸಮಯದಲ್ಲಿ ಇವರು ಕ್ರಿಯಾತ್ಮಕರಾಗಿದ್ದು ತಾಳ್ಮೆ ಕಳೆದುಕೊಳ್ಳವವರೂ ಹೌದು.

Predictions For Aries

ಮಂಗಳನ ಈ ಗ್ರಹದ ಅಧಿಪತಿಯಾಗಿದ್ದಾನೆ. ಆದ್ದರಿಂದಲೇ ಈ ರಾಶಿಯವರು ಹೆಚ್ಚು ಕ್ರಿಯಾತ್ಮಕರಾಗಿದ್ದು ಹಾಸ್ಯಪ್ರವೃತ್ತಿಯವರು ಮತ್ತು ಉತ್ತಮ ಕಲಾಭಿರುಚಿಯನ್ನು ಹೊಂದಿದವರಾಗಿದ್ದಾರೆ. ಮೇ 2018 ರಲ್ಲಿ ಇವರ ರಾಶಿ ಭವಿಷ್ಯ ಮತ್ತು ಇನ್ನಿತರ ಚಟುವಟಿಕೆಗಳು ಹೇಗಿವೆ ಎಂಬುದರ ಕುರಿತು ವಿಸ್ತೃತ ವಿವರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ....

ಆರೋಗ್ಯ

ಈ ತಿಂಗಳಿನಲ್ಲಿ ವ್ಯಕ್ತಿಯು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಆದರೆ ಇದರ ಬಗ್ಗೆ ಚಿಂತಿಸದೆಯೇ ಉತ್ತಮ ಮತ್ತು ನಿಧಾನಗತಿಯ ಪ್ರಗತಿಯನ್ನು ನೀವು ಕಂಡುಕೊಳ್ಳಲಿರುವಿರಿ. ವೈದ್ಯಕೀಯ ವೆಚ್ಚಗಳನ್ನು ಭರಿಸಲು ಕೊಂಚ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಈ ತಿಂಗಳು ನೀವು ಅದೃಷ್ಟವನ್ನು ಎದುರುಗೊಳ್ಳಬಹುದಾದ್ದರಿಂದ ನಿಮಗೆ ಧನ ಆಗಮನ ಉಂಟಾಗುವ ಸಾಧ್ಯತೆ ಇದೆ. ನೀವು ದುಬಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಕೂಡ ಇದೆ. ನಿಮ್ಮ ಆರ್ಥಿಕ ಸ್ಥಿತಿಗತಿ ಮತ್ತು ಅದಾಯವು ಉತ್ತಮಗೊಳ್ಳಲಿದೆ.

ವೃತ್ತಿ ಜೀವನ

ಈ ತಿಂಗಳು ನಿಮ್ಮ ವೃತ್ತಿಜೀವನದಲ್ಲಿ ಕೊಂಚ ಏರುಪೇರು ಕಾಣಿಸುವ ಸಾಧ್ಯತೆ ಇದೆ. ಯಶಸ್ಸನ್ನು ಎದುರಿಸಲು ನೀವು ಸಾಕಷ್ಟು ತಯಾರಿಯನ್ನು ಮಾಡಬೇಕಾಗುತ್ತದೆ. ನಿರಾಶರಾಗದೆ ಕಂಗೆಡದೆಯೇ ನಿಮ್ಮ ಗುರಿ ತಲುಪುವ ಕಾರ್ಯವನ್ನು ಮಾಡಿ. ನೀವು ಕೊಂಚ ಲಾಭವನ್ನು ಗಳಿಸುವಿರಿ.

