For Quick Alerts
ALLOW NOTIFICATIONS  
For Daily Alerts

ಸಿಂಹ ಮುಖ ಹೊಂದಿದ್ದ ವ್ಯಕ್ತಿ, ಸರ್ಜರಿ ನಂತರ ಮತ್ತೆ ಸಾಮಾನ್ಯನಾದ ಸ್ಟೋರಿ ಇದು

|

ಯಾವುದೇ ರೀತಿಯ ಅಪರೂಪದ ಕಾಯಿಲೆಯಿಂದ ಬಳಲುವುದು ತುಂಬಾ ಕಠಿಣ ಸಮಯ ಹಾಗೂ ನೋವಿನ ವಿಚಾರ. ಅದರಲ್ಲೂ ನಿಮ್ಮ ಪರಿಸ್ಥಿತಿಯ ಬಗ್ಗೆ ವೈದ್ಯರಿಗೆ ತಿಳಿಯದೆ ಇದ್ದರೆ ಆಗ ಭೀತಿ ಆವರಿಸುವುದು. ಇಂತಹ ಉದಾಹರಣೆಯಲ್ಲಿ ವ್ಯಕ್ತಿಯೊಬ್ಬ ತುಂಬಾ ಅಪರೂಪವಾಗಿರುವ ಪರಿಸ್ಥಿತಿಯಿಂದ ಬಳಲುತ್ತಿದ್ದು, ಆತನ ಮುಖವು ಕಳೆದ ಎರಡು ದಶಕಗಳಿಂದ ಸಿಂಹದಂತೆ ಪರಿವರ್ತನೆಯಾಗಿದೆ ಮತ್ತು ಈಗ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಿಂಹ ಮುಖ ಹೊಂದಿದ್ದ ವ್ಯಕ್ತಿಯ ಬಗ್ಗೆ ಮತ್ತು ನಡೆಸಿರುವಂತಹ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿಯಿರಿ.

ಭಾರತದಲ್ಲೇ ನಡೆದಿರುವುದು

ಭಾರತದಲ್ಲೇ ನಡೆದಿರುವುದು

ತಮಿಳುನಾಡಿನ ಸುರೇಶ್ ಎಂಬಾತನ ಮುಖವು ಆತನಿಗೆ 18 ವರ್ಷವಿದ್ದಾಗ ಸಿಂಹದ ಮುಖವಾಗಿ ಪರಿವರ್ತನೆ ಹೊಂದಲು ಆರಂಭವಾಯಿತು. ಆತನ ಮುಖವನ್ನು ಮತ್ತೆ ಹಿಂದಿನಂತೆ ಮಾಡಲು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಯಿತು.

ಆತನ ಪರಿಸ್ಥಿತಿ

ಆತನ ಪರಿಸ್ಥಿತಿ

ಫೈಬರಸ್ ಡಿಸ್ಪ್ಲಾಸಿಯಾ ಎಂದು ಕರೆಯಲ್ಪಡುವಂತಹ ವೈದ್ಯಕೀಯ ಪರಿಸ್ಥಿತಿಯು ಆತನದ್ದಾಗಿತ್ತು ಎಂದು ವೈದ್ಯರು ವಿವರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಾಮಾನ್ಯ ಮೂಳೆಯು ಸಂಪರ್ಕಿಸುವ ಅಂಗಾಂಶಗಳಿಂದ ಬದಲಿಸಲ್ಪಡುವುದು. ಸಿಂಹ ಮುಖದ ಸಮಸ್ಯೆಗೆ ಯಾವುದೇ ಚಿಕಿತ್ಸೆ ನೀಡದೆ ಬಿಟ್ಟರೆ ಆಗ ಇದು ಕಣ್ಣುಗಳು, ಮುಖ ಮತ್ತು ಮೂಗಿಗೆ ವ್ಯಾಪಿಸಬಹುದು.

