For Quick Alerts
ALLOW NOTIFICATIONS  
For Daily Alerts

ಕೊನೆಗೂ ವೈದ್ಯರು ರೋಗಿಯ ಕಿವಿಯೊಳಗೆ ನುಗ್ಗಿದ ಕೀಟವನ್ನು ಹೊರ ತೆಗೆದರು! ವಿಡಿಯೋ ನೋಡಿ

|

ಮನುಷ್ಯರ ದೇಹದೊಳಗೆ ಕೆಲವೊಂದು ಕೀಟಗಳು ವಿಚಿತ್ರ ರೀತಿಯಲ್ಲಿ ಒಳಹೊಕ್ಕು ಬದುಕುಳಿಯುವಂತಹ ಸುದ್ದಿಗಳ ಬಗ್ಗೆ ನಾವು ಓದಿರುತ್ತೇವೆ. ಅದೇ ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬರ ಕಿವಿಯಿಂದ ಜೀವಂತ ಕೀಟವನ್ನು ಹೊರತೆಗೆಯುವುದನ್ನು ಚಿತ್ರೀಕರಿಸಲಾಗಿದೆ. ಈ ಕೀಟವನ್ನು ಕಿವಿಯಿಂದ ಹೊರತೆಗೆಯಲು ತುಂಬಾ ಕಷ್ಟ ಪಡಬೇಕಾಯಿತು. ಇದರ ಸದ್ದು ತುಂಬಾ ಕಿರಿಕಿರಿಯುಂಟು ಮಾಡುತ್ತಲಿತ್ತು. ಆ ವ್ಯಕ್ತಿಯ ಕಿವಿಯ ಚರ್ಮದ ಒಂದು ತುಂಡನ್ನು ತೆಗೆದ ಬಳಿಕ ಆ ಕೀಟವನ್ನು ಹೊರಗೆ ತೆಗೆಯಲಾಯಿತು. ಈ ವಿಚಿತ್ರ ಘಟನೆ ಬಗ್ಗೆ ನೀವು ಇನ್ನಷ್ಟು ತಿಳಿಯಿರಿ.

ಆ ವ್ಯಕ್ತಿಗೆ ತುಂಬಾ ಕಿರಿಕಿರಿಯಾಗುತ್ತಲಿತ್ತು

ಆ ವ್ಯಕ್ತಿಗೆ ತುಂಬಾ ಕಿರಿಕಿರಿಯಾಗುತ್ತಲಿತ್ತು

ವ್ಯಕ್ತಿಯ ಗುರುತನ್ನು ಇಲ್ಲಿ ಹೇಳಲಾಗಿಲ್ಲ. ಆದರೆ ಆ ವ್ಯಕ್ತಿಗೆ ಕಿವಿಯು ತುಂಬಾ ನೋವನ್ನು ಉಂಟು ಮಾಡುತ್ತಲಿತ್ತು. ಕಿವಿಯನ್ನು ಪರೀಕ್ಷಿಸಿ ನೋಡಿದಾಗ ಅದರಲ್ಲಿ ಜೀವಂತ ಕೀಟವಿತ್ತು.

ಕೀಟವು ಊದಿಕೊಂಡು ಕಪ್ಪುಬಣ್ಣದ್ದಾಗಿತ್ತು

ಕೀಟವು ಊದಿಕೊಂಡು ಕಪ್ಪುಬಣ್ಣದ್ದಾಗಿತ್ತು

ಆ ವ್ಯಕ್ತಿಯ ಕಿವಿಯ ಕಾಲುವೆಯಲ್ಲಿ ಕೀಟವು ಮನೆ ಮಾಡಿಕೊಂಡು ರಕ್ತ ಹೀರಿಕೊಳ್ಳುತ್ತಾ ಇತ್ತು. ಇದು ಕೆಲವು ಸಮಯದಿಂದ ಕಿವಿಯೊಳಗೆ ಇತ್ತು ಎಂದು ತಿಳಿಯುತ್ತಿತ್ತು.

Most Read:ಗೂಗಲ್ ಮ್ಯಾಪ್‌ನಿಂದಾಗಿ ಪತಿಯು ಪತ್ನಿಗೆ ಡೈವೋರ್ಸ್ ನೀಡಿದ!

