For Quick Alerts
ALLOW NOTIFICATIONS  
For Daily Alerts

  ಮಿಥುನ ರಾಶಿಯ ಜೂನ್ ತಿಂಗಳ ಭವಿಷ್ಯ

  |

  ಜೂನ್ ತಿಂಗಳಲ್ಲಿ ಮಿಥುನ ರಾಶಿಯವರು ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಬೇಕಾಗುವುದು. ತಿಂಗಳ ಹೆಚ್ಚಿನ ಸಮಯ ಕೌಟುಂಬಿಕ ವಿಚಾರಗಳು ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತವೆ. ವಿವಿಧ ಗ್ರಹಗಳ ಸಂಚಾರ ಹಾಗೂ ಬದಲಾವಣೆಗಳು ವೃತ್ತಿ ಜೀವನವನ್ನು ತಳ್ಳಲು ಸಹಾಯ ಮಾಡುವುದು. ಅಲ್ಲದೆ ವೃತ್ತಿ ಜೀವನದಲ್ಲಿ ಸಾಕಷ್ಟು ವಿಶೇಷ ಬದಲಾವಣೆಯನ್ನು ಕಾಣುವಿರಿ.

  ಸಾಕಷ್ಟು ಪ್ರತಿಕೂಲವಾದ ಹಾಗೂ ಕ್ಲಿಷ್ಟಕರವಾದ ಸಂದರ್ಭಗಳನ್ನು ಎದುರಿಸಬೇಕಾಗುವುದು. ನಿಮ್ಮ ಸ್ನೇಹ ಮತ್ತು ಸ್ವಾಭಾವಿಕ ಗುಣಗಳಿಂದ ಸಮಸ್ಯೆಗಳನ್ನು ನಿಭಾಯಿಸುವಿರಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಮಟ್ಟವು ಉತ್ತಮ ಸ್ಥಾನದಲ್ಲಿ ಇರುವುದು. ಪ್ರಭಾವಶಾಲಿ ಜನರ ಪರಿಚಯವಾಗುವ ಸಾಧ್ಯತೆಗಳಿರುತ್ತವೆ. ಸಾಕಷ್ಟು ಒತ್ತಡದ ಜೀವನವನ್ನು ಅನುಭವಿಸಬೇಕಾದ್ದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

  ತಿಂಗಳ ಆರಂಭದ ಸಮಯದಲ್ಲಿ ಸಾಕಷ್ಟು ಒತ್ತಡ ಹಾಗೂ ಚಿಂತೆಗಳು ಕಾಡುವ ಸಾಧ್ಯತೆಗಳು ಹೆಚ್ಚು. ಜೂನ್ 21ರ ನಂತರದ ದಿನಗಳಲ್ಲಿ ಸ್ವಲ್ಪ ಆರಾಮದಾಯಕ ಅನುಭವ ಉಂಟಾಗುವುದು. ವೈಯಕ್ತಿಕ ಜೀವನಕ್ಕೆ ಲಾಭದಾಯಕವಾಗಿರುತ್ತದೆ. ಹೊಸ ಪ್ರೀತಿಯ ಸಂಪರ್ಕವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಜೂನ್ ತಿಂಗಳಲ್ಲಿ ನಿಮ್ಮ ಆರೋಗ್ಯ, ವೃತ್ತಿ, ಸಂಬಂಧ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

  Gemini

  ಆರೋಗ್ಯ ಸ್ಥಿತಿ

  ಈ ತಿಂಗಳು ಗ್ರಹಗತಿಗಳು ಆರೋಗ್ಯದ ವಿಚಾರದಲ್ಲಿ ನಿಮ್ಮ ಪರವಾಗಿಯೇ ಇರುತ್ತವೆ ಎಂದು ಹೇಳಬಹುದು. ಈ ವರ್ಷವಿಡೀ ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ ಎಂದು ಹೇಳಲಾಗುವುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿದ್ದರೂ ಅವು ಒಂದು ಹಿಡಿತಕ್ಕೆ ಬರಬಹುದು ಅಥವಾ ಆರೋಗ್ಯ ಸ್ಥಿತಿ ಶಾಶ್ವತವಾಗಿ ಬಿಡುಗಡೆಯಾಗಬಹುದು. ಹಾಗಾಗಿ ಆದಷ್ಟು ಆರೋಗ್ಯದ ಕುರಿತು ಸಾಕಷ್ಟು ಕಾಳಜಿಯನ್ನು ವಹಿಸುವುದು ಸೂಕ್ತ.

