For Quick Alerts
ALLOW NOTIFICATIONS  
For Daily Alerts

ಗೂಗಲ್ ಮ್ಯಾಪ್‌ನಿಂದಾಗಿ ಪತಿಯು ಪತ್ನಿಗೆ ಡೈವೋರ್ಸ್ ನೀಡಿದ!

|

ಮೋಸವೆನ್ನುವುದು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲವೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದರೂ ಕೆಲವರು ಮೋಸ ಮಾಡುವರು. ಅದರಲ್ಲೂ ದಾಂಪತ್ಯ ಜೀವನದಲ್ಲಿ ಮಾಡುವಂತಹ ಮೋಸವು ದೊಡ್ಡ ಮಟ್ಟದ ಸಮಸ್ಯೆಯೊಡ್ಡಬಹುದು. ಮೋಸ ಮಾಡಲು ಜನರು ವಿವಿಧ ರೀತಿಯ ಮಾರ್ಗಗಳನ್ನು ಕಂಡುಹಿಡಿಯುವರು. ಇಲ್ಲೊಬ್ಬಳು ಮಹಿಳೆಯು ತನ್ನ ಪತಿಗೆ ಮೋಸ ಮಾಡುತ್ತಲಿದ್ದಳು. ಆದರೆ ಪತಿ ಯಾವತ್ತೂ ಇದನ್ನು ನಿರೀಕ್ಷಿಸಿರಲಿಲ್ಲ. ಪತಿಯು ಒಂದು ಮಾರ್ಗವನ್ನು ಹುಡುಕತ್ತಲಿದ್ದಾಗ ಗೂಗಲ್ ಮ್ಯಾಪ್ ನಲ್ಲಿ ತನ್ನ ಪತ್ನಿಯು ಬೇರೊಬ್ಬ ವ್ಯಕ್ತಿಯನ್ನು ಅಪ್ಪಿಕೊಂಡಿರುವುದನ್ನು ನೋಡಿ ಡೈವೋರ್ಸ್ ನೀಡಿದ.

ಈ ವಿಚಿತ್ರ ಘಟನೆ ಬಗ್ಗೆ ಇನ್ನಷ್ಟು ತಿಳಿಯಿರಿ

ಈ ವಿಚಿತ್ರ ಘಟನೆ ಬಗ್ಗೆ ಇನ್ನಷ್ಟು ತಿಳಿಯಿರಿ

ಪ್ರಯಾಣಿಸುವ ಮೊದಲು ಆ ಪ್ರದೇಶದ ಮಾರ್ಗವನ್ನು ನೋಡಲು ಬಯಸಿದ ಪತಿಯು, ತಾನು ಪ್ರಯಾಣಿಸಲಿದ್ದ ಜಾಗಕ್ಕೆ ಹೋಗಲು ದಾರಿ ಹುಡುಕುತ್ತಿದ್ದ ವೇಳೆ ಆತನಿಗೆ ತನ್ನ ಪತ್ನಿಯು ಒಂದು ಬೆಂಚ್ ನಲ್ಲಿ ಕುಳಿತಿರುವ ದೃಶ್ಯವು ಕಂಡುಬಂತು. ಮಹಿಳೆಯು ತನ್ನ ತೊಡೆಯ ಮೇಲೆ ಮಲಗಿದ್ದ ವ್ಯಕ್ತಿಯ ಕೂದಲನ್ನು ಬೆರಳುಗಳಿಂದ ಸವರುತ್ತಿರುವುದು ಕಂಡುಬಂತು.

ಗೂಗಲ್ ಕ್ಯಾಮರಾ ಕಾರು ಈ ದೃಶ್ಯ ಸೆರೆಹಿಡಿದಿತ್ತು!

ಗೂಗಲ್ ಕ್ಯಾಮರಾ ಕಾರು ಈ ದೃಶ್ಯ ಸೆರೆಹಿಡಿದಿತ್ತು!

