For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಯವರಿಗೆ ಈ ' ದೀಪಾವಳಿ' ಶುಭ ತರಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

|

ಸಕಾರಾತ್ಮಕವಾದ ಬದಲಾವಣೆಯನ್ನೇ ಅನುಭವಿಸುವ ಸಾಧ್ಯತೆಗಳು ಹೆಚ್ಚೆಂದು ಜ್ಯೋತಿಷ್ಯ ಶಾಸ್ತ್ರ ಭರವಸೆಯನ್ನು ನೀಡುತ್ತಿದೆ. ಹಾಗಾದರೆ ಈ ದೀಪದ ಹಬ್ಬ ನಿಮ್ಮ ಬಾಳಿನಲ್ಲಿ ಹೇಗೆ ದೀಪವನ್ನು ಬೆಳಗುವುದು? ನೀವು ಸಮಾಜಕ್ಕೆ ಯಾವ ಬಗೆಯ ಒಳಿತನ್ನು ತರುವಿರಿ? ಎನ್ನುವ ವಿಚಾರವನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ..

ಕನ್ಯಾ, ಮಿಥುನ, ಧನು ಮತ್ತು ಮಕರ: ಬೆಳಗುವ ದೀಪಗಳು

ಕನ್ಯಾ, ಮಿಥುನ, ಧನು ಮತ್ತು ಮಕರ: ಬೆಳಗುವ ದೀಪಗಳು

ಈ ನಾಲ್ಕು ರಾಶಿಚಕ್ರದವರು ದೀಪಾವಳಿಯ ಈ ಸಂಭ್ರಮದ ಹಬ್ಬದಲ್ಲಿ ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ಬದಲಾವಣೆಯನ್ನು ಅನುಭವಿಸುವರು. ಅಂದರೆ ಈ ದೀಪಾವಳಿ ಇವರಿಗೆ ಪ್ರಕಾಶ ಮಾನವಾದ ಬೆಳಕನ್ನು ನೀಡುವುದು ಎನ್ನಲಾಗುತ್ತದೆ. ಸಮಾಜಕ್ಕಾಗಿ ಸಾಕಷ್ಟು ಶ್ರಮವನ್ನು ವಹಿಸುವ ವ್ಯಕ್ತಿಗಳು ಇವರು. ಸಮಾಜಕ್ಕಾಗಿ ಕೈಗೊಳ್ಳುವ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರತಿಫಲ ಪಡೆದುಕೊಳ್ಳುವರು. ಹಬ್ಬದ ಈ ಶುಭ ಸಂದರ್ಭದಲ್ಲಿ ತಮ್ಮಲ್ಲೂ ಬದಲಾವಣೆ ಹಾಗೂ ಸಮಾಜಕ್ಕೂ ಬದಲಾವಣೆಯನ್ನು ತಂದುಕೊಡುವ ಕ್ಷಣಗಳಿವೆ ಎಂದು ಹೇಳಲಾಗುವುದು. ಹಾಗಾಗಿ ಇವರಿಗೆ ಮತ್ತು ಇವರ ಕೊಡುಗೆಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳಬೇಕು.