  ಈ ತಿಂಗಳು ನಕ್ಷತ್ರಗಳು ಹಾಗೂ ಗ್ರಹಗಳು ಋಣಾತ್ಮಕ ಪರಿಣಾಮವನ್ನು ನೀಡುವುದು. ಕೆಲವರು ಹೆಚ್ಚಿನ ಲೈಂಗಿಕ ಸುಖವನ್ನು ಪಡೆಯುವ ಸಾಧ್ಯತೆಗಳಿವೆ. ನಿಮಗೆ ಅಪಘಾತವಾಗುವ ಸಂಭವಗಳು ಇರುವುದರಿಂದ ಪ್ರಯಾಣ ಮಾಡುವಾಗ, ರಾತ್ರಿ ವೇಳೆ ವಾಹನ ಚಲಿಸುವಾಗ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ. ಶೀತ ಮತ್ತು ಕೆಮ್ಮಿನ ನಿರಂತರ ಲಕ್ಷಣಗಳನ್ನು ಹೊಂದಿರುವ ಋತುಮಾನದ ಬದಲಾವಣೆಯು ನಿಮ್ಮ ಮೇಲೆ ಹಿಡಿತವನ್ನು ಸಾಧಿಸಬಹುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆ ಔಷಧಿ ಪರಿಣಾಮವನ್ನು ಬೀರಿಸುವುದು. ಆದರೆ ಆರೋಗ್ಯ ಸಮಸ್ಯೆ ದ್ವಿಗುಣವಾದಾಗ ತಜ್ಞರ ಸಲಹೆ ಪಡೆಯುವುದನ್ನು ಮರೆಯಬೇಡಿ.

  ವೃತ್ತಿ ಜೀವನ

  ನೀವು ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆ ಹಾಗೂ ಗುರಿಯನ್ನು ಸಾಧಿಸಲು ಇದು ಉತ್ತಮವಾದ ಸಮಯವಾಗಿರುತ್ತದೆ. ಆದರೆ ಕೆಲವು ಅಡೆತಡೆಗಳು ನಿಮಗೆ ತೊಂದರೆಯನ್ನುಂಟುಮಾಡಬಹುದು. ನಿಮ್ಮ ಎಲ್ಲಾ ಶ್ರಮಗಳಿಗೆ ಅಥವಾ ಪ್ರಯತ್ನಗಳಿಗೂ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗದು. ಪ್ರಯತ್ನದಲ್ಲಿ ಯಾವುದು ಗುಣಮಟ್ಟದ್ದು ಎನ್ನುವುದರ ಮೇಲೆ ಫಲಿತಾಂಶ ದೊರೆಯುವುದು. ನೀವು ಯಾವುದೇ ಯೋಜನೆಗಳನ್ನು ಹೊಂದಿದ್ದರೂ ಅದರಲ್ಲಿ ಯಾವುದೇ ಗೊಂದಲ ಇಲ್ಲದಂತೆ ನೋಡಿಕೊಳ್ಳಿ.

  ನಿಮ್ಮ ವೃತ್ತಿ ಜೀವನದ ಕವಣೆ ಯಂತ್ರಕ್ಕೆ ಸಹಾಯ ಮಾಡಲು ನಿಮ್ಮದೇ ಆದ ರೀತಿಯಲ್ಲಿ ಸಂಪರ್ಕವನ್ನು ಹೊಂದುವುದರ ಮೂಲಕ ಕೌಶಲ್ಯಗಳನ್ನು ಸಾಧರಪಡಿಸಿ. ಆಗ ಯಶಸ್ಸು ದೊರೆಯುವುದು. ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಅಥವಾ ಪ್ರಭಾವಿ ವ್ಯಕ್ತಿಗಳ ಗಮನದಲ್ಲಿ ಬರುವಂತೆ ಮಾಡಿ. ಆಗ ನಿಮ್ಮ ಶ್ರಮಕ್ಕೆ ಸೂಕ್ತ ಸ್ಥಾನ ದೊರೆಯುವುದು. ವ್ಯಾಪಾರ ವಹಿವಾಟು ನಡೆಸುವವರಿಗೆ ಸ್ವಲ್ಪ ತೊಂದರೆ ಉಂಟಾಗಬಹುದು. ಹಾಗಾಗಿ ಪಾಲುದಾರಿಕೆ ಕೆಲಸಕ್ಕೆ ಮುಂದಾಗದಿರಿ. ಲಾಭ ಗಳಿಸುವ ಅವಕಾಶಗಳಿಗಾಗಿ ಸಾಕಷ್ಟು ಜಾಗರೂಕತೆಯನ್ನು ವಹಿಸಿ.

  ಆರ್ಥಿಕ ಸ್ಥಿತಿ

  ಚಂದ್ರನ ಪ್ರಭಾವವು ಸಕಾರಾತ್ಮಕವಾಗಿರುವುದರಿಂದ ಹಣದ ಒಳಹರಿವನ್ನು ಕಾಣುವಿರಿ. ಹೂಡಿಕೆಯು ಹೆಚ್ಚಿನ ಆದಾಯವನ್ನು ತಂದುಕೊಡುವುದು. ಹೊಸ ಮೂಲಗಳಿಂದ ಹಣದ ಸಂಪಾದನೆಯನ್ನು ಕಾಣುವಿರಿ. ಈ ತಿಂಗಳ ಮೊದಲ ಅರ್ಧ ಭಾಗದ ದಿನಗಳು ಹಣ ಗಳಿಸಲು ಉತ್ತಮವಾದ ದಿನ ಎಂದು ಹೇಳಬಹುದು. ಹಣಗಳಿಸಲು ಸಾಕಷ್ಟು ಉತ್ತಮವಾದ ಸಮಯವಾಗಿದ್ದರಿಂದ ಆದಷ್ಟು ಬುದ್ಧಿವಂತಿಕೆಯನ್ನು ಉಪಯೋಗಿಸಿ ಕೆಲಸ ಮಾಡುವುದರ ಬಗ್ಗೆ ಚಿಂತಿಸಿ.

