For Quick Alerts
ALLOW NOTIFICATIONS  
For Daily Alerts

ಇವರು ನೌಕರರಿಗೆ ದೀಪಾವಳಿ ಬೋನಸ್‌ ಸಮಯದಲ್ಲಿ ಕಾರು-ಫ್ಲ್ಯಾಟ್ ಉಡುಗೊರೆ ನೀಡುತ್ತಾರೆ!

|

ದಾನ ಮಾಡುವುದಕ್ಕೆ ಎಲ್ಲರೂ ಇಷ್ಟಪಡುವುದಿಲ್ಲ. ಏಕೆಂದರೆ ದಾನ ಮಾಡುವಷ್ಟು ಉದಾರತೆ ಅಥವಾ ಅನುಕೂಲತೆ ಇಲ್ಲದೆ ಇರಬಹುದು. ಕೆಲವರಿಗೆ ಸಾಕಷ್ಟು ಹಣ-ಆಸ್ತಿಗಳು ಇರುತ್ತವೆ. ಆದರೆ ದಾನ ಮಾಡುವ ಮನಸ್ಸು ಇರುವುದಿಲ್ಲ. ಇಂತಹ ವಿಚಾರಗಳಿಗೆ ಅಪವಾದ ಎನ್ನುವ ರೀತಿಯಲ್ಲಿ ಗುಜರಾತಿನ ವ್ಯಾಪಾರಿಯೊಬ್ಬರು ತಮ್ಮ ನೌಕರರಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ 600 ಕಾರುಗಳನ್ನು ನೀಡಲಿದ್ದಾರೆ.

ಹೌದು, ಗುಜರಾತಿನ ಹೆಸರಾಂತ ವಜ್ರದ ವ್ಯಾಪಾರಿಯಾದ ಸಾವ್ಜಿ ಧೋಲಾಕಿ ಸದುದ್ದೇಶದಿಂದ ಉಡುಗೊರೆ ನೀಡಲು ಮುಂದಾಗಿದ್ದಾರೆ. ಶ್ರೀ ಹರಿ ಕೃಷ್ಣ ಎಕ್ಸ್‍ಫೋರ್ಟ್ ಮಾಲೀಕರಾದ ಇವರು ದೀಪಾವಳಿ ಹಬ್ಬದ ಉಡುಗೊರೆಯಾಗಿ ತಮ್ಮ ಉದ್ಯೋಗಿಗಳಿಗೆ 600 ಕಾರುಗಳನ್ನುನೀಡುತ್ತಿದ್ದಾರೆ.

ಇಂತಹ ಉಡುಗೊರೆಯನ್ನು ಪಡೆಯುವುದರ ಮೂಲಕ ಉದ್ಯೋಗಿಗಳು ಹೆಚ್ಚು ಸಂತೋಷ ಹಾಗೂ ಪ್ರೇರಣೆಗೆ ಒಳಗಾಗುತ್ತಾರೆ. ಅಲ್ಲದೆ ಸಂಸ್ಥೆಯೊಂದಿಗೆ ಸೌಹಾರ್ದ ಸಂಬಂಧ ಹಾಗೂ ವಿಶ್ವಾಸದ ಭಾವನೆಯಲ್ಲಿ ಇರುತ್ತಾರೆ ಎಂದು ಸವಜಿಯವರು ಹೇಳುತ್ತಾರೆ. ತಮ್ಮ ನೌಕರರಿಗೆ ಉಡುಗೊರೆಯಾಗಿ ನೀಡುತ್ತಿದ್ದ ಕಾರುಗಳಲ್ಲಿ ಎಷ್ಟು ಉದ್ಯೋಗಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಯೋಣ ಬನ್ನಿ.

50 ಕೋಟಿ ರೂ. ಮೌಲ್ಯದ ಉಡುಗೊರೆ!

50 ಕೋಟಿ ರೂ. ಮೌಲ್ಯದ ಉಡುಗೊರೆ!

