For Quick Alerts
ALLOW NOTIFICATIONS  
For Daily Alerts

29-09-2018: ಶನಿವಾರದ ದಿನ ಭವಿಷ್ಯ

|

ಬದಲಾವಣೆ ಎನ್ನುವುದು ನಿತ್ಯವೂ ನಡೆಯುತ್ತದೆ. ಅದೃಷ್ಟ ಹಾಗೂ ದುರಾದೃಷ್ಟ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಚಕ್ರದಂತೆ ಉರುಳುತ್ತಲೇ ಇರುತ್ತವೆ. ಅದನ್ನು ಅನುಭವಿಸುತ್ತಲೇ ಸಾಗುವುದು ನಮ್ಮ ಜೀವನ. ಈ ಜೀವನದ ಪಯಣದಲ್ಲಿ ನಾವು ಹೇಗೆ ಸಾಗುತ್ತೇವೆ? ನಮ್ಮ ದಾರಿಯಲ್ಲಿ ಬರುವ ಎಡರು ತೊಡರುಗಳನ್ನು ಹೇಗೆ ಮೀರಿ ಮುಂದೆ ಹೋಗುತ್ತೇವೆ ಎನ್ನುವುದರ ಮೇಲೆಯೇ ನಮ್ಮ ಬದುಕು ನಿರ್ಧಾರವಾಗುವುದು.

ಶನಿವಾರವಾದ ಇಂದು ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವ ಬದಲಾವಣೆಗಳು ಉಂಟಾಗುವುದು? ನಿಮ್ಮ ಈ ದಿನದ ಬದುಕಿಗೆ ಗ್ರಹಗಳು ಹಾಗೂ ನಕ್ಷತ್ರಗಳು ಯಾವ ರೀತಿಯಲ್ಲಿ ಸಹಕಾರ ನೀಡುತ್ತವೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

 ಮೇಷ

ಮೇಷ

ಅಧಿಕ ಕೆಲಸದ ಒತ್ತಡವನ್ನು ನೀವು ಎದುರಿಸುವುದರಿಂದ ನೀವು ಇಂದು ನಿಮ್ಮ ಕುಟುಂಬದವರಿಗಾಗಿ ಸಾಕಷ್ಟು ಸಮಯವನ್ನು ನೀಡಲು ಕಷ್ಟವಾಗುವುದು. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗುವುದು. ಹಣಕಾಸಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲದೆ ಇರುವುದರಿಂದ ಆರ್ಥಿಕವಾಗಿ ಉತ್ತಮವಾಗಿರುತ್ತದೆ ಎನ್ನಬಹುದು. ಅಲ್ಲದೆ ಲಾಭದಾಯಕ ಹಣಕಾಸು ವ್ಯವಹಾರಗಳಲ್ಲಿ ಹೂಡಿಕೆ ಮಾಡಬಹುದು ಎಂದು ಹೇಳಲಾಗುತ್ತದೆ. ಸಂಗಾತಿಯಿಂದ ವಿಶೇಷ ಮೆಚ್ಚುಗೆಯನ್ನು ಪಡೆದುಕೊಳ್ಳುವಿರಿ.

ವೃಷಭ

ವೃಷಭ

ವೃತ್ತಿ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಒತ್ತಡ ಹಾಗೂ ಮಾನಸಿಕ ಚಿಂತನೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಹಣಕಾಸಿನ ತೊಂದರೆಗಳು ಒಂದಿಷ್ಟು ಚಿಂತನೆಗೆ ಒಳಗಾಗುವಂತೆ ಮಾಡುವುದು. ಆರ್ಥಿಕ ಲಾಭವನ್ನು ಪಡೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಬೆಂಬಲಿಸುವರು. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಕಷ್ಟದ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯಿಂದ ಬೆಂಬಲ ದೊರೆಯುವುದು. ಅಲ್ಲದೆ ಅವರ ಬೆಂಬಲವೇ ಒಂದು ಶಕ್ತಿಯಾಗುವುದು. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣಗಳು ಯಶಸ್ವಿಯಾಗುತ್ತವೆ. ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಪ್ರಯತ್ನಿಸಿ.