ವಿಡಿಯೋ

ವಿಡಿಯೋ

ಈ ವಿಡಿಯೋದಲ್ಲಿ ಕೀಟವು ತುಂಬಾ ಊದಿಕೊಂಡಿದೆ ಮತ್ತು ಅದನ್ನು ಹೊರತೆಗೆಯಲು ತುಂಬಾ ಕಷ್ಟವಾಗುತ್ತಲಿತ್ತು. ಯಾಕೆಂದರೆ ಅದರ ತಲೆಯು ಆ ವ್ಯಕ್ತಿಯ ಚರ್ಮದಲ್ಲಿ ಅಂಟಿಕೊಂಡಿತ್ತು. ವೈದ್ಯರು ಇದನ್ನು ಹೊರಗೆ ತೆಗೆಯಲು ಪ್ರಯತ್ನಿಸುವ ವೇಳೆ ಅದರ ಕಾಲುಗಳು ಅಗಲಗೊಳ್ಳುತ್ತಿದ್ದವು ಮತ್ತು ಅದು ಅಲ್ಲಿಯೇ ಅಡಗಿಕುಳಿತುಕೊಳ್ಳಲು ಪ್ರಯತ್ನಿಸುತ್ತಿತ್ತು.

ಸಣ್ಣ ಚರ್ಮವು ಕಿತ್ತು ಬಂತು

ಸಣ್ಣ ಚರ್ಮವು ಕಿತ್ತು ಬಂತು

ಕೀಟವನ್ನು ಅಲ್ಲಿಂದ ಹೊರಗೆ ಬರಲು ತುಂಬಾ ಕಷ್ಟಪಡಬೇಕಾಯಿತು. ಈ ವೇಳೆ ಕೀಟದೊಂದಿಗೆ ಸಣ್ಣ ಚರ್ಮದ ತುಂಡು ಕೂಡ ಕಿತ್ತುಬಂತು. ಚರ್ಮ ಕಿತ್ತು ಬಂದರೂ ಆ ವ್ಯಕ್ತಿಗೆ ಈಗ ಆರಾಮವೆನಿಸಿದೆ.

ಲೈಮ್ ರೋಗ ಹರಡಬಹುದು

ಲೈಮ್ ರೋಗ ಹರಡಬಹುದು

ಕೀಟಗಳು ಯಾವುದೇ ಹಾನಿಯುಂಟು ಮಾಡುವುದಿಲ್ಲ. ಕೀಟಗಳ ಕಡಿತವು ನೋವುಂಟು ಮಾಡಲ್ಲ. ಆದರೆ ವಾರಗಳ ಕಾಲ ಅದು ಅಲ್ಲಿ ಉಳಿಯುವುದು. ಕೀಟಗಳನ್ನು ಸರಿಯಾಗಿ ಹೊರಗೆ ತೆಗೆಯದೇ ಇದ್ದರೆ, ಅದರ ದೇಹದ ಭಾಗವು ಚರ್ಮದಡಿಯಲ್ಲಿ ಉಳಿದು ಕೊಂಡರೆ ಆಗ ಸೋಂಕು ಬರುವಂತಹ ಸಾಧ್ಯತೆಯು ಇದೆ. ರೋಗಿಗೆ ಲೈಮ್ ರೋಗಗಳು ಬರಬಹುದು.

Most Read:ರೋಗಿಯ ಕಣ್ಣಿನಿಂದ 15 ಸೆ.ಮಿ. ಹುಳ ಹೊರತೆಗೆದ ವೈದ್ಯರು!

ವಿಡಿಯೋ ವೀಕ್ಷಿಸಿ…

ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ. ಕಮೆಂಟ್ ಬಾಕ್ಸ್ ನಲ್ಲಿ ಅನಿಸಿಕೆಯನ್ನು ಹಂಚಿಕೊಳ್ಳಿ. ಇಂತಹದ್ದೇ ಇನ್ನೊಂದು ಘಟನೆ ಹೇಳುತ್ತೇವೆ ಕೇಳಿ, ಒಬ್ಬ ವ್ಯಕ್ತಿಯ ಕಿವಿಯಲ್ಲಿ ಜೇಡ ಜೀವಂತವಾಗಿದ್ದು ಆರಾಮವಾಗಿ ಕಿವಿಯ ಒಳಭಾಗವನ್ನೇ ತನ್ನ ಮನೆಯನ್ನಾಗಿಸಿ ಆರಾಮವಾಗಿ ಓಡಾಡಿಕೊಂಡಿತ್ತು. ಜೇಡದ ಕಾಲುಗಳಲ್ಲಿ ಅತಿಸೂಕ್ಷ್ಮವಾದ ಕೂದಲುಗಳಿದ್ದು ಜೇಡ ನಡೆದಾಡುವಾಗ ಕಿವಿಯ ಅತಿಸೂಕ್ಷ್ಮಭಾಗಗಳಿಗೆ ಸಂವೇದನೆಯುಂಟಾಗಿ ಇದರ ಪರಿಣಾಮದಿಂದ ಆಕೆಗೆ ತಲೆನೋವು ಪ್ರಾರಂಭವಾಗಿತ್ತು! ಬನ್ನಿ, ನಮ್ಮ ಭಾರತದಲ್ಲಿಯೇ ನಡೆದ ಈ ಘಟನೆಯ ಬಗ್ಗೆ ಅರಿಯೋಣ..