Predictions For Aries

ಸಂಪತ್ತು

ಈ ವರ್ಷ ಸಂಪತ್ತಿನ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿ ಇರುತ್ತೀರಿ. ಆದಾಗ್ಯೂ, ನೀವು ಊಹಾಪೋಹಗಳಿಗೆ ಹೂಡಿಕೆ ಮಾಡಲು ಅಥವಾ ಸಾಲಗಳನ್ನು ನೀಡಲು ಬಯಸಿದರೆ ಹಿರಿಯ ಅಥವಾ ಅನುಭವಿ ವ್ಯಕ್ತಿಯ ಸಲಹೆಯನ್ನು ತೆಗೆದುಕೊಳ್ಳಿ. ಮಾರುಕಟ್ಟೆಯಲ್ಲಿ ಹಣ ಹೂಡಿಕೆಯ ಆಲೋಚನೆಯಲ್ಲಿದ್ದರೆ ಜ್ಯೋತಿಷ್ಯಿಗಳ ಅನುಮತಿ ಪಡೆದುಕೊಳ್ಳುವುದು ಉತ್ತಮ. ಗ್ರಹಗತಿಗಳ ಅನಾನುಕೂಲವನ್ನು ತಿಳಿದು ಮುಂದುವರಿದರೆ ಉತ್ತಮ ಲಾಭ ಪಡೆಯಬಹುದು.

ತಿಂಗಳ ಆರ್ಥಿಕ ಸ್ಥಿತಿಗತಿ

ಹಣವನ್ನು ಮಾಡುವಲ್ಲಿ ಈ ತಿಂಗಳು ನಿಮಗೆ ಹೆಚ್ಚು ಸಹಕಾರಿಯಾಗಲಿದೆ. ನಿಮ್ಮ ಸ್ನೇಹಿತರು, ಸಂಬಂಧಿಕರು ಇಲ್ಲವೇ ಇನ್ನಿತರ ಅಸೋಸಿಯೇಟ್‌ಗಳು ನಿಮಗೆ ಧನ ಸಹಾಯ ಮಾಡಲಿದ್ದಾರೆ. ಯಾವುದೇ ವ್ಯಾಪಾರ ವಹಿವಾಟುಗಳಲ್ಲಿ ಹಣ ಹೂಡಿರುವವರಿಗೆ ಈ ತಿಂಗಳು ಅತ್ಯುತ್ತಮ ಎಂದೆನಿಸಲಿದೆ. ಹಣವು ಈ ತಿಂಗಳಿನಲ್ಲಿ ನಿಮಗೆ ಯಾವುದೇ ತಾಪತ್ರಯವಿಲ್ಲದೇ ಬರಲಿದೆ.

ನಿಮ್ಮ ಪ್ರೀತಿ ಪ್ರೇಮ ವೈವಾಹಿಕ ಜೀವನ

ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರನ್ನು ಸೂಜಿಗಲ್ಲಿನಂತೆ ಸೆಳೆಯುವುದು ಖಂಡಿತ. ನಿಮ್ಮ ಪ್ರೀತಿಗೆ ಗೆಲುವು ಖಂಡಿತ. ಯಾವುದೇ ರೀತಿಯ ಅಡೆತಡೆ ಇಲ್ಲದೆಯೇ ನಿಮ್ಮ ಪ್ರೀತಿ ಗೆಲ್ಲುತ್ತದೆ. ನಿಮ್ಮ ಪತ್ನಿಯೊಂದಿಗೆ ನೀವು ಸಂತಸಕರ ಸಮಯವನ್ನು ಕಳೆಯುತ್ತೀರಿ ಮತ್ತು ನಿಮ್ಮನ್ನು ಗೆಲ್ಲಲು ಅವರು ಶ್ರಮಿಸುತ್ತಾರೆ. ಇನ್ನು ಪ್ರೀತಿಯನ್ನು ಎದುರುನೋಡುವವರಿಗೆ ಕೂಡ ಒಳ್ಳೆಯ ಸಂಗಾತಿ ದೊರೆಯಲಿದ್ದಾರೆ. ಮತ್ತು ಸಂಗಾತಿ ಆರ್ಥಿಕ ನೆರವನ್ನು ನೀಡಲಿದ್ದಾರೆ.

