ಅಚ್ಚರಿ-ಕುತೂಹಲ ಮೂಡಿಸುವ 'ರಾಶಿ ಭವಿಷ್ಯ' ! ಹೀಗೂ ಉಂಟೇ..?

Posted By: Deepak M
Subscribe to Boldsky

ರಾಶಿ ನೋಡಿ ಜನರ ಗುಣ ಹೇಳಬಹುದು, ದಿನ ಭವಿಷ್ಯ, ವಾರ ಭವಿಷ್ಯ, ಮಾಸ ಭವಿಷ್ಯ ಅಷ್ಟೇ ಏಕೆ ವರ್ಷಭವಿಷ್ಯ ಮತ್ತು ಜೀವನದ ಬಗ್ಗೆ ಸಹ ಹೇಳಬಹುದು. ಆದರೆ ಪಾಪಗಳ ಬಗ್ಗೆ.....? ಹೇಳಬಹುದು ಎನ್ನುತ್ತಾರೆ ತಿಳಿದವರು. ಅತಿಯಾಸೆ, ಮತ್ಸರ, ಸೋಮಾರಿತನ, ಹೆಮ್ಮೆ, ವ್ಯಭಿಚಾರ ಮತ್ತು ಕಾಮ ಮುಂತಾದವು ಪಾಪಗಳು ಎಂದು ಪರಿಗಣಿಸಲ್ಪಟ್ಟವು.

ಈ ಅಂಕಣದಲ್ಲಿ ರಾಶಿಗಳ ಪ್ರಕಾರ ಜನ ಯಾವ ಯಾವ ಪಾಪಗಳನ್ನು ಮಾಡುತ್ತಾರೆ ಎಂದು ವಿವರಿಸುತ್ತೇವೆ. ಇವುಗಳಲ್ಲಿ ಕೆಲವು ಅಚ್ಚರಿ ಮೂಡಿಸಿದರೆ ಇನ್ನೂ ಕೆಲವೊಂದು ಭಯ ಮೂಡಿಸುತ್ತವೆ. ಕುತೂಹಲ ಏಕೆ ಯಾರು ಯಾವ ಪಾಪ ಮಾಡುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ....

ಮೇಷ: ಕೊಲೆ

ಮೇಷ: ಕೊಲೆ

ಮೇಷ ರಾಶಿಯವರಿಗೆ ಕೋಪ ಹೆಚ್ಚು...ಈ ಕೋಪದ ಕೈಗೆ ಬುದ್ಧಿ ಕೊಟ್ಟು ಏನು ಮಾಡುವುದಕ್ಕೂ ಸಿದ್ಧರಿರುತ್ತಾರೆ! ಮೇಷ ರಾಶಿಯವರೇ ಎಚ್ಚರ ನಿಮ್ಮ ಕೋಪವನ್ನು ಆದಷ್ಟು ನಿಮ್ಮ ನಿಯಂತ್ರಣದಲ್ಲಿರಿಸಿಕೊಳ್ಳಿ.

ವೃಷಭ: ಹೊಟ್ಟೆಬಾಕರು

ವೃಷಭ: ಹೊಟ್ಟೆಬಾಕರು

ಇವರು ತಮ್ಮ ಹೊಟ್ಟೆ ತುಂಬಿದರೆ ಸಾಕು ಇತರರ ಕತೆ ನನಗೇಕೆ ಎಂದು ಭಾವಿಸುತ್ತಾರೆ. ಇವರ ಹೊಟ್ಟೆ ಬಾಕತನದಿಂದ ಜನರಿಗೆ ತೊಂದರೆಯೇನು ಆಗದಿದ್ದರೇ ಪರವಾಗಿಲ್ಲ. ಆದರೆ ಜನರ ಹೊಟ್ಟೆ ಹೊಡೆದು ಇವರು ತಮ್ಮ ಹೊಟ್ಟೆ ತುಂಬಿಸಿಕೊಂಡರೆ ಅದು ಪಾಪವಾಗುತ್ತದೆ. ಆ ಪಾಪದ ಹೊರೆ ಅವರನ್ನು ಕಾಡುತ್ತದೆ.

