ಸತ್ತು ವರ್ಷಗಳ ಬಳಿಕವೇ ಮೃತದೇಹ ದೊರಕಿದ ನತದೃಷ್ಟರಿವರು!

By: Arshad
Subscribe to Boldsky

ಈ ಜಗತ್ತು ನೋಡಲಿಕ್ಕೆ ಎಷ್ಟು ಸುಂದರವೋ, ಆಳದಲ್ಲಿ ಅಷ್ಟೇ ಭಯಾನಕವೂ ಆಗಿದೆ. ಜಗತ್ತಿನಲ್ಲಿ ಸಂಘಜೀವಿಗಳಾದ ಮನುಷ್ಯರು ಒಬ್ಬರಿಗೊಬ್ಬರು ಸಹಕರಿಸಿ ಸಹಬಾಳ್ವೆ ನಡೆಸುತ್ತಿರುವ ನಡುವೆಯೇ ಕೆಲವರು ಒಂಟಿಯಾಗಿಯೇ ಇರಲು ಬಯಸುತ್ತಾರೆ. ಹೆಚ್ಚಿನವರು ಪರಿಸ್ಥಿತಿಯ ಫಲದ ಪರಿಣಾಮವಾಗಿ ತಮ್ಮ ಸ್ನೇಹಿತರಿಂದ ಹಾಗೂ ಕುಟುಂಬದಿಂದ ಪರಿತ್ಯಕ್ತರಾದವರು. ಈ ವ್ಯಕ್ತಿಗಳು ಕೈಕಾಲು ಗಟ್ಟಿ ಇದ್ದಾಗ ತಮ್ಮ ಬಾಳನ್ನು ತಾವೇ ನೋಡಿಕೊಂಡರೂ ಕೊನೆಗಾಲದಲ್ಲಿ ಯಾರೂ ಇವರ ಆರೈಕೆಗೆ ಬರದೇ ಇರುವ ಕಾರಣ ಯಾರ ಗಮನಕ್ಕೂ ಬರದೇ ಪರಂಧಾಮಕ್ಕೆ ತೆರಳುತ್ತಾರೆ. 

ಅರೆ ಏನಾಶ್ಚರ್ಯ! ಹೀಗೂ ಸಾವು ಸಂಭವಿಸುತ್ತದೆಯೇ?

ಈ ವ್ಯಕ್ತಿಗಳು ಸಾಮಾನ್ಯವಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು ತಮ್ಮವರಿಂದ ತಾವಾಗಿಯೇ ದೂರಾಗಿರುವವರು ಅಥವಾ ಸಮಾಜದಿಂದ ಬಹಿಷ್ಕೃತಗೊಂಡವರಾಗಿರುತ್ತಾರೆ. ದಾರುಣವೆಂದರೆ ಇವರು ಜೀವಂತರಿದ್ದಾರೋ ಇಲ್ಲವೋ ಎಂದೂ ಯಾರೂ ಗಮನಿಸಲು ಹೋಗುವುದೇ ಇಲ್ಲ.

ಅಜ್ಞಾತ ಸ್ಥಳದಲ್ಲಿ ಈ ವ್ಯಕ್ತಿಗಳು ಮರಣ ಹೊಂದಿದ ಬಳಿಕ ಕೆಲವು ವರ್ಷಗಳೇ ಕಳೆದರೂ ಯಾವುದೇ ಸೂಚನೆ ಇಲ್ಲದೇ ಅಕಾಸ್ಮಾತ್ತಾಗಿ ಯಾವುದೋ ಕಾರಣದಿಂದ ಇವರ ಕಳೇಬರದ ಅವಶೇಷಗಳು ಕಂಡುಬರುತ್ತವೆ. ಯಾರಿಗೂ ಇದು ಯಾರ ಕಳೇಬರ ಎಂದು ಗೊತ್ತಿಲ್ಲದ ಕಾರಣ ಅನಾಥರಾಗುತ್ತಾರೆ. 

ವಿಚಿತ್ರ ಆದರೂ ಸತ್ಯ: ಮಿಲನದ ಬಳಿಕ-ಇವುಗಳ ಸಾವು ಖಚಿತ!

