For Quick Alerts
ALLOW NOTIFICATIONS  
For Daily Alerts

ಹಲ್ಲುಗಳು ಉದುರುವ ಕನಸ್ಸು ಬೀಳುವುದು ಯಾಕೆ ಗೊತ್ತೇ?

|
ಕನಸಲ್ಲಿ ಹಲ್ಲು ಉದುರುವ ಹಾಗೆ ಬಂದ್ರೆ ಅದರ ಅರ್ಥವೇನು? | Oneindia Kannada

ರಾಜರ ಕಾಲದಲ್ಲಿ ರಾಜನಿಗೆ ಕನಸುವ ಬಿದ್ದರೆ ಮರುದಿನ ಆಸ್ಥಾನದಲ್ಲಿ ರಾಜಗುರುಗಳು ರಾಜನಿಗೆ ಬಿದ್ದಿರುವಂತಹ ಕನಸಿನಿಂದ ಕೆಟ್ಟದಾಗಲಿದೆಯಾ ಅಥವಾ ಒಳ್ಳೆಯದಾಗಲಿದೆಯಾ ಎಂದು ವಿವರಿಸಿ ಹೇಳುತ್ತಿದ್ದರಂತೆ. ರಾಜನಿಗೆ ಬೀಳುವಂತಹ ಕನಸು ಸಂಪೂರ್ಣ ರಾಜ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗುತ್ತಿತ್ತು. ಆದರೆ ಕನಸೆನ್ನುವುದು ರಾಜನಾದರೂ ಅಥವಾ ಸಾಮಾನ್ಯ ಪ್ರಜೆಯಾದರೂ ಬೀಳುವುದು. ಕನಸಿಗೆ ಭೇದಭಾವವೆನ್ನುವುದು ಇಲ್ಲ. ಆದರೆ ಹೆಚ್ಚಿನವರು ತಮಗೆ ಬೀಳುವಂತಹ ಕನಸನ್ನು ಕಡೆಗಣಿಸುವರು. ಇನ್ನು ಕೆಲವರಿಗೆ ಯಾವ ರೀತಿಯ ಕನಸು ಬಿದ್ದಿದೆ ಎನ್ನುವುದೇ ನೆನಪು ಇರಲ್ಲ. ಆದರೆ ಪ್ರತಿಯೊಂದು ಕನಸು ಕೂಡ ತನ್ನದೇ ಆಗಿರುವ ಅರ್ಥವನ್ನು ಹೊಂದಿದೆ. ಈ ಲೇಖನದಲ್ಲಿ ನಿಮಗೆ ಬೀಳುವಂತಹ ಹಲ್ಲುದುರುವ ಕನಸಿಗೆ ಯಾವ ಅರ್ಥವಿದೆ ಎಂದು ಹೇಳಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ನಿಯಂತ್ರಣ ಕಳೆದುಕೊಳ್ಳುತ್ತಿರುವ ಭಾವನೆಯಾಗಬಹುದು

ನಿಯಂತ್ರಣ ಕಳೆದುಕೊಳ್ಳುತ್ತಿರುವ ಭಾವನೆಯಾಗಬಹುದು

ನಿಮಗೆ ಹಲ್ಲು ಉದುರುವಂತಹ ಕನಸು ಬಿದ್ದರೆ ಆಗ ನಿಮಗೆ ನಿಯಂತ್ರಣವು ಕಳೆದುಕೊಳ್ಳುವಂತಹ ಭಾವನೆಯಾಗ ಬಹುದು. ಇದು ವೃತ್ತಿ ಜೀವನದ ವೈಫಲ್ಯ, ಉದ್ಯೋಗ ಕಳೆದುಕೊಳ್ಳುವುದು ಅಥವಾ ಕೌಟುಂಬಿಕ ಒತ್ತಡದ ಪರಿಣಾಮವಾಗಿರಬಹುದು. ನಿಮ್ಮ ಸುತ್ತಲಿನ ನಿಯಂತ್ರಣ ಕಳೆದುಕೊಳ್ಳುತ್ತಿದ್ದೀರಿ ಎನ್ನುವ ಭಾವನೆಯಾಗಬಹುದು.