ಮಿಥುನ: ಅಪ್ರಾಮಾಣಿಕತೆ

ಮಿಥುನ: ಅಪ್ರಾಮಾಣಿಕತೆ

ಇವರು ಯಾರ ನಂಬಿಕೆಗೂ ಅರ್ಹರಲ್ಲ. ಇವರು ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದು ಹೇಳುವವರಾಗಿರುತ್ತಾರೆ. ಇವರು ಪ್ರತಿಯೊಂದಕ್ಕೂ ಕತೆಗಳನ್ನು ಹೇಳುತ್ತಾರೆ. ಇವರ ಈ ಅಪ್ರಾಮಾಣಿಕ ಗುಣದಿಂದಾಗಿ ಹಲವರಿಗೆ ಕಷ್ಟವಾಗುತ್ತದೆ. ಮಿಥುನ ರಾಶಿಯವರೇ ಸ್ವಲ್ಪ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳೀ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಇವರು ತಪ್ಪಾದ ವ್ಯಕ್ತಿಗಳನ್ನು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ.ಯಾರನ್ನು ಆದರ್ಶವಾಗಿ ತೆಗೆದುಕೊಳ್ಳಬಾರದೋ ಅವರನ್ನು ಇವರು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ. ಇವರು ತಮ್ಮ ದೌರ್ಬಲ್ಯವನ್ನು ನೋಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ತಮ್ಮ ಸಂಗಾತಿ ವಿಶ್ವದಲ್ಲಿಯೇ ಉತ್ತಮ ಎಂಬುದು ಇವರ ಅನಿಸಿಕೆಯಾಗಿರುತ್ತದೆ. ಇವರು ಜನರಿಗೆ ತುಂಬಾ ಅಂಟಿಕೊಳ್ಳುತ್ತಾರೆ.

ಸಿಂಹ: ಪ್ರತಿಷ್ಠೆ

ಸಿಂಹ: ಪ್ರತಿಷ್ಠೆ

ಹೇಳಿ ಕೇಳಿ ಸಿಂಹ ಎಂದರೆ ಸುಮ್ಮನೇನಾ? ಇವರು ಯಾವಾಗಲೂ ರಾಯಲ್ ಆಗಿಯೇ ಇರುತ್ತಾರೆ ಪ್ರತಿಷ್ಠೆಯ ಮದದಲ್ಲಿ. ಇವರಿಗೆ ಯಾವಾಗಲೂ ದೂರದೃಷ್ಟಿಯ ಚಿಂತೆ. ತಮ್ಮ ಸ್ವಯಂ ಹೊಗಳಿಕೆಯಲ್ಲಿಯೇ ಇವರ ದಿನಗಳು ಕಳೆದು ಹೋಗುತ್ತವೆ. ಇವರ ಸ್ವಯಂ ಬಹುಪರಾಕ್‌ಗಳ ಮಧ್ಯೆ ಜನರ ಮಾತುಗಳನ್ನು ಕೇಳಿಸಿಕೊಳ್ಳುವ ಪುರುಸೊತ್ತು ಇವರಿಗಿರುವುದಿಲ್ಲ. ಸಿಂಹಗಳು ಯಾವಾಗಲೂ ಕೋಪದಿಂದ ಘರ್ಜಿಸುತ್ತಾ ಇರುತ್ತವೆ ಎಂಬುದು ಇನ್ನೊಂದು ವಿಶೇಷ. ಹಾಗಾಗಿ ಸಿಂಹಗಳೇ, ಅಲ್ಲಲ್ಲಾ ಸಿಂಹ ರಾಶಿಯವರೇ ಸ್ವಲ್ಪ ಗಂಭೀರತೆಯನ್ನು ಮೈಗೂಡಿಸಿಕೊಳ್ಳಿ ಹಾಗು ಸ್ವ-ಪ್ರತಿಷ್ಠೆಯನ್ನು ಪಕ್ಕಕ್ಕೆ ಇಡಿ.

