Latest Updates
-
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ!
ಈ ಮಹಿಳೆಗೆ 37ರ ಹರೆಯ, ಅಚ್ಚರಿಯಂದ್ರೆ ಆಕೆ ಈಗ 38 ಮಕ್ಕಳ ತಾಯಿ!
ಮಹಿಳೆಯರು ಹೆಚ್ಚೆಂದರೆ ಹೆಚ್ಚು ಎಷ್ಟು ಮಕ್ಕಳಿಗೆ ಜನ್ಮ ನೀಡಬಹುದು ಎಂದು ಕೇಳಿದರೆ ಹಲವಾರು ಉತ್ತರಗಳು ಬರಬಹುದು. ಆದರೆ ಉಗಾಂಡದ ಮಹಿಳೆಯೊಬ್ಬರು ಸುಮಾರು 38 ಮಕ್ಕಳಿಗೆ ಜನ್ಮ ನೀಡಿದ್ದಾರಂತೆ! ಕಂಪಲದ ಹೊರವಲಯದ ಮುಕೊನೊ ಜಿಲ್ಲೆಯ ಕಬಿಂಬಿರಿ ಗ್ರಾಮದ 37ರ ಹರೆಯದ ಉಂಗಾಡದ ಮಹಿಳೆ ಮರಿಯಮ್ ನಬಟನ್ಜಿಯ 38 ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ಮಕ್ಕಳಲ್ಲಿ ಆರು ಜತೆ ಅವಳಿಗಳು, ನಾಲ್ಕು ತ್ರಿವಳಿಗಳು, ಮೂರು ಸಲ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎಲ್ಲಾ ಮಕ್ಕಳಿಗೂ ಸಾಮಾನ್ಯ ಹೆರಿಗೆ ಮೂಲಕವೇ ಜನ್ಮ ನೀಡಿರುವುದು ವಿಶೇಷ. 12ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಈ ಮಹಿಳೆಯು ತನ್ನ ಆರನೇ ಹೆರಿಗೆ ವೇಳೆ ಒಟ್ಟು 18 ಮಕ್ಕಳಿಗೆ ಜನ್ಮ ನೀಡಿದ್ದರು. ಇದರ ಬಳಿಕ ಮತ್ತೆ ಆರು ಮಕ್ಕಳನ್ನು ಹೆರಬೇಕೆಂದು ಆಕೆ ಬಯಸಿದ್ದರು...ಮುಂದೆ ಓದಿ

40ರ ಹರೆಯದ ವ್ಯಕ್ತಿಯೊಂದಿಗೆ ಮದುವೆ
ಮರಿಯಮ್ ಹೇಳುವ ಪ್ರಕಾರ 1993ರಲ್ಲಿ ಆಕೆಗೆ ತನ್ನ 12ನೇ ವಯಸ್ಸಿನಲ್ಲಿ ತಂದೆಯ ವಯಸ್ಸಿನ ಅಂದರೆ 40ರ ಹರೆಯದ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈಗ ದಂಪತಿಗೆ ಒಟ್ಟು 38 ಮಕ್ಕಳಿದ್ದಾರೆ ಎಂದು ಉಗಾಂಡದ ಡೈಲಿ ಮೊನಿಟರ್ ವರದಿ ಮಾಡಿದೆ.

ಸಣ್ಣ ವಯಸ್ಸಿನಲ್ಲಿಯೇ ಮದುವೆ
ಉಗಾಂಡದಲ್ಲಿ ಗಂಡು ಹಾಗೂ ಹೆಣ್ಣಿಗೆ ಮದುವೆ ವಯಸ್ಸು 18 ವರ್ಷ. ಆದರೆ ಪೋಷಕರ ಒಪ್ಪಿಗೆಯಿದ್ದರೆ 16ನೇ ವಯಸ್ಸಿನಲ್ಲಿ ಹುಡುಗಿ ಮದುವೆಯಾಗಬಹುದು. ಉಗಾಂಡದಲ್ಲಿನ ಕಡುಬಡತನ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಕೊರತೆ, ಸಾಂಪ್ರದಾಯಿಕ ಮತ್ತು ಸಾಮಾಜಿಕ ಮೌಲ್ಯಗಳು ಹೆಣ್ಣು ಮಕ್ಕಳು ಸಣ್ಣ ವಯಸ್ಸಿನಲ್ಲೇ ಮದುವೆಯಾಗಿ ಪತಿ ಹಾಗೂ ತಾಯಿಯ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ.