ಇನ್ನೂ ಕೆಲವು ಮನೆಗಳಲ್ಲಿರುವ ವ್ಯಕ್ತಿಗಳು ಮನೆಯೊಳಗೇ ಮರಣ ಹೊಂದಿದ್ದು ಇವರ ಕಳೇಬರ ಕೊಳೆತು ನಾರುವ ವಾಸನೆ ಅಕ್ಕಪಕ್ಕದವರಿಗೆ ಕ್ಷೀಣವಾಗಿ ಬಡಿದರೂ ಹೆಚ್ಚಿನವರು ಇದಕ್ಕೂ ಗಮನ ಕೊಡದೇ ಹೋಗಿರುವುದು ಎಷ್ಟೋ ವರ್ಷಗಳ ನಂತರವೇ ಬೆಳಕಿಗೆ ಬರುತ್ತದೆ. ಈ ನತದೃಷ್ಟರ ಕಥೆಗಳನ್ನು ಕೇಳುತ್ತಿದ್ದರೆ ನಾವು ಯಾವ ಲೋಕದಲ್ಲಿದ್ದೇವೆ? ನಮ್ಮ ಮನುಷ್ಯತ್ವಕ್ಕೇನಾಗಿದೆ ಎಂದು ನಾವೇ ಕೇಳಿಕೊಳ್ಳುವಂತಾಗುತ್ತದೆ.... 

ಈಕೆಯ ಕಳೆಬರ ಸರಿಯಾಗಿ ಒಂದು ವರ್ಷದ ಬಳಿಕ ಪತ್ತೆಯಾಯ್ತು

ಈಕೆಯ ಕಳೆಬರ ಸರಿಯಾಗಿ ಒಂದು ವರ್ಷದ ಬಳಿಕ ಪತ್ತೆಯಾಯ್ತು

ಬಾರ್ಬರಾ ಸಾಲಿನಾಸ್ ನೋರ್ಮನ್ ಎಂಬ ಮಹಿಳೆ ಓರ್ವ ಲೇಖಕಿ, ಪ್ರಕಾಶಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದರು. ಮೆಕ್ಸಿಕೋ ದೇಶದ ಸಾಂಟಾ ಫೆ ಎಂಬ ಸ್ಥಳದಲ್ಲಿರುವ ತನ್ನ ಮನೆಯಲ್ಲಿಯೇ ಒಂಟಿಯಾಗಿದ್ದ ಈಕೆ ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ವಯೋಸಹಜವಾಗಿ ಮರಣವನ್ನಪ್ಪಿದ್ದರು. ಆದರೆ ಇವರ ಮರಣ ಯಾರ ಗಮನಕ್ಕೂ ಬಾರದೇ ಒಂದು ವರ್ಷ ಕಾಲ ನಿಧನರಾದ ಸ್ಥಳದಲ್ಲಿಯೇ ಇತ್ತು. ದೂರದ ಕ್ಯಾಲಿಫೋರ್ನಿಯಾದಲ್ಲಿರುವ ಈಕೆಯ ಸಹೋದರಿ ಇವರಿಗೆ ಮಾಡಿದ ಯಾವುದೇ ಕರೆ ಅಥವಾ ಪತ್ರಕ್ಕೆ ಉತ್ತರವೇ ಇಲ್ಲವೆಂದು ತನ್ನ ಪತಿಯಲ್ಲಿ ದುಗುಡ ವ್ಯಕ್ತಪಡಿಸಿದ ಬಳಿಕ ಈ ದಂಪತಿ ಸ್ವತಃ ನೋಡಲೆಂದು ಸಾಂಟಾ ಫೆ ನಗರಕ್ಕೆ ಬಂದು ಬಾಗಿಲು ಒಡೆದು ನೋಡಿದ ಬಳಿಕವೇ ಇವರ ಮರಣದ ಸಂಗತಿ ಬಯಲಾಗಿತ್ತು.

