For Quick Alerts
ALLOW NOTIFICATIONS  
For Daily Alerts

ಈ 5 ರಾಶಿಚಕ್ರದವರು ಎರಡು ಬಗೆಯ ಚಿಂತನೆ ಕೈಗೊಳ್ಳುತ್ತಾರೆ, ಹಾಗೂ ತುಂಬಾನೇ ಸ್ವಾರ್ಥಿಗಳಾಗಿರುತ್ತಾರೆ!

|

ಪ್ರತಿಯೊಂದು ರಾಶಿಚಕ್ರವು ವಿಶೇಷ ಗುಣಲಕ್ಷಣವನ್ನು ಒಳಗೊಂಡಿರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದಿರುವ ವಿಚಾರ. ಅದು ನಂಬಲಸಾಧ್ಯವಾದ ಧನಾತ್ಮಕ ಅಥವಾ ಋಣಾತ್ಮಕ ವಿಚಾರಗಳೇ ಆಗಿರಬಹುದು. ಕೆಲವು ಧನಾತ್ಮಕ ಗುಣಗಳಿಂದ ವ್ಯಕ್ತಿ ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ಉತ್ತಮ ಹೆಸರನ್ನು ಗಳಿಸಬಹುದು. ಅದೇ ಋಣಾತ್ಮಕ ಸ್ವಭಾವದಿಂದ ಕೆಟ್ಟ ಅಭಿಪ್ರಾಯ ಸೃಷ್ಟಿಯಾಗುವಂತೆ ಸಹ ಮಾಡಬಹುದು. ಹಾಗಾಗಿ ವ್ಯಕ್ತಿ ಯಾವ ಸ್ವಭಾವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾನೆ ಎನ್ನುವುದು ಬಹು ಪ್ರಮುಖವಾದ ಸಂಗತಿಯಾಗಿರುತ್ತದೆ.

ಕೆಲವು ವ್ಯಕ್ತಿಗಳು ಸಾಕಷ್ಟು ಧನಾತ್ಮಕ ವರ್ತನೆ ಹಾಗೂ ಸ್ವಭಾವವನ್ನು ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಅವರು ತೆಗೆದುಕೊಳ್ಳುವ ನಿರ್ಧಾರ ಅಥವಾ ತೋರುವ ವರ್ತನೆಗಳು ಸುತ್ತಲಿನ ವ್ಯಕ್ತಿಗಳಿಗೆ ನೋವನ್ನುಂಟುಮಾಡಬಹುದು. ಅವರಿಂದಾಗುವ ನೋವಿನ ಬಗ್ಗೆ ಅಥವಾ ಇತರರಿಗೆ ಉಂಟಾದ ಬೇಸರದ ಸಂಗತಿಯ ಕುರಿತು ಯಾವುದೇ ರೀತಿಯ ಬೇಸರಕ್ಕೆ ಒಳಗಾಗುವುದಿಲ್ಲ. ತಾವು ಕೈಗೊಳ್ಳುವ ಕಾರ್ಯದಿಂದ ಅಥವಾ ನಿರ್ಧಾರಗಳಿಂದ ಇತರರ ಮೇಲೆ ನೋವುಂಟುಮಾಡಬಹುದು ಎನ್ನುವ ಯಾವುದೇ ಚಿಂತನೆಗಳನ್ನು ಸಹ ಕೈಗೊಳ್ಳುವುದಿಲ್ಲ. ಅವರ ಅವಶ್ಯಕತೆ ಹಾಗೂ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುವರು.

