Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಶಿಶ್ನವಿಲ್ಲದೆ ಹುಟ್ಟಿದ ವ್ಯಕ್ತಿ 44ರ ಹರೆಯದಲ್ಲಿ ಬ್ರಹ್ಮಚಾರ್ಯ ಕಳಕೊಂಡ!
ಹುಟ್ಟುವಾಗ ದೇಹದ ಕೆಲವೊಂದು ಭಾಗಗಳು ಇಲ್ಲದೆ ಹುಟ್ಟುವುದು ತುಂಬಾ ಕಿಷ್ಟಕರ ಪರಿಸ್ಥಿತಿ. ಇದರಿಂದ ಆ ವ್ಯಕ್ತಿಯ ಜೀವನ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಜನನೇಂದ್ರೀಯವೇ ಇಲ್ಲದೆ ಹುಟ್ಟಿದರೆ ಆಗ ಆ ವ್ಯಕ್ತಿಯ ಪಾಡು ಹೇಗಿರಬೇಕು? ನೀವೇ ಯೋಚಿಸಿ. ಇಂತಹ ವ್ಯಕ್ತಿಯೊಬ್ಬನ ಬಗ್ಗೆ ಈ ಲೇಖನ. ಹುಟ್ಟುತ್ತಲೇ ಈ ವ್ಯಕ್ತಿಗೆ ಜನನೇಂದ್ರಿಯವೇ ಇರಲಿಲ್ಲ. ನಾಲ್ಕು ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಈತನಿಗೆ ಬಯೋನಿಕ್ ಶಿಶ್ನ ಅಳವಿಡಿಸಿದ್ದಾರೆ. ಆಂಡ್ರೂ ವಾರ್ಡ್ಲೆ ಎನ್ನುವಾತ 44ರ ಹರೆಯದಲ್ಲಿ ಬ್ರಹ್ಮಚರ್ಯ ಕಳಕೊಂಡ ಕಥೆಯಿದು.
ಶಿಶ್ನವಿಲ್ಲದೆಯೇ ಆತ ಹುಟ್ಟಿದ್ದ!
ಆಂಡ್ರೂ ವಾರ್ಡ್ಲೆ ಪರಿಸ್ಥಿತಿಯು 20 ಮಿಲಿಯನ್ ಜನರಲ್ಲಿ ಒಬ್ಬರಿಗೆ ಬರುವಂತಹ ಜನನ ಸಂಬಂಧಿ ಅಸಾಮಾನ್ಯತೆ. ಆತ ಶಿಶ್ನವಿಲ್ಲದೆ ಹುಟ್ಟಿದ ಮತ್ತು ಬ್ಲೆಡರ್ ಎಸ್ಟ್ರೋಫಿ ಇತ್ತು. ಇದು ತುಂಬಾ ಅಪರೂಪದ ಜನ್ಮಜಾತ ಅಂಗವೈಕಲ್ಯ. ಇದು ಸಾಮಾನ್ಯವಾಗಿ ಸೊಂಟದೊಳಗಡೆ ಇರುವಂತಹ ಅಂಗ. ಆಂಡ್ರೂ ಪ್ರತಿನಿತ್ಯ ರಾತ್ರಿ ಮಲಗುವಾಗ ದೇವರಲ್ಲಿ ತನಗೆ ಶಿಶ್ನ ನೀಡು ಎಂದು ಪ್ರಾರ್ಥಿಸುತ್ತಿದ್ದ.
ಜನ್ಮವೈಕಲ್ಯದ ಬಗ್ಗೆ
ಆಂಡ್ರೂಗೆ ವೃಷಣಗಳು ಇದ್ದರೂ ಆತನಿಗೆ ಶಿಶ್ನವು ಇರಲಿಲ್ಲವೆಂದು ವರದಿಗಳು ಹೇಳಿವೆ. ಶಿಶ್ನ ಪಡೆಯುವ ಸಲುವಾಗಿ ಆತ ಕಳೆದ ನಾಲ್ಕು ವರ್ಷದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.
