For Quick Alerts
ALLOW NOTIFICATIONS  
For Daily Alerts

ವೈದ್ಯರ ಎಡವಟ್ಟು, ಮಹಿಳೆಯ ಆರೋಗ್ಯವಂತ ಕಿಡ್ನಿಯನ್ನೇ ತೆಗೆದ ವೈದ್ಯರು!

|

ಮಾನವ ಸಹಜ ತಪ್ಪುಗಳು ವೈದ್ಯರಿಂದ ಕೆಲವೊಮ್ಮೆ ನಡೆಯುವುದು ಇದೆ. ಆದರೆ ಅಂತಹ ತಪ್ಪುಗಳು ವೈದ್ಯಕೀಯ ಲೋಕಕ್ಕೆ ಒಂದು ಹಿನ್ನಡೆ ಎನ್ನಬಹುದು. ಇಲ್ಲಿ ನಡೆದಿರುವ ಘಟನೆ ಮಾತ್ರ ತಪ್ಪಲ್ಲ, ದೊಡ್ಡ ಪ್ರಮಾದವೆನ್ನಬಹುದು.

Doctors Removed women Kidney By Mistake!

ಯಾಕೆಂದರೆ ಆರೋಗ್ಯವಂತ ಮಹಿಳೆಯೊಬ್ಬರ ಒಂದು ಕಿಡ್ನಿಯನ್ನು ವೈದ್ಯರು ಕ್ಯಾನ್ಸರ್ ಗಡ್ಡೆಯೆಂದು ಭಾವಿಸಿ ತೆಗೆದಿದ್ದಾರೆ. ಇದರಿಂದ ಮಹಿಳೆಯು ಜೀವನಪೂರ್ತಿ ಕೇವಲ ಒಂದು ಕಿಡ್ನಿಯಿಂದ ಬದುಕಬೇಕಾಗಿದೆ. ವೈದ್ಯರ ದೊಡ್ಡ ನಿರ್ಲಕ್ಷ್ಯದ ಬಗ್ಗೆ ನೀವು ಈ ಲೇಖನದಲ್ಲಿ ಓದುತ್ತಾ ಸಾಗಿ.

ಬೆನ್ನುನೋವಿನ ಚಿಕಿತ್ಸೆಗೆ ಹೋದವಳು

ಬೆನ್ನುನೋವಿನ ಚಿಕಿತ್ಸೆಗೆ ಹೋದವಳು

ಮೌರಿನಾ ಪಚೆಕೊ ಎಂಬ ಮಹಿಳೆಯು ಕಾರು ಅಪಘಾತಕ್ಕೀಡಾದ ಒಂದು ವರ್ಷದ ಬಳಿಕ ತೀವ್ರ ಬೆನ್ನುನೋವಿಗೆ ಒಳಗಾದರು. ತನ್ನ ಮೂಳೆಗಳಲ್ಲಿ ಕಂಡುಬರುತ್ತಿರುವ ತೀವ್ರ ನೋವಿಗೆ ಚಿಕಿತ್ಸೆಗೆಂದು ಆಕೆ ವೆಲ್ಲಿಂಗ್ಟನ್ ರೀಜನಲ್ ಮೆಡಿಕಲ್ ಸೆಂಟರ್ ಗೆ ಹೋದರು.

Most Read: ದೇಹದ ಅಂಗಾಂಗಗಳು ನಿಮ್ಮ ವ್ಯಕ್ತಿತ್ವ ಹೇಳುವುದು!