ಕನ್ಯಾ- ಅಸೂಯೆ

ಕನ್ಯಾ- ಅಸೂಯೆ

ಕನ್ಯಾ ರಾಶಿಯವರಿಗೆ ಅಸೂಯೆ ಹೆಚ್ಚು. ಇವರೇ ಜನರ ಕೇಂದ್ರ ಬಿಂದುವಾಗಿರಬೇಕು. ಇವರು ಜನರನ್ನು ಇಷ್ಟಪಟ್ಟು, ಅವರು ಇವರ ಕಡೆಗೆ ತಿರುಗಿ ನೋಡಲಿಲ್ಲ ಎಂದಾದಲ್ಲಿ ನಮ್ಮ ಕನ್ಯಾರಾಶಿಯವರಿಗೆ ಗೀಳು ಆರಂಭವಾಗುತ್ತದೆ. ಅಸೂಯೆಯನ್ನು ಇವರು ನಿಯಂತ್ರಣ ಮಾಡಿಕೊಳ್ಳಲಾಗುವುದಿಲ್ಲ. ಕನ್ಯಾಮಣಿಗಳೇ ಅಸೂಯೆ ಮಹಾಪಾಪ. ಸಾಧ್ಯವಾದರೇ ಸ್ಫೂರ್ತಿಯನ್ನು ಪಡೆಯಿರಿ.

ತುಲಾ ರಾಶಿ- ಅಲಂಕಾರ ಪ್ರಿಯರು

ತುಲಾ ರಾಶಿ- ಅಲಂಕಾರ ಪ್ರಿಯರು

ತುಲಾ ರಾಶಿಯವರು ಯಾವುದೇ ಕಾರಣಕ್ಕೂ ತಮ್ಮ ಅಲಂಕಾರವನ್ನು ನಾಲ್ಕು ಬಾರಿ ನೋಡಿಕೊಳ್ಳದೆ ಮನೆಯಿಂದ ಹೊರಗೆ ಹೋಗುವುದಿಲ್ಲ. ಇವರ ರಾಶಿಗೆ ಶುಕ್ರ ಗ್ರಹವು ಕಾರಕನಾಗಿರುವುದರಿಂದ ಇವರ ಅಲಂಕಾರ ಪ್ರಿಯತೆ ಸುತ್ತಲಿನವರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ತಮ್ಮ ಸೌಂದರ್ಯ, ಅಲಂಕಾರ ಹಾಗು ನಿಲುವುಗಳಿಗೆ ಕೊಡುವ ಪ್ರಾಧಾನ್ಯತೆ ಜನರಿಗೆ ನೀಡುವುದಿಲ್ಲ. ತುಲಾ ರಾಶಿಯವರೇ ನಿಮ್ಮ ಸೌಂದರ್ಯಾರಾಧನೆಯು ಮಹಾ ಪಾಪ ಕಣ್ರಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವನ್ನು ಹೆಚ್ಚು ಪರಿಗಣಿಸಿ.

ವೃಶ್ಚಿಕ: ಕಾಮತುರತೆ

ವೃಶ್ಚಿಕ: ಕಾಮತುರತೆ

ಈ ರಾಶಿಯವರ ಕಾಮಾಸಕ್ತಿಯು ಮಿತಿ ಮೀರಿದ ಮಟ್ಟದಲ್ಲಿ ಇರುತ್ತದೆ. ಪ್ರೀತಿಗಿಂತ ಕಾಮವೇ ಇವರ ಕಣ್ಣಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ತಮ್ಮ ಕಾಮಾಸಕ್ತಿಯನ್ನು ತೃಪ್ತಿಪಡಿಸಿಕೊಳ್ಳಲು ಇವರು ಸದಾ ಶ್ರಮಿಸುತ್ತಾರೆ. ಅದಕ್ಕಾಗಿ ಸದಾ ಶಿಕಾರಿ ಮಾಡುತ್ತಾ ಇರುತ್ತಾರೆ. ಕಾಮಕ್ಕೆ ಸೋತ ಯಾರೂ ಸಹ ಜೀವನದಲ್ಲಿ ಉದ್ಧಾರವಾಗಿಲ್ಲ ವೃಶ್ಚಿಕ ರಾಶಿಯವರೇ ಎಚ್ಚರವಿರಲಿ.