5 Zodiac Signs Most Likely To Double Cross You

ವ್ಯಕ್ತಿಯ ಸ್ವಭಾವದಲ್ಲಿ ತೋರುವ ಗುಣಲಕ್ಷಣಗಳು ಅವರು ಹುಟ್ಟಿ ಬೆಳೆದ ಪರಿಸರವನ್ನು ಅವಲಂಬಿಸಿರುತ್ತದೆ. ಹಾಗೆಯೇ ಅವರ ಮೇಲೆ ಸಾಕಷ್ಟು ಗ್ರಹಗತಿಗಳು ಹಾಗೂ ರಾಶಿಚಕ್ರದ ಪ್ರಭಾವ ಇರುತ್ತದೆ. ಹಾಗಾಗಿ ಕೆಲವು ರಾಶಿಚಕ್ರದವರು ತಮ್ಮ ಚಿಂತನೆಗಳಲ್ಲಿ ಭಿನ್ನತೆಯನ್ನು ಹೊಂದಿರುತ್ತಾರೆ. ಅನುಕೂಲಕ್ಕೆ ತಕ್ಕಂತೆ ನಿರ್ಧಾರಗಳನ್ನು ಬದಲಿಸಿಕೊಳ್ಳಬಹುದು. ಹಾಗಾದರೆ ಆ ರಾಶಿಚಕ್ರದವರು ಯಾರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವಿರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಈ ರಾಶಿಯವರು ತಮಗೆ ಬೇಕಾದದನ್ನು ಪಡೆದುಕೊಳ್ಳಲು ಸಾಕಷ್ಟು ಕಷ್ಟಪಡುತ್ತಾರೆ. ಅದೆಷ್ಟೇ ಕಷ್ಟವಾದರೂ ಅದನ್ನು ನಿರ್ವಹಿಸಲು ಮುಂದಾಗುವರು. ಕೆಲವೊಮ್ಮೆ ಈ ವಿಚಾರವಾಗಿಯೇ ಸ್ವಯಂ ಕೇಂದ್ರೀಕೃತರಾಗಿ ಅತಿರೇಕಕ್ಕೆ ಹೋಗುತ್ತಾರೆ. ಅದು ಜನರಿಗೆ ತಪ್ಪಾಗಿ ಕಾಣಬಹುದು. ಇವರ ಮುಖ್ಯ ಉದ್ದೇಶವು ತಮ್ಮದೇ ಆದ ಅಗತ್ಯಗಳನ್ನು ಪಡೆದುಕೊಳ್ಳುವುದಾಗಿರುತ್ತದೆ.

Most Read: ಅಕ್ಟೋಬರ್ 23 ರಿಂದ 29 ರ ವರೆಗಿನ ವಾರ ಭವಿಷ್ಯ

ಮೇಷ

ಮೇಷ

ಇವರು ತಮಗೆ ಬೇಕಾದದ್ದನ್ನು ಪಡೆದುಕೊಳ್ಳಲು ಬೇರೆಯವರ ಭಾವನೆಗಳನ್ನು ನಿರ್ಲಕ್ಷಿಸಲು ತ್ವರಿತವಾಗಿರುತ್ತಾರೆ. ಹಾಗಾಗಿ ಇವರನ್ನು ತೀಕ್ಷ್ಣವಾದ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳಲ್ಲ ಎಂದು ಭಾವಿಸುವರು. ಅದೇ ಮೇಷ ರಾಶಿಯವರು ತಮ್ಮ ವರ್ತನೆಗಳಿಂದ ಇತರರಿಗೆ ನೋವುಂಟಾಗುವುದು ಎನ್ನುವುದನ್ನು ಅರಿತುಕೊಂಡರೆ ಅನುಭೂತಿ ಹಾಗೂ ಸಹಾನುಭೂತಿ ತೋರಲು ಕಲಿಯುವರು.

ಮಿಥುನ

ಮಿಥುನ

ಇವರು ಕೆಲವೊಮ್ಮೆ ನಂಬಿಕೆಗೆ ಅರ್ಹರಲ್ಲದವರಂತೆ ವರ್ತನೆ ತೋರಬಹುದು. ಕೆಲವು ಸಂದರ್ಭದಲ್ಲಿ ಕೊನೆಯ ಘಳಿಗೆಯಲ್ಲಿ ಕೆಟ್ಟ ವರ್ತನೆಯನ್ನು ತೋರಬಹುದು. ಹಾಗಾಗಿ ಇವರೊಂದು ಜೇನು ನೊಣದಂತೆ ಒಂದು ಹೂವಿನಿಂದ ಇನ್ನೊಂದು ಹೂವಿಗೆ ಹಾರುತ್ತಾರೆ. ಈ ಕಾರಣಗಳಿಂದಲೇ ಸ್ನೇಹಿತರು ಹಾಗೂ ಕುಟುಂಬದವರು ಅವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬಹುದು.

