Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಗುವಿನ ಪ್ರಾಣ ಉಳಿಸಲು, ವಯಾಗ್ರಾ ನೀಡುತ್ತಿರುವ ತಂದೆ!
ಯಾವುದೇ ದಂಪತಿಗೆ ಮಗುವಿನ ಜನನ ಹಾಗೂ ಅದರ ಪಾಲನೆ ಎನ್ನುವುದು ತುಂಬಾ ಖುಷಿ ಹಾಗೂ ಹಲವಾರು ಸವಾಲುಗಳಿಂದ ಕೂಡಿರುವಂತಹ ಸಮಯವಾಗಿರುವುದು. ಶಿಶುಗಳ ಪಾಲನೆ ಮಾಡುವುದು ತುಂಬಾ ಕಠಿಣ ಕೆಲಸ. ಶಿಶುಗಳಿಗೆ ಮಾತು ಬರದೆ ಇರುವ ಕಾರಣ ಅವುಗಳು ಪ್ರತಿಯೊಂದಕ್ಕೂ ಅಳುತ್ತಾ ಇರುತ್ತವೆ. ಇದರಿಂದ ಅದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಆರೈಕೆ ಮಾಡುವುದು ಪ್ರತಿಯೊಬ್ಬರಿಗೂ ಸವಾಲಿನ ಕೆಲಸವಾಗಿರುವುದು. ಶಿಶುಗಳ ಆರೈಕೆ ಮಾಡುವುದು ತಾಯಿಯಾದವಳಿಗೆ ಮಾತ್ರ ಸಾಧ್ಯವೆನ್ನಬಹುದು.

ಸಣ್ಣ ದೇಹವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಆರೈಕೆ ಮಾಡಬೇಕು. ಇಲ್ಲೊಂದು ಶಿಶುವು ವಾಂತಿ ಮಾಡಲು ಆರಂಭಿಸಿತು ಮತ್ತು ತಕ್ಷಣ ಅದರ ಮುಖ ಕೂಡ ಊದಿಕೊಳ್ಳಲು ಆರಂಭವಾಯಿತು. ಈ ಸಮಯದಲ್ಲಿ ಶಿಶುವಿನ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಮಗುವಿಗೆ ತುಂಬಾ ಅಪರೂಪದ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದರು. ಇದಕ್ಕಾಗಿ ಮಗುವಿನ ತಂದೆ ಹೆಣ್ಣು ಮಗುವಿಗೆ ದಿನಕ್ಕೆ ಎರಡು ವಯಾಗ್ರ ನೀಡುತ್ತಿದ್ದಾರೆ. ಅವರ ಜೀವನ ಹೇಗಿದೆ ಎಂದು ಈ ಲೇಖನದಲ್ಲಿ ನೀವು ತಿಳಿಯಿರಿ....

ಎಲೋಡಿ ಜನನದ ವೇಳೆ ತುಂಬಾ ಆರೋಗ್ಯಕರ ಮಗುವಾಗಿದ್ದಳು
ಅನ್ನಿ ನಿಲಸ್ಸನ್ ಮತ್ತು ಜಾರೆಡ್ ಫೊವ್ಲರ್ ಎಲೋಡಿಗೆ ಜನ್ಮ ನೀಡಿದ ಬಳಿಕ ಅವರಿಗೆ ತುಂಬಾ ಹೆಮ್ಮೆ ಯಾಗುತ್ತಲಿತ್ತು. ಯಾಕೆ ಜನನದ ಮೊದಲ ದಿನದಿಂದಲೇ ತುಂಬಾ ಆರೋಗ್ಯಕರ ಮಗುವಾಗಿದ್ದಳು.

ಆಕೆಗೆ ಅನಾರೋಗ್ಯ
ಆದರೆ ಮಗುವಿನ ಜನನದ ಸಂಭ್ರಮದಲ್ಲಿದ್ದ ಪೋಷಕರಿಗೆ ಈ ಸಂತೋಷವು ಹೆಚ್ಚು ಸಮಯ ಉಳಿಯಲಿಲ್ಲ. ಯಾಕೆಂದರೆ ಅವರಿಗೆ ದೊಡ್ಡ ಮಟ್ಟದ ಸಂಕಷ್ಟವು ಎದುರಾಯಿತು. ಎಲೋಡಿ ಅನಾರೋಗ್ಯಕ್ಕೆ ಒಳಗಾದಳು. ತಮ್ಮ ಮಗುವು ತುಂಬಾ ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯಿಸಿತು ಮತ್ತು ಆಕೆಯ ಮುಖ ಕೂಡ ಊದಿಕೊಳ್ಳಲು ಆರಂಭವಾಯಿತು. ಯಾವುದೇ ಕಾರಣವಿಲ್ಲದೆ ಮಗು ವಾಂತಿ ಮಾತಿಕೊಳ್ಳಲು ಆರಂಭಿಸಿತು.