ಸಾವ್ಜಿ ಧೋಲಾಕಿ ಯಾ ಅವರು ತಮ್ಮ ಉದ್ಯೋಗಿಗಳಿಗೆ 600 ಕಾರುಗಳನ್ನು ನೀಡಲಿದ್ದಾರೆ. ಸಂಸ್ಥೆಯಿಂದ 1500 ಉದ್ಯೋಗಿಗಳನ್ನು ರಾಯಲ್ಟಿ ಪ್ರೋಗ್ರಾಂ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ. ಅದರಲ್ಲಿ 600 ಕಾರುಗಳನ್ನು ಹಾಗೂ 900 ಸ್ಥಿರ ಠೇವಣಿಯ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ಧೋಲಾಕಿಯಾ ಅವರು ಮೊದಲ ಬಾರಿಗೆ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಕಾರ್ ಕೀ ಮತ್ತು ಸ್ಥಿರ ಠೇವಣಿಯನ್ನು ಪ್ರಧಾನ ಮಂತ್ರಿಯವರ ಕೈಯಿಂದ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಧೋಲಾಕಿಯಾ ಅವರು ಹೇಳುವ ಪ್ರಕಾರ ಈ ವರ್ಷ ಸಂಸ್ಥೆಯು 50 ಕೋಟಿ ರೂ. ಮೌಲ್ಯದ ಉಡುಗೊರೆ ನೀಡಿದೆ.

ಮರ್ಸಿಡಿಸ್- ಬೆನ್ಜ್ ಜಿಎಲ್‍ಎಸ್ 350ಡಿ

ಮರ್ಸಿಡಿಸ್- ಬೆನ್ಜ್ ಜಿಎಲ್‍ಎಸ್ 350ಡಿ

ಕಳೆದ ತಿಂಗಳು ಸಂಸ್ಥೆಯಲ್ಲಿ 25 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಉದ್ಯೋಗಿಗಳಿಗೆ ಮರ್ಸಿಡಿಸ್- ಬೆನ್ಜ್ ಜಿಎಲ್‍ಎಸ್ ಎಸ್‍ಯುವಿ ಕಾರ್‍ಅನ್ನು ಉಡುಗೊರೆಯಾಗಿ ನೀಡಿದೆ. ಈ ಕಾರಿನ ಬೆಲೆ ಒಂದು ಕೋಟಿ ರೂ. ಮೌಲ್ಯದ್ದಾಗಿದ್ದು, ಹವಾಮಾನ ನಿಯಂತ್ರಣ ವ್ಯವಸ್ಥೆ, ಹಿಂದಿನ ಸೀಟ್‍ಗೆ ಎಂಟರ್‍ರ್ಟೈನ್‍ಮೆನ್ ಸಿಸ್ಟಮ್, ಎಲ್‍ಇಡಿ ದೀಪಗಳು ಸೇರಿದಂತೆ ವಿವಿಧ ಐಷಾರಾಮಿ ವ್ಯವಸ್ಥೆಗಳನ್ನು ಒಳಗೊಂಡಿದೆ.

Most Read: ದೇಹದ ಅಂಗಾಂಗಗಳು ನಿಮ್ಮ ವ್ಯಕ್ತಿತ್ವ ಹೇಳುವುದು!

ಇಎಮ್‍ಐ ಯೋಜನೆ ಕಾರುಗಳ ಖರೀದಿ

ಇಎಮ್‍ಐ ಯೋಜನೆ ಕಾರುಗಳ ಖರೀದಿ

ಸಾವ್ಜಿ ಧೋಲಾಕಿ ಅವರು ತನ್ನ ಉದ್ಯೋಗಿಗಳಿಗೆ 1200 ಘಟಕಗಳಿಗೆ 650 ಕಾರುಗಳನ್ನು ನೀಡಿದ್ದಾರೆ. ಈ ಹಿಂದೆ ಪ್ರೋತ್ಸಾಹದ ಹಣವನ್ನು ಸ್ವೀಕರಿಸದಂತಹ ಉದ್ಯೋಗಿಗಳಿಗೆ ಈ ಕಾರುಗಳನ್ನು ನೀಡಿದರು ಎಂದು ಹೇಳಲಾಗುತ್ತದೆ. ಐದು ವರ್ಷದ ಇಎಮ್‍ಐ ಯೋಜನೆಯೊಂದಿಗೆ ಕಾರನ್ನು ಖರೀದಿಸಿದ ಸಂಸ್ಥೆ ಇದೀಗ ಉಳಿದ ಇಎಮ್‍ಐ ಅನ್ನು ಸಲ್ಲಿಸಬೇಕಿದೆ. ಇವುಗಳನ್ನು ಸಾವ್ಜಿಯವರು 2016ರ ದೀಪಾವಳಿಯಲ್ಲಿ ಉಡುಗೊರೆಯಾಗಿ ನೀಡಿದ್ದರು.