Most Read: ಸಂಬಂಧಗಳ ವಿಷಯದಲ್ಲಿ 'ಕುಂಭ ರಾಶಿ'ಯವರು ಇಂತಹ ಸಮಸ್ಯೆಗಳನ್ನು ಎದುರಿಸುವರು...

ಮಿಥುನ

ಮಿಥುನ

ನೀವು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲವಾದರೆ ಅದು ನಿಮ್ಮ ಕೆಲಸದ ಮೇಲೂ ಹೆಚ್ಚಿನ ಪ್ರಭಾವ ಬೀರುವುದು. ಸಂಗಾತಿಯೊಂದಿಗಿನ ದೀರ್ಘಕಾಲದ ವಾದಗಳು ಮಾನಸಿಕ ಚಿಂತೆಗೆ ಕಾರಣವಾಗುವುದು. ಆರ್ಥಿಕವಾಗಿ ಇಂದು ಸರಾಸರಿ ದಿನ. ಬ್ಯಾಂಕ್ ವ್ಯವಹಾರಗಳನ್ನು ನಡೆಸುವಾಗ ಆದಷ್ಟು ಜಾಗರೂಕತೆಯಿಂದ ಇರಬೇಕು. ಆರೋಗ್ಯದ ಬಗ್ಗೆ ತೋರುವ ನಿರ್ಲಕ್ಷ್ಯ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಬಹುದು.

ಕರ್ಕ

ಕರ್ಕ

ಇಂದು ನಿಮಗೆ ಆರ್ಥಿಕವಾಗಿ ಒಂದಿಷ್ಟು ನಷ್ಟ ಉಂಟುಮಾಡುವ ಸಾಧ್ಯತೆಗಳಿವೆ. ಹಿಂದೆ ಸಾಲ ನೀಡಿದವರು ನಿಮಗೆ ತೊಂದರೆ ನೀಡಬಹುದು. ನಿಮಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯುವುದು. ಕುಟುಂಬದ ಸದಸ್ಯರಿಂದಲೇ ದಾಂಪತ್ಯದ/ ಸಂಗಾತಿಯ ನಡುವೆ ಒಂದಿಷ್ಟು ಸಮಸ್ಯೆಯನ್ನು ತಂದೊಡ್ಡಬಹುದು. ಕೆಲಸದ ವಿಚಾರದಲ್ಲಿ ಇಂದು ನಿಮಗೆ ಮಂಗಳಕರವಾದ ದಿನ. ಹಿರಿಯರ ಸಂಪೂರ್ಣ ಬೆಂಬಲ ದೊರೆಯುವುದು. ಸ್ವಲ್ಪ ಪ್ರಯತ್ನವು ಇಂದು ನಿಮಗೆ ಉತ್ತಮ ಫಲಿತಾಂಶ ನೀಡುವುದು.

ಸಿಂಹ

ಸಿಂಹ

ಇಂದು ನೀವು ಹಣದ ವಿಚಾರದಲ್ಲಿ ಸಾಕಷ್ಟು ಜಾಗರೂಕರಾಗಿರಬೇಕು. ಹೊಸ ಹೊಸ ಯೋಜನೆ ಅಥವಾ ವ್ಯವಹಾರಗಳಲ್ಲಿ ಮೋಸ ಹಾಗೂ ಹಣಕಾಸು ನಷ್ಟ ಉಂಟಾಗುವ ಸಾಧ್ಯತೆಗಳಿವೆ. ವೃತ್ತಿ ಕ್ಷೇತ್ರದಲ್ಲಿ ಸೂಕ್ತ ಶ್ರಮ ಹಾಗೂ ಕೆಲಸವನ್ನು ನಿರ್ವಹಿಸುವುದರ ಮೂಲಕ ಯಶಸ್ಸು ಪಡೆಯಬಹುದು. ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಹಿರಿಯರ ಬೆಂಬಲವೂ ದೊರೆಯುವುದು. ಸಂಗಾತಿ ತೋರುವ ಅಸಡ್ಡೆ ಅಥವಾ ನಿರ್ಲಕ್ಷ್ಯವು ನಿಮಗೆ ಅಸಮಧಾನ ಉಂಟುಮಾಡುವುದು. ಸೂಕ್ತ ಸಂವಹನ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಸಮಸ್ಯೆ ಬಗೆಹರಿಯುವುದು. ಆರೋಗ್ಯವು ಉತ್ತಮವಾಗಿರುತ್ತದೆ.