ಮಿಥುನ

ಮಿಥುನ

ಕೆಲವು ವರ್ತನೆಗಳಿಂದ ಇತರರಿಗೆ ಗಾಢವಾದ ಪ್ರೇರಣೆಯನ್ನು ನೀಡುವಂತಹ ವ್ಯಕ್ತಿಗಳಾಗ ಬಹುದು. ಇವರು ತಮ್ಮ ವರ್ತನೆಗಳಿಂದ ಇತರರಿಗೆ ಏನಾಗಬಹುದು ಎನ್ನುವುದು ಅರಿತಿರುತ್ತಾರೆ. ಆದರೆ ತಮ್ಮ ಆದ್ಯತೆಗಳಿಗೆ ಹೆಚ್ಚಿನ ಮಹತ್ವ ನೀಡುವುದರಿಂದ ಇತರರ ಅವಶ್ಯಕತೆಗಳನ್ನು ನಿರ್ಲಕ್ಷಿಸುವರು.

ವೃಶ್ಚಿಕ

ವೃಶ್ಚಿಕ

ಇವರು ಇತರರೊಂದಿಗೆ ಅಥವಾ ಜನರೊಂದಿಗೆ ತೆರೆದುಕೊಳ್ಳಲು ಕಷ್ಟಪಡುವರು. ಇವರು ಭಾವನಾತ್ಮಕವಾಗಿ ಸ್ವಲ್ಪ ದೂರ ಇರುವ ವ್ಯಕ್ತಿಗಳು ಎನ್ನಬಹುದು. ಇದು ಅವರನ್ನು ನಂಬಲು ಅರ್ಹರಲ್ಲ ಎನ್ನುವ ಭಾವನೆಗಳ ಅಲೆಯನ್ನು ಎಬ್ಬಿಸುವುದು.

Most Read: ಮದುವೆಯ ವಿಚಾರ: ರಾಶಿಚಕ್ರದ ಅನುಸಾರ ನಿಮ್ಮ ವೈವಾಹಿಕ ಭವಿಷ್ಯ ಹೇಗಿರುತ್ತದೆ ನೋಡಿ...

ವೃಶ್ಚಿಕ

ವೃಶ್ಚಿಕ

ಭಾವನಾತ್ಮಕ ವ್ಯಕ್ತಿಗಳಾದ ಇವರಲ್ಲಿ ಉತ್ತಮ ಭಾವನೆಗಳಿರುತ್ತವೆ. ಕೆಲವೊಮ್ಮೆ ಇವರು ಮಾಡುವ ಅರಿವಿಲ್ಲದ ಕೆಲಸ ಅಥವಾ ನಿರ್ಧಾರಗಳಿಂದ ಇತರರಿಗೆ ನೋವುಂಟುಮಾಡಬಹುದು. ಕಡಿಮೆ ಸ್ವಾರ್ಥ ಗುಣಗಳನ್ನು ಹೊಂದಿರುವ ಈ ವ್ಯಕ್ತಿಗಳು ಅನುಚಿತ ಕೆಲಸಗಳನ್ನು ಕೈಗೊಳ್ಳಬಹುದು.

ಕುಂಭ

ಕುಂಭ

ಈ ರಾಶಿಯವರು ಹೆಚ್ಚು ಸ್ವತಂತ್ರವಾಗಿರಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಸ್ವತಂತ್ರ ಚಿತ್ತದಿಂದ ಕೈಗೊಳ್ಳುವ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವರು. ಇವರು ಎಷ್ಟೇ ಸ್ವತಂತ್ರವಾದ ವರ್ತನೆ ತೋರಿದರೂ ಅವರ ನಿಯಂತ್ರಣದಲ್ಲಿ ಇರುತ್ತಾರೆ. ಇವರು ತಮಗೆ ಯಾರೂ ಕುಶಲತೆಯನ್ನು ಬಯಸುವುದಿಲ್ಲ ಎಂದು ತಿಳಿಯುವರು.