ಉಗಾಂಡದಲ್ಲಿ ಬಾಲ್ಯದಲ್ಲೇ ವಿವಾಹ
ಉಗಾಂಡದಲ್ಲಿ ಪೋಷಕರ ಒತ್ತಡದಿಂದ ಸಣ್ಣ ವಯಸ್ಸಿನಲ್ಲೇ ಮದುವೆಯಾದವರಲ್ಲಿ ಮರಿಯಮ್ ಕೂಡ ಒಬ್ಬರಾಗಿದ್ದಾರೆ. ಉಗಾಂಡದಲ್ಲಿ ಬಾಲ್ಯದಲ್ಲೇ ವಿವಾಹ, ಹದಿಹರೆಯಲ್ಲಿ ಗರ್ಭಧಾರಣೆ ಮತ್ತು ಸಣ್ಣ ಮಕ್ಕಳಿಗೆ ಮದುವೆ ಮಾಡಿಕೊಡುವುದು ವಿಶ್ವ ಮಟ್ಟದಲ್ಲೇ ಅಧಿಕವಾಗಿದೆ.

ನನಗೆ ಮದುವೆಯ ವಿಷಯ ಗೊತ್ತೇ ಇರಲಿಲ್ಲ...
``ನನಗೆ ಮದುವೆಯಾಗುತ್ತಿದೆಯೆಂದೇ ಗೊತ್ತಿರಲಿಲ್ಲ. ಜನರು ಮನೆಗೆ ಬಂದು ತಂದೆಗೆ ಹಲವಾರು ವಸ್ತುಗಳನ್ನು ತಂದರು. ಅವರು ಅಲ್ಲಿಂದ ನಿರ್ಗಮಿಸುವಾಗ ನನ್ನ ಆಂಟಿಯ ಜತೆಗೆ ನಾನು ಕೂಡ ಹೋಗುತ್ತಿದ್ದೇನೆಂದು ಭಾವಿಸಿದೆ. ಆದರೆ ಅಲ್ಲಿ ಹೋದ ಬಳಿಕ ವ್ಯಕ್ತಿಯೊಬ್ಬನಿಗೆ ನನ್ನನ್ನು ನೀಡಿದರು'' ಎಂದು ಡೈಲಿ ಮೊನಿಟರ್ ಗೆ ಮರಿಯಮ್ ಹೇಳಿದ್ದಾರೆ.

ಒಂದೇ ವರ್ಷದಲ್ಲಿ ಅವಳಿಗಳಿಗೆ ಜನ್ಮ ನೀಡಿದಳು
13ನೇ ವಯಸ್ಸಿನಲ್ಲಿ ಮದುವೆಯಾದ ಒಂದೇ ವರ್ಷದಲ್ಲಿ ಅವಳಿಗಳಿಗೆ ಜನ್ಮ ನೀಡಿದ ಆಕೆ ಎರಡು ವರ್ಷ ಬಳಿಕ ತ್ರಿವಳಿಗಳಿಗೆ ಜನ್ಮ ನೀಡಿದರು. ಇದರ ಒಂದು ವರ್ಷ ಮತ್ತು ಏಳು ತಿಂಗಳ ಬಳಿಕ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು.

ತನ್ನ ಗ್ರಾಮದಲ್ಲಿ ಈಗ ತುಂಬಾನೇ ಜನಪ್ರಿಯವಾಗಿಬಿಟ್ಟಳು
ಈಗ ಆಕೆ ತನ್ನ ಗ್ರಾಮದಲ್ಲಿ ತುಂಬಾ ಜನಪ್ರಿಯಳಾಗಿದ್ದು, ಅವರನ್ನು ನಬೊಂಗೊ ಮುಝಾಲಾ ಬನಾ(ಅವಳಿಗಳ ತಾಯಿ ನಾಲ್ಕು ಮಕ್ಕಳನ್ನು ಹೆರುವವಳು) ಎಂದು ಕರೆಯಲಾಗುತ್ತಿದೆ. ತನ್ನ ಮಕ್ಕಳಲ್ಲಿ ದೊಡ್ಡವಳಿಗೆ 23 ವರ್ಷ ಮತ್ತು ಕಿರಿಯ ಮಗುವಿಗೆ ನಾಲ್ಕು ತಿಂಗಳು ಮಾತ್ರ. ಅವಳಿ, ತ್ರಿವಳಿ ಮತ್ತು ನಾಲ್ಕು ಮಕ್ಕಳಿಗೆ ಜಮ್ಮ ನೀಡುವುದು ಅನುವಂಶೀಯವಾಗಿ ಬಂದಿದೆ. ನನ್ನ ತಂದೆಗೆ ಕೂಡ ಹಲವಾರು ಮಕ್ಕಳಿದ್ದ ಕಾರಣದಿಂದ ನನಗೆ ಭೀತಿಯಾಗಲಿಲ್ಲ ಎನ್ನುತ್ತಾರೆ ಮರಿಯಮ್.