ಒಂದು ದಿನ ಎದ್ದಾಗ ಆಕೆಯ ಕಿವಿ ಮುಚ್ಚಿತ್ತು

ಒಂದು ದಿನ ಎದ್ದಾಗ ಆಕೆಯ ಕಿವಿ ಮುಚ್ಚಿತ್ತು

ಒಂದು ದಿನ ಆಕೆ ಎದ್ದಾಗ ಆಕೆಯ ಬಲಗಿವಿ ಎಂದಿನಂತಿಲ್ಲ ಎನ್ನಿಸಿತ್ತು. ಕಿವಿ ನೋವಿನಿಂದ ಕೂಡಿದ್ದು ಪೂರ್ಣವಾಗಿ ಮುಚ್ಚಿಹೋಗಿದೆ ಎಂಬ ಅನುಭವವಾಗುತ್ತಿತ್ತು. ಆದರೆ ಹೊರಭಾಗಕ್ಕೇನೂ ಕಾಣದ ಕಾರಣ ಹಾಗೂ ಕೊಂಚ ಹೊತ್ತಿನ ಬಳಿಕ ಸರಿಹೋಗಬಹುದೆಂದು ತಿಳಿದು ಆಕೆ ಪ್ರಾರಂಭಿಕ ನೋವನ್ನು ಅಲಕ್ಷಿ಼ಸಿದಳು. ಆದರೆ ಕಾಲಕ್ರಮೇಣ ಈ ನೋವು ಹೆಚ್ಚುತ್ತಾ ಹೋಯಿತು ಹಾಗೂ ಕೊಂಚ ಸಮಯದಲ್ಲಿಯೇ ತಡೆಯಲಸಾಧ್ಯವಾಯ್ತು.

ಆಕೆಯ ಕಿವಿಯೊಳಗೇನಾಗುತ್ತಿದೆ ಎಂದೇ ಆಕೆಗೆ ಗೊತ್ತಿರಲಿಲ್ಲ

ಆಕೆಯ ಕಿವಿಯೊಳಗೇನಾಗುತ್ತಿದೆ ಎಂದೇ ಆಕೆಗೆ ಗೊತ್ತಿರಲಿಲ್ಲ

ನೋವಿಗೆ ಏನು ಕಾರಣ ಎಂದು ಆಕೆ ಊಹಿಸಲು ಅಸಮರ್ಥಳಾಗಿದ್ದಳು. ಜೇಡ ಅಲುಗಿದಂತೆಲ್ಲಾ ನೋವು ಭುಗಿಲೆದ್ದು ಆಕೆ ತತ್ತರಿಸುವಂತೆ ಮಾಡುತ್ತಿತ್ತು.

ತಪಾಸಣೆ ನಡೆಸಿದ ವೈದ್ಯರಿಗೇ ಆಘಾತ ಎದುರಾಗಿತ್ತು

ತಪಾಸಣೆ ನಡೆಸಿದ ವೈದ್ಯರಿಗೇ ಆಘಾತ ಎದುರಾಗಿತ್ತು

ನೋವು ತಡೆಯಲಾಗದೇ ವೈದ್ಯರ ಬಳಿಗೆ ಹೋದ ಆಕೆಯನ್ನು ಪರಿಶೀಲಿಸಿದ ವೈದ್ಯರಿಗೆ ತಮ್ಮ ಜೀವಮಾನದ ದೊಡ್ಡ ಆಘಾತ ಎದುರಾಗಿತ್ತು. ಕಿವಿಯೊಳಗೊಂದು ಪೂರ್ಣಪ್ರಮಾಣದ ಜೇಡವೊಂದು ಮನಕಟ್ಟಿ ಕುಳಿತಿತ್ತು.