Most Read: ನೋಡಿ ಇದೇ ಕಾರಣಕ್ಕೆ ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಂಡಿರುವುದು!

ಕನ್ಯಾ

ಕನ್ಯಾ

ಅನುಚಿತ ಚಿಂತನೆಗಳನ್ನು ನಡೆಸುವುದರ ಮೂಲಕ ಸಮಯವನ್ನು ವ್ಯರ್ಥಮಾಡದಿರಿ. ಆರೋಗ್ಯದ ವಿಚಾರದಲ್ಲಿ ಋಣಾತ್ಮಕ ಅನುಭವ ಅನುಭವಿಸಬಹುದು. ಎಲ್ಲಾ ವಿಚಾರದಲ್ಲೂ ಹೊಸದಾದ ಪ್ರಯತ್ನವು ಸಫಲತೆಯನ್ನು ನೀಡುವುದು. ಸಂಗಾತಿಯ ಅಸಭ್ಯ ವರ್ತನೆಗಳು ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ನಿಮ್ಮ ಭಾವನೆಗಳನ್ನು ಪಕ್ಕಕ್ಕೆ ಇರಿಸಿ ಪ್ರಾಯೋಗಿಕ ಚಿಂತನೆ ನಡೆಸುವುದು ಮುಖ್ಯ. ಸೂಕ್ತ ವೇಳಾ ಪಟ್ಟಿಯನ್ನು ಹೊಂದಿದ್ದರೆ ಆರೋಗ್ಯವು ಉತ್ತಮವಾಗಿರುತ್ತದೆ. ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲು ಇಡುವುದರಿಂದ ಪ್ರೀತಿಯ ಜೀವನದಲ್ಲಿ ಪ್ರಣಯ ಸಂಗತಿಗಳನ್ನು ಅನುಭವಿಸುವಿರಿ. ಆದರೂ ನಿಮ್ಮ ಖರ್ಚುಗಳಲ್ಲಿ ನಿಯಂತ್ರಣ ಹೊಂದಿರಬೇಕು.

ತುಲಾ

ತುಲಾ

ಅನಗತ್ಯ ಗೀಳುಗಳ ಬಗ್ಗೆ ದೂರ ಇರಲು ಪ್ರಯತ್ನಿಸಿ. ನೀವು ಆದಷ್ಟು ತಾಳ್ಮೆ ಹಾಗೂ ಶಕ್ತರಾಗಿರಬೇಕು ಎಂದು ಸೂಚಿಸಲಾಗುವುದು. ಜೀವನದಲ್ಲಿ ನೀವು ಮುಂದುವರಿಯಲು ಇದು ಏಕೈಕ ಮಾರ್ಗ ಎಂದು ಹೇಳಲಾಗುವುದು. ಕುಟುಂಬಕ್ಕೆ ಸಾಕಷ್ಟು ಸಮಯವನ್ನು ಮೀಸಲಾಗಿಡದಿದ್ದರೆ ನೀವು ನಿರ್ಲಕ್ಷ್ಯಿಸುತ್ತಿದ್ದೀರಿ ಎಂದು ಭಾವಿಸುತ್ತಾರೆ. ಹಿರಿಯರಿಗೆ ನಿಮ್ಮ ಕೆಲಸದ ಮೇಲೆ ಸಮಾಧಾನ ಇರದೆ ಇರುವುದರಿಂದ ವೃತ್ತಿ ಕ್ಷೇತ್ರದಲ್ಲಿ ನೀವು ನಿರಾಶೆಗೆ ಅಥವಾ ಬೇಸರಕ್ಕೆ ಒಳಗಾಗಬಹುದು. ಧಾರ್ಮಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ತೋರುವಿರಿ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಸಂಜೆಯ ವೇಳೆಗೆ ಉತ್ತಮ ಸುದ್ದಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ವೃಶ್ಚಿಕ