ಶ್ರೋಣಿ ಕುಹರದ ಮೂಳೆಯಲ್ಲಿ ದೊಡ್ಡ ಮಾಂಸ ಗಡ್ಡೆ ಗುರುತಿಸಿದರು

ಶ್ರೋಣಿ ಕುಹರದ ಮೂಳೆಯಲ್ಲಿ ದೊಡ್ಡ ಮಾಂಸ ಗಡ್ಡೆ ಗುರುತಿಸಿದರು

ಶಸ್ತ್ರಚಿಕಿತ್ಸೆಗೆ ಒಳಪಡಿಸುವಂತಹ ವೈದ್ಯರು ಮಹಿಳೆಯು ಮಾಡಿರುವ ಎರಡು ಎಂಆರ್ ಐ ವರದಿಯನ್ನು ನೋಡಿರಲೇ ಇಲ್ಲ. ಇದರಲ್ಲಿ ಆಕೆಗೆ ಶ್ರೋಣಿ ಕಿಡ್ನಿ ಇರುವುದು ಕಂಡುಬಂದಿದೆ. ಇದು ಆರೋಗ್ಯವಂತವೆಂದು ಪರಿಗಣಿಸಲಾಗಿದೆ. ವೈದ್ಯರು ಶ್ರೋಣಿ ಭಾಗದಲ್ಲಿ ಕಿಡ್ನಿಯನ್ನು ಮಾಂಸಗಡ್ಡೆ ಎಂದು ಭಾವಿಸಿ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿದರು. ಪಚೆಕೊ ಅವರ ಆರೋಗ್ಯಕರ ಕಿಡ್ನಿ ತೆಗೆದ ವೈದ್ಯರು, ಬಳಿಕ ತಮ್ಮ ಸಹೋದ್ಯೋಗಿಗಳು ಶಸ್ತ್ರಚಿಕಿತ್ಸೆ ಮುಂದುವರಿಸುವಂತೆ ಹೇಳಿದರು.

ಆಕೆ ಆಘಾತದಿಂದ ಎದ್ದಳು

ಆಕೆ ಆಘಾತದಿಂದ ಎದ್ದಳು

ಶಸ್ತ್ರಚಿಕಿತ್ಸೆ ಬಳಿಕ ತನ್ನ ಬೆನ್ನುನೋವು ಕಡಿಮೆಯಾಗುತ್ತದೆ ಎಂದು ಭಾವಿಸಿದ್ದ ಪಚೆಕೊಗೆ ದೊಡ್ಡ ಆಘಾತವೊಂದು ಎದುರಾಗಿತ್ತು. ಅದೇನೆಂದರೆ ಆಕೆಯ ಒಂದು ಕಿಡ್ನಿಯನ್ನು ತೆಗೆಯಲಾಗಿತ್ತು. ಇದರಿಂದ ಆಕೆಗೆ ಕಿಡ್ನಿ ವೈಫಲ್ಯವಾಗುವ ಸಾಧ್ಯತೆಯು ಹೆಚ್ಚಾಗಿತ್ತು ಮತ್ತು ಮೂತ್ರಪಿಂಡವು ವೈಫಲ್ಯವಾಗುವ ಸಮಸ್ಯೆಯು ಕಾಡುವ ಅಪಾಯವಿದೆ. ತನಗೆ ಆಗಿರುವ ವೈದ್ಯಕೀಯ ಅನ್ಯಾಯದ ಬಗ್ಗೆ ಆಕೆ ಕಾನೂನು ಹೋರಾಟ ಮಾಡಲು ಮುಂದಾದಳು. ಆಕೆ ಈ ಹೋರಾಟ ಗೆದ್ದಳು. ಆದರೆ ಆಕೆಗೆ ಮರಳಿ ಕಿಡ್ನಿ ಜೋಡಿಸಲು ವೈದ್ಯರಿಗೆ ಆಗಲಿಲ್ಲ.

Most Read: ರಾತ್ರಿ ಬೆಳಗಾಗುವುದರೊಳಗೆ ಮಗುವಿನ ಬಾಯಿಯಲ್ಲಿ ಮೂಡಿದ ಕೋರೆ ಹಲ್ಲು!