ಆಕೆಯ ನೋವಿಗೆ ಏನು ಕಾರಣ ಎಂದು ಅಕೆಗೆ ತಿಳಿಸಿದಾಗ....

ಆಕೆಯ ನೋವಿಗೆ ಏನು ಕಾರಣ ಎಂದು ಅಕೆಗೆ ತಿಳಿಸಿದಾಗ....

ಆಕೆಗೆ ಸತ್ಯಸಂಗತಿಯನ್ನು ತಿಳಿಸಿದಾಗ ಆಕೆ ತನ್ನ ಜೀವಮಾನದ ಗರಿಷ್ಟ ಆಘಾತವನ್ನು ಎದುರಿಸಬೇಕಾಯ್ತು ಹಾಗೂ ಆಕೆ ವಿಪರೀತವಾಗಿ ಹೆದರಿದ್ದಳು ಹಾಗೂ ತಾನು ಸತ್ತೇ ಹೋಗುತ್ತೇನೆಂದು ತೀವ್ರವಾಗಿ ಬೆದರಿದಳು. ಕಿವಿಯೊಳಗೆ ಚಿಕ್ಕ ಪುಟ್ಟ ಕೀಟಗಳು ನುಸುಳುವುದು ಸಾಮಾನ್ಯವಾದರೂ ಕಿವಿಯೊಳಗೆ ಮನೆಕಟ್ಟಿ ಕುಳಿತ ಜೇಡದ ಬಗ್ಗೆ ವೈದ್ಯವಿಜ್ಞಾನದಲ್ಲಿಯೇ ಯಾವ ಮಾಹಿತಿಯೇ ಇಲ್ಲದ ಕಾರಣ ವೈದ್ಯರಿಗೂ ಇದೊಂದು ದೊಡ್ಡ ಸವಾಲಾಗಿತ್ತು.

ಈಕೆಯ ಕಿವಿಯಿಂದ ಶಸ್ತ್ರಚಿಕಿತ್ಸೆಯ ಮೂಲಕ ಜೇಡನನ್ನು ಹೊರತೆಗೆಯುವುದು ಭಾರೀ ಕಷ್ಟಕರವಾಗಿತ್ತು

ಈಕೆಯ ಕಿವಿಯಿಂದ ಶಸ್ತ್ರಚಿಕಿತ್ಸೆಯ ಮೂಲಕ ಜೇಡನನ್ನು ಹೊರತೆಗೆಯುವುದು ಭಾರೀ ಕಷ್ಟಕರವಾಗಿತ್ತು

ಜೇಡ ಜೀವಂತವಾಗಿದ್ದು ಇದು ಯಾವುದೇ ಸಮಯದಲ್ಲಿ ಆಕೆಯನ್ನು ಕುಟುಕುವ ಸಂಭವವಿತ್ತು. ಅಲ್ಲದೇ ಬೆದರಿದ್ದ ಮಹಿಳೆಯ ಕಿವಿಯಿಂದ ಕೀಟವನ್ನು ಆಕೆಗೆ ಕುಟುಕದಂತೆ ಹೊರತೆಗೆಯುವುದೂ ದೊಡ್ಡ ಸವಾಲಾಗಿತ್ತು. ತನ್ನ ಕಿವಿಯೊಳಗೆ ಜೇಡವಿದೆ ಎಂದು ಗೊತ್ತಾದ ಕ್ಷಣದಿಂದ ಆಕೆ ತತ್ತರಿಸಿಹೋಗಿ ಒಂದು ಕಡೆ ನಿಲ್ಲಲಾರದೇ ಚಡಪಡಿಸಹತ್ತಿದ್ದಳು. ಅನಿವಾರ್ಯವಾಗಿ ವೈದ್ಯರು ಆಕೆಗೆ ನಿದ್ದೆ ಬರುವ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ನೀಡಿ ಶಸ್ತ್ರಚಿಕಿತ್ಸೆಗೆ ಸಜ್ಜಾದರು.

Most Read:ಡಜನ್ ಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸಿರುವ ಥಾಯ್ಲೆಂಡ್ ನ ಗವಿಮಾನವ'!

