For Quick Alerts
ALLOW NOTIFICATIONS  
For Daily Alerts

ದೀಪಾವಳಿ ವಿಶೇಷ: ಮನಸ್ಸಿನ ಬಯಕೆ ಈಡೇರಲು ಯಾವ್ಯಾವ ರಾಶಿಯವರು ಏನೆಲ್ಲಾ ಮಾಡಬೇಕು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ

By Divya Pandith
|

ದೀಪಾವಳಿ ಎಂದರೆ ಎಲ್ಲೆಲ್ಲೂ ಬೆಳಕನ್ನು ಚೆಲ್ಲುವ ಹಬ್ಬ. ಕತ್ತಲನ್ನು ಕಳೆದು ಬೆಳಕನ್ನು ನೀಡುವ ಈ ಹಬ್ಬದಂದು ಎಲ್ಲರೂ ಸಾಮಾನ್ಯವಾಗಿ ಜೀವನದಲ್ಲಿ ಕಷ್ಟಗಳು ಕಳೆದು ಸುಖವು ಬರಲಿ ಎಂದು ಬಯಸುತ್ತಾರೆ. ಲಕ್ಷ್ಮಿ ದೇವಿಯ ಆರಾಧನೆಯನ್ನು ಪ್ರತಿಬಿಂಬಿಸುವ ಈ ಹಬ್ಬವು ಬದುಕಲ್ಲಿ ಸಾಕಷ್ಟು ಬದಲಾವಣೆಯನ್ನು ತರುವುದು ಎನ್ನುವ ನಂಬಿಕೆ ಇದೆ. ವಿವಿಧ ಕಥೆ ಪುರಾಣಗಳನ್ನು ಹೊಂದಿರುವ ಈ ಹಬ್ಬದ ಆಚರಣೆಯಲ್ಲಿ ಕುಬೇರ ಮತ್ತು ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರಿಗೂ ಕೆಲವು ಸಾಂಪ್ರದಾಯಿಕ ವಸ್ತುಗಳು ವಿಶೇಷ ಅದೃಷ್ಟ ಹಾಗೂ ಶುಭ ಶಕುನವನ್ನು ನೀಡುವುದು. ಆ ವಸ್ತುಗಳನ್ನು ಪಡೆಯುವುದು ಅಥವಾ ದಾನ ಮಾಡುವುದರಿಂದ ಜೀವನದಲ್ಲಿ ನಂಬಲಾಗದಂತಹ ವಿಶೇಷ ಅದೃಷ್ಟಗಳು ಲಭಿಸುವುದು ಎನ್ನಲಾಗುತ್ತದೆ. ಈ ವರ್ಷದ ಅಂದರೆ 2018ರ ದೀಪಾವಳಿ ಹಬ್ಬವು ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವೆಲ್ಲಾ ಅದೃಷ್ಟದ ವಸ್ತುಗಳು ನಿಮ್ಮ ಸಂಪತ್ತನ್ನು ಹೆಚ್ಚಿಸುವುದು? ನಿಮ್ಮ ಜೀವನದ ವಿಶೇಷ ಬದಲಾವಣೆಗೆ ನೀವೇನು ಮಾಡಬೇಕು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದಿನ ವಿವರಣೆಯಲ್ಲಿ ಪರಿಚಯಿಸಿದೆ...

ಮೇಷ

ಮೇಷ

ರಾಶಿಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ರಾಶಿ ಮೇಷ. ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಚೈತನ್ಯವನ್ನು ಹೊಂದಿರುತ್ತಾರೆ. ಅವರ ನಾಯಕತ್ವ ಕೌಶಲ್ಯಗಳನ್ನು ಬಹಳ ಸುಂದರವಾಗಿ ನಿಭಾಯಿಸಬಲ್ಲರು. ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಬಹಳ ಸ್ವಾಭಿಮಾನಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಇನ್ನು ಮೇಷ ರಾಶಿಯವರು ದೀಪಾವಳಿ ಹಬ್ಬದಂದು ಬಿಳಿ ಬಟ್ಟೆ, ಕೇಸರಿ ಮತ್ತು ಶ್ರೀಗಂಧವನ್ನು ಬಳಸಬೇಕು. ಜೊತೆಗೆ ಈ ಅಮೂಲ್ಯ ವಸ್ತುಗಳನ್ನು ನಿಮ್ಮ ಕಪಾಟು/ಲಾಕರ್ ಗಳಲ್ಲಿ ಇರಿಸಿ. ಈ ಪವಿತ್ರ ವಸ್ತುಗಳು ನಿಮಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತಂದುಕೊಡುವುದು.

Most Read: ನವೆಂಬರ್ ತಿಂಗಳ ರಾಶಿ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

ವೃಷಭ

ವೃಷಭ

ವೃಷಭ ರಾಶಿಯವರು ದೀಪಾವಳಿಯ ಹಬ್ಬದಂದು ಹಸುವಿನ ತುಪ್ಪದಿಂದ ಎರಡು ದೀಪವನ್ನು ಹಚ್ಚಿ ಒಟ್ಟಿಗೆ ಇಡಿ. ದೇವರ ಮುಂದೆ ಹಚ್ಚಿ ಇಡುವಾಗ ಸೂಕ್ತ ಪ್ರಾರ್ಥನೆ ಹಾಗೂ ನಿಮ್ಮ ಇಚ್ಛೆಯನ್ನು ಮನಸ್ಸಿನಲ್ಲಿ ನೆನೆದುಕೊಳ್ಳಿ. ಇದು ನಿಮಗೆ ಶುಭಕರವಾದ ಬದಲಾವಣೆಯನ್ನು ತಂದುಕೊಡುವುದು.

ಮಿಥುನ

ಮಿಥುನ

ನೀವು ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಗೆ ವಿಶೇಷ ಆರಾಧನೆಯನ್ನು ಕೈಗೊಳ್ಳಿ. ದೇವರ ಮುಂದೆ ಒಂದು ತೆಂಗಿನ ಕಾಯನ್ನು ಇಟ್ಟು ಮನದಿಚ್ಛೆಯನ್ನು ಹೇಳಿಕೊಳ್ಳಿ. ನಂತರ ಆ ತೆಂಗಿನ ಕಾಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಟ್ಟಿರಿ. ನಿಮ್ಮ ಇಚ್ಛೆಯ ಸಂಗತಿಗಳು ನೆರವೇರಿದ ಬಳಿಕ ನಿಮಗೆ ಹತ್ತಿರ ಇರುವ ಲಕ್ಷ್ಮಿ ದೇವಸ್ಥಾನಕ್ಕೆ ನೀಡಿ.

ಕರ್ಕ

ಕರ್ಕ

ಆರ್ಥಿಕವಾಗಿ ನೀವು ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ವಿಷ್ಣು ದೇವಸ್ಥಾನದ ಮೇಲೆ ತ್ರಿಭುಜಾಕೃತಿಯ ಹಳದಿ ಬಣ್ಣದ ಧ್ವಜವನ್ನು ಇಡಿ. ಅದನ್ನು ದೀಪಾವಳಿ ಹಬ್ಬದ ದಿನ ಇಟ್ಟರೆ ಉತ್ತಮ ಅನುಕೂಲವನ್ನು ಹಾಗೂ ಸಮೃದ್ಧಿಯನ್ನು ತಂದುಕೊಡುವುದು. ವರ್ಷಗಳ ಕಾಲ ಆ ಧ್ವಜವನ್ನು ಅಲ್ಲಿಂದ ತೆಗೆಯದಿರಿ.

ಸಿಂಹ

ಸಿಂಹ

ದೀಪಾವಳಿ ಹಬ್ಬದ ರಾತ್ರಿ ಮನೆಯ ಮುಖ್ಯ ದ್ವಾರದಲ್ಲಿ ದೀಪದ ಹಣತೆಯನ್ನು ಇರಿಸಿ. ಇದು ಸೂರ್ಯೋದಯದ ತನಕವು ಬೆಳಗುತ್ತಿರುವಂತೆ ನೋಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂಪತ್ತು ವೃದ್ಧಿಯಾಗುವುದು.

ಕನ್ಯಾ

ಕನ್ಯಾ

ನಿಮ್ಮ ಜೀವನದಲ್ಲಿ ಹೆಚ್ಚು ಸಂಪತ್ತು ಹಾಗೂ ದುಡ್ಡನ್ನು ಹೊಂದಲು ದೀಪಾವಳಿಯ ಹಬ್ಬದಂದು ಶ್ರೀಫಲವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಲಾಕರ್ ಅಲ್ಲಿ ಇರಿಸಿ. ಉತ್ತಮ ಸಮೃದ್ಧಿ ಲಭಿಸುವುದು.