ಧನುರ್ ರಾಶಿ: ವ್ಯಭಿಚಾರ

ಧನುರ್ ರಾಶಿ: ವ್ಯಭಿಚಾರ

ಆಳು ನೋಡಿದರೆ ಅಲಂಕಾರ, ಬಾಳು ನೋಡಿದದರೆ ಬಾಯಿ ಬಡಿದುಕೊಳ್ಳುವಂತಿದೆ ಎಂಬಂತಿರುತ್ತದೆ ಇವರ ಜೀವನ. ಹೃದಯ ವೈಶಾಲ್ಯ ಇರುವವರು ಆದರೆ ಮರೆಯಲ್ಲಿ ಇವರು ವ್ಯಭಿಚಾರ ಮಾಡುವವರಾಗಿರುತ್ತಾರೆ. ಪ್ರೇಮಿಗಳಿಂದ ಮತ್ತೊಬ್ಬ ಪ್ರೇಮಿಗಳಿಗೆ ಇವರು ತಮ್ಮ ನಿಷ್ಠೆಯನ್ನು ಬದಲಿಸಿಕೊಳ್ಳುತ್ತಲೇ ಇರುತ್ತಾರೆ. ಒಬ್ಬ ಪ್ರೇಮಿಯ ಜೊತೆಗೆ ತುಂಬಾ ದಿನ ಇವರು ಇರುವುದಿಲ್ಲ. ಇದರಿಂದ ಇವರ ಬದ್ಧತೆಯ ಕುರಿತಾಗಿ ಜನರಿಗೆ ನಂಬಿಕೆ ಇರುವುದಿಲ್ಲ. ಇನ್ನೂ ಚೆನ್ನಾಗಿರುವವರು ಯಾರು ಸಿಕ್ಕುತ್ತಾರೆ ಎಂದು ಇವರು ಹುಡುಕುತ್ತಾ ಇರುತ್ತಾರೆ. ಇವರಿಗೆ ಇರುವ ವಿಪರೀತ ಕಾಮಾಸಕ್ತಿಯು ಇವರಿಂದ ಈ ಕೆಲಸವನ್ನು ಮಾಡಿಸುತ್ತದೆ. ಧನುರ್ ರಾಶಿಯವರೇ ನಿಮ್ಮ ಬಾಣಗಳನ್ನು ಜೀವನದ ಮಹತ್ತರ ಸಂಗತಿಗಳತ್ತ ಗುರಿ ಇಡಿ, ಯಾವಾಗಲೂ ಇನ್ನೊಬ್ಬರ ಹೃದಯಕ್ಕೆ ಗುರಿ ಇಡಬೇಡಿ.

ಮಕರ: ಅತಿಯಾಸೆ

ಮಕರ: ಅತಿಯಾಸೆ

ಇವರು ನಿಜಕ್ಕೂ ಕಷ್ಟಜೀವಿಗಳು, ಆದರೆ ಏನು ಮಾಡುವುದು ಅತಿಯಾಸೆ ಇವರ ಕಷ್ಟದ ಗುಣವನ್ನು ಮರೆ ಮಾಡಿಬಿಡುತ್ತದೆ. ಇವರು ಖರ್ಚು ಮಾಡುವುದನ್ನು ಲೆಕ್ಕ ಹಾಕುವುದಿಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನುವ ಜನ ಇವರು. ಶ್ರೀಮಂತಿಕೆಗಾಗಿ ಇತರರ ಹಣವನ್ನು ಬಳಸಿಕೊಂಡು ಬಿಡುತ್ತಾರೆ. ಎಂತಹ ಸಾಮ್ರಾಜ್ಯವನ್ನಾದರೂ ಇತರರ ಹಣದಿಂದ ಕಟ್ಟಬಲ್ಲ ಚಾಣಕ್ಷರು ಇವರು. ಮಕರ ರಾಶಿಯವರೇ ಅದು ಪಾಪ ಕಣ್ರಿ.