ಕರ್ಕ, ತುಲಾ, ಮೀನ ಮತ್ತು ವೃಷಭ: ಸಿಹಿ ತಿನಿಸುಗಳು

ಕರ್ಕ, ತುಲಾ, ಮೀನ ಮತ್ತು ವೃಷಭ: ಸಿಹಿ ತಿನಿಸುಗಳು

ಸಿಹಿ ತಿನಿಸು ಎನ್ನುವುದು ಸಂತೋಷ ಹಾಗೂ ತೃಪ್ತಿಯ ಸಂಕೇತವನ್ನು ಸೂಚಿಸುತ್ತದೆ. ಭಾರತದ ಸಾಂಪ್ರದಾಯಿಕ ಸಿಹಿತಿಂಡಿಗಳು ಎಲ್ಲರಲ್ಲೂ ತೃಪ್ತಿಯ ಭಾವನೆಯನ್ನು ನೀಡುವುದು. ಸಿಹಿ ಸಂಕೇತವನ್ನು ನೀಡುವ ದೀಪಾವಳಿ ಹಬ್ಬದ ಪರಿಪೂರ್ಣತೆಯು ಸಹ ಸಿಹಿ ತಿಂಡಿಯಲ್ಲಿ ಅಡಗಿದೆ ಎಂದು ಹೇಳಬಹುದು. ಹೌದು, ಈ ಒಂದು ಶುಭ ಸಂದರ್ಭದಲ್ಲಿ ನಾಲ್ಕು ರಾಶಿಚಕ್ರದವರು ತಾವು ಸಕಾರಾತ್ಮಕ ಚಿಂತನೆ ಹಾಗೂ ಕೆಲಸಗಳಲ್ಲಿ ಉತ್ತೇಜಕರಾಗುವರು. ಅಲ್ಲದೆ ತಮ್ಮ ಸುತ್ತಲಲ್ಲಿ ಇರುವ ಜನರಿಗೂ ಒಳ್ಳೆಯ ಪ್ರಚೋದನೆ ನೀಡುವರು ಎನ್ನಲಾಗುವುದು.

Most Read: ಈ ಮೂರು ರಾಶಿಚಕ್ರದವರು ತಮ್ಮ ನೋವು ಅಥವಾ ದುಃಖವನ್ನು ಪರರಿಗೆ ತಿಳಿಸಲು ಬಯಸುವುದಿಲ್ಲ!

ಕರ್ಕ, ತುಲಾ, ಮೀನ ಮತ್ತು ವೃಷಭ: ಸಿಹಿ ತಿನಿಸುಗಳು

ಕರ್ಕ, ತುಲಾ, ಮೀನ ಮತ್ತು ವೃಷಭ: ಸಿಹಿ ತಿನಿಸುಗಳು

ಇವರು ವ್ಯಸನಗಳನ್ನು ಓಡಿಸಬಹುದಾದಂತಹ ಔಷಧಿಯಾಗಬಲ್ಲರು. ಧಾರ್ಮಿಕವಾಗಿಯೂ ಶುದ್ಧ ಆಹಾರ ಎಂದು ಪರಿಗಣಿಸಲಾಗುವ ಸಿಹಿ ತಿಂಡಿಯಂತೆ ಇವರು ಜನರಿಗೆ ಉತ್ತಮ ಕೆಲಸ ಕಾರ್ಯ ಕೈಗೊಳ್ಳುವುದಕ್ಕೆ ಮುಂದಾಗುವರು. ಸುತ್ತಲಿನ ಜನರಿಗೆ ಆಹಾರವನ್ನು ನೀಡುವರು. ಅಲ್ಲದೆ ಸೂಕ್ತ ಭದ್ರತೆ ಹಾಗೂ ಸಂತೋಷದ ಭಾವನೆಯನ್ನು ನೀಡುವರು. ಸಂತುಷ್ಟವಾದ ಆತ್ಮವು ಇತರರಿಗೂ ಸಂತೋಷವನ್ನು ನೀಡುವುದು. ಅಂತೆಯೇ ಈ ಹಬ್ಬದ ಸಂದರ್ಭದಲ್ಲಿ ಈ ನಾಲ್ಕು ರಾಶಿಚಕ್ರದವರು ಸಂತೋಷವನ್ನು ಅನುಭವಿಸುವುದರ ಜೊತೆಗೆ ತಮ್ಮ ಸುತ್ತಲಿನಲ್ಲಿರುವವರಿಗೂ ಸಂತೋಷವನ್ನು ತಂದುಕೊಡುವರು.

Most Read: ಈ ದೀಪಾವಳಿಯಂದು, ರಾಶಿಚಕ್ರದ ಅನುಗುಣವಾಗಿ 'ಲಕ್ಷ್ಮೀ ದೇವಿ'ಯನ್ನು ಪೂಜಿಸಿದರೆ, ಸಂಪತ್ತು ವೃದ್ಧಿಯಾಗುವುದು