Most Read: ನೀವು ಅರಿಯದೇ ಇರುವ ಹಣಗಳಿಕೆಯ 7 ಸೂತ್ರಗಳು ಇಲ್ಲಿದೆ ನೋಡಿ

ಮುಖವು ಊದಿಕೊಂಡಿತ್ತು

ಮುಖವು ಊದಿಕೊಂಡಿತ್ತು

ಆತನ ಮುಖವು ಅಸಾಮಾನ್ಯ ರೀತಿಯಲ್ಲಿ ಊದಿಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಸ್ಪರ್ಶ ಕಳೆದುಕೊಳ್ಳಬಹುದು ಮತ್ತು ಅಂತಿಮವಾಗಿ ಸಾವು ಬರಬಹುದು. ಕಳೆದ 20 ವರ್ಷಗಳಿಂದ ಆತ ಇದೇ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾನೆ. ಯಾಕೆಂದರೆ ಆತನ ಪರಿಸ್ಥಿತಿ ಅರ್ಥ ಮಾಡಿಕೊಂಡು ವೈದ್ಯರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿರಲಿಲ್ಲ.

20 ವರ್ಷಗಳ ಬಳಿಕ ಚಿಕಿತ್ಸೆ ನೀಡಲಾಯಿತು

20 ವರ್ಷಗಳ ಬಳಿಕ ಚಿಕಿತ್ಸೆ ನೀಡಲಾಯಿತು

ತುಂಬಾ ನೋವು, ಸಂಕಟದಲ್ಲಿ 20 ವರ್ಷಗಳನ್ನು ಕಳೆದ ಸುರೇಶ್ ಗೆ ಅಂತಿಮವಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಸಿಂಹದ ಮುಖವನ್ನು ನೀಡುತ್ತಿದ್ದ ದೊಡ್ಡ ಎಲುಬುಗಳನ್ನು ಬದಲಾಯಿಸಲಾಯಿತು. ಮುಖದ ಮೂಲೆಗಳನ್ನು ಕೊರದು ಮತ್ತೆ ಹೊಸ ವಿನ್ಯಾಸ ನೀಡಲಾಯಿತು.

ಇವೆಲ್ಲಾ ಪ್ಲಾಸ್ಟಿಕ್ ಸರ್ಜರಿ ಮಹಿಮೆ! ಹೀಗೂ ಉಂಟೇ..?

ಇವೆಲ್ಲಾ ಪ್ಲಾಸ್ಟಿಕ್ ಸರ್ಜರಿ ಮಹಿಮೆ! ಹೀಗೂ ಉಂಟೇ..?

ಪ್ಲಾಸ್ಟಿಕ್ ಸರ್ಜರಿಯಲ್ಲಿ ತಪ್ಪುಗಳು ಆದಾಗ ಅದರಿಂದ ರೋಗಿ ಪಡುವ ಕಷ್ಟ, ಎದುರಿಸುವಂತಹ ಪರಿಸ್ಥಿತಿಯನ್ನು ಹೇಳತೀರದು. ಜೀವನವಿಡಿ ಅವರು ನರಕಯಾತನೆ ಅನುಭವಿಸಬೇಕಾಗುತ್ತದೆ. ಆದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ವೈದ್ಯರು ಮತ್ತಷ್ಟು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆದರೆ ಎಲ್ಲವೂ ಸಫಲವಾಗುವುದಿಲ್ಲ. ಈ ಲೇಖನದಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಕೆಲವು ವ್ಯಕ್ತಿಗಳ ಬಗ್ಗೆ ನಾವು ತಿಳಿದುಕೊಳ್ಳುವ...

ಪೃಷ್ಠ ಮತ್ತು ಸೊಂಟದ ಇಂಜೆಕ್ಷನ್ ಚುಚ್ಚಿಸಿಕೊಂಡ ಮಹಿಳೆ

ಪೃಷ್ಠ ಮತ್ತು ಸೊಂಟದ ಇಂಜೆಕ್ಷನ್ ಚುಚ್ಚಿಸಿಕೊಂಡ ಮಹಿಳೆ

ಪೃಷ್ಠ ಮತ್ತು ಸೊಂಟದ ಇಂಜೆಕ್ಷನ್ ಗಾಗಿ ಮಹಿಳೆಯು ಸುಮಾರು 15 ಕೋಟಿ ವ್ಯಯಿಸಿದ್ದಾಳೆ. ಸಿಲಿಕಾನ್ ಹೊಂದಿರುವ ಇಂತಹ ಇಂಜೆಕ್ಷನ್ ಗಳಿಗೆ ತಾನು ದಾಸಳಾಗಿರುವ ಬಗ್ಗೆ ಎರಡು ಮಕ್ಕಳ ತಾಯಿ ಹೇಳಿಕೊಂಡಿದ್ದಾಳೆ. ತನ್ನ ಪುಸ್ತಕ `ಶಾಟ್ ಗರ್ಲ್ಸ್' ನಲ್ಲಿ ಅವಳು ಕಾಸ್ಮೆಟಿಕ್ ಕಾಳದಂಧೆಯ ಬಗ್ಗೆ ತಿಳಿಸಿದ್ದಾಳೆ.

