For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಸೆಕ್ಸ್ ಪರಾಕಾಷ್ಠೆ, ಕುತೂಹಲ ಕೆರಳಿಸುವ ಅಚ್ಚರಿಯ ಸಂಗತಿಗಳು

|

ಸೆಕ್ಸ್ ಎಂದ ಮೇಲೆ ಅಲ್ಲಿ ಮಹಿಳೆಗೆ, ಹಾಗೂ ಪುರುಷರಿಗೆ ಕೂಡ ಸಮಾನವಾದ ಸುಖ ಸಿಗಬೇಕು ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ ಲೈಂಗಿಕ ಕ್ರಿಯೆ ವೇಳೆ ಹೆಚ್ಚಿನ ಮಹಿಳೆಯರಿಗೆ ತಮ್ಮ ಪಾಲಿನ ಸುಖವು ಸಿಗುತ್ತಲೇ ಇಲ್ಲವೆಂದು ಹೇಳಿದರೆ ಅದನ್ನು ನಂಬಲು ಖಂಡಿತವಾಗಿಯೂ ಕಷ್ಟವಾಗಬಹುದು. ಸೆಕ್ಸ್ ನಲ್ಲಿ ತೊಡಗಿಕೊಂಡಿರುವಂತಹ ಮಹಿಳೆಯರಲ್ಲಿ ಶೇ.25ರಷ್ಟು ಮಂದಿಗೆ ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಲು ಸಾಧ್ಯವಾಗುತ್ತಿಲ್ಲ. ಅಂದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತಹ ಪ್ರತೀ ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಪರಾಕಾಷ್ಠೆ ತಲುಪಲು ಆಗಲ್ಲ. ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇರುವವರ ಬಗ್ಗೆ ತಿಳಿದಿಲ್ಲ. ಮಹಿಳೆಯರು ಲೈಂಗಿಕ ಕ್ರಿಯೆಯ ಹೊರತಾಗಿಯೂ ಬೇರೆ ವಿಧಾನಗಳಿಂದ ಪರಾಕಾಷ್ಠೆಯನ್ನು ತಲುಪಬಹುದು. ನಿಮಗೆ ಪರಾಕಾಷ್ಠೆ ತಲುಪಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದನ್ನು ನೀವು ಪಾಲಿಸಿಕೊಂಡು ಹೋದರೆ ತುಂಬಾ ಒಳ್ಳೆಯದು.

ವೈಬ್ರೇಟರ್ ಗಳು ಕೆಲವೊಂದು ನಿರ್ದಿಷ್ಟ ನರಗಳನ್ನು ಉತ್ತೇಜಿಸುವುದು

ವೈಬ್ರೇಟರ್ ಗಳು ಕೆಲವೊಂದು ನಿರ್ದಿಷ್ಟ ನರಗಳನ್ನು ಉತ್ತೇಜಿಸುವುದು

ಸ್ವಉತ್ತೇಜನಗಿಂತ ಕೆಲವೊಂದು ಸಲ ವೈಬ್ರೇಟರ್ ಗಳು ಹೆಚ್ಚು ಜನಪ್ರಿಯವಾಗಿರುವುದು ಇದೇ ಕಾರಣದಿಂದಾಗಿ. ದೇಹದಲ್ಲಿನ ಕೆಲವೊಂದು ನರಗಳು ಸೂಕ್ಷ್ಮಗಾಗಿಯೇ ಮಾಡಲ್ಪಟ್ಟಿರುವುದು. ನರಗಳ ತುದಿಯು ದೇಹದ ಎಲ್ಲಾ ರೀತಿಯ ಕಾರ್ಯ ಹಾಗೂ ಸೂಕ್ಷ್ಮತೆಯನ್ನು ಪಡೆದುಕೊಂಡಿರುವುದು ಎನ್ನುತ್ತಾರೆ ಕ್ವೀನ್. ಸ್ಪರ್ಶ ನೀಡುವ ವೈಬ್ರೇಷನ್ ಇದರಲ್ಲಿ ಒಂದಾಗಿದೆ. ಸೂಕ್ಷ್ಮ ವೈಬ್ರೇಷನ್ ಇದರಲ್ಲಿ ಒಂದಾಗಿದೆ. ವೈಬ್ರೇಷನ್ ಬಳಸುವಾಗ ಪ್ರಮುಖವಾಗಿ ಇದನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಗಮನಹರಿಸಬೇಕು. ನೀವು ಬಳಸುವಂತಹ ಸೆಕ್ಸ್ ಆಟಿಕೆಗಳು ಯಾವ ಉದ್ದೇಶದಿಂದಾಗಿ ರೂಪಿಸಲಾಗಿದೆ ಎಂದು ನೀವು ಬಳಸುವ ಮೊದಲು ತಿಳಿಯಿರಿ. ಯಾವಾಗಲೂ ಇದನ್ನು ಸೋಪ್ ಮತ್ತು ಬಿಸಿ ನೀರು ಬಳಸಿಕೊಂಡು ತೊಳೆಯಿರಿ. ಸೆಕ್ಸ್ ಆಟಿಕೆಗಳಿಗಾಗಿಯೇ ಕೆಲವೊಂದು ಕ್ಲೀನರ್ ಗಳಿವೆ.