ಈತನ ಮೃತದೇಹ ಮೂರು ವರ್ಷಗಳ ಬಳಿಕ ಸಿಕ್ಕಿತ್ತು

ಈತನ ಮೃತದೇಹ ಮೂರು ವರ್ಷಗಳ ಬಳಿಕ ಸಿಕ್ಕಿತ್ತು

ಸೈಮನ್ ಆಲೆನ್ ಎಂಬ ಈ ವ್ಯಕ್ತಿ ಯಾವುದೋ ಕಾರಣಕ್ಕೆ ಸಮಾಜದೊಂದಿಗೆ ಇರಬಯಸದೇ ಒಂಟಿಯಾಗಿಯೇ ಇದ್ದ. 2013ರಲ್ಲಿ ಈತನ ಮನೆಯನ್ನು ಸ್ವಚ್ಛಗೊಳಿಸಲೆಂದು ಬಂದ ಕಾರ್ಮಿಕರಿಗೆ ಈತನ ಮೃತದೇಹ ಸಿಕ್ಕಿತ್ತು. ಆದರೆ ಮರಣ ಸಂಭವಿಸಿ ಮೂರು ವರ್ಷವೇ ಆಗಿ ಹೋಗಿತ್ತು. ಈತನ ಶವದ ಮೇಲೆ ಕೇವಲ ಒಂದು ಕಾಲುಚೀಲವಿತ್ತು ಹಾಗೂ ಆರಾಮಕುರ್ಚಿಯಲ್ಲಿ ಪವಡಿಸಿದ್ದಾಗ ಹಿಂದಕ್ಕೆ ವಾಲಿ ಬಿದ್ದ ಭಂಗಿಯಲ್ಲಿ ಸಿಕ್ಕಿತ್ತು. ಮೂರು ವರ್ಷಗಳ ಹಿಂದೆ ಆರಾಮಕುರ್ಚಿಯನ್ನು ಅತಿಹೆಚ್ಚು ಹಿಂದಕ್ಕೆ ವಾಲಿಸಿದ್ದ ಕಾರಣ ಬಿದ್ದು ತಲೆಗೇಟಾಗಿ ಸಾವು ಸಂಭವಿಸಿತ್ತು.

ನಿಗೂಢ ಜಗತ್ತು: ಆಕೆ ಸತ್ತು 42 ವರ್ಷ ಬಳಿಕ ಪತ್ತೆಯಾದಳು!

ಈಕೆ ಮೂರು ವರ್ಷಗಳ ಕಾಲ ಸತ್ತಿದ್ದಳು

ಈಕೆ ಮೂರು ವರ್ಷಗಳ ಕಾಲ ಸತ್ತಿದ್ದಳು

ಜಿನೀವಾ ಛೇಂಬರ್ಸ್ ಎಂಬ ಮಹಿಳೆ ತನ್ನ ಅಕ್ಕಪಕ್ಕದವರೊಂದಿಗೆ ಉತ್ತಮ ವ್ಯವಹಾರವನ್ನಿಟ್ಟುಕೊಂಡಿದ್ದರೂ ಈಕೆ ಒಮ್ಮೆ ಏಕಾಏಕಿ ಕಾಣೆಯಾದಾಗ ಎಲ್ಲರೂ ಈಕೆ ಬೇರೊಂದು ಸ್ಥಳಕ್ಕೆ ವಲಸೆ ಹೋದಳೆಂದೇ ತಿಳಿದಿದ್ದರು. ಆದರೆ ವಾಸ್ತವದಲ್ಲಿ ಈಕೆ ತನ್ನ ಮನೆಯಲ್ಲಿಯೇ ಸಾವನ್ನಪ್ಪಿದ್ದಳು. ಈಕೆಯ ಸಾಲದ ಮರುಪಾವತಿಯನ್ನು ಹಿಂಬಾಲಿಸಿ ಬ್ಯಾಂಕಿನ ಅಧಿಕಾರಿಗಳು ಬಾಗಿಲು ಒಡೆದು ಮನೆಯ ಒಳಬಂದ ಬಳಿಕವೇ ಈಕೆ ಹೆಣವಾಗಿದ್ದುದು ಕಂಡುಬಂದಿತ್ತು. ಆದರೆ ಅಧಿಕಾರಿಗಳು ಬಾಗಿಲು ಒಡೆಯಲು ಕೇವಲ ಮೂರು ವರ್ಷ ತಡಮಾಡಿದ್ದರು.

