For Quick Alerts
ALLOW NOTIFICATIONS  
For Daily Alerts

ಅಚ್ಚರಿಯ ಜಗತ್ತು: ಮಹಿಳೆಯ ಚರ್ಮದೊಳಗೆ ಜೀವಂತ ಹುಳು!

By Deepu
|

ಕೆಲವೊಂದು ವಿಚಿತ್ರ ಹಾಗೂ ಆಘಾತಕಾರಿಯಾಗಿರುವ ವಿಷಯಗಳನ್ನು ನೀವು ಇದೇ ವಿಭಾಗದಲ್ಲಿ ಓದಿರಬಹುದು. ಅದೇ ರೀತಿ ಇನ್ನೊಂದು ಸುದ್ದಿ ಬಗ್ಗೆ ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ. ಸೊಳ್ಳೆಗಳು ಕಚ್ಚಿದಾಗ ನಮಗೆ ಮಲೇರಿಯಾ, ಡೆಂಗ್ಯು, ಚಿಕನ್ ಗುನ್ಯಾ ಇತ್ಯಾದಿ ಕಾಯಿಲೆಗಳು ಬರುವುದು ಸಹಜ.

ಆದರೆ ಮಹಿಳೆಯೊಬ್ಬಳ ಚರ್ಮದ ಅಡಿಯಲ್ಲಿ ಜೀವಂತ ಹುಳುವೊಂದು ಪತ್ತೆಯಾಗಿದೆ. ಇದು ತುಂಬಾ ಅಪರೂಪದ ಪ್ರಕರಣವೆಂದು ಪರಿಗಣಿಸಲಾಗಿದೆ. ಸೊಳ್ಳೆ ಕಡಿತದಿಂದಾಗಿ ತನ್ನು ಮುಖದಲ್ಲಿ ಬೊಕ್ಕೆ ಬಂದಿದೆ ಎಂದು ಆ ಮಹಿಳೆ ಭಾವಿಸಿದ್ದಳು. ಆದರೆ ಜೀವಂತ ಹುಳು ಚರ್ಮದಡಿಯಲ್ಲಿ ಮನೆಮಾಡಿತ್ತು. ಈ ವಿಚಿತ್ರ ಸುದ್ದಿಯ ವಿವರ ತಿಳಿಯಲು ಮುಂದೆ ಸ್ಕ್ರೋಲ್ ಡೌನ್ ಮಾಡಿ.....

ಆಕೆ 32ರ ಹರೆಯದ ಮಹಿಳೆ

ಆಕೆ 32ರ ಹರೆಯದ ಮಹಿಳೆ

32ರ ಹರೆಯದ ರಷ್ಯಾದ ಮಹಿಳೆಯ ಎಡಗಣ್ಣಿನ ಕೆಳಭಾಗದಲ್ಲಿ ಗಂಟುಗಳು ಕಾಣಿಸಿಕೊಂಡಿದ್ದವು. ಇದರ ಬಳಿಕ ಅದು ಕಣ್ಣಿನ ಕೆಳಗೆ ಮತ್ತು ಮೇಲ್ದುಡಿಯ ಕೆಳಗೆ ಬಂದಿತ್ತು. ಸೆಲ್ಫಿ ತೆಗೆಯುವ ಮೂಲಕ ಆಕೆ ಇದನ್ನು ಚಿತ್ರೀಕರಿಸಿದ್ದಳು.

ವೈದ್ಯರನ್ನು ಭೇಟಿಯಾದಳು

ವೈದ್ಯರನ್ನು ಭೇಟಿಯಾದಳು

ಆಕೆಗೆ ಇದು ಮನವರಿಕೆಯಾಗುತ್ತಿದ್ದಂತೆ ವೈದ್ಯರನ್ನು ಭೇಟಿಯಾದಳು. ಮಾಸ್ಕೋದಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಗಂಟುಗಳು ತನ್ನ ಮುಖದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಆಕೆ ವೈದ್ಯರಿಗೆ ವಿವರಿಸಿದಳು. ಇಲ್ಲಿ ಆಕೆಗೆ ಸೊಳ್ಳೆಗಳು ಪದೇ ಪದೇ ಕಚ್ಚುತ್ತಿದ್ದವು ಎಂದು ಹೇಳಿದಳು.

ಕೊನೆಗೂ ಅಪರಾಧಿ ಸಿಕ್ಕಿಬಿದ್ದ….!