ವೈದ್ಯರು ಪರೀಕ್ಷೆ ಮಾಡಿದರು
ಮಗು ಜನನದ ವೇಳೆ ತುಂಬಾ ಆರೋಗ್ಯವಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಪರಿಸ್ಥಿತಿ ಬಗ್ಗೆ ತಿಳಿಯಲು ಹೆಚ್ಚಿನ ಸಮಯ ಬೇಕಾಯಿತು. ಮಗುವನ್ನು ಎಲ್ಲಾ ರೀತಿಯಿಂದಲೂ ಪರೀಕ್ಷೆ ಮಾಡಿದ ವೈದ್ಯರು ಅಂತಿಮವಾಗಿ ಆಕೆಯು ತುಂಬಾ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಕಂಡುಹಿಡಿದರು. ಮಗು ತುಂಬಾ ಅಪರೂಪದ ಸಮಸ್ಯೆಯಾದ ದುಗ್ಧರಸ ಕರುಳಿನ ರಕ್ತನಾಳಗಳ ಅಡಚಣೆಯಿಂದ ಬಳಲುತ್ತಿತ್ತು. ಇದರಿಂದಾಗಿ ದುಗ್ದದ್ರವು ಮಗುವಿನ ದೇಹಕ್ಕೆ ಪಸರಿಸುತ್ತಿತ್ತು. ಕರುಳಿನ ಲಿಂಫಾಂಗಿಯೇಟೇಶಿಯ ಸಮಸ್ಯೆಯು ಇತ್ತು.

ಆಕೆಯ ಪರಿಸ್ಥಿತಿ ಬಗ್ಗೆ
ಕರುಳಿನ ಲಿಂಫಾಂಗಿಯೇಟೇಶಿಯ ಸಮಸ್ಯೆಯು ತುಂಬಾ ಅಪರೂಪದ ಸಮಸ್ಯೆಯಾಗಿರುವುದು. ಇದು ಸಣ್ಣ ಕರುಳಿನ ಸಮಸ್ಯೆಯಾಗಿದ್ದು, ಮಕ್ಕಳು ಹಾಗೂ ವಯಸ್ಕರಿಗೂ ಪರಿಣಾಮ ಬೀರುವುದು. ಈ ಪರಿಸ್ಥಿತಿಯಲ್ಲಿ ದುಗ್ದರಸ ನಾಳಗಳು ಬ್ಲಾಕ್ ಆಗುವುದು. ಇವುಗಳು ಹಿಗ್ಗುವುದು ಮತ್ತು ಛಿದ್ರಗೊಳ್ಳುವ ಕಾರಣದಿಂದಾಗಿ ಅವುಗಳು ತಮ್ಮ ಅಂಶವನ್ನು ಕರುಳಿಗೆ ಹಾಕುವುದು.

ವೈದ್ಯರು ವಯಾಗ್ರಾ ನೀಡಿದರು
ವೈದ್ಯರು ಮಗುವಿನ ಈ ಪರಿಸ್ಥಿತಿಗೆ ಒಂದು ಪ್ರಮಾಣದಲ್ಲಿ ವಯಾಗ್ರಾ ನೀಡಲು ಆರಂಭಿಸಿದರು. ವಯಾಗ್ರಾವನ್ನು ಹೆಚ್ಚಾಗಿ ನಿಮಿರು ದೌರ್ಬಲ್ಯ ಸಮಸ್ಯೆಗೆ ಬಳಸಿಕೊಳ್ಳಲಾಗುತ್ತದೆ. ವಯಾಗ್ರಾದಲ್ಲಿ ಇರುವಂತಹ ಸಿಲ್ಡೆನಾಫಿಲ್ ಎನ್ನುವ ರಾಸಾಯನಿಕ ಅಂಶವು ಈ ಪರಿಸ್ಥಿತಿಗೆ ನಿವಾರಣೆಗೆ ಅತ್ಯುತ್ತಮವಾಗಿ ಕೆಲಸ ಮಾಡಲು ನೆರವಾಗುವುದು ಎಂದು ವೈದ್ಯರು ಹೇಳುವರು.

ತಂದೆ ಪ್ರತೀ ದಿನ ಮಗುವಿಗೆ ವಯಾಗ್ರಾ ನೀಡುವರು
ವೈದ್ಯರು ಮಗುವಿನ ಪರಿಸ್ಥಿತಿ ತಿಳಿದುಕೊಂಡು ವಯಾಗ್ರಾ ನೀಡಬೇಕೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಮಗುವಿನ ತಂದೆ ದಿನಕ್ಕೆ ಎರಡು ಸಲ ವಯಾಗ್ರಾ ಮಾತ್ರೆ ನೀಡುವರು. ಇಂತಹ ಚಿಕಿತ್ಸೆಯ ಸಂಪೂರ್ಣ ಮಾಹಿತಿಯೆಂದರೆ ಈ ಚಿಕಿತ್ಸೆಗೆ ಯಾವುದೇ ರೀತಿಯಿಂದಲೂ ದೃಢಪಟ್ಟಿಲ್ಲ. ಸುಂದರ ಮಗು ಬೇಗನೆ ಚೇತರಿಸಿಕೊಳ್ಳಲಿ ಎಂದು ಬೋಲ್ಡ್ ಸ್ಕೈ ಹೇಳುತ್ತದೆ. ಇಂತಹ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ.



Click it and Unblock the Notifications