  ಹೊಸ ಯೋಜನೆ ಕೈಗೊಳ್ಳುವ ಸಿದ್ಧತೆಯಲ್ಲಿದ್ದರೆ ಅದನ್ನು ಆದಷ್ಟು ಮುಂದೂಡಲು ಪ್ರಯತ್ನಿಸಿ. ನಿಮಗಾಗಿ ಅತ್ಯುತ್ತಮ ಸಮಯದ ನಿರೀಕ್ಷೆಯಲ್ಲಿ ಇರಿ. ಕೆಲಸದ ದೃಷ್ಟಿಯಿಂದ ನೀವು ಕೈಗೊಳ್ಳುವ ಪ್ರವಾಸಗಳು ಧನಾತ್ಮಕವಾದ ಫಲಿತಾಂಶವನ್ನು ತಂದುಕೊಡುವುದು. ಸಾಕಷ್ಟು ಉತ್ತಮ ಫಲಿತಾಂಶವನ್ನೇ ಪಡೆಯುವುದರಿಂದ ಮಾನಸಿಕವಾಗಿಯೂ ಜಾಣ್ಮೆ ಹಾಗೂ ಸಹನೆಯನ್ನು ಹೊಂದುವುದರ ಬಗ್ಗೆ ಕಾಳಜಿ ವಹಿಸಿ.

  Gemini

  ಪ್ರೀತಿಯ ಜೀವನ

  ಜೂನ್ ತಿಂಗಳ ಮಧ್ಯದ ಸಮಯದ ವರೆಗೂ ಸಂಗಾತಿಯೊಂದಿಗೆ ಸಣ್ಣ ಪುಟ್ಟ ತರ್ಕಗಳು ಹಾಗೂ ವಾದಗಳು ನಡೆಯುತ್ತಲೇ ಇರುತ್ತವೆ. ಇದು ವಿಭಿನ್ನವಾದ ಸ್ವಭಾವ ಹಾಗೂ ಅಭಿಪ್ರಾಯಗಳಿಂದ ಆಗಿರಬಹುದು. ನಿಮ್ಮ ಮಧ್ಯೆ ಉತ್ತಮವಾದ ಸಂಬಂಧ ಬೆಳೆಯಲು ಮುಂದೆ ಹೆಜ್ಜೆಯನ್ನು ಹಾಕಬೇಕು. ಇದರಿಂದ ನೀವೊಬ್ಬ ಉತ್ತಮ ವ್ಯಕ್ತಿಯಾಗುವಿರಿ. ಇದರಿಂದಾಗಿ ನಿಮ್ಮ ಪಾಲುದಾರರ ನಡವಳಿಕೆಯ ಮೇಲೆ ಪ್ರಭಾವ ಬೀರುವುದು.

  ನಿಮ್ಮ ಪ್ರೀತಿಯ ಜೀವನವು ಸಕ್ರಿಯವಾಗಿರುತ್ತದೆ. ಇದರೊಂದಿಗೆ ನೀವು ಆವರ್ತನದೊಂದಿಗೆ ಹೊಸ ಮತ್ತು ಆಸಕ್ತಿದಾಯಕ ವಿಚಾರದಲ್ಲಿ ಹೆಚ್ಚು ತಲ್ಲೀನರಾಗುವಿರಿ. ವಿರೋಧಾಭಾಸಗಳು ಕಡಿಮೆಯಾಗುವುದರ ಮೂಲಕ ಸಂಬಂಧದಲ್ಲಿ ಆಕರ್ಷಣೆ ಹೆಚ್ಚುವುದು. ಸಾಮಾನ್ಯವಾದ ಗುಣಗಳಿಂದ ಸಂಬಂಧದ ವ್ಯಾಪ್ತಿಯು ಹೆಚ್ಚುವುದು.

  ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳು

  ನಿಮ್ಮ ಅದೃಷ್ಟದ ಬಣ್ಣಗಳು ಕೆಂಪು ಮತ್ತು ನೀಲಿ

  ಅದೃಷ್ಟದ ಸಂಖ್ಯೆಗಳು 4 ಮತ್ತು 9.

  English summary

  Gemini Monthly Horoscope For June 2018

  The month of June will bring about lots of positive changes in the life of Gemini. Family life will take precedence over your work for most part of the month. A lot of planetary movements will help push your career and make necessary changes in your career path. You will be better at turning hostile and tricky situations around for you and making others work in your favour by your friendly and welcoming nature at work. Read on to know your monthly horoscope for June in details regarding the various aspects of your life such as health, career, relationships, etc...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more