Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ರೋಗಿಯ ಕಣ್ಣಿನಿಂದ 15 ಸೆ.ಮಿ. ಹುಳ ಹೊರತೆಗೆದ ವೈದ್ಯರು!
ಮನುಷ್ಯರ ದೇಹದಲ್ಲಿ ಹುಳಗಳು ಸೇರಿಕೊಂಡು ಅದು ದೇಹದ ಯಾವುದಾದರೂ ಒಂದು ಭಾಗದಲ್ಲಿ ವಾಸಿಸುತ್ತಿರುವಂತಹ ಸುದ್ದಿಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ಓದಿದ್ದೇವೆ. ಆದರೆ ವ್ಯಕ್ತಿಯೊಬ್ಬನ ಕಣ್ಣಿನಲ್ಲಿ 15 ಸೆ. ಮೀ. ಹುಳವು ಕಂಡುಬಂದಿದೆ. ಇದು ಎಲ್ಲರನ್ನು ಅಚ್ಚರಿಯನ್ನುಂಟು ಮಾಡಿದೆ. ವೈದ್ಯರು ಈ ಹುಳವನ್ನು ಹೊರತೆಗೆದಿದ್ದಾರೆ. ಇದರ ವೀಡಿಯೋ ಕೂಡ ಇದೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ...

ನಮ್ಮ ರಾಜ್ಯದಲ್ಲೇ ನಡೆದಿರುವುದು
ಈ ಘಟನೆಯು ನಮ್ಮ ರಾಜ್ಯದಲ್ಲೇ ನಡೆದಿರುವುದು. 60ರ ಹರೆಯದ ವ್ಯಕ್ತಿಯೊಬ್ಬರ ಕಣ್ಣಿನ ಬಿಳಿ ಭಾಗದ ಸುತ್ತಲು ಈ ಹುಳವು ಚಲಿಸುತ್ತಿತ್ತು.

ಈ ಹುಳವನ್ನು ಹೀಗೆ ಕರೆಯಲಾಯಿತು...
ಹುಳವನ್ನು ವಕ್ಹೇರಿಯಾ ಬ್ಯಾನ್ರೊಫ್ತಿ ಎಂದು ಕರೆಯಲಾಯಿತು. ಈ ಹುಳವು ಮಾನವ ಪರಾವಲಂಬಿಯಾಗಿದೆ. ಇದಕ್ಕೆ ದುಗ್ದರಸ ಫಿಲಾರಿಯಾಸಿಸ್ ಮೊದಲ ಕಾರಣವೆಂದು ಹೇಳಲಾಗುತ್ತಿದೆ. ಸೊಳ್ಳೆ ಕಡಿತದಿಂದಾಗಿ ಇದು ಮಾನವನ ದೇಹದೊಳಗೆ ಬರುವುದು.

ಇದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣ
ಇದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ವೈದ್ಯರು ಹೇಳುತ್ತಾರೆ. ಯಾಕೆಂದರೆ ಕಣ್ಣಿನ ಒಳಗಡೆ ಸೊಳ್ಳೆ ಕಡಿಯುವುದು ಸಾಮಾನ್ಯವಲ್ಲ. ಸೊಳ್ಳೆಯ ಲಾರ್ವವು ರಕ್ತನಾಳದೊಳಗೆ ಹೋಗಿ, ಅದು ಅಲ್ಲಿ ಬೆಳೆಯುವುದು ಕೂಡ ತುಂಬಾ ಅಪರೂಪ. ಹುಳವನ್ನು ವೈದ್ಯರು ಹೇಗೆ ತೆಗೆದರು ಎಂದು ಈ ವೀಡಿಯೊ ನೋಡಿ ತಿಳಿಯಿರಿ.
ವೈದ್ಯರು ಹೇಳುವಂತೆ….
ಕಣ್ಣಿನ ದೃಷ್ಟಿ ಉಳಿಸಲು ಆ ವ್ಯಕ್ತಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು. ಆ ವ್ಯಕ್ತಿಯು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಇಂತಹದ್ದೇ ಒಂದು ವಿಚಿತ್ರ ಘಟನೆ ಭಾರತದ ಅಸ್ಸಾಮ್‌ನಲ್ಲಿ ಕಂಡು ಬಂದಿದೆ. ಸಾಗರ್ ದೋರ್ಜಿ ಎಂಬ ಕೇವಲ ನಾಲ್ಕು ವರ್ಷದ ಹುಡುಗನ ಕಣ್ಣೀರು ರಕ್ತದಿಂದ ಕೂಡಿರುವುದು ಕಂಡುಬಂದಿದೆ. ಈತನಿಗೆ ಆವರಿಸಿದ ಅತ್ಯಪರೂಪದ ಕಾಯಿಲೆಯ ಕಾರಣ ಇದು ಸಂಭವಿಸುತ್ತಿದ್ದು ಕಣ್ಣೀರನ್ನು ಸುರಿಸುವ ನಾವು ಎಷ್ಟು ಧನ್ಯವಂತರು ಎಂಬ ಅರಿವಾಗುತ್ತದೆ.. ಮುಂದೆ ಓದಿ