ಲಿಮಾದ ಪೆರುವಿಯನ್ ನಲ್ಲಿ ಗೂಗಲ್ ಕ್ಯಾಮರಾ ಕಾರ್ ಈ ಚಿತ್ರವನ್ನು ತೆಗೆದಿತ್ತು. ಈ ಮಹಿಳೆಯು ತನ್ನ ಪತ್ನಿಯಂತೆ ಇರುವುದನ್ನು ಕಂಡ ಆ ವ್ಯಕ್ತಿಯು ಇದರ ಬಗ್ಗೆ ಮತ್ತಷ್ಟು ಗಮಹರಿಸಿದ. ತನ್ನ ಪತ್ನಿ ಧರಿಸಿದ್ದ ಬಟ್ಟೆಯಂತೆ ಆಕೆಯ ಬಟ್ಟೆಯು ಇತ್ತು.

Most Read: ಪುಸ್ತಕ ಹಳೆಯದಾಗುತ್ತಿದ್ದಂತೆ ಪುಟಗಳು ಹಳದಿಯಾಗುವುದೇಕೇ?

ಚಿತ್ರವು 2013ರಲ್ಲಿ ತೆಗೆಯಲಾಗಿತ್ತು

ಚಿತ್ರವು 2013ರಲ್ಲಿ ತೆಗೆಯಲಾಗಿತ್ತು

2013ರಲ್ಲಿ ಈ ಚಿತ್ರವನ್ನು ತೆಗೆಯಲಾಗಿತ್ತು. ಆದರೆ ತನ್ನ ಹಿಂದಿನ ಜೀವನದ ಬಗ್ಗೆ ಮುಚ್ಚಿಟ್ಟಿದ್ದರಿಂದ ಪತಿಯು ತುಂಬಾ ಕೋಪಗೊಂಡಿದ್ದ. ಇದರ ಬಳಿಕ ದಂಪತಿಯ ಡೈವೋರ್ಸ್ ಆಯಿತು. ಈ ಕಥೆಯು ವೈರಲ್ ಆಯಿತು.

ಗೂಗಲ್ ಮ್ಯಾಪ್ ನಲ್ಲಿರುವುದು ಇಂತಹ ವಿಚಿತ್ರ ಫೋಟೊಗಳು ಮಾತ್ರವಲ್ಲ

ಗೂಗಲ್ ಮ್ಯಾಪ್ ನಲ್ಲಿರುವುದು ಇಂತಹ ವಿಚಿತ್ರ ಫೋಟೊಗಳು ಮಾತ್ರವಲ್ಲ

ಗೂಗಲ್ ಮ್ಯಾಪ್ ಅಥವಾ ಗೂಗಲ್ ಸ್ಟ್ರೀಟ್ ವಿವ್ಯೂ ತೆಗೆದಿರುವ ಫೋಟೊ ಇದು ಮಾತ್ರವಲ್ಲ. ಇಂತಹ ಹಲವಾರು ವಿಚಿತ್ರ ಫೋಟೊಗಳು ಇವೆ.

Most Read: ರೋಗಿಯ ಕಣ್ಣಿನಿಂದ 15 ಸೆ.ಮಿ. ಹುಳ ಹೊರತೆಗೆದ ವೈದ್ಯರು!

ಇನ್ನಷ್ಟು ವಿಚಿತ್ರ ಫೋಟೋಗಳು ಕ್ಯಾಮರಾದಲ್ಲಿ ಸೆರೆಯಾಗಿದೆ!

ಇನ್ನಷ್ಟು ವಿಚಿತ್ರ ಫೋಟೋಗಳು ಕ್ಯಾಮರಾದಲ್ಲಿ ಸೆರೆಯಾಗಿದೆ!

