Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಚ್ಚರಿ ಜಗತ್ತು: ತಲೆ ಇಲ್ಲದೆ 18 ತಿಂಗಳು ಬದುಕುಳಿದ ಕೋಳಿ!
ಯಾವುದಾದರೂ ಹಾರರ್ ಸಿನಿಮಾದಲ್ಲಿ ತುಂಬಾ ಭಯಾನಕವಾಗಿ ಕಾಣಿಸುವಂತಹ ದೃಶ್ಯವೆಂದರೆ ತಲೆಯಿಲ್ಲದೆ ಇರುವಂತಹ ಮನುಷ್ಯ ಅಥವಾ ಪ್ರಾಣಿ. ಇದನ್ನು ನೋಡಿದ ತಕ್ಷಣ ನಮ್ಮ ಎದೆ ಝಲ್ಲೆನ್ನುತ್ತದೆ. ಇಂತಹ ದೃಶ್ಯಗಳು ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ. ಯಾಕೆಂದರೆ ತಲೆ ಕಡಿತ ಬಳಿಕ ಯಾವುದೇ ಪ್ರಾಣಿ, ಪಕ್ಷಿ ಅಥವಾ ಮನುಷ್ಯನೇ ಆಗಿರಲಿ ಆತನ ಕೆಲವೇ ನಿಮಿಷಗಳ ಕಾಲ ಬದುಕುಳಿಯಲು ಸಾಧ್ಯ.

ಆದರೆ ಇಲ್ಲೊಂದು ಕೋಳಿಯು ತಲೆಯೇ ಇಲ್ಲದೆ ಸುಮಾರು 18 ತಿಂಗಳುಗಳ ಕಾಲ ಬದುಕಿದೆ. ಇದನ್ನು ಕೇಳಿ ನೀವು ಅಚ್ಚರಿಪಡಬಹುದು. ಆದರೆ ಖಂಡಿತವಾಗಿಯೂ ಇದು ನಡೆದಿರುವಂತಹ ಘಟನೆ. ಆದರೆ ಹಲವಾರು ದಶಕಗಳ ಹಿಂದೆ. ಇದರ ಬಗ್ಗೆ ಓದುತ್ತಾ ಸಾಗಿ...

1945ರಲ್ಲಿ ನಡೆದ ಘಟನೆ
1945, ಸಪ್ಟೆಂಬರ್ 10ರಂದು ಕೊಲೊರ್ಡೊದ ಫ್ರುಟಿಯಾದಲ್ಲಿರು ತಮ್ಮ ಸಾಕು ಕೋಳಿಗಳಲ್ಲಿ ಲಾಯ್ಡ್ ಒಲ್ಸೆನ್ ಮತ್ತು ಆಕೆಯ ಪತ್ನಿ ಕ್ಲಾರಾ ಮಾಂಸಕ್ಕಾಗಿ ಕೊಳಿಗಳನ್ನು ಕೊಲ್ಲುತ್ತಲಿದ್ದರು. ಯಾವಾಗಲೂ ಮಾಡುವಂತೆ ಒಲ್ಸೆನ್ ಕೋಳಿಗಳನ್ನು ಕೊಲ್ಲುತ್ತಲಿದ್ದರೆ, ಆತನ ಪತ್ನಿ ಅದನ್ನು ಸ್ವಚ್ಛಗೊಳಿಸುತ್ತಲಿದ್ದಳು.

ಮೈಕ್ ಎನ್ನುವ ಕೋಳಿ ಆ ದಿನ ಸಾವನ್ನೇ ಗೆದ್ದಿತು
ಆ ದಿನ ಮಾಂಸಕ್ಕಾಗಿ ಕತ್ತರಿಸಿ ಹಾಕಿದ ಕೋಳಿಗಳಲ್ಲಿ ಒಂದು ಕೋಳಿ ಮಾತ್ರ ಕತ್ತರಿಸಿದ ಬಳಿಕ ರಕ್ತಸ್ರಾವವಾಗದೆ ಅದರ ರಕ್ತವು ಕುತ್ತಿಗೆಯಲ್ಲೇ ಹೆಪ್ಪುಗಟ್ಟಿತು. ತನ್ನ ಕತ್ತರಿಸಲ್ಪಟ್ಟಿರುವ ಕುತ್ತಿಗೆ ಬದಿಯಲ್ಲೇ ಮಲಗಿದ್ದ ಜೀವಂತ ಕೋಳಿಯನ್ನು ನೋಡಿದ ಆ ದಂಪತಿಗೆ ಜೀವಮಾನದ ಅತೀ ದೊಡ್ಡ ಅಚ್ಚರಿಯಾಗಿತ್ತು!