ಬಾಲಕನ ಕಣ್ಣಿನಿಂದ ಬರುತ್ತಿದೆ ರಕ್ತ-ಇದೊಂದು ವಿಚಿತ್ರ ಕಾಯಿಲೆ
Acute Myeloid Leukemia' ಎಂಬ ಹೆಸರಿನ ಕಾಯಿಲೆ ಇದ್ದವರ ಕಣ್ಣುಗಳ ಹಿಂಭಾಗದಲ್ಲಿ ರಕ್ತ ತುಂಬಿಕೊಂಡು ಕಣ್ಣುಗುಡ್ಡೆಯನ್ನು ಹೆಚ್ಚೂ ಕಡಿಮೆ ಇನ್ನೇನು ಕಳಚಿ ಬಿದ್ದೇ ಬಿಡುತ್ತದೆ ಎನ್ನುವಷ್ಟು ಹೊರಗೆ ತಳ್ಳುತ್ತದೆ. ಕಣ್ಣುಗುಡ್ಡೆಗಳ ಬದಿಯಿಂದ ರಕ್ತ ಹರಿಯತೊಡಗುತ್ತದೆ. ಅಳು ನಿಂತರೂ ರಕ್ತದ ಕಣ್ಣೀರು ಬಹಳ ಹೊತ್ತಿನವರೆಗೆ ಹರಿಯುತ್ತಲೇ ಇರುತ್ತದೆ.

ಈತನ ಕಥೆ ವೈರಲ್ ಆಯಿತು
ಯಾವಾಗ ಈತನ ಬಗ್ಗೆ ವಿವರಗಳು ಅಂತರ್ಜಾಲದಲ್ಲಿ ಪ್ರಕಟಗೊಂಡಿತೋ ಆಗ ಬೆಂಕಿಯಂತೆ ದೇಶಾದ್ಯಂತ ಹರಡಿತು. ಎಷ್ಟರ ಮಟ್ಟಿಗೆ ಎಂದರೆ ರಾಜ್ಯ ಸರ್ಕಾರವೇ ಈತನ ಯೋಗಕ್ಷೇಮವನ್ನು ಅರಿಯಲು ಬರಬೇಕಾಯಿತು. ಪರಿಣಾಮವಾಗಿ ಈತನಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ನೆರವನ್ನು ನೀಡುವ ಭರವಸೆ ನೀಡಲಾಯಿತು. ಚಿಕಿತ್ಸೆಗೆ ಈಗ ಈತ ಬಂದಿರುವುದೆಲ್ಲಿ ಗೊತ್ತೇ? ನಮ್ಮ ಬೆಂಗಳೂರಿಗೆ.

ಈತನ ಕಾಯಿಲೆ ಒಂದು ರೀತಿಯ ಕ್ಯಾನ್ಸರ್!
ಬೆಂಗಳೂರಿನಲ್ಲಿರುವ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮುಜುಂದಾರ್ ಶಾ ಕ್ಯಾನ್ಸರ್ ಸೆಂಟರ್‌ನಲ್ಲಿ ಈತನ ಆರೋಗ್ಯವನ್ನು ಪರೀಕ್ಷಿಸಿದ ತಜ್ಞರು ಈತನಿಗೆ Acute Myeloid Leukaemia ಎಂಬ ಅಪರೂಪದ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ರೋಗ ವಿಶೇಷವಾಗಿ ಕಣ್ಣಿಗೇ ಹೆಚ್ಚಾಗಿ ಬಾಧಿಸುತ್ತದೆ. ಕಣ್ಣುಗುಡ್ಡೆ ಹೊರಬರುವ ಸ್ಥಿತಿಯನ್ನು ವೈದ್ಯರು bilateral proptosis ಎಂದು ಕರೆಯುತ್ತಾರೆ. ಇದರಿಂದ ಕ್ರಮೇಣವಾಗಿ ದೃಷ್ಟಿ ಶಾಶ್ವತವಾಗಿ ನಷ್ಟಗೊಳ್ಳುವ ಸಂಭವವಿದೆ.

