For Quick Alerts
ALLOW NOTIFICATIONS  
For Daily Alerts

  ತುಲಾ ರಾಶಿಯ ಜೂನ್ ತಿಂಗಳ ಭವಿಷ್ಯ

  |

  ಜೂನ್ ತಿಂಗಳಲ್ಲಿ ತುಲಾ ರಾಶಿಯವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಪ್ರಸಿದ್ಧಿಯನ್ನು ಪಡೆದುಕೊಳ್ಳುವರು. ಈ ವರ್ಷಪೂರ್ತಿ ನೀವು ಧನಾತ್ಮಕ ಪರಿಸ್ಥಿತಿಯನ್ನೇ ಹೆಚ್ಚಾಗಿ ಅನುಭವಿಸಲಿದ್ದೀರಿ. ಜೀವನದ ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಆಂತರಿಕವಾಗಿ ತೊಳಲಾಟಕ್ಕೆ ಒಳಗಾಗುವಿರಿ. ಅಂತಹ ಘರ್ಷಣೆಗಳ ಮೂಲ ಕಾರಣವನ್ನು ಅರ್ಥೈಸಿಕೊಂಡು, ಅವುಗಳ ಸುಧಾರಣೆಗೆ ಮುಂದಾಗಬೇಕು. ನಿಮ್ಮ ಜೀವನದಲ್ಲಿ ನೀವು ಯಾವ ದಿಕ್ಕಿಗೆ ಸಾಗಬೇಕು ಎನ್ನುವುದನ್ನು ನಿರ್ಧರಿಸಲು ಇದೊಂದು ಉತ್ತಮವಾದ ಸಮಯ.

  ನಿಮ್ಮ ಮೃದು ಸ್ವಭಾವವನ್ನು ಅರಿತು ಇತರ ವ್ಯಕ್ತಿಗಳು ಅದರ ಸದುಪಯೋಗ ಪಡಿಸಿಕೊಳ್ಳಲು ಬಿಡದಿರಿ. ನಿಮ್ಮ ಪರಿಪೂರ್ಣ ಸಮತೋಲನ ಸಾಮಥ್ರ್ಯ ಅಥವಾ ಕೌಶಲ್ಯದಿಂದ ವೃತ್ತಿ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ಆಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುವುದಿಲ್ಲ. ನಿಮ್ಮ ಅಧೀನದಲ್ಲಿರುವ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗುವಿರಿ. ಯಾವುದೇ ಅಡೆತಡೆ ಎದುರಾದರೂ ನಿಮ್ಮ ಗುರಿಯನ್ನು ಸಾಧಿಸುವುದನ್ನು ಮರೆಯದಿರಿ.

  Libra Monthly Horoscope

  ತಿಂಗಳ ಮಧ್ಯದ ಅವಧಿಯಲ್ಲಿ ಗ್ರಹಗತಿಗಳ ಪ್ರಭಾವದಿಂದ ವೃತ್ತಿ ಜೀವನದಲ್ಲಿ ವಿಭಿನ್ನವಾದ ತಿರುವನ್ನು ಪಡೆದುಕೊಳ್ಳುವಂತೆ ಒತ್ತಾಯಕ್ಕೆ ಒಳಗಾಗುವ ಸಾಧ್ಯತೆಗಳಿವೆ. ವೃತ್ತಿ ನಿರ್ಧಾರದಲ್ಲಿ ಬೇರೊಂದು ಯೋಜನೆಯನ್ನು ಕೈಗೊಳ್ಳುವ ಹವಣಿಕೆ ಯಿದ್ದರೆ ಅದರ ಬಗ್ಗೆ ಸಂಪೂರ್ಣವಾದ ಖಚಿತತೆಯನ್ನು ಪಡೆದುಕೊಳ್ಳಿ.

