For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಅನುಸಾರ ಯಾವ್ಯಾವ ರಾಶಿಯವರಿಗೆ ಏನೆಲ್ಲಾ ನ್ಯೂನತೆ ಇದೆ ಎಂಬುದನ್ನು ನೋಡಿ

|

ನ್ಯೂನತೆ ಎನ್ನುವುದು ಪ್ರತಿಯೊಂದು ವಸ್ತು ಹಾಗೂ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಪರಿಪೂರ್ಣವಾದ ವ್ಯಕ್ತಿ ಅಥವಾ ವಸ್ತು ಎನ್ನುವುದು ಇಲ್ಲ ಎಂದು ಹೇಳಬಹುದು. ಪ್ರತಿಯೊಂದರಲ್ಲೂ ಕೆಟ್ಟದ್ದು ಹಾಗೂ ಒಳ್ಳೆಯದ್ದು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಎಲ್ಲಿ ಒಳ್ಳೆಯದು ಇರುತ್ತದೆಯೋ ಅಲ್ಲಿ ಕೆಟ್ಟದ್ದೂ ಇದ್ದೇ ಇರುತ್ತದೆ.

ಪ್ರತಿಯೊಂದು ರಾಶಿಚಕ್ರದವರು ಸಹ ಈ ವಿಚಾರಕ್ಕೆ ಅನ್ವಯಿಸುತ್ತಾರೆ. ಪ್ರತಿಯೊಬ್ಬರಲ್ಲೂ ಅವರವರ ಗ್ರಹಗಳ ಆಳ್ವಿಕೆಗೆ ಅನುಗುಣವಾಗಿ ಕೆಲವು ನ್ಯೂನತೆಗಳು ಇದ್ದೇ ಇರುತ್ತವೆ. ಅವುಗಳನ್ನು ನಾವು ಸರಿಪಡಿಸಿಕೊಳ್ಳುವ ಅಥವಾ ನಿಯಂತ್ರಣದಲ್ಲಿಟ್ಟುಕೊಳ್ಳುವ ಗುಣ ಇರಬೇಕು ಅಷ್ಟೆ. ಹಾಗಾದರೆ ಆ ನ್ಯೂನತೆಗಳು ಏನು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ವಿವರಿಸಿ....

ಮೇಷ

ಮೇಷ

ಈ ರಾಶಿಯವರು ಸಾಮಾನ್ಯವಾಗಿ ಉತ್ತಮ ಹೃದಯ ಹಾಗೂ ಸಾಕಷ್ಟು ಕಾಳಜಿಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಆದರೆ ಇವರಿಗೆ ಕೋಪ ಬಂದಾಗ ಮಾತ್ರ ನಿಯಂತ್ರಣವಿರುವುದಿಲ್ಲ ಎನ್ನಬಹುದು. ತಮ್ಮ ತಪ್ಪುಗಳನ್ನು ಇವರು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಅಚಲ ಸಾಮರ್ಥ್ಯವನ್ನು ಹೊಂದಿರುವ ಇವರು ಸದಾ ಒಂದಲ್ಲಾ ಒಂದು ವ್ಯಕ್ತಿಗಳಿಂದ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ.

ವೃಷಭ

ವೃಷಭ

ಈ ರಾಶಿಯವರು ಸ್ವಲ್ಪ ಸೋಮಾರಿ ವರ್ತನೆಯನ್ನು ತೋರುವ ವ್ಯಕ್ತಿಗಳು ಎನ್ನಬಹುದು. ಇವರು ಕೆಲವೊಮ್ಮೆ ಒಂದು ಗ್ಲಾಸ್ ನೀರನ್ನು ಕುಡಿಯಲು ಸೋಮಾರಿತನವನ್ನು ತೋರುವರು. ಸಿಟ್ಟಿಗೆ ಒಳಗಾದಾಗ ಸೇಡನ್ನು ತೀರಿಸಿಕೊಳ್ಳುವ ಮನಸ್ಸನ್ನು ಮಾಡುವರು. ಸಂಪ್ರದಾಯ ಬದ್ಧರಾದ ಇವರು ಸ್ವಾತಂತ್ರ್ಯದ ಕೀಲಿಯನ್ನು ಇವರ ಕೈಲಿ ಹಸ್ತಾಂತರಿಸುವಾಗ ಸಾಕಷ್ಟು ಜಾಗರೂಕರಾಗಿರಬೇಕು.