ಮೇಷ, ಸಿಂಹ, ವೃಶ್ಚಿಕ ಮತ್ತು ಕುಂಭ: ಪಾಟಾಕಿಗಳು

ಮೇಷ, ಸಿಂಹ, ವೃಶ್ಚಿಕ ಮತ್ತು ಕುಂಭ: ಪಾಟಾಕಿಗಳು

ಕೆಲವು ಹಿಂದೂ ಹಬ್ಬಗಳಲ್ಲಿ ನಾವು ಪಟಾಕಿಗಳನ್ನು ಸಿಡಿಸುವುದರ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತೇವೆ. ಇದರ ಅರ್ಥ ವಿಭಿನ್ನ ಬೆಳಕಿನೊಂದಿಗೆ ಸಡಗರದ ಹಾಗೂ ಸಂತೋಷದ ಭಾವನೆ ಹೊಂದಿರುವುದು ಎಂದಾಗುತ್ತದೆ. ಪಟಾಕಿಗಳು ತಮ್ಮನ್ನು ತಾವು ಸುಟ್ಟಿಕೊಂಡರೂ ವಿಭಿನ್ನ ಬೆಳಕು ಹಾಗೂ ಸಂತೋಷವನ್ನು ಇತರರಿಗೆ ನೀಡುತ್ತದೆ. ಹಾಗೆಯೇ ಈ ನಾಲ್ಕು ರಾಶಿಚಕ್ರದವರು ಈ ವರ್ಷದ ದೀಪಾವಳಿ ಹಬ್ಬದಲ್ಲಿ ತಮಗಿಂತ ಹೆಚ್ಚು ಇತರರಿಗೆ ಹೆಚ್ಚು ಸಂತೋಷವನ್ನು ತಂದುಕೊಡುವರು.

ಮೇಷ, ಸಿಂಹ, ವೃಶ್ಚಿಕ ಮತ್ತು ಕುಂಭ: ಪಾಟಾಕಿಗಳು

ಮೇಷ, ಸಿಂಹ, ವೃಶ್ಚಿಕ ಮತ್ತು ಕುಂಭ: ಪಾಟಾಕಿಗಳು

ಸದ್ಗುಣಗಳಿಂದ ಕೂಡಿರುವ ಇವರು ಇತರರ ಯಶಸ್ಸಿಗೆ ದಾರಿತೋರುವ ದೀಪವಾಗಿ ಬೆಳಗುತ್ತಾರೆ. ಇವರು ತಾವು ಮಾಡುವ ಉತ್ತಮ ಕೆಲಸದಿಂದಲೇ ವೈಯಕ್ತಿಕ ಸಂತೋಷವನ್ನು ಅನುಭವಿಸುವರು. ಸಕಾರಾತ್ಮಕ ಚಿಂತನೆಗಳಿಗೆ ಹೆಚ್ಚಿನ ಮಹತ್ವ ಹಾಗೂ ಸಮಯವನ್ನು ನೀಡುವರು ಎನ್ನಲಾಗುತ್ತದೆ.

ಎಲ್ಲರ ಬಾಳಿಗೂ ಈ ದೀಪಾವಳಿ ಶುಭವನ್ನು ತರಲಿ...

ಎಲ್ಲರ ಬಾಳಿಗೂ ಈ ದೀಪಾವಳಿ ಶುಭವನ್ನು ತರಲಿ...

ದೀಪಾವಳಿ ಎನ್ನುವ ಪವಿತ್ರ ಹಬ್ಬದ ಸಂದರ್ಭದಲ್ಲಿ ಎಲ್ಲರೂ ದೀಪ, ಸಿಹಿ ತಿಂಡಿ ಹಾಗೂ ಪಟಾಕಿಯ ರೂಪದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಸಹಕಾರ ಹಾಗೂ ಸೌಹಾರ್ದತೆಯನ್ನು ತಂದುಕೊಡುವರು. ಇಂತಹ ಒಂದು ಸಕಾರಾತ್ಮಕ ಸಮಯವು ಎಲ್ಲರ ಬಾಳಿಗೂ ಶುಭವನ್ನು ನೀಡಲಿ.

English summary

Find Out What is Your Diwali Mascot as per your Zodiac

Diwali is a festival of Lights, Desserts and Crackers ofcourse. Eliminate one of the above and you will smell the dullness. Diwali lightens up the soul and the environment. It instills within a victorious feeling and gives us a reason to indulge in rich Indian desserts to satisfy our sweet tooth without any guilt. Allows us to burst away our worries in the fire of crackers. Its very presence brings hope, light and positive vibes all around.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more