Most Read: ಎಲ್ಲಾ 12 ರಾಶಿಯವರ 'ಜೀವನದ ನಿಜವಾದ ಗುರಿ' ಇಲ್ಲಿದೆ ನೋಡಿ

ಕುಂಭ

ಕುಂಭ

ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಿರ್ವಹಿಸಲು ಬಯಸುವರು. ಇದು ಇತರರಿಗೆ ಕೊಂಚ ಪ್ರತ್ಯೇಕವಾದ ವರ್ತನೆ ಎಂದು ತೋರಬಹುದು. ಬದ್ಧತೆಯನ್ನು ಹೊಂದಿರುವ ಈ ವ್ಯಕ್ತಿಗಳು ಕೆಲವೊಮ್ಮೆ ಇತರರಿಗೆ ನಿರಾಸೆಯನ್ನು ಹುಟ್ಟಿಸಬಹುದು. ಬಹುತೇಕ ಸಂದರ್ಭದಲ್ಲಿ ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ವರ್ತಿಸುವುದರಿಂದ ಅದು ಇತರರಿಗೆ ಗೊಂದಲ ಹಾಗೂ ನೋವುಂಟಾಗುವ ಸಾಧ್ಯತೆಗಳಿರುತ್ತವೆ. ಅವುಗಳ ಕುರಿತು ಯಾವುದೇ ಚಿಂತನೆ ನಡೆಸುವುದಿಲ್ಲ ಎನ್ನಲಾಗುವುದು.

ಮೀನ

ಮೀನ

ಈ ರಾಶಿಯವರ ಚಿಂತನೆಗಳು ಯಾವಾಗಲೂ ಮೋಡಗಳಂತೆ ಚಲಿಸುತ್ತಲಿರುತ್ತವೆ ಎನ್ನಲಾಗುವುದು. ಆದರೆ ಅವರಲ್ಲಿ ಸಾಕಷ್ಟು ಹಾಸ್ಯಾಸ್ಪದ ಹಾಗೂ ನಾಟಕೀಯ ವರ್ತನೆಗಳು ಇರುತ್ತವೆ ಎನ್ನಲಾಗುವುದು. ಇವರೊಂದಿಗೆ ಡೇಟಿಂಗ್‍ಗೆ ಹೋದರೆ ಅವರು ಡೇಟಿಂಗ್ ಬಂದವರ ಬಗ್ಗೆ ಮರೆಯಬಹುದು. ತಮ್ಮ ಸ್ವಾರ್ಥ ಗುಣಗಳಿಗೆ ಹೆಚ್ಚಿನ ಆದ್ಯತೆ ನೀಡುಯವುದರಿಂದ ಇತರರಿಗೆ ಅಷ್ಟಾಗಿ ಮಹತ್ವ ನೀಡುವುದಿಲ್ಲ ಎಂದು ಹೇಳಲಾಗುವುದು. ಆತ್ಮೀಯ ಗೆಳೆಯರಾಗಿದ್ದರೂ ಕೆಲವೊಮ್ಮೆ ನಕಾರಾತ್ಮಕ ವರ್ತನೆಯನ್ನು ತೋರುವರು. ಇದರಿಂದ ಅವರಿಗೆ ಯಾವುದೇ ಬೇಸರದ ಭಾವನೆ ಕಾಡದು ಎನ್ನಲಾಗುವುದು.

English summary

5 Zodiac Signs Most Likely To Double Cross You

Each and every zodiac sign has personality traits that can be incredibly positive and beneficial, such as an ingrained hardworking nature, or a tendency to be loyal. But each sign can also have a few traits that make their lives more difficult, as is the case with the least trustworthy zodiac signs. These zodiac signs — the ones that may have a habit of flaking on plans, manipulating others, and so on — are the way they are for a variety of reasons. And many do these things without even realizing it.
X
Desktop Bottom Promotion