ಮಿಥುನ

ಮಿಥುನ

ಇವರು ಬಹುತೇಕ ಸಂದರ್ಭದಲ್ಲಿ ಮೌನವಾಗಿರುತ್ತಾರೆ. ಆದರೆ ಬುದ್ಧಿವಂತರಾಗಿರುತ್ತಾರೆ. ಅವರು ವಿಶ್ವಾಸಾರ್ಹ ವಕ್ತಿಗಳಾಗಿರುತ್ತಾರೆ. ಆಗಾಗ ಉಂಟಾಗುವ ಭಾವನೆಗಳ ಏರಿಳಿತದಿಂದ ಮನಸ್ಸಿನಿಂದಾಗಿ ತಮ್ಮ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆಗಳಿವೆ. ಇವರಲ್ಲಿ ಧೈರ್ಯದ ಕೊರತೆ ಇರುತ್ತದೆ ಎಂದು ಹೇಳಲಾಗುವುದು. ಉತ್ತಮ ಹೃದಯವನ್ನು ಹೊಂದಿರುವ ಇವರು ಬಹುಬೇಗ ಭಾವನಾತ್ಮಕವಾಗಿ ವರ್ತಿಸುವರು.

ಕರ್ಕ

ಕರ್ಕ

ಅತ್ಯಂತ ಕಾಳಜಿಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಇಷ್ಟವಾಗದ ರೀತಿಯಲ್ಲಿ ವರ್ತಿಸಿದರೆ ಇವರು ಸಹಿಸುವುದಿಲ್ಲ. ಬಹುಬೇಗ ಕಠಿಣ ಮನಃಸ್ಥಿತಿಯನ್ನು ಹೊಂದುವರು. ಇವರು ಗಾಳಿಯಲ್ಲಿ ಕೋಟೆ ನಿರ್ಮಿಸುವಂತೆ ಆಲೋಚನೆಗಳನ್ನು ಹಾಗೂ ಯೋಜನೆಗಳನ್ನು ಹೊಂದುತ್ತಾರೆ. ಅದು ಕಾರ್ಯ ರೂಪಕ್ಕೆ ಬರದೆ ಇರುವಾಗ ಬಹುಬೇಗ ಕೋಪಗೊಳ್ಳುವರು. ವಿಶ್ರಾಂತಿ ಇಲ್ಲದೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಸಿಂಹ

ಸಿಂಹ

ಇವರು ಪ್ರತಿಭಾನ್ವಿತರು ಮತ್ತು ಉತ್ತಮ ವರ್ತನೆ ಹೊಂದಿದವರಾಗಿರುತ್ತಾರೆ. ಆದರೆ ಕೆಲವೊಮ್ಮೆ ಅತೀರೇಕದ ಅಸೂಯೆ ಹೊಂದುವ ಸಾಧ್ಯತೆಗಳಿರುತ್ತವೆ. ತಮ್ಮ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸುವರು. ಇವರ ಭವಿಷ್ಯದ ಚಿಂತನೆಯು ಪ್ರಸ್ತುತ ಬದುಕಿನ ನೆಮ್ಮದಿಯನ್ನು ಹಾಳುಮಾಡುವುದು. ಕೆಲವೊಮ್ಮೆ ವೈಯಕ್ತಿಕ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ. ಇವರು ಬಹುಬೇಗ ಇತರರನ್ನು ನಂಬುತ್ತಾರೆ.