ಈ ಅವಳಿಗಳೂ ಮೂರು ವರ್ಷಗಳ ಕಾಲ ಹೆಣವಾಗಿದ್ದರು

ಈ ಅವಳಿಗಳೂ ಮೂರು ವರ್ಷಗಳ ಕಾಲ ಹೆಣವಾಗಿದ್ದರು

ಆಂಡ್ರ್ಯೂ ಮತ್ತು ಆಂಥನಿ ಜಾನ್ಸರ್ ಎಂಬ 63 ವರ್ಷದ ಅವಳಿ ವೃದ್ದರು ತಮ್ಮ ಮನೆಯ ಅಂಗಳದ ಹೂದೋಟದ ಕೆಲಸವನ್ನು ಮಾಡುತ್ತಿದ್ದುದನ್ನೇ ಅಕ್ಕಪಕ್ಕದವರು ಗಮನಿಸುತ್ತಿದ್ದರು. ಈ ಸಮಯದಲ್ಲಿ ಇವರು ಸದಾ ಮುಖಕ್ಕೆ ಸರ್ಜಿಕಲ್ ಮಾಸ್ಕ್ ಹಾಕಿಕೊಂಡಿರುತ್ತಿದ್ದರು. ಇನ್ನುಳಿದಂತೆ ಇವರು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಅಂತೆಯೇ ಇವರು ಮನೆಯಿಂದ ಹೊರಬರದೇ ಇದ್ದುದನ್ನೂ ಯಾರೂ ಗಮನಿಸಲಿಲ್ಲ. ಆದರೆ ಯಾವುದೋ ಪ್ರಕರಣದ ತನಿಖೆಯನ್ನು ಹಿಂಬಾಲಿಸುತ್ತಾ ಈ ಮನೆಗೆ ಬಂದು ಬಾಗಿಲು ಒಡೆದ ಪೋಲಿಸರಿಗೆ ಈ ಅವಳಿ ವೃದ್ದರು ತಮ್ಮ ಆರಾಮ ಕುರ್ಚಿಯಲ್ಲಿ ಕುಳಿತಿದ್ದ ಭಂಗಿಯಲ್ಲಿ ಮೃತರಾಗಿದ್ದುದು ಕಂಡುಬಂದಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಇವರು ಮೂರು ವರ್ಷಗಳ ಹಿಂದೆಯೇ ಹೆಚ್ಚೂಕಡಿಮೆ ಒಂದೇ ಸಮಯದಲ್ಲಿ ಸಾವನ್ನಪ್ಪಿದ್ದುದು ಕಂಡುಬಂದಿತ್ತು. ಜನನವೂ ಜೊತೆಗೇ ಮರಣವೂ ಜೊತೆಗೇ ಆದ ಅತ್ಯಪರೂಪದ ಪ್ರಕರಣಗಳಲ್ಲಿ ಇದೊಂದಾಗಿದೆ.

ಈತ ಸತ್ತು ನಾಲ್ಕು ವರ್ಷವಾದರೂ ಪಕ್ಕದ ಮನೆಯವರಿಗೆ ಗೊತ್ತೇ ಇರಲಿಲ್ಲ

ಈತ ಸತ್ತು ನಾಲ್ಕು ವರ್ಷವಾದರೂ ಪಕ್ಕದ ಮನೆಯವರಿಗೆ ಗೊತ್ತೇ ಇರಲಿಲ್ಲ

ಡೇವಿಡ್ ವಾಕರ್ ಎಂಬ ವ್ಯಕ್ತಿ ತನ್ನ ಸುತ್ತಮುತ್ತಲ ಜನರೊಂದಿಗೆ ಉತ್ತಮ ವ್ಯವಹಾರವಿರಿಸಿಕೊಂಡಿದ್ದರು. ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ತಾನು ಇನ್ನು ಕೆಲವೇ ದಿನಗಳಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗುವವನಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ಏಕಾಏಕಿ ಇವರು ನಾಪತ್ತೆಯಾದರು. ಸುತ್ತಮುತ್ತಲಿನವರು ಇವರು ಅಮೇರಿಕಾಕ್ಕೆ ಹೋದರೆಂದೇ ತಿಳಿದುಕೊಂಡು ನಿರಾಳರಾಗಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ಇವರ ಮೃತದೇಹ ಪತ್ತೆಯಾದಾಗ ಇವರು ತಮಗೆ ತಾವೇ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದುದು ಎಲ್ಲರಿಗೂ ದಿಗ್ಭ್ರಮೆ ಮೂಡಿಸಿತ್ತು.