ಕುಂಭ: ಸುಳ್ಳು ಸಂತರು

ಕುಂಭ: ಸುಳ್ಳು ಸಂತರು

ಈ ರಾಶಿಯವರು ಜಗತ್ತಿನ ಅತ್ಯಂತ ಬುದ್ಧಿಜೀವಿಗಳು. ಇವರ ಮನೋಬಲ ಅಗಾಧ ಮತ್ತು ಜ್ಞಾನಕ್ಕೆ ಮಿತಿಯೇ ಇರುವುದಿಲ್ಲ. ಆದರೆ ಇವರು ಅದನ್ನು ಸದ್ವಿನಿಯೋಗ ಮಾಡಿಕೊಳ್ಳುವುದಿಲ್ಲ. ತಮ್ಮ ಬಾಯಿಗೆ ಬಂದದ್ದನ್ನು ಮಾತಾಡುತ್ತಾರೆ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲ. ತಾವು ತಪ್ಪೇ ಮಾಡುವುದಿಲ್ಲ ಎಂದು ಭಾವಿಸಿರುವ ಇವರು ನಂತರ ತಪ್ಪುಗಳನ್ನು ಮಾಡುತ್ತಲೇ ಸಾಗುತ್ತಾರೆ.

ಮೀನ: ಸೋಮಾರಿಗಳು

ಮೀನ: ಸೋಮಾರಿಗಳು

ಮೀನುಗಳು ಕಷ್ಟ ಜೀವಿಗಳು ಎಂದುಕೊಂಡಿರಾ? ಇಲ್ಲ ಕಣ್ರಿ ಇವರು ಹಗಲುಗನಸು ಕಾಣುವವರು. ತಮ್ಮ ಹಗಲುಗನಸುಗಳಲ್ಲಿಯೇ ಮುಳುಗಿ ಸೋಮಾರಿತನದಿಂದ ಕಾಲ ಕಳೆಯುವವರು ಇವರು. ಇವರಿಗೆ ಕೆಲಸ ಮಾಡುವುದಕ್ಕಿಂತ ಕನಸು ಕಾಣುವುದೇ ಸುಖವಾಗಿ ಕಾಣುತ್ತದೆ. ಇವರ ಕನಸು ಕಾಣುವ ಗುಣವೇ ಇವರ ಸೋಮಾರಿತನಕ್ಕೆ ಕಾರಣವಾಗುತ್ತದೆ. ತಿಂದ ಮೇಲೆ ನಿದ್ದೆ, ಕೆಲಸ ಮಾಡಿದ ಮೇಲೆ ನಿದ್ದೆ, ಆಯಾಸವಾದರೆ ಸಹ ನಿದ್ದೆ, ಇನ್ನು ಕುಂತಾಗ ಮತ್ತು ನಿಂತಾಗ ಹೊಸ ಹೊಸ ಕನಸುಗಳು ಅಷ್ಟೇ ಇವರ ಜೀವನ. ಮೀನರಾಶಿಯವರ ಕನಸಿನ ಕೊಳದಿಂದ ಹೊರಬಂದು ಕೆಲಸದ ಪ್ರವಾಹದಲ್ಲಿ ಈಜಿ.

 

For Quick Alerts
ALLOW NOTIFICATIONS
For Daily Alerts

    English summary

    Sins People Commit According To Zodiac Signs

    Here, in this article, we are about to share details on the sins that people generally do according to their zodiac signs. These are the sins that are based on the zodiac signs and the connection between these sins and the personality of a person will simply amaze you, once you get to know of it! Find out more about this interesting connection between sins and zodiac signs...
    Story first published: Sunday, May 28, 2017, 9:45 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more