Most Read: ಮಾಜಿ ಪ್ರೇಮಿಯ ಹಿಂದಕ್ಕೆ ಪಡೆಯಲು ಪ್ರತೀ ರಾಶಿಯ ಮಹಿಳೆಯರು ಏನು ಮಾಡುವರು?

ಹೃದಯಕ್ಕೆ ಹತ್ತಿರುವಾಗಿರುವುದನ್ನು ಕಳೆದುಕೊಳ್ಳುವ ಭೀತಿ

ಹೃದಯಕ್ಕೆ ಹತ್ತಿರುವಾಗಿರುವುದನ್ನು ಕಳೆದುಕೊಳ್ಳುವ ಭೀತಿ

ನಿಮಗೆ ಹಣ ಅಥವಾ ಮಕ್ಕಳನ್ನು ಕಳೆದುಕೊಳ್ಳುವಂತಹ ಭೀತಿಯು ಇದ್ದರೆ ಆಗ ಇಂತಹ ಕನಸು ನಿಮಗೆ ಬೀಳುವುದು. ಕಳೆದುಕೊಳ್ಳತ್ತೇವೆಂಬ ಅತಿಯಾದ ಭೀತಿಯಿಂದಾಗಿ ಕನಸು ಬೀಳುವುದು.

ವಯಸ್ಸಾಗುತ್ತಿರುವ ಒತ್ತಡ

ವಯಸ್ಸಾಗುತ್ತಿರುವ ಒತ್ತಡ

ಈ ಕನಸು ಬಿದ್ದರೆ ಆಗ ನಿಮಗೆ ವಯಸ್ಸಾಗುತ್ತಿರುವ ಒತ್ತಡವಿದೆಯೆಂದು ಹೇಳಬಹುದು. ವಯಸ್ಸು, ಆರೋಗ್ಯ ಅಥವಾ ಇನ್ನಿತರ ವಿಷಯದಲ್ಲಿ ಕುಸಿತ. ನಿಮ್ಮ ಆತ್ಮಮೌಲ್ಯದ ಅರ್ಥವನ್ನು ಮರೆತುಬಿಟ್ಟಿದ್ದೀರಿ.

ಮನೆಯ ಸದಸ್ಯರು ಅನಾರೋಗ್ಯದಲ್ಲಿದ್ದಾಗ

ಮನೆಯ ಸದಸ್ಯರು ಅನಾರೋಗ್ಯದಲ್ಲಿದ್ದಾಗ

ಹಲ್ಲುದುರುವಂತಹ ಕನಸು ಬಿದ್ದರೆ ಆಗ ಆ ವ್ಯಕ್ತಿಯ ಮನೆಯ ಸದಸ್ಯರ ಅನಾರೋಗ್ಯದ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದಾರೆ ಎಂದು ಹೇಳಬಹುದು.

Most Read: ಒಂದೆರಡು ಚಮಚ, 'ಕೊತ್ತಂಬರಿ ಕಾಳು'-ಹಲವಾರು ಸಮಸ್ಯೆಗಳಿಗೆ ರಾಮಬಾಣ!

