Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
2018 ರ ಸಮೀಕ್ಷೆಯ ಪ್ರಕಾರ ಈ ದೇಶಗಳು ಮಹಿಳೆಯರಿಗೆ ಹೆಚ್ಚು ಅಪಾಯಕಾರಿ
ಮಧ್ಯರಾತ್ರಿ ವೇಳೆ ಮಹಿಳೆಯೊಬ್ಬಳು ಏಕಾಂಗಿಯಾಗಿ ರಸ್ತೆ ಮೇಲೆ ನಡೆದಾಡುವಂತಾದರೆ ಆಗ ರಾಮರಾಜ್ಯವಾಗುದು ಎಂದು ಮಹಾತ್ಮ ಗಾಂಧಿ ಅವರು ಹೇಳಿದ್ದರು. ಭಾರತ ವಿಚಾರದಲ್ಲಿ ಅವರು ಈ ವಿಷಯವನ್ನು ಹೇಳಿದ್ದರು. ಆದರೆ ಇದು ಎಲ್ಲಾ ರಾಷ್ಟ್ರಗಳಿಗೂ ಅನ್ವಯವಾಗಲ್ಲ. ಯಾಕೆಂದರೆ ಕೆಲವೊಂದು ಕಾನೂನುಗಳು ಭಿನ್ನವಾಗಿರುವುದು. ಆದರೆ ಭಾರತಲ್ಲಿ ನಡೆಯುವಂತಹ ಮಹಿಳೆಯರ ಮೇಲೆ ದೌರ್ಜನ್ಯವನ್ನು ನೋಡಿದರೆ ಭಾರತ ಕೂಡ ಮಹಿಳೆಯರಿಗೆ ಸುರಕ್ಷಿತವಲ್ಲವೆಂದು ತಿಳಿಯುತ್ತದೆ. ಪದೇ ಪದೇ ನಾವು ಓದುತ್ತಿರುವಂತಹ ಕೆಲವೊಂದು ಆಘಾತಕಾರಿ ಸುದ್ದಿಗಳು ಇದಕ್ಕೆ ಪೂರಕವಾಗಿದೆ. ಪ್ರತೀ ವರ್ಷ ವಿಶ್ವಮಟ್ಟದಲ್ಲಿ ಸಮೀಕ್ಷೆ ಒಂದು ನಡೆಯುತ್ತದೆ. ಇದರಲ್ಲಿ ಮಹಿಳೆಯರಿಗೆ ಯಾವ ರಾಷ್ಟ್ರವು ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ. ಕೆಲವೊಂದು ರಾಷ್ಟ್ರಗಳು ಮಹಿಳೆಯರಿಗೆ ವಾಸಿಸಲು ತುಂಬಾ ಅಪಾಯಕಾರಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಅತ್ಯಾಚಾರದಂತಹ ಪ್ರಕರಣಗಳು ಪದೇ ಪದೇ ನಡೆಯುವುದೇ ಇದಕ್ಕೆ ಕಾರಣವಾಗಿದೆ.

ಥಾಮಸ್ ರಾಯಿಟರ್ಸ್ ಸಂಸ್ಥೆಯು ಈ ಸಮೀಕ್ಷೆ ನಡೆಸಿದೆ. 2018ರಲ್ಲಿ ಮಹಿಳೆಯರಿಗೆ ತುಂಬಾ ಅಪಾಯಕಾರಿಯಾಗಿರುವಂತಹ ದೇಶಗಳ ಪಟ್ಟಿಯನ್ನು ಅದು ಬಿಡುಗಡೆಗೊಳಿಸಿದೆ. ಈ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೊದಲ ಸ್ಥಾನದಲ್ಲಿ ತುಂಬಾ ಆಘಾತಕಾರಿ ಸಂಗತಿಯಾಗಿದೆ. ಇದರ ಬಗ್ಗೆ ನಾವು ತುಂಬಾ ಗಂಭೀರವಾಗಿ ಆಲೋಚನೆ ಮಾಡಬೇಕಾದ ಸಮಯ ಬಂದಿದೆ. ಅಮೆರಿಕಾವು ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.
ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಉಳಿದ 9 ಅಪಾಯಕಾರಿ ರಾಷ್ಟ್ರಗಳು ಯಾವುದು ಎಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳುವ.