ಶ್ರೋಣಿಯ ಕಿಡ್ನಿಯ ಬಗ್ಗೆ ಚಿಂತಿಸಬೇಕಿಲ್ಲ

ಶ್ರೋಣಿಯ ಕಿಡ್ನಿಯ ಬಗ್ಗೆ ಚಿಂತಿಸಬೇಕಿಲ್ಲ

ಶ್ರೋಣಿಯ ಕಿಡ್ನಿಯು ಯಾವುದೇ ರೀತಿಯ ಸಮಸ್ಯೆಯುಂಟು ಮಾಡುವುದಿಲ್ಲ. ಇದು ಆರೋಗ್ಯವಂತ ಕಿಡ್ನಿಯಾಗಿದ್ದು, ಭ್ರೂಣದ ಸಾಮಾನ್ಯ ಬೆಳವಣಿಗೆ ವೇಳೆ ಇದು ಉದರದ ಪ್ರದೇಶದ ಮೇಲ್ಭಾಗದಲ್ಲಿ ಬಂದಿರುವುದು. ಕಿಡ್ನಿಯ ಸ್ಥಾನಬದಲಾವಣಿಯಿಂದ ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆಯಾಗದು. ಈ ಹಿಂದೆಯೂ ಇಂತಹದ್ದೇ ಘಟನೆ ನಡೆದಿತ್ತು

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು.

ಅಂದು ಆ ವಿಡಿಯೋ ಸಾಮಾಜಿಕ ತಾಣದಲ್ಲಿ ತಪ್ಪಿ ಬಂದಿತ್ತು!

ಅಂದು ಆ ವಿಡಿಯೋ ಸಾಮಾಜಿಕ ತಾಣದಲ್ಲಿ ತಪ್ಪಿ ಬಂದಿತ್ತು!

ಈ ವೈದ್ಯರು 'ಮಹಿಳೆಯರನ್ನು ಘಾಸಿಗೊಳಿಸುತ್ತಿದ್ದಾರೆ' ಎಂಬ ಆರೋಪ ಹೊರಿಸಿದ ವ್ಯಕ್ತಿಯೊಬ್ಬ ಗುಟ್ಟಾಗಿ ಈ ವಿಡಿಯೋಗಳನ್ನು ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ನಿಧಾನವಾಗಿ ಹರಿಬಿಟ್ಟಿದ್ದ. ಇದೊಂದೇ ಅಲ್ಲ, ಇದೇ ವೈದ್ಯರ ಇನ್ನೂ ಹಲವಾರು ವಿಡಿಯೋಗಳನ್ನು ತೆಗೆದಿದ್ದಾನೆ

ಆ ವಿಡಿಯೋವನ್ನು ಹರಿಬಿಟ್ಟಿದ್ದು ನಗರಪಾಲಿಕಾ ಕೌನ್ಸಿಲರ್

ಆ ವಿಡಿಯೋವನ್ನು ಹರಿಬಿಟ್ಟಿದ್ದು ನಗರಪಾಲಿಕಾ ಕೌನ್ಸಿಲರ್

ಕೊಲಂಬಿಯಾ ದೇಶದ ವಾಯುವ್ಯ ಪ್ರಾಂತದಲ್ಲಿರುವ ಮೆಡೆಲ್ಲಿನ್ ನಗರದ ಕೌನ್ಸಿಲರ್ ಆಗಿರುವ ಬರ್ನಾರ್ಡೋ ಅಲೆಜಾಂದ್ರೋ ಗುವೇರಾ ರವರು ಈ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಎಲ್ಲರ ಗಮನ ಸೆಳೆಯುವಂತೆ ಹರಿಬಿಟ್ಟಿದ್ದು ಈ ವೈದ್ಯರ ವಿರುದ್ಧ ಹಾಗೂ ಈ ರೀತಿಯ ಕೃತ್ಯ ಮತ್ತು ಅಜಾಗರೂಕತೆ ಎಸಗುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಆಗ್ರಹಿಸಿದ್ದಾರೆ.