ಕನ್ಯಾ

ಕನ್ಯಾ

ಈ ವ್ಯಕ್ತಿಗಳಲ್ಲಿ ಕೆಲವೊಮ್ಮೆ ಅಸೂಯೆಯ ಸ್ವಭಾವ ಕಾಣಿಸಿಕೊಳ್ಳುವುದು. ಇವರು ವಿಷಯಗಳನ್ನು ಉತ್ಪ್ರೇಕ್ಷಿಸುತ್ತಾರೆ. ಜನರು ಕೋಪಗೊಂಡಾಗ ಕೆಟ್ಟದಾಗಿ ಮಾತನಾಡುವರು. ಇವರಿಗೆ ತಾಳ್ಮೆಯ ಕೊರತೆಯಿದೆ ಎಂದು ಹೇಳಬಹುದು. ಆತ್ಮವಿಶ್ವಾಸವು ಕೆಲವೊಮ್ಮೆ ವಿಶ್ವಾಸಾರ್ಹ ಸ್ವರೂಪವನ್ನು ಪಡೆದುಕೊಳ್ಳುವುದು. ಇವರು ಯಾವುದೇ ವಿಚಾರಕ್ಕೂ ಯಾರನ್ನೂ ಕೇಳುವುದಿಲ್ಲ ಮತ್ತು ಇತರರ ಸಲಹೆಯನ್ನು ನಿರ್ಲಕ್ಷಿಸುವರು.

ತುಲಾ

ತುಲಾ

ಇವರು ಸಾಕಷ್ಟು ಭಾವನಾತ್ಮಕ ಮತ್ತು ತಮ್ಮ ಜೀವನದ ಕುರಿತು ಹೆಚ್ಚು ಒಲವನ್ನು ಹೊಂದಿರುತ್ತಾರೆ. ಇವರಲ್ಲಿ ಆತ್ಮವಿಶ್ವಾಸದ ಕೊರತೆ ಕಾಣಬಹುದು. ವಿಪರೀತವಾದ ಆತಂಕಗಳು ಅವರಲ್ಲಿ ಆರೋಗ್ಯ ಸಮಸ್ಯೆಯನ್ನು ತರುವುದು. ವಿಪರೀತ ಒತ್ತಡ ಉಂಟಾದಾಗ ಜನರನ್ನು ಕುರುಡಾಗಿ ನಂಬುವರು.

ವೃಶ್ಚಿಕ

ವೃಶ್ಚಿಕ

ಇತರರ ಮಾತಿನಿಂದ ಇವರು ಸುಲಭವಾಗಿ ಗಾಯಗೊಳ್ಳುವರು. ಅಂತಹ ಘಟನೆಗಳನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಮರೆಯುವುದರ ಬದಲು ಇವರು ಸೇಡು ತೀರಿಸಿಕೊಳ್ಳಲು ಮುಂದಾಗುವರು. ಇವರು ಹೃದಯದಲ್ಲಿ ಉತ್ತಮ ವ್ಯಕ್ತಿಯಾಗಿದ್ದರೂ ಕೆಲವೊಮ್ಮೆ ಸ್ವಾರ್ಥ ಹಾಗೂ ಅಸೂಯೆಯ ಗುಣ ತೋರುವರು. ಇವರು ಅಷ್ಟು ಸುಲಭವಾಗಿ ತಪ್ಪು ಮಾಡಿದವರಿಗೆ ಎರಡನೇ ಅವಕಾಶ ನೀಡುವುದಿಲ್ಲ.

ಧನು

ಧನು

ಈ ರಾಶಿಯವರು ಜೂಜಾಟ, ಮದ್ಯಪಾನ, ಅನೈತಿಕ ಚಟುವಟಿಕೆಗಳಂತಹ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಒಂದು ನಿರ್ಧಾರ ಕೈಗೊಂಡ ನಂತರ ಯಾರು ಏನು ಹೇಳಿದರೂ ಅದನ್ನು ಕೇಳುವುದಿಲ್ಲ. ಇವರು ಏನನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಇವರು ಕೆಲವು ಆದೇಶಗಳನ್ನು ಇಷ್ಟಪಟ್ಟರೂ ತಮ್ಮದೇ ಆದ ನಿಯಮವನ್ನು ಹೊಂದಲು ಬಯಸುವರು. ಬಹುತೇಕ ಸಂದರ್ಭದಲ್ಲಿ ಒಂಟಿಯಾಗಿರಲು ಬಯಸುವರು.

