ಸ್ವೀಡನ್‌ನಲ್ಲಿ ಅಸಹ್ಯಕರ ಆಹಾರ ಪ್ರದರ್ಶಿಸುವ ಮ್ಯೂಸಿಯಂ!

Subscribe to Boldsky

ಆಹಾರವೆಂದರೆ ಹೇಗಿರಬೇಕೆಂದರೆ ಅದು ತುಂಬಾ ರುಚಿ, ಸುವಾಸನೆ ಹೊಂದಿರಬೇಕು. ಹಳಸಿದ ವಾಸನೆ ಬರುತ್ತಲಿದ್ದರೆ ಆಗ ತಿನ್ನಲು ಮನಸ್ಸಾಗುವುದು. ಇಷ್ಟು ಮಾತ್ರವಲ್ಲದೆ ಅದು ಕಣ್ಣಿಗೂ ಮುದ ನೀಡಬೇಕು. ಆದರೆ ಆಹಾರವನ್ನು ನೋಡುವಾಗಲೇ ತುಂಬಾ ಅಸಹ್ಯಕರವಾಗಿದ್ದರೆ ಆಗ ಖಂಡಿವಾಗಿಯೂ ತಿನ್ನಲು ಮನಸ್ಸು ಬರಲ್ಲ. ಮನಸ್ಸು ಬರುವುದು ಬಿಡಿ, ನಿಮಗಿರುವಂತಹ ಹಸಿವು ಕೂಡ ಅದೆಷ್ಟೋ ಮೈಲು ದೂರ ಓಡಿ ಹೋಗಿರುವುದು. ಇಂತಹ ಆಹಾರ ಕೂಡ ಇದೆಯಾ ಎಂದು ನೀವು ಕೇಳಬಹುದು.

ತುಂಬಾ ಅಸಹ್ಯಕರವಾಗಿರುವಂತಹ ಆಹಾರವನ್ನು ಪ್ರದರ್ಶಿಸುವ ಮ್ಯೂಸಿಯಂ ಒಂದು ಸ್ವೀಡನ್ ನಲ್ಲಿದೆ. ಇದು ವಿಶ್ವದ ಅತೀ ಅಸಹ್ಯಕರವಾಗಿರುವಂತಹ ಆಹಾರವನ್ನು ಪ್ರದರ್ಶಿಸುತ್ತದೆ. ಇದನ್ನು ನೋಡಿದ ತಕ್ಷಣ ಎಷ್ಟೇ ಹಸಿವಾಗಿದ್ದರೂ ನಿಮಗೆ ತಿನ್ನಲು ಆಗದು. ಇದು ನೀವು ಕೇಳಿರುವಂತಹ ಅತ್ಯಂತ ವಿಚಿತ್ರ ಪ್ರದರ್ಶನಗಳಲ್ಲಿ ಒಂದಾಗಿದೆ. ಉದಾಹರಣೆಗೆ ಇಲ್ಲಿ ಅಕ್ಕಿಯ ವೈನ್ ಅನ್ನು ಇಲಿ ಮರಿಗಳನ್ನು ಬೆರೆಸಿ ತಯಾರಿಸಿರುವುದನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದು ಕೆಲವೊಂದು ರಾಷ್ಟ್ರಗಳಲ್ಲಿ ತುಂಬಾ ದುಬಾರಿಯೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಸೇವಿಸುವರು ಕೂಡ.

ಇದನ್ನು ನಂಬುವುದು ತುಂಬಾ ಕಷ್ಟವಾಗಬಹುದು. ಆದರೆ ಈ ಮ್ಯೂಸಿಯಂ ಇದೆ ಮತ್ತು ಸುಮಾರು 80 ಅಸಹ್ಯಕರವಾದ ಆಹಾರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಆಹಾರಗಳ ಚಿತ್ರ ನೋಡಿದರೇನೇ ನಿಮಗೆ ವಾಕರಿಕೆ ಬರಬಹುದು ಮತ್ತು ಹಸಿವು ಮಾಯವಾಗಬಹುದು. ಇಂತಹ ಆಹಾರಗಳ ಪಟ್ಟಿಯನ್ನು ನೀವು ತಿಳಿದುಕೊಳ್ಳಿ. ಸ್ವೀಡನ್ ನ ಈ ಮ್ಯೂಸಿಯಂನಲ್ಲಿ ಟಿಕೆಟ್ ಬದಲಿಗೆ ವಾಂತಿ ಮಾಡಲು ಒಂದು ಬ್ಯಾಗ್ ನೀಡಲಾಗುತ್ತದೆ!

ಕ್ಯಾಸು ಮರ್ಜು

ಕ್ಯಾಸು ಮರ್ಜು

ಇದು ಸಾರ್ಡಿನಿಯನ್ ಪೆಕೊರಿನೊ ಚೀಸ್. ಇದು ಹುಳುಗಳಿಂದ ಸಂಪೂರ್ಣವಾಗಿ ಮುತ್ತಿಕೊಂಡಿದೆ. ಇದನ್ನು ತಿನ್ನಬೇಕೆಂದು ಹೋಗುವಂತಹ ಜನರ ಮುಖದ ಮೇಲೆ ಹುಳುಗಳು ಹಾರುತ್ತವೆ.