ನನ್ನ ತಂದೆಗೆ 45 ಮಕ್ಕಳಿದ್ದರು!
"ನನ್ನ ತಂದೆಗೆ ಬೇರೆಬೇರೆ ಪತ್ನಿಯರಿಂದ ಸುಮಾರು 45 ಮಕ್ಕಳಿದ್ದರು. ಇವೆಲ್ಲವೂ ಅವಳಿ, ತ್ರಿವಳಿ ಹಾಗೂ ನಾಲ್ಕು ಮಕ್ಕಳು(ಒಂದೇ ಸಲ) ಬಂದಿದೆ'' ಎಂದು ಆಕೆ ತಿಳಿಸಿರುವರು.

ಕೀನ್ಯಾದ ಸ್ತ್ರೀರೋಗತಜ್ಞ ಪ್ರಕಾರ
ಕೀನ್ಯಾದ ಸ್ತ್ರೀರೋಗತಜ್ಞ ಡಾ.ಅಗ್ಗ್ರೆ ಅಕುಲಾ ಅವರು ಹೇಳುವ ಪ್ರಕಾರ ಮರಿಯಮ್ ರಂತೆ ಮಕ್ಕಳನ್ನು ಹೆರುವುದು ಅತಿಯಾಗಿ ಅಂಡೋತ್ಪತ್ತಿ ಮಾಡುವುದು(ಒಂದು ಆವರ್ತನದಲ್ಲಿ) ಅನುವಂಶೀಯವಾಗಿ ಬಂದಿರುವುದು. ಇದರಿಂದಾಗಿ ಅವಳಿ, ತ್ರಿವಳಿ ಹಾಗೂ ನಾಲ್ಕು ಮಕ್ಕಳಿಗೆ ಜನ್ಮ ನೀಡುವರು.

25 ವರ್ಷಗಳ ಹಿಂಸೆಯ ವೈವಾಹಿಕ ಜೀವನ
ಮದುವೆಯಾದ ಬಳಿಕ ತನ್ನನ್ನು ಹೇಗೆ ಹಿಂಸಿಸಲಾಗಿದೆ ಎಂದು ಮರಿಯಮ್ ಅವರು ಇಲ್ಲಿ ಹೇಳಿಕೊಂಡಿದ್ದಾರೆ.
ನನ್ನ ಪತಿ ಬಹುಪತ್ನಿತ್ವ ಹೊಂದಿದೆ. ಹಿಂದಿನ ಪತ್ನಿಯರ ಮಕ್ಕಳನ್ನು ಕೂಡ ನಾನೇ ನೋಡಿಕೊಳ್ಳಬೇಕಿತ್ತು. ಯಾಕೆಂದರೆ ಅವರ ತಾಯಂದಿರು ದೂರವಾಗಿದ್ದರು. ಆತ ತುಂಬಾ ಹಿಂಸೆ ನೀಡುತ್ತಲಿದ್ದ ಮತ್ತು ಸಿಕ್ಕಿದ ಪ್ರತಿಯೊಂದು ಅವಕಾಶದಲ್ಲೂ ಆತ ನನಗೆ ತುಂಬಾ ಹೊಡೆಯುತ್ತಿದ್ದ. ನಾನು ಏನಾದರೂ ಸಲಹೆ ನೀಡಿದರೂ ಆತ ಹಿಡಿದುಕೊಂಡು ಬಡಿಯುತ್ತಿದ್ದ ಎಂದು ಅವರು ಹೇಳಿದ್ದಾರೆ.

ಎಷ್ಟೇ ಕಷ್ಟ ಇದ್ದರೂ ಮಕ್ಕಳಿಗೆ ಚೆನ್ನಾಗಿ ಶಿಕ್ಷಣ ಕೊಡುವ ಆಸೆ ಇದೆಯಂತೆ
ತನ್ನ ವೈವಾಹಿಕ ಜೀವನದಲ್ಲಿ ತುಂಬಾ ಹಿಂಸೆ ಹಾಗೂ ಸಮಸ್ಯೆಗಳನ್ನು ಎದುರಿಸಿದರೂ 38 ಮಕ್ಕಳ ತಾಯಿ ತನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕೆಂದು ಕನಸು ಕಂಡಿದ್ದಾರೆ. ದೊಡ್ಡ ಮಗಳಿಗೆ ತುಂಬಾ ಕಷ್ಟಪಟ್ಟು ಶಿಕ್ಷಣ ನೀಡಿ ನರ್ಸಿಂಗ್ ಸರ್ಟಿಫಿಕೇಟ್ ಪಡೆಯುವಂತೆ ಮಾಡಿದ್ದಾರೆ.



Click it and Unblock the Notifications