ಕೊನೆಗೂ ಅಪರಾಧಿ ಸಿಕ್ಕಿಬಿದ್ದ….!

ಈ ಬಗ್ಗೆ ವೈದ್ಯರು ದೀರ್ಘವಾಗಿ ಪರೀಕ್ಷೆಗಳನ್ನು ಮಾಡಿದಳು. ಅಂತಿಮವಾಗಿ ಇದು ಡಿರೋಫೈಲಿಯಾ ಎನ್ನುವ ಪರಾವಲಂಬಿ ಸುತ್ತು ಹುಳು ಎಂದು ತಿಳಿದುಬಂತು. ಇದನ್ನು ಸೊಳ್ಳೆಗಳು ಹರುಡತ್ತವೆ ಮತ್ತು ನಾಯಿಗಳಲ್ಲಿ ಹಾಗೂ ಇತರ ಮಾಂಸಾಹಾರಿಗಳಲ್ಲಿ ಇದು ಇರುವುದು. ಇದೀಗ ಮಹಿಳೆಯರ ಚರ್ಮದೊಳಗೆ ಬಂದಿದೆ. ವೈದ್ಯರು ಇದನ್ನು ಸರಿಯಾಗಿ ಪರೀಕ್ಷೆ ಮಾಡಿಕೊಂಡ ಬಳಿಕ ಇದು ಹುಳು ಎಂದು ದೃಢಪಡಿಸಿದರು. ಸ್ಥಳೀಯ ಅನಸ್ತೇಸಿಯಾ ಮತ್ತು ಚಿಮುಟ ಬಳಸಿ ಇದನ್ನು ಹೊರತೆಗೆಯಲಾಯಿತು.

ಈ ಹುಳುವಿನ ಬಗ್ಗೆ ಅಸಹ್ಯವಾದ ವಿಚಾರ

ಈ ಹುಳುವಿನ ಬಗ್ಗೆ ಅಸಹ್ಯವಾದ ವಿಚಾರ

ಇದು ತುಂಬಾ ಭೀತಿ ಹಾಗೂ ಅಸಹ್ಯವಾದ ವಿಚಾರವಾಗಿದ್ದು, ಈ ಹುಳುಗಳು ಮನುಷ್ಯನ ದೇಹದಲ್ಲಿ ಸುಮಾರು ಎರಡು ವರ್ಷಗಳ ಕಾಲ ಬದುಕಬಲ್ಲದು ಮತ್ತು ಇವುಗಳು ಮುಖದಿಂದ ಪೃಷ್ಠದ ಭಾಗಕ್ಕೆ ತೆರಳಬಹುದು.

ಸಮಾಧಾನದ ವಿಚಾರ

ಸಮಾಧಾನದ ವಿಚಾರ

ಈ ಹುಳು ದೀರ್ಘಕಾಲ ತನಕ ದೇಹದಲ್ಲಿ ಬದುಕುಳಿದು, ಎಲ್ಲಾ ಭಾಗಗಳಿಗೆ ಹೋಗಬಹುದು. ಆದರೆ ಯಾವುದೇ ರೀತಿಯ ಕಾಯಿಲೆಗಳು ಇದರಿಂದ ಮನುಷ್ಯರಿಗೆ ಬರುವುದು. ಏನೇ ಆದರೂ ಚರ್ಮದ ಕೆಳಗಡೆ ಹುಳು ಚಲಿಸುತ್ತಾ ಹೋಗುವುದು ತುಂಬಾ ಭೀತಿಯ ವಿಚಾರ. ನಿಮಗೆ ಈ ಸುದ್ದಿಯ ಬಗ್ಗೆ ಏನನಿಸಿದೆ ಎಂದು ನಮಗೆ ತಿಳಿಸಿ.

English summary

Doctors Remove Live Worm Crawling Under A Woman’s Face!

Imagine, being bitten by excessive mosquitoes can not only make you prone to deadly diseases like dengue, but also leave you with a scary nightmare of worms that would crawl under your skin!! Eww! Though the thought seems to be scary, it is a fact, as a woman suffered from a rare condition, in which she thought the lump on her face was due to mosquito bite. But, it turned out to be a live worm squirming under her skin! Check out on the details of this bizarre case...
Story first published: Tuesday, June 26, 2018, 10:28 [IST]
X
Desktop Bottom Promotion