ಪಾರಿವಾಳದಂತೆ ಬಟ್ಟೆ ಧರಿಸಿರುವಂತಹ ಜನರು ಮತ್ತು ಜೈಲಿಂದ ತಪ್ಪಿಸಿಕೊಳ್ಳುವ ಕೈದಿಗಳ ಫೋಟೊಗಳು ಇದರಲ್ಲಿ ಇವೆ. ಜೋಡಿಯು ಕಾರ್ ನಲ್ಲಿ ಸೆಕ್ಸ್ ನಡೆಸುವುದು ಅಥವಾ ಖಾಲಿ ರಸ್ತೆಯಲ್ಲಿ ಪರಸ್ಪರ ಚುಂಬಿಸುವಂತಹ ದೃಶ್ಯಗಳು ಇವೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆಯೇನು? ಇದರ ಬಗ್ಗೆ ನಿಮ್ಮ ಅನಿಸಿಕೆಯಿದ್ದರೆ ಅದನ್ನು ಕಮೆಂಟ್ ಬಾಕ್ಸ್ ಗೆ ಹಾಕಿ. ಇನ್ನು ಗೂಗಲ್ ನಲ್ಲಿ ಕೆಲವೊಂದು ಇನ್ನೂ ಹುಡುಕದೆ ಇದ್ದರೆಯೇ ಒಳ್ಳೆಯದಂತೆ! ಅಚ್ಚರಿಯಾಯಿತೇ ಮುಂದೆ ಓದಿ

ಗೂಗಲ್‌ನಲ್ಲಿ ಏನು ಬೇಕಾದರೂ ಹುಡುಕಿ, ಆದರೆ...

ಗೂಗಲ್‌ನಲ್ಲಿ ಏನು ಬೇಕಾದರೂ ಹುಡುಕಿ, ಆದರೆ...

ಕೆಲವೊಂದನ್ನು ಹುಡುಕಿದರೆ ಚೆನ್ನ, ಇನ್ನೂ ಕೆಲವನ್ನು ಹುಡುಕದಿದ್ದರೆ ಚೆನ್ನ, ಕೆಲವನ್ನು ತಿಳಿದುಕೊಂಡರೆ ಒಳ್ಳೆಯದು, ಇನ್ನೂ ಕೆಲವನ್ನು ಹುಡುಕದೆ ಇದ್ದರೆ ಒಳ್ಳೆಯದು. ಬನ್ನಿ ಗೂಗಲ್‌ನಲ್ಲಿ ನೀವು ಯಾವತ್ತಿಗೂ ಹುಡುಕಬಾರದಂತಹ ಕೆಲವೊಂದು ಅಂಶಗಳ ಕುರಿತಾಗಿ ನಾವು ನಿಮಗೆ ಇಂದು ತಿಳಿಸುತ್ತೇವೆ. ಅರೆ ಇದನ್ನು ಹುಡುಕಿ ಮತ್ತು ಹುಡುಕಬೇಡಿ ಎಂದು ಹೇಳುವ ಅಧಿಕಾರ ನಿಮಗೆ ಯಾರು ಕೊಟ್ಟರು ಎಂದು ಕೇಳಬೇಡಿ. ಕೆಲವೊಂದು ಅಹಿತಕರ, ಅಸಹ್ಯಕರ ಮತ್ತು ವಾಕರಿಕೆ ಬರುವಂತಹ ಮತ್ತು ಮನಸ್ಸಿಗೆ ಘಾಸಿಯನ್ನುಂಟು ಮಾಡುವಂತಹ ಹಲವಾರು ವಿಷಯಗಳನ್ನು ಇಂಟರ್‌ನೆಟ್ ಒಳಗೊಂಡಿರುತ್ತದೆ. ನೋಡದೆ ಇದ್ದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ ನೋಡಲೇ ಬೇಕು ಎಂದರೆ ಅದು ನಿಮ್ಮ ಸ್ವಾತಂತ್ರ್ಯ. ನಿಮಗೆ ಸ್ವಾತಂತ್ರ್ಯವನ್ನು ಬಳಸಿಕೊಂಡು ನೀವು ಹುಡುಕಾಟ ಮಾಡಿದರೆ ಅದರಿಂದ ಸ್ವಲ್ಪ ಹೊತ್ತು ಮನಸ್ಸಿಗೆ ಕಿರಿಕಿರಿಯಾಗುವುದು ನಿಮಗೆ! ಮುಂದೆ ಓದಿ