ಹಣದ ವಿಚಾರವು ನಿಮಗೆ ಸಮಸ್ಯೆಯಾಗಿರಬಹುದು

ಹಣದ ವಿಚಾರವು ನಿಮಗೆ ಸಮಸ್ಯೆಯಾಗಿರಬಹುದು

ನಿಮ್ಮಲ್ಲಿ ಹೆಚ್ಚಿನ ಹಣವು ಉಳಿತಾಯವಿಲ್ಲದೆ ಇದ್ದರೆ ಆಗ ನಿಮಗೆ ಹಲ್ಲು ಉದುರುವ ಕನಸು ಬೀಳಬಹುದು. ನಿಮ್ಮ ಚಿಂತೆಯು ಆಲೋಚನೆಯಲ್ಲಿ ಕಂಡುಬರುವುದು. ಅಧ್ಯಯನಗಳ ಪ್ರಕಾರ ನಿಮ್ಮ ಉಪಪ್ರಜ್ಞೆಯ ಮನಸ್ಸು ನೀವು ನಿದ್ರೆಯಲ್ಲಿರುವಾಗ ಸಂಪರ್ಕಿಸಲು ಪ್ರಯತ್ನಿಸುವದೇ ಹಲ್ಲು ಉದುರುವಂತಹ ಕನಸು ಬೀಳಲು ಕಾರಣವಾಗಿದೆ.

ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

ಹಲ್ಲಿನ ಸಮಸ್ಯೆಯೆಂದು ದಂತ ವೈದ್ಯರ ಬಳಿ ಹೋದ ಯುವತಿಯ ಸ್ಟೋರಿ..

ಹಲ್ಲಿನ ಸಮಸ್ಯೆಯೆಂದು ದಂತ ವೈದ್ಯರ ಬಳಿ ಹೋದ ಯುವತಿಯ ಸ್ಟೋರಿ..

ಯುವತಿಯೊಬ್ಬಳು ಹಲ್ಲಿನ ಸಮಸ್ಯೆಗೆಂದು ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋದ ಬಳಿಕ ಆಕೆಯ ಮುಖದ ಸೌಂದರ್ಯವೇ ಕೆಟ್ಟು ಹೋಯಿತು. ಈಗ ಆಕೆಗೆ ಚರ್ಮವನ್ನು ತಿನ್ನುವಂತಹ ರೋಗವು ಕಾಡುತ್ತಿದೆ. ಇಂತಹ ವೇದನೆಯ ಕಥೆಗಳು ಹಲವಾರು ನಮ್ಮ ಮುಂದೆ ಇದೆ. ಬೋಲ್ಡ್ ಸ್ಕೈ ಈ ಲೇಖನದಲ್ಲಿ 18ರ ಹರೆಯದ ಯುವತಿ ಸೂಥ್ ರೆಥ್ ಬಗ್ಗೆ ತಿಳಿಸಿಕೊಡಲಿದೆ. ಹಲ್ಲನ್ನು ಕೀಳಲು ಹೋದ ಆಕೆ ತನ್ನ ಚಿಕಿತ್ಸೆ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ಆದರೆ ಮುಂದೆ ಆಕೆ ದೊಡ್ಡ ಸಮಸ್ಯೆಗೆ ಗುರಿಯಾದಳು. ಇದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ...

ಹಲ್ಲು ಕೀಳಲು ಹಲ್ಲಿನ ವೈದ್ಯರನ್ನು ಭೇಟಿಯಾದಳು

ಹಲ್ಲು ಕೀಳಲು ಹಲ್ಲಿನ ವೈದ್ಯರನ್ನು ಭೇಟಿಯಾದಳು

18ರ ಹರೆಯದ ಸೂತ್ ರೆತ್ ಹಲ್ಲಿನ ಸಮಸ್ಯೆಯೆಂದು ಹಲ್ಲನ್ನು ಕೀಳಲು ಹಲ್ಲಿನ ವೈದ್ಯರಲ್ಲಿಗೆ ಹೋದಳು. ಇದೊಂದು ಸಾಮಾನ್ಯ ಚಿಕಿತ್ಸೆಯೆಂದು ಆಕೆ ಭಾವಿಸಿದ್ದಳು.