ಈತನ ಚಿಕಿತ್ಸೆ ಮುಂದುವರೆದಿದೆ
ಸುಮಾರು ಐದು ತಿಂಗಳವರೆಗೆ ಸತತವಾಗಿ ಚಿಕಿತ್ಸೆ ನೀಡಿದ ಬಳಿಕ ಈತ ಈ ಸ್ಥಿತಿಯಿಂದ ಪಾರಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಚಿಕಿತ್ಸೆ ಪಡೆದ ಕಾರಣ ಬಾಲಕನ ಕಣ್ಣು ಉಳಿಯುವಂತಾಗಿದೆ. ಚಿಕಿತ್ಸೆಗೆ ಈತನನ್ನು ಆಸ್ಪತ್ರೆಗೆ ತಂದಾಗ ಕ್ಯಾನ್ಸರ್ ಆವರಿಸಲು ಈಗಾಗಲೇ ಪ್ರಾರಂಭಿಸಿಯಾಗಿತ್ತು. ಆದರೆ ನಮ್ಮ ವೈದ್ಯರು ಈತನ ಕಣ್ಣು ಮತ್ತು ಜೀವವನ್ನು ಉಳಿಸಿ ಈತನ ತಂದೆ ತಾಯಿಯರ ಸಹಿತ ಲಕ್ಷಾಂತರ ಸಹೃದಯಿಗಳಿಗೆ ಸಾಂತ್ವಾನ ಒದಗಿಸಿದ್ದಾರೆ.

ಈತನ ಸಹೋದರಿಯ ತ್ಯಾಗ ಇನ್ನಷ್ಟು ದೊಡ್ಡದು
ಈ ರೋಗದ ಚಿಕಿತ್ಸೆಗೆ ರಕ್ತಸಂಬಂಧಿಯೊಬ್ಬರ ಅಸ್ತೆಮಜ್ಜೆಯ ಅಗತ್ಯವಿತ್ತು. ಏಕೆಂದರೆ ಅಸ್ತಿಮಜ್ಜೆಯನ್ನು ದೇಹ ಸ್ವೀಕರಿಸುವ ಸಾಧ್ಯತೆ ಅತಿ ಕಡಿಮೆ ಇದ್ದು ರಕ್ತಸಂಬಂಧಿಗಳಿಂದ ಪಡೆದ ಮಜ್ಜೆಯನ್ನು ಸ್ವೀಕರಿಸುವ ಸಾಧ್ಯತೆ ಗರಿಷ್ಠ 30% ಮಾತ್ರ. ಆದರೂ ಈ ಸಾಧ್ಯತೆಯನ್ನೇ ಪರಿಗಣಿಸಿ ಈತನ ಸಹೋದರಿಯಿಂದ ಅಸ್ತಿಮಜ್ಜೆ ಪಡೆದು ಚಿಕಿತ್ಸೆ ಮುಂದುವರೆಸಿದ ವೈದ್ಯರು ಯಶಸ್ಸು ಪಡಿದಿದ್ದಾರೆ.

ಈಗ ಈತ ಎಲ್ಲರಂತೆ ಸಾಮಾನ್ಯ ಕಣ್ಣೀರು ಸುರಿಸುತ್ತಾನೆ
ಇಂದು ಈತ ಸಂಪೂರ್ಣವಾಗಿ ಗುಣಮುಖನಾಗಿದ್ದು ಆಸ್ಪತ್ರೆಯಿಂದ ಆರೋಗ್ಯವಂತ ಬಾಲಕನಾಗಿ ಹೊರಬಂದಿದ್ದಾನೆ. BMT ಅಥವಾ bone marrow tranasplanat (ಅಸ್ತಿಮಜ್ಜೆ ಅಳವಡಿಕಾ ಚಿಕಿತ್ಸೆ) ಯ ಮೂಲಕ ಈ ಅತ್ಯಪರೂಪದ ಕಾಯಿಲೆಗೆ ಅತ್ಯಪರೂಪದ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಪ್ರಶಂಸಾರ್ಹ ಕಾರ್ಯ ನಡೆಸಿದ್ದು ಕರ್ನಾಟಕದ ಹೆಮ್ಮೆಯನ್ನು ವಿಶ್ವಮಟ್ಟಕ್ಕೇರಿಸಿದ್ದಾರೆ. ಈ ಒಳ್ಳೆಯ ಕಾರ್ಯದಲ್ಲಿ ನೆರವಾದ ಎಲ್ಲರಿಗೂ ಬೋಲ್ಡ್ ಸ್ಕೈ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.



Click it and Unblock the Notifications