ಕ್ಲಾಕ್ ಸ್ಪೈಡರ್

ಕ್ಲಾಕ್ ಸ್ಪೈಡರ್

ಜೇಡಗಳ ಕುರಿತಾಗಿ ನಿಮಗೆ ಭಯವಿದ್ದಲ್ಲಿ, ಖಂಡಿತ ಈ ಜೇಡವನ್ನು ನೋಡುವ ಧೈರ್ಯವನ್ನು ನೀವು ತೆಗೆದುಕೊಳ್ಳುವುದಿಲ್ಲ. ಒಮ್ಮೆ ನೋಡಿದರೆ ರಾತ್ರಿ ಮಲಗುವುದು ಕಷ್ಟವಾಗಬಹುದು. ಏಕೆಂದರೆ ಇವು ಜಗತ್ತಿನಲ್ಲಿರುವ ಅತ್ಯಂತ ಅಪಾಯಕಾರಿ ಜೇಡಗಳು ಎಂಬ ಕುಖ್ಯಾತಿಯನ್ನು ಗಳಿಸಿವೆ.

ಟೈರೊಫೋಬಿಯಾ

ಟೈರೊಫೋಬಿಯಾ

ಈ ಪದವು ನಾವು ನೋಡುವ ದೃಶ್ಯಗಳನ್ನು, ಅದರಲ್ಲಿಯೂ ಮನಸ್ಸಿಗೆ ಘಾಸಿಯುಂಟು ಮಾಡುವ ದೃಶ್ಯಗಳ ಕುರಿತಾದ ಫೋಬಿಯಾ ಆಗಿರುತ್ತದೆ.ಈ ಚಿತ್ರಗಳು ಭಯವನ್ನುಂಟು ಮಾಡುವ ಸಣ್ಣ ಸಣ್ಣ ರಂಧ್ರಗಳನ್ನು ಒಳಗೊಂಡಿರುತ್ತದೆ. ನೆಮ್ಮದಿಯ ವಿಷಯವೆಂದರೆ ಇವೆಲ್ಲವು ಫೋಟೋಶಾಪ್ ಮಾಡಿದ ಚಿತ್ರಗಳು. ಇವೇ ನಿಜವಾಗಿದ್ದಲ್ಲಿ ಹೇಗಿರುತ್ತಿತ್ತು ಕತೆ ಯೋಚಿಸಿ.

Most Read: ಆರು ವರ್ಷಗಳ ಕಾಲ ಸೆಕ್ಸ್ ನಡೆಸದೇ ವನವಾಸ ಅನುಭವಿಸಿದ ಜೋಡಿ!!

"ಬಿಯರ್" ಕಾದಂಬರಿ

ಇದು 1976 ರಲ್ಲಿ ಬಿಡುಗಡೆಯಾದ ಒಂದು ಕಾದಂಬರಿ, ಇದರ ಲೇಖಕ ಮರಿಯನ್ ಎಂಗೆಲ್. ಇದು ಒಂದು ಹುಡುಗಿ ಕರಡಿಯ ಜೊತೆಗೆ ಮಿಲನವನ್ನು ಮಾಡುವ ಕುರಿತಾಗಿ ವಿವರಿಸುತ್ತದೆ. ಇದರ ಕುರಿತು ನೀವು ಹೇಗೆ ಆಲೋಚಿಸುವಿರಿ ಎಂದು ನಿಮಗೆ ಬಿಟ್ಟದ್ದು.

ರೋಗ ಲಕ್ಷಣಗಳು

ರೋಗ ಲಕ್ಷಣಗಳು

ಯಾವುದೇ ರೋಗ ಲಕ್ಷಣಗಳನ್ನು ಹುಡುಕಲು ಹೋಗಬೇಡಿ. ಅವುಗಳು ತಿಳಿಸುವ ಕೆಲವೊಂದು ಅಂಶಗಳು ನಿಮ್ಮಲ್ಲೂ ಸಹ ಕಾಣಿಸಿಕೊಳ್ಳಬಹುದು. ನಿಮಗೆ ರೋಗವಿಲ್ಲದೆ ಇದ್ದರು ಸಹ, ಇವು ನಿಮಗೆ ಭೀತಿಯುಂಟು ಮಾಡಬಹುದು. ಆದ್ದರಿಂದ ಇದನ್ನು ಗೂಗಲ್ ಮಾಡಲು ಹೋಗಬೇಡಿ.