ಓರ್ವ ರೋಗಿ ಈ ವೈದ್ಯರನ್ನು ಗುರುತಿಸಿದ್ದಾರೆ

ಓರ್ವ ರೋಗಿ ಈ ವೈದ್ಯರನ್ನು ಗುರುತಿಸಿದ್ದಾರೆ

ಈ ವೈದ್ಯರ ಬಳಿ ಚಿಕಿತ್ಸೆ ಪಡೆದ ಮಹಿಳೆಯೊಬ್ಬರು ಈ ವಿಡಿಯೋವನ್ನು ಕಂಡು ಈ ವೈದ್ಯರನ್ನು ಕಂಡು ಗುರುತು ಹಿಡಿದಿದ್ದಾರೆ. ಈಕೆ ತಮ್ಮ ದೊಡ್ಡ ಹೊಟ್ಟೆ ಮತ್ತು ಸ್ತನಗಳ ಚಿಕಿತ್ಸೆ ನಡೆಸಲು ಈ ವೈದ್ಯರ ಬಳಿ ಬಂದಿದ್ದು ಶಸ್ತ್ರಚಿಕಿತ್ಸೆಯ ಬಳಿಕ ಮೂರೇ ದಿನದಲ್ಲಿ ಇವರ ಆರೋಗ್ಯ ಬಿಗಡಾಯಿಸಿತ್ತು.

ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ

ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ

ವಿಶ್ವದಾದ್ಯಂತ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಪ್ರತಿಜ್ಞೆಯನ್ನು ಪಾಲಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ ಅಗತ್ಯವಿರುವ ಎಲ್ಲಾ ರೀತಿಯ ನ್ಯಾಯ ಒದಗಿಸುವುದೂ ಈ ಪ್ರತಿಜ್ಞೆಯಲ್ಲಿ ಒಂದು. ಈ ವೈದ್ಯರು ಶಸ್ತ್ರಚಿಕಿತ್ಸೆಯ ವೇಳೆ ನರ್ತಿಸುವುದು ವೈದ್ಯವೃತ್ತಿಗೇ ಅವಮಾನಕರವಾಗಿದೆ ಎಂದು ಹೆಚ್ಚಿನ ವೈದ್ಯರು ಅಭಿಪ್ರಾಯ ಪಡುತ್ತಾರೆ.

Most Read: ಈ ಮಹಿಳೆಗೆ 37ರ ಹರೆಯ, ಅಚ್ಚರಿಯಂದ್ರೆ ಆಕೆ ಈಗ 38 ಮಕ್ಕಳ ತಾಯಿ!

ಈ ಪರಿಗೆ ದಂಗಾದ ಜನತೆ

ಈ ಪರಿಗೆ ದಂಗಾದ ಜನತೆ

ಯಾವಾಗ ಈ ವೀಡಿಯೋ ಜಾಲತಾಣದಲ್ಲಿ ಲಭ್ಯವಾಯಿತೋ, ಜನರು ಮನಸೋ ಇಚ್ಛೆ ಇದನ್ನು ರವಾನಿಸಿ ವೈದ್ಯರ ಕೃತ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ. ಕರ್ತವ್ಯದ ಸಮಯದಲ್ಲಿ ನರ್ತಿಸಿ ಕರ್ತವ್ಯಲೋಪ ಮಾಡಿದ ವೈದ್ಯರ ಮತ್ತು ಅವರೊಂದಿಗೆ ನರ್ತಿಸಿ ಸಹಯೋಗ ನೀಡಿದ ದಾದಿಯರ ವರ್ತನೆಯನ್ನು ಜಗತ್ತೇ ಖಂಡಿಸಿದೆ. ಇವರ ವಿರುದ್ಧ ತಕ್ಷಣ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.

English summary

Doctors Removed women Kidney By Mistake!

A woman named Maureen Pacheco, 53, of Florida, was suffering from lower back pain for years after a car accident. She went to Wellington Regional Medical Center where she had her lower back bones fused. Dr Ramon Vazquez, who was treating her mistook one of her kidneys for a tumour and removed it.
Story first published: Saturday, November 3, 2018, 12:38 [IST]
X
Desktop Bottom Promotion