ವೃಶ್ಚಿಕ

ನಕಾರಾತ್ಮಕ ಚಿಂತನೆಗಳೇ ಇಂದು ನಿಮಗೆ ನಿಮ್ಮ ಯಶಸ್ಸಿಗೆ ಅಡ್ಡಿಯನ್ನುಂಟುಮಾಡುವುದು. ಹಾಗಾಗಿ ನೀವು ನಿಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳುವುದು ಸೂಕ್ತ. ಮಿತಿಮೀರಿದ ಒತ್ತಡದ ಕಾರಣದಿಂದ ನೀವು ಸಂಗಾತಿಯಿಂದ ದೂರ ಇರಬೇಕಾಗುವುದು. ಸಂಗಾತಿಯಿಂದ ದೂರ ಆಗುವುದರಿಂದ ನಿಮಗೆ ನೋವು ಹಾಗೂ ಹಾನಿ ಉಂಟಾಗುವ ಸಾಧ್ಯತೆಗಳಿವೆ. ದಿನ ಪೂರ್ತಿ ಚಿಂತನೆ ನಡೆಸುವುದರ ಮೂಲಕವೇ ಸಮಯವನ್ನು ಕಳೆಯುವ ಸಾಧ್ಯತೆಗಳಿವೆ. ಇಂದು ನಿಮ್ಮ ಕೆಲಸಕ್ಕೆ ಧನಾತ್ಮಕವಾದ ದಿನ ಎನ್ನಬಹುದು. ಪ್ರೀತಿ ಪಾತ್ರರಿಂದ ಕೊಂಚ ತೊಂದರೆಯನ್ನು ಅನುಭವಿಸಬೇಕಾಗುವುದು.

ಧನು

ಧನು

ವೈವಾಹಿಕ ಸಂಬಂಧವು ಇಂದು ಸೌಮ್ಯವಾಗಿರುತ್ತದೆ. ಜೀವನ ಸಂಗಾತಿಯ ಕೆಲವು ಮಾತುಗಳು ನಿಮ್ಮ ಮನಸ್ಸಿಗೆ ಒಂದಿಷ್ಟು ನೋವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಇಂದು ನೀವು ಚೈತನ್ಯ ಶೀಲರು ಹಾಗೂ ಶಕ್ತಿಯನ್ನು ಹೊಂದಿದವರಾಗಿರುವುದರಿಂದ ನಿಮ್ಮ ಕೆಲಸದಲ್ಲಿ ಎಲ್ಲಾ ಕಾರ್ಯವನ್ನು ಮುಗಿಸಲು ಯಶಸ್ವಿಯಾಗುವಿರಿ. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದಿರಿ. ಉತ್ತಮ ವ್ಯಕ್ತಿಗಳಿಂದ ಆಶೀರ್ವಾದ ಪಡೆಯುವುದರಿಂದ ಸಕಾರಾತ್ಮಕತೆಯನ್ನು ಪಡೆದುಕೊಳ್ಳುವಿರಿ.