ವೆಟ್ ಕೋಲಾ

ವೆಟ್ ಕೋಲಾ

ಈ ಚಿತ್ರವು ಅಸಹ್ಯಕರಿಯಲ್ಲವೇನು. ನೆಮ್ಮದಿಯಾಗಿರಿ, ಇದು ಫೋಟೋ-ಶಾಪ್ ಮಾಡಿದ ಚಿತ್ರ, ಹೆದರಬೇಕಾಗಿಲ್ಲ.

Most Read: ಭಾರೀ ಬೆಲೆ ಬಾಳುವ ವಜ್ರದ ಉಂಗುರ ನುಂಗಿದ ಟರ್ಕಿಯ ವ್ಯಕ್ತಿ!

ಪೀನಟ್

ಪೀನಟ್

ವಿಶ್ವದ ಅತ್ಯಂತ ಅಸಹ್ಯಕರ ನಾಯಿ. ಇದನ್ನು ಕೊಂಡುಕೊಳ್ಳುವ ಧೈರ್ಯ ಮಾಡಬೇಡಿ!, ಹಾಲಿವುಡ್‌ನ ಹಾರರ್ ಸಿನಿಮಾದಲ್ಲೂ ಸಹ ಈ ಬಗೆಯ ನಾಯಿಯನ್ನು ನೀವು ನೋಡಿರುವುದಿಲ್ಲ. ಇದನ್ನು ನೋಡಲು ಹೋಗಬೇಡಿ, ಕನಸಿನಲ್ಲಿ ಬರುತ್ತದೆ.

ತಿಗಣೆಗಳು

ತಿಗಣೆಗಳು

ಹಾಸಿಗೆ ಮೇಲೆ ಇರುವ ತಿಗಣೆಯನ್ನು, ಜೂಮ್ ಮಾಡಿ ತೆಗೆದ ಫೋಟೋವನ್ನು ನೋಡಿದರೆ ತಿಂದದ್ದು ಕೆಲವರಿಗೆ ವಾಂತಿಯಾಗುತ್ತದೆ. ನೋಡುವ ಇಷ್ಟವಿದ್ದರೆ ನೋಡಿ. ಅದರ ಬಗ್ಗೆ ನಾವು ಹೆಚ್ಚಾಗಿ ತಿಳಿಸಲು ಹೋಗುವುದಿಲ್ಲ!.

ತ್ವಚೆಯ ಸ್ಥಿತಿಗಳು

ತ್ವಚೆಯ ಸ್ಥಿತಿಗಳು

ಇವುಗಳ ಕುರಿತಾಗಿ ನೀವು ನಿರ್ದಿಷ್ಟವಾಗಿರಬೇಕಾದ ಅಗತ್ಯವಿಲ್ಲ. ನೀವು ಹುಡುಕುವ ಸ್ಥಿತಿಯ ಕುರಿತಾಗಿ ಗೂಗಲ್ ಲಕ್ಷಾಂತರ ಫೋಟೋಗಳನ್ನು ಹಂಚಿಕೊಳ್ಳುತ್ತದೆ. ಇದನ್ನು ನೋಡಿದರೆ ನಿಮ್ಮ ತ್ವಚೆಯ ಕುರಿತಾಗಿ ನಿಮಗೆ ಭಯ ಭೀತಿಯುಂಟಾಗುವುದು ಖಂಡಿತ. ಆದ್ದರಿಂದ ನಮ್ಮ ಸಲಹೆ, ಇದನ್ನು ನೋಡಬೇಡಿ.

English summary

Google Maps Causes Divorce After Husband Spots

This is the case of a couple who got divorced after the man found pictures of his cheating wife on the Google map while he was searching for a route! Check out the bizarre details.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more