Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೊಟೊಕ್ಸ್ ಚಿಕಿತ್ಸೆಯಿಂದ, ನಿಮ್ಮ ಲೈಂಗಿಕ ಪರಾಕಾಷ್ಠೆ ಕಡಿಮೆಯಾಗಬಹುದು!!
ಸುಂದರವಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬರ ಆಸೆಯಾಗಿರುವುದು. ಇದಕ್ಕಾಗಿ ಮೇಕಪ್, ಕೆಲವೊಂದು ಸಲ ಶಸ್ತ್ರಚಿಕಿತ್ಸೆ ಕೂಡ ಮಾಡಿಕೊಳ್ಳುವರು. ಸುಂದರವಾಗಿದ್ದರೆ ಲೈಂಗಿಕ ಜೀವನ ಕೂಡ ಸುಖವಾಗಿರುವುದು ಎನ್ನುವ ನಂಬಿಕೆಯು ಕೆಲವರಲ್ಲಿದೆ. ಇದಕ್ಕಾಗಿ ಸುಂದರವಾಗಬೇಕೆಂದು ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವರು.
ಇದರಲ್ಲಿ ಬೊಟೊಕ್ಸ್ ಚಿಕಿತ್ಸೆ ಕೂಡ ಒಂದಾಗಿದೆ. ಆದರೆ ಈ ಚಿಕಿತ್ಸೆಯಿಂದಾಗಿ ಲೈಂಗಿಕ ಪರಾಕಾಷ್ಠೆ ತಲುಪುವುದು ಕಡಿಮೆಯಾಗಬಹುದು ಎಂದು ಅಧ್ಯಯನಗಳು ಹೇಳಿವೆ. ಬೊಟೊಕ್ಸ್ ಚಿಕಿತ್ಸೆಗೆ ಒಳಗಾಗಿರುವ ಜನರು ಲೈಂಗಿಕ ಪರಾಕಾಷ್ಠೆ ತಲುಪುದು ಕಡಿಮೆಯಾಗಿರುವುದು ಯಾಕೆ ಎಂದು ಈ ಲೇಖನದಲ್ಲಿ ನೀವು ತಿಳಿಯಿರಿ.

ಕಾರ್ಡಿಫ್ ಯೂನಿವರ್ಸಿಟಿಯ ಮನೋಶಾಸ್ತ್ರಜ್ಞರು ಹೇಳುವ ಪ್ರಕಾರ….
ಕಾರ್ಡಿಫ್ ಯೂನಿವರ್ಸಿಟಿಯ ಮನೋಶಾಸ್ತ್ರಜ್ಞರು ಹೇಳುವ ಪ್ರಕಾರ ಬೊಟೊಕ್ಸ್ ಚಿಕಿತ್ಸೆಗೆ ಒಳಗಾದವರು ಲೈಂಗಿಕ ಕ್ರಿಯೆ ವೇಳೆ ತಮ್ಮ ಸಂಗಾತಿ ಜತೆಗೆ ಮುಕ್ತವಾಗಿ ಸಂವಹನ ನಡೆಸಲು ಸಾಧ್ಯವಾಗಲ್ಲ. ಇದು ವೈಯಕ್ತಿಕ ಲೈಂಗಿಕ ಪ್ರದರ್ಶನ ಮೇಲೆ ಪರಿಣಾಮ ಬೀರುವುದು ಮತ್ತು ಮಹಿಳೆಯರು ಸುಖ ಪಡೆದರೂ ಪರಾಕಾಷ್ಠೆಯು ಸಿಗದು.

ಅಗ್ರ ಸಂಶೋಧಕ ಡಾ. ಮೈಕಲ್ ಲೆವಿಸ್ ವಿಶ್ಲೇಷಿಸುವ ಪ್ರಕಾರ…
ಜನರ ಲೈಂಗಿಕ ಜೀವನದ ಮೇಲೆ ಬೊಟೊಕ್ಸ್ ನ ಪರಿಣಾಮ ಬೀರುವುದು. ವಿಷಕಾರಿ ಇಂಜೆಕ್ಷನ್ ಗಳನ್ನು ನೀಡುವ ಮೂಲಕವಾಗಿ ರೋಗಿಯ ಮುಖದ ಕೆಲವು ನರಗಳನ್ನು ದುರ್ಬಲಗೊಳಿಸಲಾಗುತ್ತದೆ. ಇದರಿಂದಾಗಿ ಲೈಂಗಿಕ ಕ್ರಿಯೆ ವೇಳೆ ಇದು ಹೆಚ್ಚು ಭಾವನೆಗಳನ್ನು ವ್ಯಕ್ತಪಡಿಸದಂತೆ ಮಾಡುವುದು.

ಸಂಗಾತಿಗಳೊಂದಿಗೆ ಬೆರೆಯಲು ಆಗದು
ಬೊಟೊಕ್ಸ್ ಮತ್ತು ಫಿಲ್ಲರ್ ಬಳಸಿಕೊಂಡು ಸುಂದರವಾಗಿ ಕಾಣುವಂತೆ ಮಾಡಿರುವ ಮಹಿಳೆಯರ ಮುಖದ ಭಾವನೆಯು ತುಂಬಾ ನಿರ್ಬಂಧಿಸಲ್ಪಡುವ ಕಾರಣದಿಂದಾಗಿ ಅವರು ಸಂಗಾತಿಯೊಂದಿಗೆ ಬೆರೆಯಲು ಆಗಲ್ಲ.

ಮುಖದ ಭಾವವು ಪರಾಕಾಷ್ಠೆಗೆ ಸಂಬಂಧ ಹೊಂದಿದೆ
ಬೊಟುಲಿನಮ್ ಟಾಕ್ಸಿನ್ ಕಾಸ್ಮೆಟಿಕ್ ಚಿಕಿತ್ಸೆ ವೇಳೆ ದುರ್ಬಲಗೊಳಿಸುವಂತಹ ನರಗಳೇ ಪರಾಕಾಷ್ಠೆ ವೇಳೆ ಮುಖದ ಭಾವಕ್ಕೆ ಸಂಬಂಧಿಸಿದ್ದಾಗಿದೆ. ಮುಖದ ಸ್ನಾಯುಗಳು ತುಂಬಾ ಕಡಿಮೆ ಚಲನಶೀಲತೆಯು ಮುಖದ ಭಾವನೆ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಲೈಂಗಿಕ ಕ್ರಿಯೆ ವೇಳೆ ಆನಂದವು ಕಡಿಮೆಯಾಗುವುದು.

ಇದರ ಪರಿಣಾಮ ಪರಾಕಾಷ್ಠೆ ಅನುಭವಿಸಲು ಆಗಲ್ಲ
ಚಿಕಿತ್ಸೆಗೆ ಒಳಗಾಗಿರುವಂತಹ ಮಹಿಳೆಯರು ತಮ್ಮ ಸಂಗಾತಿ ಜತೆಗೆ ಹೆಚ್ಚು ಹತ್ತಿರವಾಗಲು ವಿಫಲವಾಗುವರು. ಈ ಕಾರಣದಿಂದಾಗಿ ಕ್ಲೈಮ್ಯಾಕ್ಸ್ ಸಂದರ್ಭದಲ್ಲಿ ಸಿಗುವಂತಹ ಆನಂದವು ತುಂಬಾ ಕಡಿಮೆಯಾಗುವುದು.



Click it and Unblock the Notifications