Most Read: ಒಂದು ಗಂಟೆಯಲ್ಲಿ ಎರಡು ಬಾರಿ ಸೆಕ್ಸ್ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು!

ದುರ್ಬಲ ಸ್ನಾಯುಗಳಿಂದಾಗಿ ಕಳಪೆ ಪರಾಕಾಷ್ಠೆ

ದುರ್ಬಲ ಸ್ನಾಯುಗಳಿಂದಾಗಿ ಕಳಪೆ ಪರಾಕಾಷ್ಠೆ

ಶ್ರೋಣಿ ಪದರದ ಆರೋಗ್ಯವು ಲೈಂಗಿಕ ಕ್ರಿಯೆಯಲ್ಲಿ ಅತೀ ಮುಖ್ಯವಾಗಿರುವುದು. ಪಬ್ಕೊಕ್ಸೈಜಸ್ (ಪಿಸಿ) ಸ್ನಾಯುಗಳು ದುರ್ಬಲವಾಗಿದ್ದರೆ ಆಗ ಇದು ಬಲವಾದ ಪರಾಕಾಷ್ಠೆ ಮೇಲೆ ಪರಿಣಾಮ ಬೀರುವುದು. ಮತ್ತೊಂದು ಕಾರಣವೆಂದರೆ ಕೆಗಲ್ ವ್ಯಾಯಾಮವು ಅತೀ ಅಗತ್ಯವಾಗಿರುವುದು. ಪಿಸಿ ಸ್ನಾಯು ಸಂಕೋಚನವು ಪರಾಕಾಷ್ಠೆಯ ಭಾವನೆಗೆ ನೆರವಾಗುವುದು. ಕ್ವೀನ್ ಪ್ರಕಾರ, ಸ್ನಾಯುಗಳು ದುರ್ಬಲವಾಗಿದ್ದರೆ, ಸಂಕೋಚನವು ಹೆಚ್ಚು ಭಾವನೆ ಉಂಟು ಮಾಡದು ಮತ್ತು ಪರಾಕಾಷ್ಠೆಯು ಆ ಮಟ್ಟದಲ್ಲಿ ಆಗಿಲ್ಲವೆನ್ನುವಂತಹ ಭಾವನೆಯು ಮೂಡುವುದು. ಗರ್ಭಕೋಶ, ಸಣ್ಣ ಕರುಳು ಮತ್ತು ಗುದನಾಳಕ್ಕೆ ಬೆಂಬಲವಾಗಿರುವ ಶ್ರೋಣಿ ಪದರದ ಸ್ನಾಯುಗಳನ್ನು ಕೆಗಲ್ ಬಲಪಡಿಸುವುದು. ವಿವೇಚನೆಯುಕ್ತ ವ್ಯಾಯಾಮವು ಮೂತ್ರದ ಅಸಂಯಮವನ್ನು ಕೂಡ ತಡೆಯಬಹುದು. ಇದನ್ನು ಮಾಡುವುದು ತುಂಬಾ ಸರಳ. ಮೂತ್ರ ನಿಲ್ಲಿಸುವಂತಹ ಸ್ನಾಯುಗಳನ್ನು ಬಿಗಿಗೊಳಿಸಿ, ಇದರ ಬಳಿಕ ಐದು ಸೆಕೆಂಡು ಕಾಲ ಆರಾಮ ನೀಡಿ. ಹೀಗೆ ನೀವು ಹಲವಾರು ಸಲ ಮಾಡಿ ಮತ್ತು ಇದರ ಬಳಿಕ ಬಿಗಿ ಹಿಡಿದುಕೊಂಡು ಮತ್ತು ಹತ್ತು ಸೆಕೆಂಡುಗಳ ಕಾಲ ಆರಾಮ ನೀಡಿ. ಹೀಗೆ ಮೂರು ಹಂತದಲ್ಲಿ ದಿನದಲ್ಲಿ 10 ಸಲ ಹೀಗೆ ಮಾಡಿಕೊಳ್ಳಿ.

ಪರಾಕಾಷ್ಠೆಯು ಸಹಜ ಸಾಮರ್ಥ್ಯವಲ್ಲ

ಪರಾಕಾಷ್ಠೆಯು ಸಹಜ ಸಾಮರ್ಥ್ಯವಲ್ಲ

ಬಹುತೇಕ ಎಲ್ಲಾ ಸಂಭಾವ್ಯ ಸಾಮರ್ಥ್ಯವು ನಿಜ. ಆದರೆ ದೇಹವು ಇದರಿಂದ ಕಲಿತುಕೊಳ್ಳಬೇಕಾಗಿದೆ.