1. ಭಾರತ
ಭಾರತದಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯದ ಅಪಾಯವನ್ನು ಅತಿಯಾಗಿ ಎದುರಿಸುವ ಮೊದಲ ರಾಷ್ಟ್ರವಾಗಿದೆ ಮತ್ತು ಇವರನ್ನು ಕೂಲಿಕಾರ್ಮಿಕರಾಗಿ ಬಳಸಿಕೊಳ್ಳಲಾಗುತ್ತದೆ. ಇದು ಒಂದು ರೀತಿಯಲ್ಲಿ ಜೀತಕ್ಕೆ ಸಮಾನವಾಗಿದೆ. ಮಹಿಳೆಯರ ಜನನೇಂದ್ರೀಯ ತಿರುಚುವಿಕೆ, ಬಾಲ್ಯ ವಿವಾಹ, ಲೈಂಗಿಕ ಕಿರುಕುಳ ಮತ್ತು ಇತರ ಕೆಲವೊಂದು ಕಾರಣಗಳಿಂದಾಗಿ ಭಾರತವು ವಿಶ್ವದಲ್ಲಿ ಮಹಿಳೆಯರಿಗೆ ತುಂಬಾ ಅಪಾಯಕಾರಿ ದೇಶಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಸಮೀಕ್ಷೆಯು ಹೇಳಿದೆ. ನಾಲ್ಕು ವರ್ಷಗಳ ಮೊದಲು ಇದೇ ಸಮೀಕ್ಷೆಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿತ್ತು. ಆದರ ಈಗ ಮೊದಲ ಸ್ಥಾನ ಪಡೆದಿರುವುದು ತುಂಬಾ ಬೇಸರ ಸಂಗತಿಯಾಗಿದೆ.

2. ಅಫ್ಘಾನಿಸ್ತಾನ
ಯುದ್ಧ ಮತ್ತು ಭಯೋತ್ಪಾದಕ ಚಟುವಟಿಕೆಗಳು ಈ ದೇಶದ ಮೇಲೆ ತುಂಬಾ ಗಂಭೀರ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ಇಲ್ಲಿನ ಮಹಿಳೆಯರು ಹಾಗೂ ಹುಡುಗಿಯರ ಜೀವನದ ಅಪಾಯನ್ನು ಹೆಚ್ಚಿಸಿದೆ. ಆತ್ಮಾಹುತಿ ಬಾಂಬರ್ ಗಳಿಂದ ಹಿಡಿದು ಮಹಿಳೆಯರನ್ನು ನಿರಾಶ್ರಿತ ಶಿಬಿರಗಳಲ್ಲಿ ಅತ್ಯಾಚಾರ ಮಾಡುವುದು ಮತ್ತು ಲೈಂಗಿಕ ಕಿರುಕುಳ ನೀಡುವುದು ಈ ದೇಶವು ಎರಡನೇ ಸ್ಥಾನ ಪಡೆಯಲು ಕಾರಣವಾಗಿದೆ.

3. ಸಿರಿಯಾ
ಆತ್ಯಾಚಾರ, ಲೈಂಗಿಕ ಕಿರುಕುಳ, ವೇಶ್ಯಾವಾಟಿಕೆಗೆ ತಳ್ಳುವುದು ಮತ್ತು ಮಹಿಳೆಯರಿಗೆ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಾಗಿ ಸರಿಯಾದ ನ್ಯಾಯ ಸಿಗದೆ ಇರುವುದು ಕೂಡ ಈ ದೇಶವು ಮೂರನೇ ಸ್ಥಾನ ಪಡೆಯಲು ಕಾರಣವಾಗಿದೆ. ಯುದ್ಧ ಪೀಡಿತ ದೇಶವಾಗಿರುವ ಇಲ್ಲಿ ಮಹಿಳೆಯರ ಸುರಕ್ಷತೆಯನ್ನು ಕಡೆಗಣಿಸಲಾಗಿದೆ.

4. ಸೋಮಾಲಿಯಾ
ರಾಯಿಟರ್ಸ್ ನಡೆಸಿರುವಂತಹ ಸಮೀಕ್ಷೆಯಲ್ಲಿ ಸೋಮಾಲಿಯಾವು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ತುಂಬಾ ಬಡ ರಾಷ್ಟ್ರವಾಗಿರುವಂತಹ ಸೋಮಾಲಿಯಾದಲ್ಲಿ ಆರೋಗ್ಯ ವ್ಯವಸ್ಥೆ ಸರಿಯಾಗಿಲ್ಲ ಮತ್ತು ಮಹಿಳೆಯರಲ್ಲಿ ಅಲ್ಲಿನ ಸಂಪ್ರದಾಯ ಮತ್ತು ಸಂಸ್ಕೃತಿಗೆ ತುಂಬಾ ಭಿನ್ನವಾಗಿ ನೋಡಿಕೊಳ್ಳಲಾಗುತ್ತದೆ. ಇಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ, ಜನನೇಂದ್ರೀಯ ತಿರುಚುವಿ�%B



Click it and Unblock the Notifications