Predictions For Aries

ಪ್ರೀತಿಯ ಜೀವನ

ನಿಮ್ಮ 5 ನೇ ಮನೆ ಯಾವುದೇ ಋಣಾತ್ಮಕ ಗ್ರಹಗಳನ್ನು ಹೊಂದಿಲ್ಲ. ಆದ್ದರಿಂದ ಹೊಸ ಸಂಬಂಧಗಳಿಗೆ ಪ್ರವೇಶಿಸಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳು ಸೌಮ್ಯವಾಗಿರುತ್ತವೆ. ಸಣ್ಣ ವಿವರಗಳನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಅವು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ವಾದವನ್ನು ನಿರ್ವಹಿಸುವಾಗ ಸ್ಪಷ್ಟವಾದ ಚಿಂತನೆ ಮತ್ತು ತರ್ಕ ನಿಮಗೆ ಕಾರಣವಾಗಬಹುದು ಎಂದು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಇದು ವರ್ಷವಿಡೀ ನಿಮಗಾಗಿ ಮೃದು ಪ್ರೇಮ ಜೀವನವನ್ನು ಖಚಿತಪಡಿಸುತ್ತದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನೀವು ಪ್ರೀತಿಯ ಸಂಪರ್ಕವನ್ನು ಎದುರಿಸಿದರೆ ವಿರಸ ಉಂಟಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಯಾವುದೇ ಹಳೆಯ ಪ್ರೀತಿಯ ಸಂಬಂಧವೂ ಸಹ ನಿಮ್ಮನ್ನು ಕಳೆದುಕೊಳ್ಳುತ್ತದೆ. ಹಳೆಯದನ್ನು ಉಳಿಸಿಕೊಳ್ಳುವಾಗ ಹೊಸ ಪ್ರೀತಿಯ ಸಂಪರ್ಕವನ್ನು ಮಾಡಲು ಎಚ್ಚರಿಕೆಯಿಂದಿರಿ.

ಅದೃಷ್ಟ ದಿನಾಂಕಗಳು ಮತ್ತು ಬಣ್ಣಗಳು

ನಿಮ್ಮ ರಾಶೀಗೆ ಅನುಗುಣವಾಗಿ ಅದೃಷ್ಟ ಸಂಖ್ಯೆಗಳೆಂದರೆ: 6, 18, 41, 77 and 83.

ಅದೃಷ್ಟ ದಿನಾಂಕಗಳು: 2, 3, 11, 12, 13, 21, 22, 29, 30 ಮತ್ತು 31.

ಅದೃಷ್ಟ ಬಣ್ಣಗಳು ಬಿಳಿ, ಲಿಂಬೆ ಹಸಿರು ಅಥವಾ ಎಮರಾಲ್ಡ್ ಹಸಿರು.

ಜ್ಯೋತಿಷ್ಯ ಸಲಹೆ

ಬುಧವಾರದಂದು ನಿಮ್ಮ ಇಡೀ ಮನೆಗೆ ಉಪ್ಪು ನೀರನ್ನು ಸಿಂಪಡಿಸಿ. ನಂತರ ಮನೆಯ ಒಳಗೆ ಮತ್ತು ಹೊರಗೆ ಉಪ್ಪು ನೀರನ್ನು ಇಡಿ. ನಂತರ ಅದನ್ನು ಮನೆಯಿಂದ ಆಚೆ ಚೆಲ್ಲಿ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನಿತರ ರಾಶಿಗಳ ಮೇ ತಿಂಗಳ ಅದೃಷ್ಟವನ್ನು ಅರಿಯಲು ಬಯಸಿದ್ದಾರಾ? ನಮ್ಮ ವಿಭಾಗಕ್ಕೆ ಭೇಟಿ ನೀಡಿ ಮತ್ತು ನಾವು ತರುವ ಪ್ರತಿ ರಾಶಿಯ ಸುದ್ದಿಯನ್ನು ಓದಿ ಮಾಹಿತಿ ತಿಳಿದುಕೊಳ್ಳಿ.

English summary

May 2018 Horoscope Predictions For Aries

Aries are always known to find a way to break ground and take the initiative in almost everything that they do. These individuals are known to be independent and honourable. At the same time, these individuals love to be creative and on the other hand, they are known to lack patience. This sign is ruled by the planet Mars and the element Fire. This is one of the main reasons why these individuals are highly active, enthusiastic and are filled with fury and passion. With the monthly predictions for Aries, we bring in all the details of what are the oncoming events for this zodiac sign during the month of May 2018.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more