ಕ್ವೀನ್ ಹೇಳುವಂತೆ, ಕೊಯ್ಯುವಂತೆ ಅಥವಾ ಚೆಂಡನ್ನು ಎಸೆಯುವಂತೆ ಒಬ್ಬರ ಸಾಮರ್ಥ್ಯಕ್ಕೆ ಬೆಂಬಲ ನೀಡಲು ನರಗಳು ನಿಜವಾಗಿಯೂ ಬೆಳೆಯುವುದು. ಕೆಲವು ತಜ್ಞರು ಆರಾಮದ ವ್ಯಾಯಾಮ ಮತ್ತು ಕೆಗಲ್ ನ್ನು ಸೂಚಿಸುವರು. ಆದರೆ ನಿಮ್ಮ ಪರಾಕಾಷ್ಠೆಗೆ ಯಾವುದೇ ರೀತಿಯ ಅನಾರೋಗ್ಯ ಅಥವಾ ಔಷಧಿಗಳು ಕಾರಣವಾಗುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದುಕೊಳ್ಳುವುದು ಅತೀ ಅಗತ್ಯವಾಗಿರುವುದು.

ಸೆಕ್ಸ್ ನ್ನು ಆನಂದಿಸಲು ಮಹಿಳೆಯರು ಪರಾಕಾಷ್ಠೆ ತಲುಪಬೇಕೆಂದಿಲ್ಲ

ಸೆಕ್ಸ್ ನ್ನು ಆನಂದಿಸಲು ಮಹಿಳೆಯರು ಪರಾಕಾಷ್ಠೆ ತಲುಪಬೇಕೆಂದಿಲ್ಲ

ಕೆಲವು ಮಹಿಳೆಯರು ದೈಹಿಕ ಅನ್ಯೋನ್ಯತೆ ಮತ್ತು ಆತ್ಮೀಯತೆಯನ್ನು ಆನಂದಿಸುವರು. ಅವರು ಪರಾಕಾಷ್ಠೆ ತಲುಪದೆ ಇದ್ದರೂ ಇದನ್ನು ಆನಂದಿಸುವರು. ಸಂಶೋಧನೆಗಳಿಂದ ಕಂಡುಕೊಂಡಿರುವ ವಿಚಾರವೆಂದರೆ ಹೆಚ್ಚಿನ ಮಹಿಳೆಯರು ಹೇಳುವ ಪ್ರಕಾರ ಅವರು ಪರಾಕಾಷ್ಠೆ ತಲುಪುದಕ್ಕಿಂತಲೂ ಸಂಗಾತಿ ಜತೆಗಿನ ಆತ್ಮೀಯತೆಯು ಹೆಚ್ಚು ತೃಪ್ತಿ ನೀಡುತ್ತದೆಯೆಂತೆ. ಪರಾಕಾಷ್ಠೆಯು ತುಂಬಾ ಸುಂದರವಾಗಿರುವುದು. ಆದರೆ ಇದು ದೇಹದ ಒಂದು ಪ್ರತಿಕ್ರಿಯೆಯಾಗಿದೆ. ಆದರೆ ಹೆಚ್ಚಿನ ಮಹಿಳೆಯರು ಪ್ರಚೋದನೆ, ಖುಷಿ, ಆತ್ಮೀಯತೆ, ಸ್ಪರ್ಶ ಮತ್ತು ಅನ್ಯೋನ್ಯತೆಗೆ ಹೆಚ್ಚಿನ ಮಹತ್ವ ನೀಡುವರು ಎಂದು ಕ್ವೀನ್ ಹೇಳುತ್ತಾರೆ. ಇದು ಇಲ್ಲಿಗೆ ಕೊನೆಯಾಗುವುದಿಲ್ಲ. ಆದರೆ ಪರಾಕಾಷ್ಠೆ ಮಾತ್ರ ಸೆಕ್ಸ್ ಜೀವನದ ಭಾಗವಲ್ಲ.

English summary

Female Orgasm Thrillist Facts, that might surprise you

Given the amount of pop culture and media devoted to sex, it might seem like the facts are pretty clear. But mainstream pornography and the success of fantasy films like “50 Shades of Grey” have only propagated many of the myths surrounding sexuality — in particular, female sexuality. The proliferation of these myths leads not only to sexual dissatisfaction, but serious self-esteem issues. According to one study, more than 60 percent of women have faked an orgasm during intercourse or oral sex. Many of these women were motivated by fear of intimacy, insecurities about sexual functioning, or the desire to get sex over with.
X
Desktop Bottom Promotion