  ಅನುಭವಸ್ಥರ ಅಥವಾ ವಿಶೇಷ ತಜ್ಞರ ಮಾರ್ಗದರ್ಶನ ಅಥವಾ ಸಲಹೆಯ ಮೇರೆಗೆ ಸೂಕ್ತ ಮಾರ್ಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜೂನ್ ತಿಂಗಳಲ್ಲಿ ವೃತ್ತಿ, ಹಣಕಾಸು, ಆರೋಗ್ಯ, ಸಂಬಂಧ ಸೇರಿದಂತೆ ಯಾವೆಲ್ಲಾ ವಿಚಾರದಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

  ಆರೋಗ್ಯ ಸ್ಥಿತಿ

  ಈ ತಿಂಗಳು ನಿಮಗೆ ನಿಮ್ಮ ದೈಹಿಕ ಆರೋಗ್ಯಕ್ಕಿಂತ ಆಧ್ಯಾತ್ಮಿಕ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ಇರಿಸುವಿರಿ. ಆಧ್ಯಾತ್ಮಿಕ ವಿಚಾರದಲ್ಲಿ ಜ್ಞಾನೋದಯ ಪಡೆದ ನೀವು ದೈನಂದಿನ ಜೀವನದ ಮೇಲೆ ಗಮನಾರ್ಹ ಬದಲಾವಣೆ ಹಾಗೂ ಪರಿಣಾಮವನ್ನು ಅನುಭವಿಸುವಿರಿ.  ಈ ತಿಂಗಳು ನೀವು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿಲ್ಲವಾದರೂ ನಿಮ್ಮ ಆಹಾರ ಪದ್ಧತಿ ಮತ್ತು ನಿಯಮಿತವಾದ ವ್ಯಾಯಾಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಹೊಂದಿದವರು ಕೊಂಚ ಪರಿಹಾರವನ್ನು ಕಂಡುಕೊಳ್ಳುವರು. ಹೊಸ ಲೈಂಗಿಕ ಅನುಭವಗಳಿಗೆ ನೀವು ತೆರೆದುಕೊಳ್ಳುವಿರಿ. ತಿಂಗಳ ಕೊನೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೆರೆದುಕೊಳ್ಳುವಿರಿ. ನಿಮ್ಮ ಈ ಪರಿಯ ವರ್ತನೆ ಅಥವಾ ಬದಲಾವಣೆಗಳು ನಿಮಗೆ ಮಾನಸಿಕವಾಗಿ ಒತ್ತಡವನ್ನು ಉಂಟುಮಾಡುವುದು.

  ವೃತ್ತಿ ಜೀವನ

  ಮಂಗಳ ಗ್ರಹವು ನಿಮ್ಮ ಮೇಲೆ ಅತ್ಯುತ್ತಮ ಪ್ರಭಾವ ಬೀರುವುದರಿಂದ ತಿಂಗಳು ಪೂರ್ತಿ ದೊಡ್ಡ ದೊಡ್ಡ ವ್ಯವಹಾರ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಉದ್ಯೋಗವನ್ನು ಅರಸುತ್ತಿರುವವರಿಗೆ ಉದ್ಯೋಗ ಪ್ರಾಪ್ತಿಯಾಗುವುದು. ನಿಮಗೆ ಹಾನಿಯುಂಟುಮಾಡುವಂತಹ ನಿರ್ಧಾರಗಳನ್ನು ನೀವು ಕೈಗೊಳ್ಳುವ ಮುಂಚೆ ಸಾಕಷ್ಟು ಜಾಗರೂಕತೆಯನ್ನು ವಹಿಸಬೇಕು. ಆಗಲೇ ನಿಮಗೆ ಮಾನಸಿಕವಾಗಿ ಶಾಂತಿ ಲಭಿಸುವುದು. ಕೆಲಸದಲ್ಲಿ ಸಂವಹನ ವಾಹಿನಿಗಳು ಬಲವಾಗಿರುವುದಿಲ್ಲ. ಸಹೋದ್ಯೋಗಿಗಳ ನಡುವೆ ತಪ್ಪು ಗ್ರಹಿಕೆ ಉಂಟಾಗುವ ಸಾಧ್ಯತೆಗಳಿವೆ. ಮೇಲಾಧಿಕಾರಿಗಳು ಹೇಳಿದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವುದನ್ನು ಮರೆಯದಿರಿ.