ಈ ವ್ಯಕ್ತಿಯ ಶವ ಹದಿನೈದು ವರ್ಷದ ಬಳಿಕ ಸಿಕ್ಕಿತ್ತು

ಈ ವ್ಯಕ್ತಿಯ ಶವ ಹದಿನೈದು ವರ್ಷದ ಬಳಿಕ ಸಿಕ್ಕಿತ್ತು

ಫ್ರಾನ್ಸ್ ದೇಶದ ಲಿಲ್ಲೆ ಎಂಬ ಸ್ಥಳದ ನಿವಾಸಿಯಾಗಿದ್ದ ವ್ಯಕ್ತಿಯೊಬ್ಬರ ಶವ 2012ರಲ್ಲಿ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಈ ವ್ಯಕ್ತಿ ಹದಿನೈದು ವರ್ಷಕ್ಕೂ ಹಿಂದೆಯೇ ಸಾವಿಗೀಡಾಗಿದ್ದ ಅಂಶ ಬೆಳಕಿಗೆ ಬಂದಿತ್ತು. ಈ ವ್ಯಕ್ತಿ ಒಂಟಿಜೀವನ ನಡೆಸುತ್ತಿದ್ದು ಅಕ್ಕಪಕ್ಕದವರೊಂದಿಗಾಗಲೇ ಸಂಬಂಧಿಕರೊಂದಿಗಾಗಲೀ ಸಂಪರ್ಕವೇ ಇರಿಸಿಕೊಂಡಿರದಿದ್ದ ಕಾರಣ ಯಾರಿಗೂ ಈ ವ್ಯಕ್ತಿಯ ಇರುವಿಕೆಯಾಗಲೀ ಸಾವಿಗೀಡಾಗಿದ್ದುದಾಗಲೀ ಅರಿವೇ ಇರಲಿಲ್ಲ.

 ಈ ವ್ಯಕ್ತಿಯ ಶವವನ್ನು ಏಳು ವರ್ಷಗಳ ಬಳಿಕ ಜನರು ಕಂಡರು

ಈ ವ್ಯಕ್ತಿಯ ಶವವನ್ನು ಏಳು ವರ್ಷಗಳ ಬಳಿಕ ಜನರು ಕಂಡರು

ಜರ್ಮನಿಯ ಪಟ್ಟಣವೊಂದರಲ್ಲಿ 59ವರ್ಷದ ಪುರುಷ ಕಳೇಬರವೊಂದು ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈತ ಮಲಗಿದ್ದ ಹಾಸಿಗೆಯ ಪಕ್ಕದಲ್ಲಿದ್ದ ಕೆಲವು ಸಿಗರೇಟುಗಳು, ಹಳೆಯ ಟೀವಿ ಗೈಡ್ ಪುಸ್ತಕ, ಕೆಲವು ಡ್ಯೂಷೆ ಮಾರ್ಕ್ ನಾಣ್ಯಗಳನ್ನು ಪರಿಗಣಿಸಿ ಈಅತ್ ಏಳು ವರ್ಷಗಳ ಹಿಂದೆಯೇ ಸಹಜ ಸಾವನ್ನಪ್ಪಿದ್ದ ಎಂದು ಕಂಡುಕೊಳ್ಳಲಾಯ್ತು.

ಇದು ಸಾವಿನ ನಂತರ ನಡೆಯುವ ಕಥೆ! ಹೀಗೂ ಉಂಟೇ?

