Just In
Don't Miss
- News
ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...
ನಿಮ್ಮ ಹೆಸರು ಎಸ್ ಅಕ್ಷರದಿಂದ ಆರಂಭವಾಗುತ್ತಿದೆಯಾ? ಹೌದು ಎಂದಾದರೆ, ನಿಮ್ಮ ವ್ಯಕ್ತಿತ್ವದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಈ ಜನರು 1 ಅಂಕೆಗೆ ಸಂಬಂಧಪಟ್ಟವರಾಗಿರುವರು ಎಂದು ಅಂಕಿಶಾಸ್ತ್ರವು ಹೇಳುತ್ತದೆ. ಇದರಿಂದ ಎ ಅಕ್ಷರೊಂದಿಗೆ ಆರಂಭವಾಗುವಂತಹ ಹೆಸರಿನವರ ಕೆಲವೊಂದು ಗುಣನಡತೆಗಳು ಇವರಿಗೆ ಹೋಲಿಕೆಯಾಗಬಹುದು.

ಹೆಸರು ಕೂಡ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುವುದು
ಎನ್ನಲಾಗುತ್ತದೆ. ವೃತ್ತಿ, ಪ್ರೇಮಜೀವನ, ವೈವಾಹಿಕ ಜೀವನ, ಹವ್ಯಾಸಗಳು ಮತ್ತು ವ್ಯಕ್ತಿಗಳು ಇತ್ಯಾದಿ. ಎಸ್ ಅಕ್ಷರದಿಂದ ಆರಂಭವಾಗುವ ವ್ಯಕ್ತಿಯ ವ್ಯಕ್ತಿತ್ವವು ಹೇಗೆ ಇರುವುದು ಎಂದು ತಿಳಿಯುವ.

ಸಮಾಜಮುಖಿ ಮತ್ತು ಸ್ವಾಗತಿಸುವ
ಎಸ್ ಅಕ್ಷರದಿಂದ ಹೆಸರು ಆರಂಭವಾಗುವಂತಹ ಜನರು ಸ್ವಭಾವದಲ್ಲಿ ತುಂಬಾ ಸಮಾಜಮುಖಿಯಾಗಿರುವರು. ಕೆಟ್ಟ ಮೂಡ್ ಅಥವಾ ಹವಾಮಾನದಿಂದಾಗಿ ಇಂತಹವರು ಯಾವುದೇ ಪಾರ್ಟಿ ಅಥವಾ ಕಾರ್ಯಕ್ರಮಕ್ಕೆ ಗೈರು ಹಾಜರಾಗುವುದು ಕಡಿಮೆ. ಹೊಸ ಜನರನ್ನು ಭೇಟಿಯಾಗುವುದು ಅಥವಾ ಹೊಸ ಪ್ರದೇಶಗಳಿಗೆ ಭೇಟಿ ನೀಡುವುದರಿಂದ ಇವರು ತುಂಬಾ ರಿಚಾರ್ಜ್ ಆಗುವರು. ಇವರು ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುವರು.
Most Read: ಈ 4 ರಾಶಿಚಕ್ರದವರಿಗೆ ಮೂಗಿನ ಮೇಲೆ ಸಿಟ್ಟು-ಇವರ ಕೋಪವನ್ನು ನಿಯಂತ್ರಿಸುವುದೇ ಕಷ್ಟ!

ಗಮನ ಸೆಳೆಯುವ ವರ್ಚಸ್ವಿ
ಈ ಜನರು ಯಾವಾಗಲೂ ಆಕರ್ಷಣೆಯಲ್ಲಿರಬೇಕೆಂದು ಬಯಸುವರು. ಆದರೆ ಇವರನ್ನು ಗಮನಿಸುವಂತೆ ಮಾಡುವುದು ದೊಡ್ಡ ವಿಚಾರವೇನಲ್ಲ. ಇವರ ಸುಂದರ ನೋಟ ಅಥವಾ ಆಕರ್ಷಕ ವ್ಯಕ್ತಿತ್ವದಿಂದಾಗಿ ಇವರು ಎಲ್ಲರ ಗಮನಸೆಳೆಯುವರು. ಇವರ ಒಳ್ಳೆಯ ಮನಸ್ಸಿನಿಂದಾಗಿ ಜನರು ತುಂಬಾ ಇಷ್ಟಪಡುವರು.

