Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹಿಂದಿನ ಕಾಲದಲ್ಲಿ ಗರ್ಭಧಾರಣೆ ತಡೆಯಲು, ಇಂತಹ ವಿಚಿತ್ರ ಸಂಗತಿಗಳನ್ನು ಮಾಡುತ್ತಿದ್ದರಂತೆ!
ಸಂಗಾತಿಗಳು ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು. ಆದರೆ ಅವರಿಗೆ ಮಗು ಬೇಕೆಂದಿರುವುದಿಲ್ಲ. ಇಂತಹ ಸಮಯದಲ್ಲಿ ಗರ್ಭನಿರೋಧಿಕ ಬಳಸಿಕೊಳ್ಳುವುದು ಸಹಜ. ಕಾಂಡೋಮ್ ನಂತಹ ಗರ್ಭನಿರೋಧಕದಿಂದಾಗಿ ಬರುವಂತಹ ಹಲವಾರು ರೀತಿಯ ಲೈಂಗಿಕ ರೋಗಗಳನ್ನು ಕೂಡ ತಡೆಗಟ್ಟಬಹುದು. ಹಿಂದಿನ ಕಾಲದಲ್ಲಿ ಆಧುನಿಕ ಯುಗದಂತೆ ಗರ್ಭಧಾರಣೆ ತಡೆಯಲು ಬೇಕಾಗಿರುವಂತಹ ಸುರಕ್ಷಿತ ವಿಧಾನಗಳು ಇರಲಿಲ್ಲ.

ಈ ಕಾರಣದಿಂದಾಗಿ ಶತಮಾನಗಳ ಹಿಂದೆ ಗರ್ಭಧಾರಣೆ ತಡೆಗಟ್ಟಲು ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಕಾಡುವುದು ಸಹಜ. ಇಂತಹ ಸಮಯದಲ್ಲಿ ಕೆಲವು ಮಂದಿ ತುಂಬಾ ವಿಚಿತ್ರ ವಿಧಾನಗಳನ್ನು ಪ್ರಯತ್ನಿಸುತ್ತಿದ್ದರು. ಆದರೆ ಇದು ತುಂಬಾ ಅಪಾಯಕಾರಿಯಾಗಿತ್ತು. ಯಾಕೆಂದರೆ ಇದರಿಂದ ಬೇರೆ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಗರ್ಭಧಾರಣೆ ತಡೆಯಲು ಹಿಂದಿನ ಕಾಲದಲ್ಲಿ ವಿಶ್ವದೆಲ್ಲೆಡೆಯಲ್ಲಿ ಬಳಸುತ್ತಿದ್ದ ವಿಧಾನಗಳು ಯಾವುದು ಎಂದು ನೀವು ಈ ಲೇಖನ ಓದುತ್ತಾ ತಿಳಿಯಿರಿ.

ವಿಚಿತ್ರ ಬಗೆಯ ಮಂತ್ರವಿದ್ಯೆ
ಮುಂಗುಸಿ ವೃಷಣ, ಕತ್ತೆಯ ಮಲ, ಕಪ್ಪು ಬೆಕ್ಕಿನ ಎಲುಬು ಅಥವಾ ಹೆಸರಗತ್ತೆಯ ಗರ್ಭಕೋಶವನ್ನು ಗರ್ಭ ನಿರೋಧಕವಾಗಿ ಬಳಸಲಾಗುತ್ತಿತ್ತು. ಇದನ್ನು ಮಹಿಳೆಯ ಕುತ್ತಿಗೆಗೆ ನೇತು ಹಾಕಲಾಗುತ್ತಿತ್ತು ಅಥವಾ ಇದನ್ನು ಮಂತ್ರವಿದ್ಯೆ ಮಾಡಿಕೊಂಡ ಬಳಿಕ ಮಹಿಳೆಯ ತೊಡೆಗೆ ಕಟ್ಟಲಾಗುತ್ತಿತ್ತು. ಇದರ ಪರಿಣಾಮ ಏನೆಂದು ಖಂಡಿತವಾಗಿಯೂ ತಿಳಿದಿಲ್ಲ. ಆದರೆ ತೊಡೆಗೆ ಮುಂಗುಸಿ ವೃಷಣ ಕಟ್ಟಿರುವಂತಹ ಮಹಿಳೆಯೊಂದಿಗೆ ಪುರುಷನು ಖಂಡಿತವಾಗಿಯೂ ಸರಿಯಾಗಿ ಸುಖ ಪಡೆಯಲು ಸಾಧ್ಯವಿಲ್ಲ.

ಲಿಂಬೆ
ಮಹಿಳೆಯ ಯೋನಿಯೊಳಗಡೆ ಲಿಂಬೆ ತುರುಕಿಸುವ ಕಾರಣದಿಂದಾಗಿ ಗರ್ಭಧಾರಣೆ ತಡೆಯಬಹುದು ಎಂದು ಹಿಂದೆ ನಂಬಿದ್ದರು. ಲಿಂಬೆಯಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ವೀರ್ಯವನ್ನು ಕೊಲ್ಲುವುದು ಎಂದು ನಂಬಲಾಗಿತ್ತು. ಮಹಿಳೆಯರು ತಮ್ಮ ದೇಹದೊಳಗೆ ವೀರ್ಯ ಹೋಗದಂತೆ ತಡೆಯಲು ಲಿಂಬೆ ಬಟ್ಟೆಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗಿದೆ.