  ಆರ್ಥಿಕ ಸ್ಥಿತಿ

  ನೀವು ಕೆಲವು ವಿಚಾರವನ್ನು ನಿಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ಅನುಚಿತ ಮಾರ್ಗದಿಂದ ಗಳಿಸಿದ ಹಣ ಶಾಶ್ವತವಾಗಿ ಇರದು. ಜೊತೆಗೆ ದೀರ್ಘಾವಧಿಯ ನಂತರ ಅದು ಹಾನಿಗೊಳಗಾಗುವಂತೆ ಮಾಡುವುದು. ವಿವಿಧ ಮೂಲಗಳಿಂದ ಹಣವನ್ನು ಪಡೆಯುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೂ ಅನಗತ್ಯ ಖರ್ಚುಗಳಿಂದ ಆದಷ್ಟು ದೂರ ಇರಬೇಕು. ವಿಶ್ವಾಸಾರ್ಹ ಮ್ಯೂಚುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮಗೆ ಸುಂದರವಾದ ಆದಾಯವನ್ನು ನೀಡುತ್ತದೆ. ಇತರರಿಗೆ ಸಾಲವಾಗಿ ನೀಡಿದ ಹಣವನ್ನು ನೀವು ಪುನಃ ಪಡೆದುಕೊಳ್ಳಲು ಕಷ್ಟವಾಗುವುದು. ಹಣವನ್ನು ಉಳಿತಾಯ ಮಾಡುವ ನಿಯಮಗಳನ್ನು ನೀವು ಅರಿತುಕೊಳ್ಳಬೇಕು. ಜೂನ್ 22ರ ನಂತರ ಆರ್ಥಿಕ ಸ್ಥಿತಿ ಇನ್ನಷ್ಟು ಬಲಗೊಳ್ಳುವುದು.

  ಪ್ರೀತಿಯ ಜೀವನ

  ಗ್ರಹಗತಿಗಳ ಪ್ರಭಾವದಿಂದ ಈ ತಿಂಗಳು ನೀವು ಉತ್ತಮ ಪ್ರೀತಿಯ ಜೀವನವನ್ನು ಹೊಂದುವಿರಿ. ನಿಮ್ಮ ಪಾಲುದಾರರೊಂದಿಗೆ ಸಿಹಿ-ಕಹಿ ಜೀವನವನ್ನು ಅನುಭವಿಸುವಿರಿ. ನಿಮ್ಮ ನಡುವೆ ಉತ್ತಮ ಹೊಂದಾಣಿಕೆ ಹಾಗೂ ತಿಳಿವಳಿಕೆ ಇರುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ಪ್ರೀತಿಯು ಹೆಚ್ಚುತ್ತದೆ. ಆದರೆ ಕೆಲವು ಸಮಸ್ಯೆಗಳು ಆಗಾಗ ದುಃಖವನ್ನು ಉಂಟುಮಾಡಬಹುದು. ಪರಸ್ಪರ ಸಹಕಾರ ಹಾಗೂ ಪ್ರೀತಿಯನ್ನು ಹೊಂದಿರುವುದರಿಂದ ಉತ್ತಮ ಬದುಕನ್ನು ಕಾಣುವಿರಿ. ಅವಿವಾಹಿತರು ವಿವಾಹವಾಗಲು ಅಥವಾ ಸಂಗಾತಿಯನ್ನು ಹೊಂದಲು ಸ್ವಲ್ಪ ಕಷ್ಟವಾಗಬಹುದು. ಗ್ರಹಗಳ ಉತ್ತಮ ಸಹಕಾರ ದೊರೆಯದ ಕಾರಣ ಪ್ರೇಮಿಗಳು ಭಾವೋದ್ರಿಕ್ತತೆಗೆ ಒಳಗಾಗುವ ಸಾಧ್ಯತೆಗಳಿವೆ. ವಿವಾಹಿತರು ಕುಟುಂಬದಲ್ಲಿ ಸಿಹಿ ಸುದ್ದಿಯನ್ನು ಪಡೆದುಕೊಳ್ಳುವರು.

  ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳು

  ಅದೃಷ್ಟದ ಬಣ್ಣಗಳು ಗುಲಾಬಿ ಮತ್ತು ಹಸಿರು.

  ಅದೃಷ್ಟದ ಸಂಖ್ಯೆಗಳು 4, 6, 13 ಮತ್ತು 15.

  English summary

  Libra Monthly Horoscope for June 2018

  Librans are known for their charming and extreme personality. Though most of this year is predicted to be positive for you, there may be some not-so-pleasant instances as well. You will be troubled with a lot of conflict between you and your inner self with regards to all major aspects of life. It is important to understand the root cause of such conflicts and then act upon them. This will also help you determine what direction you want to go in your life. Here is your detailed horoscope regarding your career, finances and love life.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more