ತುಲಾ

ತುಲಾ

ಆರ್ಥಿಕವಾಗಿ ತೊಂದರೆಯನ್ನು ಅನುಭವಿಸುತ್ತಿದ್ದರೆ ದೀಪಾವಳಿ ಹಬ್ಬದಂದು ರಾತ್ರಿ ಲಕ್ಷ್ಮಿ ದೇವಿಯ ಪಾದಕ್ಕೆ ಕಮಲ ಗಟ್ಟವನ್ನು ಇಡಬೇಕು. ದೇವಿಯ ಆರಾಧನೆಯ ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟು/ಲಾಕರ್ ಅಲ್ಲಿ ಇಟ್ಟರೆ ಸಮಸ್ಯೆ ನಿವಾರಣೆ ಹೊಂದುವುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ದೀಪಾವಳಿ ಹಬ್ಬದಂದು ಎರಡು ಬಾಳೆ ಗಿಡವನ್ನು ನೆಡಿ. ಅದರ ಫಲವನ್ನು ನೀಡಿದ ನಂತರ ದೇವಸ್ಥಾನಕ್ಕೆ ನೀಡಿ ನಂತರ ತಿನ್ನಿ. ಫಲ ಬಿಡುವ ಒಳಗೆ ಗಿಡವನ್ನು ದೇವಸ್ಥಾನಕ್ಕೆ ನೀಡಬೇಡಿ.

ಧನು

ಧನು

ಒಂದು ವೀಳ್ಯದೆಲೆಯ ಮೇಲೆ ಕುಂಕುಮದಿಂದ ಮಂತ್ರವನ್ನು ಬರೆದು, ಒಂದೆಡೆ ಇಡಿ. ಬಳಿಕ ಎಲೆಯನ್ನು ಹಸು ಅಥವಾ ಇತರ ಪ್ರಾಣಿಗಳಿಗೆ ಆಹಾರವಾಗಿ ನೀಡಿ. ಆಗ ಸಮಸ್ಯೆಗಳು ಶಮನವಾಗಿ ಸಂಪತ್ತು ವೃದ್ಧಿಯಾಗುವುದು.

Most Read: ಈ ರಾಶಿಚಕ್ರದ ವ್ಯಕ್ತಿಗಳು ನಂತರದ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆದುಕೊಳ್ಳುತ್ತಾರೆ

ಮಕರ

ಮಕರ

ನಿಮ್ಮ ಸಂಪತ್ತನ್ನು ವೃದ್ಧಿಸಲು ಶ್ರೀಫಲವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಲಾಕರ್ ನಲ್ಲಿಇಡಿ. ಇದು ಹಣದ ವೃದ್ಧಿಗೆ ಸಹಾಯ ಮಾಡುವುದು. ಇನ್ನು ನಿಮ್ಮ ಗ್ರಹದ ಅಧಿಪತಿ ಶನಿ ದೇವರನ್ನು ನೀವು ಆದಷ್ಟು ಪೂಜಿಸಬೇಕು. `ದಶ್ರತ್ ಸಕ್ರೆ ದಶರಾನಿ ಸೋತ್ರಂ' ಪಠಿಸಿದರೆ ನಿಮಗೆ ತುಂಬಾ ಪರಿಣಾಮಕಾರಿ. ಹಾಲಿನಿಂದ ಮಾಡುವಂತಹ ಹವನದ ವೇಳೆ ದುರ್ಗಾ-ಸರಸ್ವತಿ ಪಾಠವನ್ನು ಪಠಿಸಬೇಕು. ಕಪ್ಪು ಕುದುರೆಯ ಕೂದಲಿನಿಂದ ಮಾಡಿದ ಉಂಗುರ ಧರಿಸಿದರೆ ನಿಮಗೆ ಅದೃಷ್ಟ. ನಿಮ್ಮ ದೇಹದಲ್ಲಿ ಅನಾರೋಗ್ಯ ಉಂಟುಮಾಡುವ ಆಹಾರದಿಂದ ದೂರವಿರಿ. ಪ್ರಾಮಾಣಿಕತೆಯಿಂದ ಮಾಡುವಂತಹ ಯಾವುದೇ ಕೆಲಸವು ನಿಮಗೆ ಹಲವಾರು ಲಾಭ ಉಂಟು ಮಾಡುವುದು.