Most Read:ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು? ಪ್ರಥಮ ಚಿಕಿತ್ಸೆ ಏನು?
ಬಯೋನಿಕ್ ಶಿಶ್ನ ರೂಪಿಸಿದರು
ಆತನ ಕೈಯ ಚರ್ಮವನ್ನು ಪಡೆದುಕೊಂಡು ವೈದ್ಯರು ಒಂದು ಬಯೋನಿಕ್ ಶಿಶ್ನ ರೂಪಿಸಿದರು. ಕೈಯ ಭಾಗದ ಚರ್ಮ ಮತ್ತು ಕಾಲಿನ ಭಾಗದ ನರಗಳನ್ನು ಬಳಸಿಕೊಂಡು ಇದನ್ನು ತಯಾರಿಸಲಾಯಿತು. ಇದನ್ನು ಅಳವಡಿಸುವ ಮೊದಲು ಹತ್ತು ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಹತ್ತು ದಿನ ನಿಮಿರುವಿಕೆ
ವೈದ್ಯರು ದುಬಾರಿಯಾದ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಸುಮಾರು ಹತ್ತು ದಿನಗಳ ಕಾಲ ಆಂಡ್ರೂಗೆ ತುಂಬಾ ನೋವಿನ ನಿಮಿರುವಿಕೆ ಇತ್ತು. ಆರು ವಾರಗಳ ಕಾಲ ಸೆಕ್ಸ್ ನಡೆಸದಂತೆ ವೈದ್ಯರು ಸೂಚಿಸಿದ್ದರು.
Most Read:ಅಚ್ಚರಿ ಜಗತ್ತು: ಬೀಚ್ನಲ್ಲಿ ನಗ್ನವಾಗಿಯೇ ಮದುವೆಯಾದ ಜೋಡಿ!
ಆತ ಬ್ರಹ್ಮಚರ್ಯ ಕಳಕೊಂಡ
ಮೊದಲ ಸಲ ಪುರುಷತ್ವದ ಸಂಕೇತವನ್ನು ಪಡೆದುಕೊಂಡಿದ್ದ ಆಂಡ್ರೂ 30 ನಿಮಿಷಗಳ ಕಾಲ ತನ್ನ ಗೆಳತಿ ಫೆಡ್ರಾ ಫಾಬಿಯಾನ ಜತೆಗೆ ಸೆಕ್ಸ್ ನಡೆಸಿದ. ಆತ ಈಗ ತಂದೆಯಾಗಬೇಕೆಂದು ಬಯಸಿದ್ದಾನೆ.
ಬಯೋನಿಕ್ ಶಿಶ್ನವು ಹೇಗೆ ಕೆಲಸ ಮಾಡುವುದು?
ಆಂಡ್ರೂ ಈಗ ತನ್ನ ತೊಡೆಸಂಧಿನಲ್ಲಿ ಒಂದು ಗುಂಡಿ ಒತ್ತುವನು. ಈ ವೇಳೆ ಅಂಗವು ಉಬ್ಬಿಸುವಂತೆ ಸಲೈನ್ ಎನ್ನುವ ದ್ರವವು ನೆರವಾಗುವುದು. ಶಸ್ತ್ರಚಿಕಿತ್ಸೆಯು ತಯಶಸ್ವಿಯಾಗಿದೆ ಮತ್ತು ಇದು ಆಂಡ್ರೂಗೆ ತುಂಬಾ ಖುಷಿಯ ವಿಚಾರ. ವೃಷಣಕ್ಕೆ ಈ ಶಿಶ್ನವನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿರುವ ಕಾರಣದಿಂದಾಗಿ ಮಕ್ಕಳಾಗುವಂತಹ ಸಾಧ್ಯತೆಗಳು ಇವೆ ಎನ್ನುತ್ತಾರೆ ವೈದ್ಯರು.