ಆ ಕುಟುಂಬವು ಅದರಿಂದ ಹಣ ಸಂಪಾದಿಸಿತು
ತಲೆ ಇಲ್ಲದೆ ಬದುಕುತ್ತಿರುವಂತಹ ಕೋಳಿಯನ್ನು ಜಗತ್ತಿಗೆ ತೋರಿಸಿ, ಅದರಿಂದ ಹಣ ಸಂಪಾದನೆ ಮಾಡಲು ಲಾಯ್ಡ್ ಮತ್ತು ಆತನ ಪತ್ನಿ ನಿರ್ಧಾರ ಮಾಡಿದರು. ಐಡ್ರಾಪರ್ ಬಳಿಸಿಕೊಂಡು ಕೋಳಿಗೆ ಆಹಾರ ನೀಡುತ್ತಲಿದ್ದರು.

ಮೈಕ್ ಬದುಕುಳಿದಿರುವುದನ್ನು ನೋಡಿ ವೈದ್ಯಕೀಯ ಜಗತ್ತೇ ಅಚ್ಚರಿಗೀಡಾಯಿತು
ಮೈಕ್ ಬದುಕುಳಿದಿರುವುದು ವಿಜ್ಞಾನಿಗಳಿಗೂ ದೊಡ್ಡ ಅಚ್ಚರಿಯಾಗಿತ್ತು. ಕೋಳಿ ಈಗಲೂ ಬದುಕುಳಿದಿರಲು ಕಾರಣವೇನೆಂದು ತಿಳಿಯಲು ಅವರು ಹಲವಾರು ರೀತಿಯ ಪರೀಕ್ಷೆಗಳನ್ನು ನಡೆಸಿದರು. ಚಾಕುವಿನ ಹೊಡೆತದಿಂದ ಕತ್ತಿನಲ್ಲಿರುವ ಪ್ರಧಾನ ಅಭಿಧಮನಿ ಪಾರಾಗಿತ್ತು. ಇದರಿಂದಾಗಿ ರಕ್ತ ಹೆಪ್ಪುಗಟ್ಟಿ ರಕ್ತಸ್ರಾವಾಗದೆ ಮೈಕ್ ಬದುಕುಳಿಯಿತು. ಕೋಳಿಯು ಸಂಪೂರ್ಣ ಚಲನಶೀಲತೆ ಹೊಂದಿತ್ತು ಮತ್ತು ಅದರ ಮೆದುಳು ಕೂಡ ಸರಿಯಾಗಿ ಕೆಲಸ ಮಾಡುತ್ತಲಿತ್ತು.

ಲಾಯ್ಡ್ ಕೋಳಿಯಿಂದಾಗಿ ಶ್ರೀಮಂತನಾದ
ಈ ಅಸಾಮಾನ್ಯ ಕೋಳಿಯನ್ನು ದೂರದೂರದಿಂದ ಜನರು ಬರಲು ಆರಂಭಿಸಿದರು. ಇದಕ್ಕಾಗಿ ದಂಪತಿಯು ಹಣ ಪಡೆಯಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಲಾಯ್ಡ್ ಒಂದು ಹೊಸ ಟ್ರ್ಯಾಕ್ಟರ್, ಒಂದು ಹೊಸ ಪಿಕಪ್ ಟ್ರಕ್ ಕೂಡ ಖರೀದಿ ಮಾಡಿದ.

ದುರಾದೃಷ್ಟದಿಂದ ಅದು ಸಾವನ್ನಪ್ಪಿತು!
18 ತಿಂಗಳ ಕಾಲ ತಲೆಯಿಲ್ಲದೆ ಬದುಕುಳಿದ ಮೈಕ್ ಒಂದು ದಿನ ಕ್ರಾಸ್ ಕಂಟ್ರಿ ಪ್ರಯಾಣದ ವೇಳೆ ಸಾವನ್ನಪ್ಪಿತು. ಫಿಯೊನಿಕ್ಸ್ ನಲ್ಲಿರುವ ಮೊಟೆಲ್ ಒಂದರಲ್ಲಿ ದಂಪತಿಯು ವಿಶ್ರಾಂತಿ ಪಡೆಯಲು ತಮ್ಮ ವಾಹನ ನಿಲ್ಲಿಸಿದ್ದರು. ಈ ವೇಳೆ ಲಾಯ್ಡ್ ಗೆ ಉಸಿರುಗಟ್ಟಿರುವಂತಹ ಶಬ್ದವು ಕೇಳಿತು ಮತ್ತು ಮೈಕ್ ಗೆ ಉಸಿರುಗಟ್ಟಿದೆ ಎಂದು ಆತನಿಗೆ ತಿಳಿಯಿತು. ಗಂಟಲನ್ನು ಶುದ್ಧೀಕರಿಸಲಿ ಬಳಸುತ್ತಿದ್ದ ಸಿರಿಂಜ್ ನ್ನು ಇವರು ಹುಡುಕಾಡಿದರು. ಆದರೆ ದುರಾದೃಷ್ಟದಿಂದ ಅದು ಸಿಗಲೇ ಇಲ್ಲ. ಅಂತಿಮವಾಗಿ 18 ತಿಂಗಳ ಕಾಲ ತಲೆಯಿಲ್ಲದೆ ಬದುಕಿದ ಮೈಕ್ ಸಾವನ್ನಪ್ಪಿತು.



Click it and Unblock the Notifications