ಕುಂಭ

ಕುಂಭ

ಅತ್ಯುತ್ತಮ ಆತ್ಮವಿಶ್ವಾಸ ಹಾಗೂ ಮೃದು ಸ್ವಭಾವದ ವ್ಯಕ್ತಿಗಳು ಎಂದರೆ ಕುಂಭ ರಾಶಿಯವರು. ನೈಸರ್ಗಿಕವಾಗಿಯೇ ಇವರು ಸೌಮ್ಯ ಸ್ವಭಾವ ಹಾಗೂ ಜಗಳದಿಂದ ದೂರ ಇರಲು ಬಯಸುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿ ಚಕ್ರದ ಚಿಹ್ನೆಗಳಲ್ಲಿ ಕುಂಭರಾಶಿಯ ಚಿಹ್ನೆಯು 11ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಚಿಹ್ನೆಯ ವ್ಯಕ್ತಿಗಳು ದೀಪಾವಳಿಯ ಹಬ್ಬದಂದು ತೆಂಗಿನ ಕಡಿಯಲ್ಲಿ ತುಪ್ಪವನ್ನು ಸೇರಿಸಿ ಬೆಳಗಿಸಿ. ಈ ರೀತಿ ಮಾಡುವುದರಿಂದ ಹಬ್ಬವು ನಿಮಗೆ ಶುಭವನ್ನು ನೀಡುವುದು.

ಮೀನ

ಮೀನ

ಸ್ವಭಾವದಲ್ಲಿ ಸ್ನೇಹಪರರಾಗಿದ್ದು, ಶಾಂತ ಚಿತ್ತದವರು ಎಂದರೆ ಮೀನ ರಾಶಿಯವರು. ಇವರ ಸ್ನೇಹದ ಗುಣವು ಇವರ ಸುತ್ತಲು ಒಂದಷ್ಟು ಜನರು ಸುತ್ತಿರುವಂತೆ ಮಾಡುತ್ತದೆ. ಇವರಲ್ಲಿ ನೈಸರ್ಗಿಕವಾಗಿಯೇ ಒರಟುತನವಿದ್ದರೂ ಅದನ್ನು ಸುಂದರವಾಗಿ ಮರೆ ಮಾಚುವುದರ ಮೂಲಕ ಸಮಾಜಕ್ಕೆ ಮೃದು ಗುಣವನ್ನು ತೋರ್ಪಡಿಸುತ್ತಾರೆ. ಸೂರ್ಯನ ಚಿಹ್ನೆಯನ್ನು ಹೊಂದಿರುವ ಇವರು ತಮ್ಮ ಭಾವನೆಯನ್ನು ಮತ್ತು ಪ್ರೀತಿಯನ್ನು ಇತರರಿಗೆ ಸುಲಭವಾಗಿ ತೋರುತ್ತಾರೆ. ಈ ಗುಣಗಳೇ ಅವರಿಗೆ ಹೆಚ್ಚು ಪಾರದರ್ಶಕತೆಯನ್ನು ತಂದುಕೊಡುತ್ತದೆ. ಇನ್ನು ಈ ರಾಶಿಯವರು ಈ ದೀಪಾವಳಿ ಹಬ್ಬದಿಂದ ಲಕ್ಷ್ಮಿ ದೇವಸ್ಥಾನದಲ್ಲಿ ಅಗರಬತ್ತಿ ಮತ್ತು ದೂಪವನ್ನು ಬೆಳಗಿಸಲು ಪ್ರಾರಂಭಿಸಿ. ನಿಯಮಿತವಾಗಿ ಈ ಕೆಲಸವನ್ನು ಕೈಗೊಳ್ಳುವುದರಿಂದ ಸಂಪತ್ತು ವೃದ್ಧಿಯಾಗುವುದು.

English summary

Diwali horoscope as per your zodiac sign!

Diwali is almost here! The very name Diwali suggests a crazy amount of shopping, binge eating sweets, and other goodies. It gives everyone an opportunity to clean their homes and even change the décor. It is a happy time for all.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more