ಮೊಸಳೆ ಮಲ!
ಪುರಾತನ ಈಜಿಪ್ಟ್ ನಲ್ಲಿ ಮಹಿಳೆಯರು ಮೊಸಲೆ ಮಲ ಮತ್ತು ಜೇನುತುಪ್ಪವನ್ನು ಬೆರೆಸಿ ಅದರ ಪೇಸ್ಟ್ ಮಾಡಿಕೊಂಡು ತಮ್ಮ ಯೋನಿಗೆ ಹಚ್ಚಿಕೊಳ್ಳುತ್ತಿದ್ದರು. ಇದರಿಂದ ವೀರ್ಯವು ಒಳಗೆ ಹೋಗುತ್ತಿರಲಿಲ್ಲವಂತೆ. ದಾಖಲೆಗಳ ಪ್ರಕಾರ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಹೇಳಲಾಗಿದೆ.

ಆಲಿವ್ ತೈಲ
ಗ್ರೀಕ್ ನಲ್ಲಿನ ಜನರ ನಂಬಿಕೆಯ ಪ್ರಕಾರ ಆಲಿವ್ ತೈಲವನ್ನು ಸೀಡರ್ ತೈಲದೊಂದಿಗೆ ಬೆರೆಸಿಕೊಂಡಾಗ ಇದು ವೀರ್ಯವನ್ನು ಕೊಲ್ಲುವುದು. ಇದು ವೀರ್ಯದ ಚಲನಶೀಲತೆ ಕಡಿಮೆ ಮಾಡುವುದು ಮತ್ತು ಮಹಿಳೆಯರಿಗೆ ಸ್ಖಲನದ ಬಳಿಕ ಯೋನಿಯನ್ನು ತೊಳೆದುಕೊಳ್ಳಲು ಸಮಯಾವಕಾಶ ನೀಡುವುದು ಎಂದು ನಂಬಲಾಗಿತ್ತು.

ಲೆಡ್ ಬೆರೆಸಿದ ನೀರು
ಗರ್ಭಧಾರಣೆ ತಡೆಯಲು ಚೀನಾ ಹಾಗೂ ಗ್ರೀಕ್ ನಲ್ಲಿ ಹೆಚ್ಚಿನ ಮಹಿಳೆಯರು ಲೆಡ್ ಬೆರೆಸಿದ ನೀರನ್ನು ಸೇವಿಸುತ್ತಿದ್ದರು. ಲೆಡ್ ನಿಂದಾಗಿ ಮಹಿಳೆಯರಲ್ಲಿ ಫಲವತ್ತತೆ ಕಡಿಮೆಯಾಗುವುದು. ಆದರೆ ಲೆಡ್ ನಿಂದಾಗಿ ಇತರ ಹಲವಾರು ರೀತಿಯ ಅಡ್ಡಪರಿಣಾಮಗಳು ಇವೆ.

ಪಾದರಸ
ಲೆಡ್ ನಂತೆ ಚೀನಾದಲ್ಲಿನ ಮಹಿಳೆಯರು ಪಾದರಸವನ್ನು ನೇರವಾಗಿ ಸೇವಿಸುತ್ತಿದ್ದರು. ಆದರೆ ಪಾದರಸ ಸೇವನೆ ಮಾಡುವುದರಿಂದಾಗಿ ಕಿಡ್ನಿ ವೈಫಲ್ಯ ಅಥವಾ ಮೆದುಳಿಗೆ ಹಾನಿಯಾಗಬಹುದು.

ಈ ಮೇಲಿನ ಯಾವುದನ್ನೂ ಪ್ರಯತ್ನಿಸಬೇಡಿ
ಈ ಮೇಲಿನ ಅವೈಜ್ಞಾನಿಕ ವಿಧಾನಗಳು ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದು ನಮಗೆ ಕೂಡ ತಿಳಿದಿಲ್ಲ. ಇದರಿಂದ ನೀವು ಇದನ್ನು ಪ್ರಯತ್ನಿಸಲು ಹೋಗಬೇಡಿ. ನೀವು ಇದನ್ನು ಓದಿದ್ದೀರಿ ಎನ್ನುವುದನ್ನು ಮರೆತುಬಿಟ್ಟು, ಮುಂದೆ ಸಾಗಿ. ಇಂದಿನ ಆಧುನಿಕ ಯುಗದಲ್ಲಿ ಬೇಕಾದಷ್ಟು ಸುರಕ್ಷಿತ ಗರ್ಭ ನಿರೋಧಕಗಳಿವೆ. ಅದನ್ನು ಬಳಸಿಕೊಳ್ಳಿ.



Click it and Unblock the Notifications