ಶಸ್ತ್ರಚಿಕಿತ್ಸೆ ಯಶಸ್ವಿಯಾಯ್ತು

ಶಸ್ತ್ರಚಿಕಿತ್ಸೆ ಯಶಸ್ವಿಯಾಯ್ತು

ಮಹಿಳೆಯನ್ನು ಗಾಢನಿದ್ದೆಗೆ ಒಳಪಡಿಸಿದ ಬಳಿಕ ಆಕೆಯ ಕಿವಿಯಲ್ಲಿ ಉಪ್ಪುನೀರನ್ನು ತುಂಬಿ ಜೇಡ ತಾನಾಗಿಯೇ ಹೊರಬರುವಂತೆ ಮಾಡಲಾಯಿತು. ಉಪ್ಪನ್ನು ಸಹಿಸದ ಜೇಡ ತನ್ನ ಮನೆಯನ್ನು ಬಿಟ್ಟು ತಕ್ಷಣವೇ ಹೊರಬಂದಿತ್ತು! ಬಳಿಕ ಕಿವಿಯೊಳಗಿದ್ದ ಜೇಡನ ಬಲೆಯನ್ನೆಲ್ಲಾ ನಿವಾರಿಸಿ ಕಿವಿಯನ್ನು ಸ್ವಚ್ಛಗೊಳಿಸಿ ಆಕೆಯನ್ನು ಬಳಿಕ ಮನೆಗೆ ಕಳಿಸಿಕೊಡಲಾಯ್ತು. ಈಗ ಈ ಮಹಿಳೆ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ.

ಕಿವಿಯೊಳಗೆ ಕೀಟಗಳ ಪ್ರವೇಶವನ್ನು ನಿರ್ಬಂಧಿಸುವುದು ಹೇಗೆ?

ಕಿವಿಯೊಳಗೆ ಕೀಟಗಳ ಪ್ರವೇಶವನ್ನು ನಿರ್ಬಂಧಿಸುವುದು ಹೇಗೆ?

ನಮ್ಮ ಕಿವಿಯ ತೂತನ್ನೂ ತಮಗೆ ಮನೆ ಮಾಡಲು ಸೂಕ್ತ ಎಂದು ಇರುವೆ ಮೊದಲಾದ ಕೀಟಗಳು ಪರಿಗಣಿಸಿ ಒಳಗೆ ಧಾವಿಸುತ್ತವೆ. ಇದನ್ನು ತಡೆಯಲು ಕೀಟಗಳ ಬಾಧೆ ಇಲ್ಲದ ಪ್ರದೇಶದಲ್ಲಿ ಮಲಗುವುದು ಉತ್ತಮ ಕ್ರಮವಾಗಿದೆ. ಸಾಮಾನ್ಯವಾಗಿ ನೆಲದ ಮೇಲೆ ಮಲಗುವಾಗ ಸುತ್ತ ಮುತ್ತಲ ಸ್ಥಳ ಸ್ವಚ್ಚವಾಗಿಲ್ಲದಿದ್ದರೆ ಇಲ್ಲಿ ಚಿಕ್ಕ ಪುಟ್ಟ ಕೀಟಗಳು ಧಾವಿಸುವುದು ಸಾಮಾನ್ಯ ಹಾಗೂ ಇವುಗಳನ್ನು ಹಿಡಿಯಲು ಜೇಡಗಳೂ ಆಗಮಿಸುತ್ತವೆ. ಹಾಗಾಗಿ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದೇ ಅತ್ಯಂತ ಉತ್ತಮವಾದ ಮುನ್ನೆಚ್ಚರಿಕೆಯ ಕ್ರಮವಾಗಿದೆ.ಇಂತಹ ವಿಸ್ಮಯಕಾರಿ ಸಂಗತಿಗಳು ಇಷ್ಟವೇ? ಹಾಗಾದರೆ ಈ ವಿಭಾಗವನ್ನು ಆಗಾಗ ಗಮನಿಸುತ್ತಿರಿ, ಮುಂದೆ ವಿಶ್ವದಲ್ಲಿ ನಡೆಯುವ ಇನ್ನೂ ಹಲವಾರು ರೋಚಕ ಸಂಗತಿಗಳನ್ನು ನಾವು ತಿಳಿಸುವವರಿದ್ದೇವೆ.

English summary

Doctor Pulls Out Tick From Patient’s Ear

A live tick was found in the human ear, and it was feeding on the patient's blood. The tick was swollen and grey, and it was clinging onto the skin as an ear, nose and throat surgeon grabs it with tweezers. The surgeon revealed that the patient was reportedly in 'a lot of discomforts'. Doctor Pulls Out Live Tick From Patient' Ear
X
Desktop Bottom Promotion