ಮಕರ

ಮಕರ

ಈ ರಾಶಿಯವರು ಬಹುತೇಕ ಸಂದರ್ಭದಲ್ಲಿ ಇತರರ ಬಗ್ಗೆ ಸಂದೇಹಾತ್ಮಕವಾಗಿ ವರ್ತಿಸುತ್ತಾರೆ. ಯಶಸ್ಸನ್ನು ಪಡೆಯಲು ಬಹಳಷ್ಟು ಕಷ್ಟಪಡುವರು. ಯಶಸ್ಸು ಹಾಗೂ ಪ್ರೀತಿಗಾಗಿ ಸಾಕಷ್ಟು ಶ್ರಮವಹಿಸುವರು. ಇವರು ವ್ಯಕ್ತಿಯ ಮೇಲೆ ತಮ್ಮ ನಂಬಿಕೆಯನ್ನು ಹೆಚ್ಚು ಬೀರುವರು. ಅದೇ ಕೆಲವೊಮ್ಮೆ ತೊಂದರೆಯನ್ನುಂಟುಮಾಡಬಹುದು.

ಕುಂಭ

ಕುಂಭ

ಇವರು ಒಂದೇ ಸ್ಥಳದಲ್ಲಿ ಒಂದೇ ವ್ಯಕ್ತಿಯೊಂದಿಗೆ ದೀರ್ಘ ಸಮಯಗಳ ಕಾಲ ಉಳಿದುಕೊಳ್ಳಲು ಬಯಸುವುದಿಲ್ಲ. ಒಂದೇ ವ್ಯಕ್ತಿಯೊಂದಿಗೆ ಅಂಟಿಕೊಂಡಿರುವುದು ಬಹಳ ಕಷ್ಟವಾಗುವುದು. ತೀಕ್ಷ್ಣ ಮನಃಸ್ಥಿತಿಯನ್ನು ಹೊಂದಿರುವ ಇವರು ಜನರು ತಮ್ಮನ್ನು ಹೇಗೆ ಬಳಸಿಕೊಳ್ಳುತ್ತಾರೆ ಹಾಗೂ ತಾನು ಅವರೊಂದಿಗೆ ಹೇಗಿರಬೇಕು ಎನ್ನುವುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಸಂಬಂಧ ಉತ್ತಮವಾಗಿಲ್ಲ ಎಂದಾದರೆ ಸಂಬಂಧವನ್ನು ಮುರಿದುಕೊಳ್ಳಲು ಮುಂದಾಗುವರು.

ಮೀನ

ಮೀನ

ಸಮಸ್ಯೆಗಳು ಎದುರಾದಾಗ ಬಹುಬೇಗ ನುಣುಚಿಕೊಳ್ಳುವರು. ಧೈರ್ಯ ಇರದ ಇವರು ಸುಲಭವಾಗಿ ಭಯಕ್ಕೆ ಒಳಗಾಗುವರು. ಕೆಲವೊಮ್ಮೆ ಅತಿಯಾದ ಸುಳ್ಳು ಹೇಳುವ ಸಾಧ್ಯತೆಗಳು ಇರುತ್ತವೆ. ಇವರು ತಮ್ಮನ್ನು ಮರೆಮಾಚುವುದು ಅಥವಾ ದೂರ ಇರಿಸುವ ಪ್ರವೃತ್ತಿಯನ್ನು ಇಷ್ಟಪಡುವುದಿಲ್ಲ. ಇವರು ಕೋಪಗೊಂಡಾಗ ತಮ್ಮ ಮೇಲಿನ ನಿಯಂತ್ರಣ ಕಳೆದುಕೊಳ್ಳುವರು. ಜೊತೆಗೆ ಒಂದಿಷ್ಟು ಸಮಸ್ಯೆಯನ್ನು ಸೃಷ್ಟಿಸಬಹುದು.

English summary

Know Your Flaws Based On Your Zodiac Sign

Our zodiac signs can tell a lot about us. In fact, astrologers can tell about the past and future of a person based on their zodiac sign. Here we have brought to you information about the flaws in each zodiac personality. Take a look.
Story first published: Friday, September 7, 2018, 17:58 [IST]
X
Desktop Bottom Promotion