2016ರ ದೀಪಾವಳಿಯಲ್ಲಿ ಆಲ್ಟೋ ಕಾರು, ಹಾಗೂ ಫ್ಲ್ಯಾಟ್ ಗಳನ್ನು ಉಡುಗೋರೆಯಾಗಿ ನೀಡಿದ್ದರು

2016ರ ದೀಪಾವಳಿಯಲ್ಲಿ ಆಲ್ಟೋ ಕಾರು, ಹಾಗೂ ಫ್ಲ್ಯಾಟ್ ಗಳನ್ನು ಉಡುಗೋರೆಯಾಗಿ ನೀಡಿದ್ದರು

2016ರ ದೀಪಾವಳಿಯಲ್ಲಿ ಸಂಸ್ಥೆಯು ನೌಕರರಿಗಾಗಿ ಮಾರುತಿ ಸುಜುಕಿ ಆಲ್ಟೋ ಕಾರನ್ನು ನೀಡಿತ್ತು. ಇದರ ಹೊರತಾಗಿಯೂ ದೀಪಾವಳಿಯ ಬೋನಸ್ ರೂಪದಲ್ಲಿ 400 ಉದ್ಯಮಿಗಳಿಗೆ ಫ್ಲ್ಯಾಟ್ ಗಳನ್ನೂ ನೀಡಿತ್ತು ಎಂದು ಹೇಳಲಾಗುತ್ತಿದೆ. ಈ ವರ್ಷ ಉದ್ಯೋಗಿಗಳಿಗಾಗಿ 51 ಕೋಟಿ ಮೌಲ್ಯದ ದೀಪಾವಳಿ ಬೋಸನ್ ಉಡುಗೊರೆಯನ್ನು ಸಂಸ್ಥೆ ನೀಡುತ್ತಿದೆ.

Most Read: ಈ ಮಹಿಳೆಗೆ 37ರ ಹರೆಯ, ಅಚ್ಚರಿಯಂದ್ರೆ ಆಕೆ ಈಗ 38 ಮಕ್ಕಳ ತಾಯಿ!

 2014ರಲ್ಲಿ ಫಿಯೆಟ್ ಕಾರು, ಫ್ಲ್ಯಾಟ್‍, ಹಾಗೂ 3.60 ಲಕ್ಷ ಮೌಲ್ಯದ ಪ್ರೋತ್ಸಾಹ ಧನ ನೀಡಿದ್ದರು

2014ರಲ್ಲಿ ಫಿಯೆಟ್ ಕಾರು, ಫ್ಲ್ಯಾಟ್‍, ಹಾಗೂ 3.60 ಲಕ್ಷ ಮೌಲ್ಯದ ಪ್ರೋತ್ಸಾಹ ಧನ ನೀಡಿದ್ದರು

2014ರ ದೀಪಾವಳಿಯ ಸಂದರ್ಭದಲ್ಲಿ ಸವಜಿ ಧೋಲಾಕಿಯಾ ತನ್ನ ಉದ್ಯೋಗಿಗಳಿಗಾಗಿ 500 ಫಿಯೆಟ್ ಪುಂಟೊ ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು. ಒಟ್ಟು 1200 ಉದ್ಯೋಗಿಗಳನ್ನು ನಿಷ್ಠೆ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಮಾಡಲಾಗಿತ್ತು ಎನ್ನಲಾಗುವುದು. ಇದರೊಟ್ಟಿಗೆ ಆಯ್ಕೆಯ ಅನುಸಾರ ಆಭರಣ, ಫ್ಲ್ಯಾಟ್‍ಗಳಂತಹ ದುಬಾರಿ ಉಡುಗೊರೆಯನ್ನು ನೀಡಿತ್ತು. 1200 ಡೈಮಂಡ್ ಕಾರ್ಮಿಕರಿಗೆ 3.60 ಲಕ್ಷ ಮೌಲ್ಯದ ಪ್ರೋತ್ಸಾಹ ಧನವನ್ನು ನೀಡಿದ ವಿಶ್ವದಲ್ಲಿಯೇ ಮೊದಲ ಸಂಸ್ಥೆ ಎಂದು ಹೇಳಿದರು.

English summary

Gujarat Businessman Gifts Cars As Diwali Bonus

Savji Dholakia, the renowned diamond trader from Gujarat is into the headlines once again for an obvious reason. The owner of Shri Hari Krishna Exports has gifted 600 cars to his employees on the occasion of Diwali. This is not the first time that Savji has gifted such a massive Diwali bonus to his employees.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more