ಆಕೆಗೆ ಸೈನಸ್ ಸೋಂಕಿತ್ತು

ಆಕೆಗೆ ಸೈನಸ್ ಸೋಂಕಿತ್ತು

ಕೆಲವು ವಾರಗಳ ಮೊದಲು ಆಕೆಗೆ ಸೈನಸ್ ಸೋಂಕು ಭಾದಿಸಿತ್ತು. ಇದನ್ನು ಹೊರತುಪಡಿಸಿ ಆಕೆ ತುಂಬಾ ಆರೋಗ್ಯವಾಗಿದ್ದಳು. ಆದರೆ ಆಕೆ ತನ್ನ ಹಲ್ಲುಗಳನ್ನು ಕೀಳಿಸಿದ ಬಳಿಕ ಆಕೆಯ ಮುಖವೇ ಕೆಟ್ಟು ಹೋಯಿತು.

ಚರ್ಮ ತಿನ್ನುವ ಕಾಯಿಲೆ!

ಚರ್ಮ ತಿನ್ನುವ ಕಾಯಿಲೆ!

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಎನ್ನುವ ಕಾಯಿಲೆಯಿಂದ ಆಕೆ ಬಳಲುತ್ತಾ ಇದ್ದಾಳೆ. ಇದನ್ನು ಸಾಮಾನ್ಯವಾಗಿ ಚರ್ಮ ಕಿತ್ತು ತಿನ್ನುವ ಕಾಯಿಲೆಯೆಂದು ಕರೆಯಲಾಗುತ್ತದೆ. ಹಲ್ಲುಗಳನ್ನು ಕಿತ್ತ ಬಳಿಕ ಆಕೆಯ ಗಾಯಗಳು ಹಾಗೆ ಹಸಿಯಾಗಿದ್ದವು. ಈ ವೇಳೆ ಸೈನಸ್ ನ ಬ್ಯಾಕ್ಟೀರಿಯಾಗಳು ಅದರೊಳಗೆ ಪ್ರವೇಶಿಸಿ ರಕ್ತನಾಳಗಳನ್ನು ಸೇರಿಕೊಂಡವು.

Most Read: ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ- ಮದುವೆಯ ಸಂದರ್ಭದಲ್ಲಿ ಸಮಸ್ಯೆ ಬರಲಿದೆ!!

ಚರ್ಮದ ನಯವಾದ ಭಾಗವನ್ನು ಕೊಂದವು

ಚರ್ಮದ ನಯವಾದ ಭಾಗವನ್ನು ಕೊಂದವು

ಇಂತಹ ಕಾಯಿಲೆ ಕಾನಿಸಿಕೊಳ್ಳುವುದು ತುಂಬಾ ಕಡಿಮೆ. ಆದರೆ ಇದನ್ನು ಆ್ಯಂಟಿಬಯೋಟಿಕ್ ನೀಡಿ ಚಿಕಿತ್ಸೆ ಮಾಡಬಹುದು ಮತ್ತು ಸೋಂಕು ಹರಡದಂತೆ ತಡೆಯಲು ಶಸ್ತ್ರಚಿಕಿತ್ಸೆ ನಡೆಸಬಹುದು.

ಮುಖದ ಭಾಗವೇ

ಮುಖದ ಭಾಗವೇ

ಮಾಯ ಜರ್ಮನಿಯ ವೈದ್ಯರ ತಂಡವೊಂದು ಆಕೆಯ ಮುಖದ ಮರುನಿರ್ಮಾಣಕ್ಕೆ ಶಸ್ತ್ರಚಿಕಿತ್ಸೆ ನಡೆಸಿದೆ. ಆಕೆಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಚಿಕಿತ್ಸೆ ತುಂಬಾ ನೋವಿನಿಂದ ಕೂಡಿರಲಿದೆ ಎಂದು ವೈದ್ಯರು ಹೇಳಿದ್ದಾರೆ.

English summary

Dreams About Teeths Falling Out

Our dreams tell us something, and this is something that we should listen to carefully. Sometimes, you can understand the real messages from your dreams without much effort. According to research, people tend to dream about their teeth falling at some point in time. It is believed that it is an eerily universal experience that can point towards different things.Check out the meaning behind the dream of teeth falling.
X
Desktop Bottom Promotion