Most Read: ಈ ರಾಶಿಚಕ್ರದವರು ಅತ್ಯುತ್ತಮ ಕೇಳುಗರು... ಹಾಗಾಗಿ ಇವರು ಯಾವುದಕ್ಕೂ ಹೆದರುವುದಿಲ್ಲ...

ಕುರಿ ಕಣ್ಣಿನ ಸೂಪ್!

ಕುರಿ ಕಣ್ಣಿನ ಸೂಪ್!

ಏಶ್ಯಾದ ಕೆಲವೊಂದು ಭಾಗಗಳಲ್ಲಿ ಕುರಿ ಕಣ್ಣಿನ ಸೂಪ್ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ಈ ಅಸಾಧಾರಣ ಕುರಿ ಕಣ್ಣಿನ ಸೂಪ್ ತೆವಳುವ ಹಾಗೂ ಕಾಡುವಂತೆ ಇದೆ. ಕಣ್ಣುಗಳು ಹಾಗೆ ನೋಡುತ್ತಲಿರುವಾಗ ಈ ಸೂಪ್ ನ್ನು ಕುಡಿಯಲು ಯಾರಿಂದ ಸಾಧ್ಯ?

ಇಲಿಮರಿ ವೈನ್

ಇಲಿಮರಿ ವೈನ್

ರೈಸ್ ವೈನ್ ನಲ್ಲಿ ಇಲಿ ಮರಿಗಳನ್ನು ಹಾಕಿಕೊಂಡು ಈ ವಿಚಿತ್ರವಾದ ವೈನ್ ತಯಾರಿಸಲಾಗುತ್ತದೆ. ಇದನ್ನು ಕುಡಿಯಲು ಇಲಿ ಮರಿಗಳನ್ನು ರೈಸ್ ವೈನ್ ಗೆ ಹಾಕಿದ ಬಳಿಕ ಒಂದು ವರ್ಷ ಕಾಯಬೇಕು ಎಂದು ಹೇಳಲಾಗಿದೆ.

ಗಿನಿ ಪಿಗ್ ರೋಸ್ಟ್

ಗಿನಿ ಪಿಗ್ ರೋಸ್ಟ್

ಅಂಡೇಯನ್ ಆಹಾರ ಕ್ರಮದಲ್ಲಿ ಗಿನಿ ಪಿಗ್ ತುಂಬಾ ರುಚಿಕರವೆಂದು ಪರಿಗಣಿಸಲಾಗಿದೆ. ಆದರೆ ರೋಸ್ಟ್ ಮಾಡಲ್ಪಟ್ಟಿರುವ ಈ ಗಿನಿ ಪಿಗ್ ನ್ನು ನೋಡಿದರೆ ನೀವು ಖಂಡಿತವಾಗಿಯೂ ಮಾಂಸಾಹಾರ ತ್ಯಜಿಸಲಿದ್ದೀರಿ.

MOst Read: ಅಚ್ಚರಿ ಜಗತ್ತು: ತಲೆ ಇಲ್ಲದೆ 18 ತಿಂಗಳು ಬದುಕುಳಿದ ಕೋಳಿ!

ಕುರಿಯ ತಲೆ, ಕಾಲು ಮತ್ತು ಹೊಟ್ಟೆ

ಕುರಿಯ ತಲೆ, ಕಾಲು ಮತ್ತು ಹೊಟ್ಟೆ

ಇದು ಅಫ್ಘಾನಿಸ್ತಾನ, ಇರಾನ್, ಅರ್ಮೆನಿಯಾ ಮತ್ತು ಇರಾಕ್ ನಲ್ಲಿ ತುಂಬಾ ಪ್ರಮುಖ ಆಹಾರವಾಗಿದೆ. ಈ ಖಾದ್ಯವನ್ನು ಕುರಿಯ ತಲೆ, ಕಾಲು ಮತ್ತು ಹೊಟ್ಟೆಯಿಂದ ತಯಾರಿಸಲಾಗುತ್ತದೆ. ಕುರಿಯ ತಲೆ ಹಾಗೂ ಕಾಲುಗಳನ್ನು ಕೆಲವು ದಿನಗಳ ಕಾಲ ತಂಪು ನೀರಿನಲ್ಲಿ ಇಡಲಾಗುತ್ತದೆ. ಇದರ ಬಳಿಕ ರಾತ್ರಿಯಿಡಿ ಇದನ್ನು ಬೇಯಿಸಿ, ಅದರ ದುರ್ವಾಸನೆ ದೂರ ಮಾಡಲಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Disgusting Food Museum In Sweden

    The Disgusting Food Museum In Sweden displays a number of the world's most disgusting and revolting food items that can kill your hunger instantly. This is one of the most bizarre exhibitions that you would have heard of. For example, the exhibit consists of a rice wine which is made with baby mice and is considered to be palatable and is also considered to be an expensive delicacy in a few cultures.
    Story first published: Tuesday, November 20, 2018, 20:00 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more