ಮಹತ್ವಾಕಾಂಕ್ಷಿ ಕಠಿಣ ಪರಿಶ್ರಮಿ
ಇವರು ಕೆಲಸವನ್ನು ಗಂಭೀರವಾಗಿ ಪರಿಗಣಿಸುವರು ಮತ್ತು ದೊಡ್ಡ ಗುರಿಯನ್ನು ಇಟ್ಟುಕೊಳ್ಳುವರು. ಇವರು ತಮ್ಮ ಮಿತಿ ಹಾಗೂ ಆರಾಮ ವಲಯದಿಂದ ಹೊರಗಡೆ ಹೋಗಿ ಕನಸನ್ನು ನನಸು ಮಾಡುವರು. ಬೆಳಗ್ಗೆ ಬೇಗ ಎದ್ದು ಅಥವಾ ತಡರಾತ್ರಿಯವರೆಗೂ ಕೆಲಸ ಮಾಡಿಕೊಂಡು ಇವರು ತಮ್ಮ ಹೆಚ್ಚಿನ ಶ್ರಮ ವಹಿಸಿ, ಗುರಿ ಸಾಧಿಸುವರು.

ಪ್ರಾಮಾಣಿಕವಾಗಿರುವ ವಾಗ್ಮಿ
ಇವರು ಒಳ್ಳೆಯ ವಾಗ್ಮಿಯಾಗಿರುವುದು ಎಲ್ಲರ ಗಮನಸೆಳೆಯುವುದು. ಮಾತುಗಾರಿಕೆಯು ಇವರಲ್ಲಿ ಆತ್ಮವಿಶ್ವಾಸ ತುಂಬುವುದು. ಭಾಷೆಯ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದೆ ಇದ್ದರೂ ಆಯ್ಕೆಯ ಶಬ್ಧಗಳೊಂದಿಗೆ ತಮ್ಮ ಅಭಿಪ್ರಾಯ ಮಂಡಿಸಿ ಗಮನಸೆಳೆಯುವರು. ಇವರು ಪ್ರಾಮಾಣಿಕತೆಯು ಮಾತಿನಲ್ಲಿ ಎದ್ದು ಕಾಣುವುದು. ಇದರಿಂದ ಹೆಚ್ಚಿನ ಪ್ರಶಂಸೆಗೆ ಒಳಗಾಗುವರು.
Most Read: ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್-ಕೂದಲಿನ ಎಲ್ಲಾ ಸಮಸ್ಯೆಗೆ ತ್ವರಿತ ಪರಿಹಾರ

ಪ್ರತಿಯೊಂದನ್ನು ವೇಗವಾಗಿ ಕಲಿಯುವರು
ಯಾವುದೇ ಕಠಿಣ ಕ್ರೀಡೆಯಾಗಿರಲಿ, ಇತಿಹಾಸದ ಪಾಠವಾಗಿರಲಿ ಅಥವಾ ಕ್ಲಿಷ್ಟಕರವಾದ ಗಣಿತವಾಗಿರಲಿ, ಇವರು ಎಲ್ಲವನ್ನು ಮೊದಲೇ ತಿಳಿದಿರುವಂತೆ ಸುಲಭವಾಗಿ ಕರಗತ ಮಾಡಿಕೊಳ್ಳುವರು. ಇವರ ಆಸಕ್ತಿಯ ಕೊರತೆಯು ಮಾತ್ರ ಸ್ವಲ್ಪ ಹಿನ್ನಡೆಯಾಗುವುದು. ಆಸಕ್ತಿ ತೋರಿಸಿದರೆ ಸಾಮರ್ಥ್ಯ ಮೈಗೂಡಿಸಿಕೊಳ್ಳುವರು. ಇವರು ತುಂಬಾ ವೇಗವಾಗಿ ಕಲಿಯುವವರು.