ಈಕೆಯ ಶವ ಎಂಟು ವರ್ಷಗಳ ಬಳಿಕವೇ ಪತ್ತೆಯಾಯ್ತು

ಈಕೆಯ ಶವ ಎಂಟು ವರ್ಷಗಳ ಬಳಿಕವೇ ಪತ್ತೆಯಾಯ್ತು

ಆಸ್ಟ್ರೇಲಿಯಾದ ನಿವಾಸಿ ನಟಾಲಿ ವುಡ್ ಎಂಬ ಮಹಿಳೆಯೊಬ್ಬರು ಜೀವನದಲ್ಲಿ ವಿರಕ್ತಿ ಹೊಂದಿ ಒಂಟಿಜೀವನ ನಡೆಸುತ್ತಿದ್ದರು. ಈಕೆಯ ಸಹೋದರನೊಂದಿಗೂ ಈಕೆ ಸಂಪರ್ಕವನ್ನು ಕಳೆದುಕೊಂಡಿದ್ದರು. ತನಗೆ ಮೆದುಳಿನಲ್ಲಿ ಗಡ್ಡೆ ಇದೆ, ಹಾಗೂ ತನಗೆ ಮರೆವಿನ ತೊಂದರೆಯೂ ಇದೆ ಎಂದು ಆಕೆ ಸಹೋದರನಲ್ಲಿ ಹೇಳಿಕೊಂಡಿದ್ದ ಕಾರಣ ಆತನೂ ಈಕೆಯಿಂದ ಯಾವುದೇ ವರ್ತಮಾನವಿರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ 2011ರಲ್ಲಿ ಈಕೆಯ ಮನೆಯಲ್ಲಿ ಈಕೆಯ ಶವ ದೊರೆತ ಬಳಿಕ ಈಕೆ ಸಾವನ್ನಪ್ಪಿ ಎಂಟು ವರ್ಷಗಳೇ ಕಳೆದಿದ್ದವು ಎಂದು ತಿಳಿದುಬಂದಿತ್ತು.

 ಈಕೆಯ ಶವ ಐದು ವರ್ಷಗಳ ಬಳಿಕವೇ ಗೋಚರವಾಯ್ತು

ಈಕೆಯ ಶವ ಐದು ವರ್ಷಗಳ ಬಳಿಕವೇ ಗೋಚರವಾಯ್ತು

ಪಿಯಾ ಫ್ಯಾರೆನ್ಕಾಫ್ ಎಂಬ ಮಹಿಳೆಗೆ ಒಂದೆಡೆ ಸ್ಥಿರವಾಗಿ ನೆಲೆಸುವುದೇ ಗೊತ್ತಿರಲಿಲ್ಲ. ಸದಾ ಅಲೆಮಾರಿಯಾಗಿ ತಿರುಗಾಡಿಕೊಂಡಿದ್ದ ಈಕೆ ಯಾವಾಗಲೋ ಒಮ್ಮೆ ಯಾವುದೋ ಸಾಗರದಾಚೆಯ ದೇಶದಿಂದ ತನ್ನವರಿಗೆ ಫೋನ್ ಮೂಲಕ ತನ್ನ ಕ್ಷೇಮಸಮಾಚಾರವನ್ನು ತಿಳಿಸುತ್ತಿದ್ದಳು. ಪ್ರತಿಬಾರಿ ಫೋನ್ ಮಾಡಿದಾಗಲೂ ಸ್ಥಳ ಬದಲಾವಣೆಯಾಗಿರುತ್ತಿದ್ದ ಕಾರಣ ಈಕೆ ಕಣ್ಮರೆಯಾದುದನ್ನು ಯಾರೂ ಗಮನಿಸಲೇ ಇಲ್ಲ. ಆದರೆ ಈಕೆಯ ಕಳೇಬರವನ್ನು ಈಕೆ ಸತ್ತು ಐದು ವರ್ಷಗಳ ಬಳಿಕ ಪೋಲೀಸರು ಕಂಡುಕೊಂಡ ಬಳಿಕ ಎಲ್ಲರಿಗೂ ಭಾರೀ ಆಘಾತ ಕಾದಿತ್ತು.

English summary

Unfortunate People Whose Bodies Were Found After Years

These are some of the people who were left to die alone. And the sad part is, nobody cared to even check on them for years! Even after their death, their bodies were found only after a few years, where no one had any idea of their death. Some of their neighbours did not even pay attention to the foul smell that kept emitting from these houses. These cases of unfortunate people laying dead for years makes us realise what kind of a world we are living in!
Subscribe Newsletter