ನಕಲಿ ಸ್ತನ ಹೊಂದಿರುವ ಯುರೋಪ್ ನ ಮಹಿಳೆ

ನಕಲಿ ಸ್ತನ ಹೊಂದಿರುವ ಯುರೋಪ್ ನ ಮಹಿಳೆ

ಈ ಮಹಿಳೆ ಯುರೋಪ್ ನಲ್ಲಿ ಅತೀ ದೊಡ್ಡ ಸ್ತನ ಹೊಂದಿರುವ ದಾಖಲೆಯನ್ನು ಹೊಂದಿದ್ದಾಳೆ. ಆಕೆಗೆ ತನ್ನ ಸ್ತನವನ್ನು ಬಿ ಸೈಜ್ ಮಾಡಬೇಕೆನ್ನುವ ಹಂಬಲವಿತ್ತು. ಆದರೆ ಅದೀಗ ಝಡ್ ಸೈಜ್ ಗೆ ಬಂದು ನಿಂತಿದೆ. ಇದರಿಂದ ತೊಂದರೆಯಾಗುವುದಿಲ್ಲವೇ ಎಂದು ಕೇಳಿದಾಗ, ನನಗೆ ಹಾಗನಿಸುವುದಿಲ್ಲ ಎನ್ನುತ್ತಾಳಂತೆ!

Most Read: ಈ ಐದು ರಾಶಿಚಕ್ರದವರು ಹೆಚ್ಚು ಮೋಸ ಮಾಡುವ ಸಾಧ್ಯತೆಗಳಿರುತ್ತವೆಯಂತೆ!!

ಎತ್ತರಕ್ಕೆ ಬೆಳೆದ ಯುವಕ '

ಎತ್ತರಕ್ಕೆ ಬೆಳೆದ ಯುವಕ '

ಅತ್ಯಂತ ಯಾತನದಾಯಕ ಶಸ್ತ್ರಚಿಕಿತ್ಸೆಯ ಬಳಿಕ ಯುವಕನು 6 ಇಂಚು ಎತ್ತರವಾಗಿದ್ದಾನೆ. ಕಾಲನ್ನು ಉದ್ದ ಮಾಡುವಂತಹ ಶಸ್ತ್ರಚಿಕಿತ್ಸೆಯ ಮೂಲಕ ಯುವಕನ ಎತ್ತರವನ್ನು ಹೆಚ್ಚಿಸಲಾಗಿದೆ. ಕುಳ್ಳಗೆ ಇರುವ ಯುವಕರು ಇಂದಿನ ದಿನಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ಮಾಡಿಸುತ್ತಿರುತ್ತಾರೆ.

ಜೆಸ್ಸಿಕಾ ರಾಬ್ಬಿಟ್ ಆಗಲು ಬಯಸಿದ ಮಹಿಳೆ

ಜೆಸ್ಸಿಕಾ ರಾಬ್ಬಿಟ್ ಆಗಲು ಬಯಸಿದ ಮಹಿಳೆ

ಇದನ್ನು ಆಸೆಯಲ್ಲ, ದುರಾಸೆಯೆನ್ನಬಹುದು. ಮಹಿಳೆಯು ಜೆಸ್ಸಿಕಾ ರಾಬ್ಬಿಟ್ ಆಗಲು ತನ್ನ ತುಟಿಗಳಿಗೆ ಸುಮಾರು 100 ಇಂಜೆಕ್ಷನ್ ಗಳನ್ನು ತೆಗೆದುಕೊಂಡಿದ್ದಾಳೆ. ತನ್ನ ತೆಳುವಾದ ತುಟಿಯಿಂದ ಅತೃಪ್ತಿ ಹೊಂದಿದ್ದ ಮಹಿಳೆ ಅದನ್ನು ದಪ್ಪ ಮಾಡಲು ಶಸ್ತ್ರಚಿಕಿತ್ಸೆಗೆ ಒಳಗಾದಳು.