ಮಕರ

ಮಕರ

ಸಂಗಾತಿಯೊಂದಿಗೆ ಇರುವ ನಿರುತ್ಸಾಹವು ನಿಮ್ಮನ್ನು ಚಿಂತೆಗೆ ತಳ್ಳುವುದು. ಸುಳ್ಳು ಹೇಳುವುದರ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರೆ ಗಂಭೀರ ಸಮಸ್ಯೆ ಉದ್ಭವ ಆಗುವ ಸಾಧ್ಯತೆಗಳಿವೆ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ಉಂಟುಮಾಡುವ ಅಡಚಣೆಯಿಂದ ಒಂದಿಷ್ಟು ತೊಂದರೆ ಎದುರಾಗುವ ಸಾಧ್ಯತೆಗಳಿವೆ. ಹಾಗಾಗಿ ನೀವು ಆದಷ್ಟು ಜಾಗರೂಕರಾಗಿರಬೇಕು. ಇಂದು ನೀವು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಕೆಲಸದಿಂದ ಕೊಂಚ ವಿರಾಮ ಪಡೆಯುವುದು ಮುಖ್ಯ. ಆದಾಗ್ಯೂ ಇಂದು ನಿಮಗೆ ಆರ್ಥಿಕವಾಗಿ ಉತ್ತಮ ದಿನವಲ್ಲ ಎನ್ನಬಹುದು.

Most Read: ಪಪ್ಪಾಯಿ ತಿಂದರೂ ಸಾಕು-ದೇಹದ ತೂಕ ಹಾಗೂ ಬೊಜ್ಜು ಇಳಿಸಿಕೊಳ್ಳಬಹುದು

ಕುಂಭ

ಕುಂಭ

ನಿಮ್ಮ ಕೆಲಸದ ಸ್ಥಳದಲ್ಲಿ ಆದಷ್ಟು ಜಾಗ್ರತೆಯಿಂದ ಇರಬೇಕು. ವಾದ ಮತ್ತು ಸಮಸ್ಯೆಗಳಿಂದ ದೂರ ಉಳಿಯುವುದು ಉತ್ತಮ. ಕುಟುಂಬದ ಬಗ್ಗೆ ಹೆಚ್ಚಿನ ಗಮನ ನೀಡಿ. ಕುಟುಂಬದವರಿಗೆ ಹೆಚ್ಚಿನ ಗಮನ ನೀಡಲು ಪ್ರಯತ್ನಿಸಿ. ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ಇರುವುದು. ಇಂದು ಪ್ರತಿಯೊಬ್ಬರಿಂದಲೂ ಸಂಪೂರ್ಣ ಬೆಂಬಲ ಪಡೆದುಕೊಳ್ಳುವಿರಿ. ಸಹೋದರರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಹೆತ್ತವರ ಆಶೀರ್ವಾದದಿಂದ ಮಾನಸಿಕ ಸಂತೋಷವನ್ನು ಪಡೆದುಕೊಳ್ಳುವಿರಿ. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುವುದು.

ಮೀನ

ಮೀನ

ನಿಮ್ಮ ಜೀವನದ ಪಾಲುದಾರರ ರಹಸ್ಯ ಸ್ವಭಾವವು ಇಂದು ನಿಮಗೆ ಕೊಂಚ ಗೊಂದಲವನ್ನು ಉಂಟುಮಾಡಬಹುದು. ಇಂದು ಆದಷ್ಟು ತಾಳ್ಮೆ ಹಾಗೂ ಪರಿಸ್ಥಿತಿಯನ್ನು ಶಾಂತವಾಗಿರಿಸಿಕೊಳ್ಳುವುದು ಸೂಕ್ತ. ಇಂದು ನೀವು ಇತರರ ಮೇಲೆ ಒಂದಿಷ್ಟು ಹಣವನ್ನು ಖರ್ಚುಮಾಡುವ ಸಾಧ್ಯತೆಗಳಿವೆ. ಕೆಲಸದ ಒತ್ತಡವು ನಿಮ್ಮನ್ನು ಕಿತ್ತು ತಿನ್ನಬಹುದು. ನೀವು ನಿಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರದೆ ಉತ್ತಮ ಸಂಬಂಧ ಹೊಂದುವುದು ಸೂಕ್ತ ಎಂದು ಸಲಹೆ ನೀಡಲಾಗುವುದು.

English summary

Daily Horoscope: 29 September 2018

What will the changing positions of the planets bring for you today? Check out in your Daily Horoscope for September 29th 2018 below.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more