ಪೃಷ್ಠದ ಮರುಜೋಡನೆ

ಪೃಷ್ಠದ ಮರುಜೋಡನೆ

ಪೃಷ್ಠದ ಮರುಜೋಡನೆಯ ಅತ್ಯಂತ ಆಘಾತಕಾರಿ ಶಸ್ತ್ರಚಿಕಿತ್ಸೆ ಇದಾಗಿದೆ. ಇದರಲ್ಲಿ ನಕಲಿ ವೈದ್ಯನೊಬ್ಬ ಮಹಿಳೆಗೆ ಸಿಮೆಂಟ್ ನ ಇಂಜೆಕ್ಷನ್ ನೀಡಿ ಪೃಷ್ಠವನ್ನು ಜೋಡಿಸಲು ಬಯಸಿದ್ದ. ಆತನನ್ನು ಬಂಧಿಸಲಾಗಿದೆ. ಇದಕ್ಕಾಗಿ ಆತ ಸಿಮೆಂಟ್, ಮಿನರಲ್ ಮತ್ತು ಫಿಕ್ಸ್ ಎ ಫ್ಲ್ಯಾಟ್ ಟಯರ್ ಮೆಂಡರ್ ಬಳಸಿದ್ದ. ತೆರೆದ ದೇಹದ ಭಾಗವನ್ನು ಜೋಡಿಸಲು ಆತ ಗಮ್ ಬಳಸಿದ್ದ. ಈ ಮಹಿಳೆ ಈಗ ತೀವ್ರ ಒತ್ತಡದಿಂದಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆ.

ವಲೆರಿಯಾ ಲುಕ್ಯನೊವಾ

ವಲೆರಿಯಾ ಲುಕ್ಯನೊವಾ

ಈಕೆ ಬಾರ್ಬಿ ಗೊಂಬೆಯಂತೆ ಕಾಣಲು ಬಯಸಿ ತನ್ನ ಪಕ್ಕೆಲುಬುಗಳನ್ನು ತೆಗೆಸಿಕೊಂಡಳು. ಒಂದು ಕಾರ್ಟೂನ್ ಪಾತ್ರವನ್ನು ನೋಡಿ ತಮ್ಮ ದೇಹದ ಒಂದು ಭಾಗವನ್ನೇ ತೆಗೆಸುವಂತಹ ಹುಚ್ಚು ಜನರು ಈ ಭೂಮಿ ಮೇಲಿದ್ದಾರೆ ನೋಡಿ. ಪರಿಣಾಮಗಳು ಏನೇ ಆದರೂ ಆಕೆ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ.

Most Read: ಮನೆಯ ವಾಸ್ತು ಸಮಸ್ಯೆಯಿಂದ ಕೂಡ, ಆತ್ಮಹತ್ಯೆ ಆಲೋಚನೆ ಬರುತ್ತದೆಯಂತೆ!!

ಮುಖಕ್ಕೆ ಕಾಂಕ್ರೀಟ್ ಇಂಜೆಕ್ಷನ್

ಮುಖಕ್ಕೆ ಕಾಂಕ್ರೀಟ್ ಇಂಜೆಕ್ಷನ್

ಈ ಬಡಪಾಯಿ ಮಹಿಳೆಯ ಗಲ್ಲದ ಮೇಲೆ ಕಾಂಕ್ರೀಟ್ ಇಂಜೆಕ್ಷನ್ ನೀಡಲಾಗಿದೆ. ಇದರಿಂದ ಆಕೆಯ ಮುಖಕ್ಕೆ ಸರಿಪಡಿಸಲಾರದಷ್ಟು ವಿಕಾರಗೊಂಡಿದೆ. ಈಗ ಗಲ್ಲದ ಮೇಲೆ ಕಲೆಗಳು, ಮೇಲ್ಡುಟಿಯು ಬಲೂನಿನಂತೆ ಉಬ್ಬಿಕೊಂಡು ಮಹಿಳೆಯು ವಿಕಾರವಾಗಿ ಕಾಣಿಸುತ್ತಿದ್ದಾಳೆ.

English summary

Lion-faced Man Who Underwent Surgery

Suffering from an unknown condition can be quite painful, especially when the doctors are clueless about your condition. Here is one such example of a person who suffers from a rare condition that left him with a lion-face for over two decades before he was operated on. Check out the details of the transformation of the 'lion-faced' man and how he looks after his surgery.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more